ಒಟ್ಟು 7 ಕಡೆಗಳಲ್ಲಿ , 7 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಾ ಬಾರಯ್ಯಾ ವೈಭವದಿ ರಥವನೇರಿ ಸೇವಿಸುವೆನು ಮಧ್ಭಾವದಿ ನೆಲಸೆಂದು ಪಾವನ ಮಣಿಪುರ ಠಾವಿನೊಳಿಹ ಭೂದೇವ ವರ್ಯ ಸಂಶೇವಿತ ಕೇಶವ ಪ ದೇವಗಂಗೆಯಪೆತ್ತ ಪಾವನಗಾತ್ರಧ್ರುವ ಭೂವರೋÀಪಾಸಿತನಾಗಿ ಈ ವಸುಧಿಗೆ ಬಂದು ಪಾವಮಾನ ಶಾಸ್ತ್ರದಿ ಕೋವಿದಯತಿ ವರ ಶ್ರೀ ವಿದ್ಯಾನಿಧಿ ತೀರ್ಥ ಸೇವಿತ ಸಂಸ್ಥಾಪಿತ ಸೇವಕ ಜನ ಸಂಭಾವಿತ ಕಾಮಿತ ವೀವ ಕಾವ ಸದಶಾವತಾರ ನಮೋ ಶ್ರಿವಿರಂಚಿಮುಖ ದೇವನ ಮಿತ ಕಂಚೀವರದನೆ ಪೊರೆ ಶ್ರೀ ವರಕೇಶವ 1 ಕಡು ಶೋಭಿಸುವ ಬಿಳಿಗೊಡೆ ಚಾಮರಾದಿಗಳ ಪಿಡಿದು ಶೇವಿಪ ಜನರೆಡಬಲದಿ ಬರೆ ಸುರರು ಪಂಥsÀವಿಡಿದು ವೇದಪಠಣ ಬಿಡದೆ ಮಾಡುತ ಬರೆ ನುಡಿವ ವಾದ್ಯಗಳಿಂದ ಸಡಗರದಲಿ ದ್ವಿಜಮಡದಿಯರಾರುತಿ ಪಿಡಿದು ಬೆಳಗುತಿರೆ ಕಡು ವೈಭವದಲಿ ಅಡಿಗೆರಗುವೆ ಪಾಲ್ಗಡಲ ಶಯನ ಮೂ- ರಡಿ ರೂಪನೆ ಜಗದೊಡೆಯ ಕೇಶವ 2 ನಂದ ತೀರ್ಥರ ಮತ ಸಿಂಧುವಿಗೆ ಪೂರ್ಣ ಚಂದ್ರರೆನಿಪಯತೀಂದ್ರ ಸತ್ಯ ಪ್ರಮೋದ ರಿಂದ ಪೂಜಿತ ಪದ ದ್ವಂದ್ವ ಮಧ್ಯದೊಳಿಹ ಮಂದಾಕಿನಿಗೆ ಪಿತನೆಂದು ತೋರಿಸಿದಂಥ ಇಂದಿರೆಯರಸನೆ ಮಂದರಧರ ಗೋ ವಿಂದ ಪಾಹಿ ಮುಕುಂದನೆ ಬಾಬಾ- ರೆಂದು ಕರೆವ ದ್ವಿಜ ವೃಂದಮಧ್ಯದಲಿ ಶ್ಯಂದನ ವೇರಿದ ಸುಂದರ ಕೇಶವ 3 ಅಂಬುಜನಾಭನೆ ನಿತಂಬದಿ ಪೊಳೆವ ಪೀ- ತಾಂಬರ ಧೃತ ಶಾತಕುಂಭ ಮಕುಟವದ- ನಾಂಬೋಜವನು ತೋರೋಕುಂಭೀನಸ ಪರಿಯಂಕ ಶಂಭ್ವಾದಿನಮಿತ ನೀಲಾಂಬುಧ ನಿಭಗಾತ್ರ ಕಂಬುಚಕ್ರಸುತ- ದಾಂಬುಜಧರ ಬಲು ಸಂಭ್ರಮದಲಿ ಮುನಿಕುಂಭಜ ಪೂಜಿತ ಕದಂಬ ದುರಿತ ಕಾದಂಬನಿ ಪವನ ಕೃ ಪಾಂಬುಧೆ ಕೇಶವ 4 ಗರುಡ ಮಾರುತರಿಂದ ಪರಶೇವಿತನೆ ಬಾರೊ ಶರಣು ಜನರ ಸುರತರುವೆ ಚನ್ನಕೇಶವ ಧರೆಯೊಳಧಿಕ ಮಣಿಪುರ ಪಂಡಿತಾಗ್ರಣಿ ಸನ್ನುತ ಸರಸಿಜಾಸನ ಪಿತ ಸಿರಿದೇವಿಯು ಈರೆರಡು ರೂಪದಲಿ ಕರದೊಳಗಾರುತಿ ವರಚಾಮರಗಳ ಧರಿಸಿ ಸಿರಿ ' ಕಾರ್ಪರ ನರಹರಿ ' ರೂಪನೆ ಮಾಂ ಪೊರೆವುದು ಕೇಶವ 5
--------------
ಕಾರ್ಪರ ನರಹರಿದಾಸರು
ದೇವಾದಿ ದೇವಗೆಭಕ್ತ ಸಂಜೀವಗೆಶ್ರೀ ವಿಘ್ನೇಶ್ವರಗೆ ಜಯವೆಂದುಜಯವೆಂದು ಪಾರ್ವತೀಪುತ್ರಗೆಪಾವನಗಾತ್ರಗೆಫಣಿಯಜ್ಞ ಸೂತ್ರಗೆಹೂವಿನಾರತಿಯ ಬೆಳಗಿರೆ 1 ಸಿಂಧುರಗಮನೆಯರುಕುಂದಾಭರದನೆಯರುಇಂದುಶೇಖರಗೆ ಜಯವೆಂದುಜಯವೆಂದು ಇಂದ್ರಾದಿವಂದ್ಯಗೆನಿರ್ಜಿತಚಂದ್ರಗೆ ಸದ್ಗುಣಸಾಂದ್ರಗೆಕುಂದಣದಾರತಿಯ ಬೆಳಗಿರೆ 2 ವಾರಣದವನೆಗೆಧೀರಹೇರಂಬಗೆರಾವಣಾಸುರನ ಜಯಿಸಿದಜಯಿಸಿದಶರಣ ಮಂದಾರಗೆಶರಧಿ ಗಂಭೀರಗೆಕೌಸ್ತುಭಹಾರಗೆಮೇರುವೆಯಾರತಿಯ ಬೆಳಗಿರೆ 3 ಸುರರು ಹೂಮಳೆಗರೆಯೆತರುಣಿಯರ್ಪಾಡಲುಸುರದುಂದುಭಿ ಮೊಳಗೆ ಜಯವೆಂದುಜಯವೆಂದುಸಿಂಧುರವರ್ನಗೆಶೂರ್ಪಸುಕರ್ನಗೆಸರ್ವತ್ರಪೂರ್ಣಗೆಕುರುಜಿನಾರತಿಯ ಬೆಳಗಿರೆ 4 ಪಂಕಜಾಂಬಿಕೆಯರುಭೋಂಕನೆ ಪಾಡಲುಶಂಕರನ ಪುತ್ರ ಜಯವೆಂದುಪಾವನವೇಷಗೆವರದ ಗಣೇಶಗೆಕುಂಕುಮದಾರತಿಯ ಬೆಳಗಿರೆ 5 ರಮ್ಯವಾದಲತಿಗೆಯರಸವ ಪಾದಕೆ ತೊಡೆದುಕಮ್ಮೆಣ್ಣೆಯನು ಕಂಠಕನುಲೇಪಿಸಿಸುಮ್ಮಾನದಿಂದ ಪಟವಾಸ ಚೂರ್ಣವತಳಿದುನಿಮ್ಮ ಪೂಜಿಸುವೆನು ಗೌರಿದೇವಿ 6 ವರಧೂಪದೀಪ ಪರಿಪರಿಯ ನೈವೇದ್ಯ ಭಾ-ಸುರ ಸುತಾಂಬೂಲ ಸೀಗುರಿದರ್ಪಣನಿರುಪಮ ಛತ್ರ ಚಮರಾದಿ ಸೇವೆಯನು ಸ್ವೀ-ಕರಿಸಿ ಪಾಲಿಸೆ ಎನ್ನ ಗೌರಿ ದೇವಿ ಜಯ 7 ಇಂತು ಪರಿಪರಿಯ ರಾಜೋಪಚಾರಗಳಿಂದಸಂತತವು ನಿಮ್ಮ ಪಾದವ ಪೂಜಿಸಿನಿಂತು ಕರವನೆ ಮುಗಿದು ಧ್ಯಾನಿಸುತ ನಲಿನಲಿದುಸಂತಸದಿ ನಿಮ್ಮ ಸ್ತುತಿಸುವೆನು ಗೌರಿ ಜಯ 8 ಮತ್ತೇಭಗಮನೆಗೆ ಮಾಹೇಂದ್ರಸನ್ನುತೆಗೆಅತ್ಯಂತ ಪರಮ ಪಾವನ ಚರಿತೆಗೆನಿತ್ಯ ಸೇವೆಯನು ಮಾಡುವರ ರಕ್ಷಿಸುವಂಥಪ್ರತ್ಯಕ್ಷಮೂರ್ತಿ ಶ್ರೀಗೌರಿ ನಿಮಗೆ ಜಯ9 ಕಲಕೀರವಾಣಿಗೆ ಕಾಳಾಹಿವೇಣಿಗೆಕಲಧೌತಕಮಲ ಶೋಭಿತಪಾಣಿಗೆನಳಿನದಳನೇತ್ರೆಗೆ ನಾರಾಯಣೆಗೆ ನಮ್ಮ-ನೊಲಿದು ರಕ್ಷಿಸುವಂಥಾ ಶ್ರೀಗೌರಿಗೆ ಜಯ 10 ಕುಂಭಸಂಭವನುತೆಗೆ ಜಂಭಾರಿಪೂಜಿತೆಗೆರಂಭಾಸುನರ್ತನಪ್ರಿಯೆಗೆ ಶಿವೆಗೆರಂಭೋರುಯುಗಳೆಗೆ ಬಿಂಬಾಧರೆಗೆ ನಮ್ಮಬೆಂಬಿಡದೆ ರಕ್ಷಿಸುವ ಗಿರಿಜಾತೆಗೆ ಜಯ 11 ಮುತ್ತೈದೆತನಗಳನು ನಿತ್ಯಸಂಪದಗಳನುಉತ್ತಮಾಂಬರ ಛತ್ರಚಾರಮವನುಅತ್ಯಂತ ಪ್ರೀತಿಯಿಂದಿತ್ತು ರಕ್ಷಿಸಿ ಭಕ್ತವತ್ಸಲೆ ಶ್ರೀ ಗೌರಿದೇವಿ ತಾಯೆ12 ಎಂದೆಂದು ಈ ಮನೆಗೆ ಕುಂದದೈಶ್ವರ್ಯವನುಚಂದವಾಗಿಹ ಪುತ್ರ ಪೌತ್ರರನ್ನುಸಾಂದ್ರಕೃಪೆಯಿಂದಿತ್ತು ಸಲಹೆ ಕೆಳದಿಯ ಪುರದಿನಿಂದ ಶ್ರೀ ಪಾರ್ವತಾದೇವಿ ತಾಯೆ ಜಯ 13
--------------
ಕೆಳದಿ ವೆಂಕಣ್ಣ ಕವಿ
ಪಾಲಿಸೆನ್ನನು ಪಂಪಾಕ್ಷೇತ್ರವಾಸ ಫಾಲಲೋಚನ ಶಂಭೋ ವ್ಯೋಮಕೇಶ ಪ ನೀಲ ಲೋಹಿತ ವೀತ | ಚೈಲ ಭೂಷಿತ ಭಸಿತ ಕಾಲಾರಿ ಶಿವ ದ್ರೌಣಿ | ಶೂಲ ಪಾಣಿ || ಕಾಲ ಕೂಟವ ಮೆದ್ದು ಕೊಂಡ ಮೇತೌಷಧವನಿತ್ತು 1 ವ್ಯಾಧರೂಪದಿ ರಣದಿ ಕಾದು ಪಾರ್ಥಗೆ ಸೋತು ನೀದಯದಿ ದಿವ್ಯಾಸ್ತ್ರ ಕರುಣಿಸಿದೆಯೋ ಮೇದಿನೀಶಗೆ ಶಾಸ್ತ್ರ ಬೋಧಿಸಿದ ಮುನಿವರ್ಯ ವೇದನಂದನ ನಿನ್ನ ಪಾದಕ್ಕೆ ನಮಿಸುವೆನು 2 ಕಾಮಾರಿ ಸುಪವಿತ್ರ | ಸೋಮಾರ್ಕಶಿಖಿ ನೇತ್ರ ಶಾಮಸುಂದರವಿಠಲ ಸ್ವಾಮಿ ಮಿತ್ರ ಭೀಮ ಪಾವನಗಾತ್ರ ಪ್ರೇಮಾಬ್ಧಿ ಸುಚರಿತ್ರ ಕಳತ್ರ | ಮಹಿಮ ಚಿತ್ರಾ 3
