ಒಟ್ಟು 6 ಕಡೆಗಳಲ್ಲಿ , 1 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಪರಾಧವ ಮನ್ನಿಸಿ ಪೊರೆ ಸುಪ್ರ- ಸನ್ನ ಕುಮಾರ ದೇವ ಪ ನಿನ್ನಂಥ ಕರುಣಾಳು ಇನ್ನಿಲ್ಲ ಲೋಕದೊ-ಳೆನ್ನನುದ್ಧರಿಸು ದೇವಾಅ.ಪ ನೀರಜನೇತ್ರ ಮಯೂರವಾಹನ ಭಕ್ತೋ-ದ್ಧಾರ ಶಂಕರನ ಸುತಾ | ಶೂರಾಖ್ಯ ಪೂರ್ವಸುರಾರಿಗಳಂತಕ ಮಾರನಾಕಾರದಾತಾ , ಪುನೀತಾ 1 ಕಂಬು ಕಂಧರಶರಜ ಮು-ಕುಂದನ ಸಖ ಚಿದ್ರೂಪ ಪ್ರತಾಪ 2 ಈಶನ ಸುತ ಕಮಲಾಸನಾರ್ಚಿತ ರವಿ-ಭಾಸ ಸೇನಾನಿ ಧೀರಾ ದೋಷರಹಿತ ಪಾವಂಜೇಶನೆ ತವಪಾದ ದಾಸರ ಕುಲ ಉದ್ಧಾರ | ಗಂಭೀರ 3
--------------
ಬೆಳ್ಳೆ ದಾಸಪ್ಪಯ್ಯ
ಗಿರಿರಾಜ ಸುಕುಮಾರಿ ಶಕ್ತಿ ವಿರಕ್ತಿ ಪ ದೊರೆಯುವಂತೆನಗವ್ವ ತವಪಾದ ಭಕ್ತಿ ಅ.ಪ ಕಂಬುಕಂಠಿನಿ ಗುಹ ಜನನಿ ದುರ್ಗಾಂಬಾ 1 ನಾಸಿಕ ಚಂಪ ಪೋಲ್ವ ಶರ್ವಾಣೀ2 ಪಾವಂಜೇಶನ ದಾಸಜನರ ರಕ್ಷಕಿಯೇ 3
--------------
ಬೆಳ್ಳೆ ದಾಸಪ್ಪಯ್ಯ
ನಮಿಸುವೆನೋ ಪಾದಕೆ ಕಾರ್ತಿಕೇಯಾ | ನಮಿಸುವೆ ಪ ನಮಿಸುವೆ ಪಾದಕೆ ಸುಮನಸ ವಂದ್ಯನೆ ಅ.ಪ ಚಾರು ಚಂಪಕನಾಸ ನೀರಜನೇತ್ರಾ | ತಾರಕಾಸುರನ ಸಂಹಾರಿ ಕುಮಾರಾ 1 ಮುಮುಕ್ಷು ಪ್ರಿಯಾ ಗುಹ 2 ದಾಸರಿಗನುದಿನ ತೋಷವಿತ್ತು ಅಘ- ನಾಶ ಷಟ್ಶಿರ ಪಾವಂಜೇಶನೆ ಕಾಯೆಂದು 3
--------------
ಬೆಳ್ಳೆ ದಾಸಪ್ಪಯ್ಯ
ನಿನ್ನನೇನು ಮರೆಹೊಕ್ಕೆನು ಪ ನಿನ್ನನೇ ನಾ ಬೇಡ್ವೆನುಅ.ಪ ದುರಿತ ಶರಧಿ ನಿತ್ಯಾನಂದನೆ 1 ಕೃತ್ತಿಕೆಯೊಳುದಿಸಿದನೆ ಪರಮ ಪ-ವಿತ್ರನೇ ಸುರವಂದ್ಯನೆ ಉತ್ತಮೋತ್ತಮ ದೇವಸೇನೆಯ ಚಿತ್ತಹಾರಿಯೆ ಶರಜನೇ 2 ಮಾರ ತ್ರೈಜಗದೊಡೆಯನೆ | ಘೋರ ಶಾಪದಿ ಗಾರುಗೆಟ್ಟಿಹ ನಾರಿರನ್ನೆಯ ಕಾಯ್ದನೆ 3 ಮುಷ್ಟಿಕಾರಿಯ ಮಿತ್ರನೆ ಪರ- ಮೇಷ್ಟಿ ವಂದ್ಯನೆ ಪೂಜ್ಯನೆ | ದುಷ್ಟ ಪದ್ಮನ ಕುಟ್ಟಿ ಸುರಪತಿ ಇಷ್ಟವನು ಕರುಣಿಸಿದನೆ 4 ಭಾವಜಾರಿಯ ಪುತ್ರನೆ ಸದಾ ಭಾವಜನ ಪ್ರತಿರೂಪನೆ | ಭಾವ ಭಕ್ತಿಯೊಳ್ ಭಜಿಪ ದಾಸರ ಕಾವ ಪಾವಂಜೇಶನೆ 5
--------------
ಬೆಳ್ಳೆ ದಾಸಪ್ಪಯ್ಯ
ಲಂಬೋದರನ ಸಹೋದರನೆ ಪ ಶಂಭುಜಕರುಣಾಸಾಗರನೆ ಅ.ಪ ಶೂರಪದ್ಮನ ಎದೆ ಸೀಳಿದನೆ ಮಾರನ ಪೋಲುವ ಸುಂದರನೆ ಧೀರ ಹಿರಣ್ಯಕನಾರಾಧನೆಗೆ ಮೆಚ್ಚಿ ಸೂರೆಯ ಮುಕ್ತಿಯನಿತ್ತವನೆ 1 ವರವಜ್ರ ಶಕ್ತ್ಯಾಯುಧ ಧರನೆ ಸುರಮುನಿ ನಮಿತ ಸರ್ವೇಶ್ವರನೆ ಸುರುಚಿರ ರತ್ನಾಭರಣ ವಿಭೂಷಣನೆ ಶರಣ ರಕ್ಷ ಕುಮಾರಕನೆ2 ದಾಸ ಜನರ ಮನತೋಷಕನೆ ವಾಸುದೇವನ ಸಖ ಷಟ್ಶಿರನೆ ದೋಷವಿನಾಶನೆ ನಾಶರಹಿತ ಪಾವಂಜೇಶನೆ ಕಾರ್ತಿಕೇಯನೆ ಸ್ಕಂದನೆ 3
--------------
ಬೆಳ್ಳೆ ದಾಸಪ್ಪಯ್ಯ
ಶುಂಭ ದಮನಿ ದುರ್ಗೆಯೇ ಮಹಾಕಾಳಿ ಪ ಶುಂಭ ದಮನಿ ದುರ್ಗೆ ಅಂಬುಜವದನೆಯೇ ||ಶುಂಭ ಅ.ಪ ವ್ಯಾಳ ವೇಣಿಯೇ ಸು | ರಾಳಿಪೂಜಿತೆಯೆ 1 ಭಕ್ತರ ಪೋಷಿಣಿ ಮುಕ್ತಿದಾಯಕಿಯೆ 2 ಪೋಷಿಸೆನುತ ಪಾವಂಜೇಶನ ದಾಸರ 3
--------------
ಬೆಳ್ಳೆ ದಾಸಪ್ಪಯ್ಯ