ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ಥಳಕು ಥಳಕು ಹೊಳೆವೋತನ್ನ ಬೆಳಕು ತುಂಬಿಭವನದೊಳು ಝಳಕು ಝಳಕು ಬಂದ ನಮ್ಮಜಾಣರಂಗನ ನೋಡುವ ಬಾರೆ ಅಂಗನೆ ಪ. ನೀಲ ಮಾಣಿಕ ರತ್ನದಿವ್ಯನಿಲವುಗನ್ನಡಿ ಹೊಳೆವ ಮಹಲಗಳ ಇಳಿದು ಬಂದ1 ಕೋಟಿ ಕೋಟಿ ಸೂರ್ಯರಂತೆ ಧಾಟತೋರೋ ಅಂಗಳದಿ ದಾಟಿ ದಾಟಿ ಇಳಿದು ಬಂದ 2 ನೂರು ಸೂರ್ಯರ ಬೆಳಕುತೋರುವಂತೆ ದ್ವಾರಗಳನು ವಾರಿಜಾಕ್ಷ ಇಳಿದು ಬಂದ 3 ಮುತ್ತಿನ ತ್ವಾರಣನವರತ್ನ ಹಂದರ ದಾಟಿಚಿತ್ರ ಚಾವಡಿ ಇಳಿದು ಬಂದ 4 ವಜ್ರ ಮಾಣಿಕವು ಬಹಳ ಸಜ್ಜ ತೊರೋ ಅಂಗಳದಿ ನಿರ್ಜರೋತ್ತಮನು ಬಂದ 5 ಪಚ್ಚದ ಪಾವಟಿಗೆ ರತ್ನಹಚ್ಚಿದ ಹೊಸ್ತಿಲವ ದಾಟಿಅಚ್ಯುತಾನಂತ ಬಂದ 6 ನಾಗಶಯನ ತನ್ನ ಮನೆಯ ಬಾಗಿಲ ಮುಂದೊಪ್ಪುತಿರಲು ಭಾಗವತರ ಮ್ಯಾಳದಿಂದ ಬಂದ7 ರುದ್ರಾದಿಗೊಂದ್ಯನ ಮುಂದೆ ಅಧ್ಯಾನ(ಅಧೀನ) ವೆಂಬುವರು ಕೋಟಿಮುದ್ದು ತೋರೋದಮ್ಮ ಸಭೆಯು 8 ಅಲ್ಲೆ ಅಲ್ಲೆ ನಿಂತ ಜನರು ಚಲ್ವರಮೆ ಅರಸನ ಮ್ಯಾಲೆಮಲ್ಲಿಗೆ ಸೂರ್ಯಾಡೋರೆಷ್ಟ 9
--------------
ಗಲಗಲಿಅವ್ವನವರು
ವರಗಿರಿವಾಸನ ಅರಮನೆ ಸೊಬಗನೆ ದೊರೆಗಳು ನೋಡಿ ಶಿರಗಳ ತೂಗುತ ಬೆರಗಾಗಿಪ. ಛÀತ್ರ ಚಾಮರ ರಾಜ ಪುತ್ರರು ಚಂದಾಗಿಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತಬ್ಯಾಗ ಹೊಕ್ಕರು ಚಿತ್ತಜನೈಯ್ಯನÀ ಅರಮನೆಯೊಳಗೆ 1 ತಾರಾಪತಿಗಳಂತೆ ತೋರುತಲೈವರುಥೋರ ಮುತ್ತುಗಳ ಅಲವೂತಥೋರ ಮುತ್ತುಗಳ ಅಲವೂತ ಹೊಕ್ಕರುವೀರಕೃಷ್ಣಯ್ಯನ ಅರಮನೆ ಬ್ಯಾಗ2 ಪಚ್ಚದ ಪಾವಟಿಗೆ ರತ್ನ ಹಚ್ಚಿದ ಚೌಕಟ್ಟುಅಚ್ಚಮುತ್ತುಗಳ ಅಲವುತಅಚ್ಚಮುತ್ತುಗಳ ಅಲವುತ ಹೊಕ್ಕರುಚಿತ್ತಜನಯ್ಯನ ಅರಮನೆ ಬ್ಯಾಗ 3 ಪಕ್ಷಿ ವಾಹನನರಮನೆ ದಕ್ಷಿಣ ದ್ವಾರದಿಲಕ್ಷಣವುಳ್ಳ ವನಿತೆಯರುಲಕ್ಷಣವುಳ್ಳ ವನಿತೆಯರು ತೆರೆದ ಬಾಗಿಲೊಳು ನಕ್ಷತ್ರದಂತೆ ಹೊಳೆಯುತ4 ಎಡಬಲ ಶ್ರೀತುಳಸಿಗಿಡಗಳು ಅಲವುತ ಕಡಲಶಯನನ ಅರಮನೆ ಒಳಹೊಂದಿಕಡಲಶಯನನ ಅರಮನೆ ಒಳಗಿನ್ನುನಾರಿಯರು ನೆರೆದರು 5 ಗಂಧದ ಥಳಿ ಕೊಟ್ಟು ಚಂದುಳ್ಳ ಅಂಗಳಕಹಂದರಗಳ್ಹಾಕಿದ ಇಂದಿರೇಶನರಮನೆಇಂದಿರೇಶನ ಅರಮನೆಯೊಳಗೆಬಂದುನಾರಿಯರು ನೆರೆದರು 6 ಚಂದ್ರನಂತೊಪ್ಪುತ ಚಂದಾಗಿನಿಂತತಂದೆ ರಾಮೇಶನ ಅರಮನೆ ತಂದೆ ರಾಮೇಶನ ಅರಮನೆ ವೃಂದಾವನಕೆಹೊಂದಿ ನಾರಿಯರುನೆರೆದರು ಬೆರಗಾಗಿ 7
--------------
ಗಲಗಲಿಅವ್ವನವರು
ಶೋಭಾನವೇ ಬಗಳಾಮುಖಿ ದೇವಿಗೆಶೋಭಾನವೇ ಸದ್ಗುರುನಾಥಗೆ ಶೋಭಾನವೆನ್ನಿ ಶುಭವೆನ್ನಿಪಸುತ್ತಿದ ಸರಿಗೆಯು ಒತ್ತಿದ ಚಿಂತಾಕೆತ್ತಿದ ರಾಗಟೆ ಹತ್ತಿದ ಚವುರಿಮತ್ತೆ ತುರುಬಿಗೆ ಪಂಚಕ ಮುಡಿದಿಹಮುಡಿದೀ ಬಗಳಾಮುಖಿಗೆ ರತ್ನದಾರತಿಯ ಬೆಳಗಿರೇ1ಶ್ರವಣ ಮನನ ನಿಧಿಧ್ಯಾಸನ ಸಾಧಿಸಿಭವಭವಗಳ ತರಿದೆಲ್ಲವ ಛೇದಿಸಿಶಿವಸಾಕ್ಷಾತ್ತಾಗಿ ಬೆಳಗುತ ಬೆಳಗುತ ಸದ್ಗುರುನಾಥಗೆಪವಳದಾರತಿಯೆ ಬೆಳಗಿರೆ2ವಾಲೆಬಳೆಗಳು ತಾಳಿಯು ಮೂಗುತಿಸಾಲಿನ ಅಡ್ಡಿಕೆ ತಾಯಿತ ಸರಪಳಿಮೇಲು ಪದಕವೆ ಮೆರೆದಿಹ ಮೆರೆದಿಹ ಬಗಳಾಮುಖಿಗೆಲೋಲದಾರತಿ ಬೆಳಗಿರೆ3ಬಾಲೋನ್ಮತ್ತ ಪಿಶಾಚಾಂಧರ ಬದಿರ ಲಕ್ಷಣಮೂಕಾವಸ್ಥೆಯ ತಾ ತಾಳಿ ಅರವಸ್ಥೆಯ ಧರಿಸಿಧರಿಸಿಹ ಸದ್ಗುರುನಾಥಗೆತೈಲದಾರತಿಯ ಬೆಳಗಿರೆ4ಹೊಸ ಮಿಂಟಿಕೆ ಪಿಲ್ಲೆ ಸವಂದಿಗೆಜಸವುಂಗರ ಮೀನೆಸೆದಿಹಮುದ್ರಿಕೆಮಿಸುನಿಯೊಡ್ಯಾಣವು ತೊಳಗುವ ತೊಳಗುವ ಬಗಳಾಮುಖಿಗೆಶೀಲದಾರತಿಯ ಬೆಳಗಿರೆ5ಧಗಧಗಿಸುವ ಪೀತಾಂಬರದುಡುಗೆಯಝಗ ಝಗಿಸುವ ಮಹಾಸ್ವರ್ಣದ ಕಂಚುಕಿನಿಗಮವೆಡಬಲದಲ್ಲಿ ಹೊಗಳುವ ಹೊಗಳುವ ಬಗಳಾಮುಖಿಗೆಸುಗಮದಾರತಿಯ ಬೆಳಗಿರೆ6ಝಗ ಝಗಿಸುವ ಪ್ರಭೆ ದೃಷ್ಟಿಸಿ ಶ್ರವಣದಿಮೊಗೆ ಮೊಗೆದು ದಶನಾದವ ಸೇವಿಸಿಬಗೆ ಬಗೆ ಆನಂದದಿ ಸುಖಿಸುವ ಸುಖಿಸುವ ಸದ್ಗುರುನಾಥಗೆಸುಗಮದಾರತಿಯ ಬೆಳಗಿರೆ7ಸಪ್ತಾವರಣ ಭಸ್ಮವ ಮಾಡಿಸಪ್ತಭೂಮಿಕೆ ಪಾವಟಿಗೆಯನೇರಿಗುಪ್ತ ಪ್ರಭಾತೀತವಾಗಿ ತೊಳಗುವ ತೊಳಗುವ ಸದ್ಗುರುನಾಥಗೆತೃಪ್ತದಾರತಿಯ ಬೆಳಗಿರೆ8ಕಂಕಣ ಹರಡಿಯ ಹಸ್ತದ ಕೈಯ್ಯಲಿಅಂಕುರಪಟ್ಟಿಯು ಪರಿಘವು ಶರಧನುಅಂಕೆಯಿಲ್ಲದಾಯುಧ ಪಿಡಿದಿಹ ಪಿಡಿದಿಹ ಬಗಳಾಮುಖಿಗೆಪಂಕಜದಾರತಿಯ ಬೆಳಗಿರೆ9ಸಾರಿಯೆ ತ್ವಂ ಪದ ತತ್ವಮಸಿ ಪದಮೀರಿಯೆ ಸಗುಣ ನಿರ್ಗುಣ ರೂಪವ ತೋರಿಚರಿಸುವಚರಿಸುವ ಸದ್ಗುರುನಾಥಗೆ ಸಾರದಾರತಿಯ ಬೆಳಿಗಿರೆ10ಪಿಡಿದೆಡಗೈಯಲಿ ವೈರಿಯ ಜಿಹ್ವೆಯ ಕೆಡುಹುತ ತುಳಿದೆಹೊಡೆಯುತ ಖಡುಗದಿ ಕೊಡುತ ಬೇಡಿದವರಿಗೆ ಅಭಯವಅಭಯವೀವ ಬಗಳಾಮುಖಿಗೆ ಸಡಗರದಾರತಿಯ ಬೆಳಗಿರೆ11ಸಾಧನ ನಾಲ್ಕನು ಸಾಧಿಪ ಸಚ್ಛಿಷ್ಯರಿಗೆಅಭಯವ ನೀಡುತ ಭಕ್ತಿರಿಗಾಧಾರವಾಗಿ ಕರುಣಿಪಕರುಣಿಪ ಸದ್ಗುರುನಾಥಗೆ ಸಾಧುಗಳಾರತಿ ಬೆಳಗಿರೆ12ಚಿದಾನಂದ ಪರಬ್ರಹ್ಮವು ತಾನೇಮದಮುಖನು ಸಂಹರಿಸಲೋಸುಗಸದನಬ್ರಹ್ಮ ರಂಧ್ರದಿ ಸ್ಥಾನವಾಯ್ತುಸ್ಥಾನವಾಯ್ತು ಬಗಳಾಮುಖಿಗೆ ಸುಧೆಯ ಆರತಿ ಬೆಳಗಿರೆ13ಸಿದ್ದ ಪರ್ವತವಾಗಿಹ ಪ್ರ-ಸಿದ್ಧ ಬಗಳಾಮುಖಿಯೆಂದೆಣಿಸುವಸಿದ್ಧ ಚಿದಾನಂದಾವಧೂತಅವಧೂತಸದ್ಗುರುನಾಥಗೆಸಿದ್ಧದಾರತಿಯ ಬೆಳಗಿರೆ14
--------------
ಚಿದಾನಂದ ಅವಧೂತರು