--------------
ಶಾಮಸುಂದರ ವಿಠಲ
ಪಾಲಿಸೋ ಹರಿ ಪಾಲಿಸೋ ಫಾಲನಯನಸಖ ಭಕ್ತಾಂತರಾತ್ಮಕ ಪ ಪಾಲಿಸು ಫಲ ಸುಪ್ರದಾತ ಮೊರೆ ಪಾಲಿಸು ಸುಜನನ್ನುತ ಖರೆ ಪಾಲಿಸು ಸತತ ವಿಖ್ಯಾತ ದೊರೆ ಪಾಲಿಸು ನುತರ ಸಂಪ್ರೀತ ಆಹ ಪಾಲ ಪಾವನಗಾತ್ರ ಪಾಲತ್ರಿಜಗಸ್ತೋತ್ರ ಪಾಲಿಸು ಕೃಪಾನೇತ್ರ ಪಾಲಪಾವನಯಾತ್ರ 1 ಕೊರಳ ಕೌಸ್ತುಭಮಣಿಮಾಲ ಬಹು ಕಾಲ ಮಹ ಕರುಣದೊರದಿ ಸುರಜಾಲ ಬಹು ಪ್ರಳಯ ಗೆಲಿದಿ ತೋರಿ ಲೀಲಾ ಆಹ ಹರಣಜನರಮರಣ ಕರುಣ ಭರಣಪೂರ್ಣ ಶರಣಜನರ ಪ್ರಾಣ ಮರಣ ಗೆಲಿಸುವ ತ್ರಾಣ 2 ನಿತ್ಯ ನಿಮ್ಮಯ ನಿಜಭಕ್ತಿ ನೀಡು ನಿತ್ಯ ನಿಮ್ಮಯ ನಿಜಸ್ತುತಿ ನೀಡು ನಿತ್ಯ ನಿಮ್ಮಯ ನಿಜಮತಿ ನೀಡು ನಿತ್ಯ ನಿರ್ಮಲ ನಿಜಮುಕ್ತಿ ಆಹ ನಿತ್ಯನಿರ್ಮಲ ರಾಮ ನಿತ್ಯನಿರ್ಮಲ ನಿಮ್ಮ ನಿತ್ಯನಿರ್ಮಲ ಪ್ರೇಮ ನಿತ್ಯನಿರ್ಮಲ ನಾಮ 3
--------------
ರಾಮದಾಸರು
ಪ್ರಾಣನಾಥ ಪಾವನಗಾತ್ರ ಪ ನಿನ್ನಡಿಗಾನಮಿಸುವೆನು ಅ.ಪ ಬನ್ನಬಡಿಪ ಖಳರನ್ನು ಮುರಿದು ಶರ ಣನ್ನುವರನು ಕಾರುಣ್ಯದಿ ಪೊರೆಯುವ 1 ಸೇರಿದವರ ಭವದೂರಗೈದು ಮನ ಕೋರಿಕೆ ಸಲಿಸುವ ಧೀರ ಉದಾರ 2 ಎನ್ನ ಮನೋರಥವನು ಸಲಿಸುವೊಡೆ ನಿನ್ನ ಹೊರತು ನಾನನ್ಯರ ಕಾಣೆನು 3 ಮಂಜುಳ ವೇಷ ಪ್ರಭಂಜನ ಕುವರ ಧ ನಂಜಯ ಸೋದರ ಕುಂಜರಗಮನ 4 ಕರಿಗಿರೀಶ ಶ್ರೀ ನರಹರಿ ಚರಣವ ನಿರುತ ಸೇವಿಸುವ ಶರಣ ಶಿರೋಮಣಿ 5
