ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯದೇವಿ ಜಯದೇವಿ ಜಯ ಪಾವನಗಂಗೇ | ಜಯಜಯ ತ್ರಿಪಥಗಾಮಿನಿ ಜಯ ತುಂಗತರಂಗೇ ಪ ಆದಿಲಿ ಶ್ರೀಹರಿ ಕೋಮಲ ಪದನಖದಿಂದೊಗದು | ಸಾಧಿನಿ ವಾರಿಜಭವನಾ ಕರಪಾತ್ರಕೆ ಬಂದು | ಸಾದರದಿಂದಾಶಿವನ ಕೆಂಜೆಡೆಯೊಳು ನಿಂದು | ಮೇದಿನಿಗಿಳಿದು ನೀಬಂದೆ ಭಗೀರಥನೃಪಗೊಲಿದು 1 ಕಾಶಿಪ್ರಯಾಗದಿ ನಿಂದು ಉದ್ದರಿಸುತ ಕೆಲರಾ | ಆಶೆಯ ಪೂರಿಸಲಾಗಿ ದಕ್ಷಿಣ ದಿಶೆದವರಾ | ರಾಶಿಯ ಕನ್ಯಾ ಮೆಟ್ಟಲು ಸುರಗುರು ಗಂಭೀರಾ | ಭಾಶಿಶಿ ತೋರಿದೆ ಬಂದು ಕೃಷ್ಣವೇಣಿಲಿ ಸದರಾ 2 ಹರಿಹರ ದೇವರು ದ್ರವರೂಪದಿ ಹರಿವುತಲೀ | ನೆರೆನೀಕೂಡಿದ ಸಂಭ್ರಮ ಏನೆಂದುಸುರಲಿ | ದರುಶನ ಮಾತ್ರದಲಾದೆನು ಮುಕ್ತನು ಭವದಲಿ | ಗುರು ಮಹೀಪತಿಸುತ ಎನ್ನನು ರಕ್ಷಿಸು ಕರುಣದಲಿ |3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವೆಂಕಟಪತೇಧೀರ | ಮಾಡೋಯನ್ನ ಸಂಕಟ ಪರಿಹಾರ || ಶಂಕರನ ವರ ಬಿಂಕರಕ್ಕಸಂ ಕಳೆದು ನಿ:ಶ್ಯಂಕನಾದ ಪ ನಿಜಾಂಕ ಗುಣಪೂರ್ಣಾಂಕ ನಿನ್ನಯ ಕಿಂಕರರ ಕಿಂಕರನು ನಾನು | ವರದ ಕೋಮಲ ಶುಭಾಂಗ| ಪಾವನಗಂಗ | ಬೆರಳಲಿಪಡೆದರಂಗ ಉರಗಾದ್ರಿ ಸ್ಥಿರನಿವಾಸ || ಶಿರೆಯೆರಗುತಿರುವರು ಮಹಿಮ ನಿನ್ನದು 1 ಅಂಡಜವಾಹನ ಧೋರೆ | ಪುಂಡಲೀಕವರದನೆ | ಗೋಪಾಲನೇ | ಪಾಂಡವರಕ್ಷಕನೆ | ಹಿಂಡು ದೈವರ ಗಂಡ | ವೀರ ಪ್ರಚಂಡ | ಜಗದುದ್ದಂಡ ಮಂಡಲಾಧಿಪ ದೇವ ದೇವ 2 ಪಾಲಸಾಗರ ಶಯನ | ಪಾವನ್ನ | ಪಾಲಿಸೋ ದಾಸರನ್ನ | ಜ್ವಾಲಾ ಹೆನ್ನೆವಿಠಲ | ಭಕ್ತವತ್ಸಲ | ಲಾಲಿತ ಗುಣಶೀಲ | ಪಾಲಿತಾಮರ ಲÉೂೀಲಗೋಪಿ ಬಾಲಾ ಲೀಲಾ ವಿಶಾಲನಾಯಕ | ಮಂಗಮನೋಹರ3
--------------
ಹೆನ್ನೆರಂಗದಾಸರು