--------------
ವರಾವಾಣಿರಾಮರಾಯದಾಸರು
ರೋಗಹರನೇ ಕೃಪಾಸಾಗರ ಶ್ರೀ ಗುರು ರಾಘವೇಂದ್ರ ಪರಿಪಾಲಿಸೊ ಪ ಸಂತತ ದುರ್ವಾದಿ ಧ್ವಾಂತ ದಿವಾಕರ ಸಂತವಿನುತ ಮಾತ ಲಾಲಿಸೊ 1 ಪಾವನಗಾತ್ರ ಸುದೇವವರನೆ ತವ ಸೇವಕ ಜನರೊಳಗಾಡಿಸೊ 2 ಘನ್ನ ಮಹಿಮ ಜಗನ್ನಾಥವಿಠಲ ಪ್ರಿಯ ನಿನ್ನಾರಾಧನೆ ಮಾಡಿಸೊ 3
--------------
ಜಗನ್ನಾಥದಾಸರು
ವಿಜಯ ಗುರು ತವಪಾದರಜವ ಕರುಣಿಸಿ ಎನಗೆ ಭುಜಗಶಯನನ ಧ್ಯಾನ ಭಜನೆ ನೀಡುವುದು ಪ. ತವ ಶಿಷ್ಯವಂಶ ಸಂಜಾತಳೆನ್ನುತಲಿ ಬಹು ತವಕದಲಿ ಕರುಣಾರ್ದ ದೃಷ್ಟಿಯಿಂದ ತವ ಸೇವೆ ಎನಗಿತ್ತು ತವ ಕೀರ್ತನೆಯ ನುಡಿಸಿ ಮೂರ್ತಿ ತೋರೆನ್ನ ಭವತಾಪ ಹರಿಸಯ್ಯ 1 ನಿನ್ನ ಮಹಿಮೆಯ ಗುಟ್ಟು ವರ್ಣಿಪರು ಯಾರಿನ್ನು ನಿನ್ನ ಚರ್ಯೆಯ ಚರಿತೆ ಬರೆದವರ್ಯಾರೊ ನಿನ್ನ ನಿಜ ಸಂಕಲ್ಪ ಇನ್ನು ಅರಿಯುವರುಂಟೆ ಬನ್ನ ಭವ ಉಂಟೆ 2 ಆ ದೇವಮುನಿ ಆಜ್ಞೆ ಮೋದದಲಿ ಸ್ವೀಕರಿಸಿ ಪಾದನ್ಯೂನತೆ ಕವನ ಪೂರ್ಣಗೊಳಿಸಿ ವೇದಶಾಸ್ತ್ರಗಳರ್ಥ ಸುಲಭದಲಿ ತಿಳಿಸುತಲಿ ಹಾದಿ ತೋರಿದೆ ಶಿಷ್ಯರಾದ ಸುಜನರಿಗೆ 3 ಸತ್ಕರ್ಮ ಫಲಗಳನು ನಿತ್ಯದೊಳಗರ್ಪಿಸಲು ಉತ್ತಮನು ಆರೆಂಬ ಚಿತ್ತದಳಲ ಮುಕ್ತಿಯೋಗ್ಯರಿಗೆ ಬಹು ಯುಕ್ತಿಯಿಂದಲಿ ತೋರಿ ಉತ್ತಮನು ಹರಿಯೆಂದು ಶಕ್ತಿಯಿಂ ಸ್ಥಾಪಿಸಿದ 4 ವೈಕುಂಠಪುರದೊಳಗೆ ಶ್ರೀ ಕರನ ವಕ್ಷಕ್ಕೆ ಸೋಕಿಸಿದೆ ಚರಣವನು ಜೋಕೆಯಿಂದ ಈ ಕಾರ್ಯಕಾರಣವ ನಾ ಕೇಳಿ ನುಡಿವಂಥ ವಾಕು ಲಾಲಿಸುತ ವಿವೇಕ ಮತಿ ಕರುಣಿಪುದು 5 ಆ ಕಮಲನಾಭನಾ ಹೃದಯ ಕರುಣಾಮೃತವು ಸೋಕಿ ತುಂಬಿಹುದು ತವ ಚರಣ ಕಮಲದಲಿ ನಾ ಕೇಳ ಬಂದೆನಾ ಕರುಣಾಮೃತದ ಕಣವ ಯಾಕೆ ಮರೆಮುಚ್ಚಿನ್ನು ನೀ ಕೊಡೈ ತವಕದಲಿ 6 ಪಾದ ರೂಢಿಗೊಡೆಯಗೆ ಲಕುಮಿ ಓಡಿದಳು ಕರವೀರಪುರಕೆ ಸ್ವಾಮಿ ಬೇಡಾಗೆ ವೈಕುಂಠ ನೋಡಿ ಆನಂದಾದ್ರಿ ಮಾಡಿದನು ಮಂದಿರವ ಕೂಡಿ ಪದ್ಮಿನಿಯ 7 ನೋಡಿ ವೈಕುಂಠದೊಳು ನಾಡಿಗೊಡೆಯನ ಚರ್ಯ ರೂಢಿಯೊಳು ಜನಿಸಿ ಭೂಸುರವಂಶದಿ ದುರಿತ ಈಡಾಡಿ ಹರಿದಾಸ್ಯವನು ಬೇಡಿ ಬಯಸುತ ಪೊಂದಿ ನಾಡಿನೊಳು ಮೆರೆದೆ 8 ಪ್ರತಿವರ್ಷ ಬಿಡದೆ ತಿರುಪತಿ ಯಾತ್ರೆ ಭಕ್ತಿಯಲಿ ಪತಿತಪಾವನನ ಓಲೈಸಿ ಮೆರೆದೆ ಕ್ಷಿತಿಯಕ್ಷೇತ್ರ ಅಪ್ರತಿಮಹಿಮ ಸಂಚರಿಸಿ ಕ್ಷಿತಿಗೆ ತೋರಿದೆ ನಿನ್ನ ಮಹಿಮೆ ಜಾಲಗಳ 9 ಅಂಕಿತವದಲ್ಲದೆ ದಾಸತ್ವ ಸಿದ್ಧಿಸದು ಕಿಂಕರಗೆ ಅಂಕಿತವೆ ಕುರುಹು ಎಂದು ಅಂಕಿತವ ಪಡೆದು ಚಕ್ರಾಂಕಿತನ ಗುಣ ಮಹಿಮೆ ಶಂಕಿಸದೆ ಪೇಳ್ದೆ ತವ ಕಿಂಕರೋದ್ಧಾರಕನೆ 10 ನಿನ್ನ ಮಹಿಮಾದಿಗಳ ವರ್ಣಿಸಲು ಎನ್ನಳವೆ ಚನ್ನ ಗುರು ವಿಜಯವಿಠ್ಠಲನ ಪದಕಮಲ ಚನ್ನಾಗಿ ಕಂಡು ಹೃನ್ಮಂದಿರದಿ ಸತತದಲಿ ತನ್ಮಂತ್ರ ಕಿರಣವೆಮ್ಮಲ್ಲಿ ಬೀರಿದ ಕರುಣಿ 11 ವಿಕ್ರಮ ಕಾರ್ತೀಕ ಶುದ್ಧ ದಶವಿೂ ದಿವ್ಯ ಶುಕ್ರ ನಾಮರು ವಾರ ಶುಭದಿನದಿ ಇಂದು ಅಕ್ಕರದಿ ಕರಸಿಲ್ಲಿ ಉಕ್ಕಿಸಿದೆ ತವ ಸ್ತೋತ್ರ ಮಕ್ಕಳಂದದಿ ಪೊರೆವ ಅಕ್ಕರೆಯು ಉಂಟೊ 12 ಮಧ್ವರಾಯರ ಕುಲದಿ ಉದ್ಭವಿಸಿದಂಥ ಈ ಶುದ್ಧ ವೈಷ್ಣವ ಕುಲದಿ ಜನಿಸಿ ಬಂದೆ ಶುದ್ಧ ದಾಸತ್ವದ ಮುದ್ರಾಂಕಿತದ ರತ್ನ ಪಾದ ಕಂಡೆ 13 ಪಾಪಿ ಜನರುದ್ಧರಿಪ ಪಾವನಗಾತ್ರನೆ ಆ ಪಯೋಜಾಸನರ ತರತಮ್ಯವ ಸ್ಥಾಪಿಸಿದ ಮಹಿಮನೆ ಸದ್ಗುಣಾಂಬುಧಿ ನಿಲಯ ಗೋಪಾಲಕೃಷ್ಣವಿಠ್ಠಲನ ಪದಭೃಂಗ 14
--------------
ಅಂಬಾಬಾಯಿ