ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಾರು ಚರಣವ ಸಾರಿದೆ ಶರಣ ಮಂದಾರ ಕರುಣವ ಬೀರಿ ಭವವನಧಿ ತಾರಿಸು ತವಕದಿ ಸೂರಿ ಸುಧೀಂದ್ರ ಕುಮಾರ ಉದಾರ ಪ ಪಾದ ವನರುಹ ಧ್ಯಾನ ಪ್ರಣವನ ಸ್ತವನ ಅರ್ಚನೆ ಮಾಳ್ಪ ನಾನಾ ಜನರ ವಾಂಛಿತವೀವಗುಣ ಪೂರ್ಣ ಜ್ಞಾನ ಧನಪ ಪಾಲಿಸೆನಗೀಕ್ಷಣ ನಿನ್ನಾಧೀನ ಮನುಜನ ನೀ ಪ್ರತಿದಿನದಿ ದಣಿಸುವುದು ಘನವೆ ಗುರುವೆ ಪಾವನತರ ಚರಿತ 1 ಪಾದ ಕೀಲಾಲಜ ಮಧುಪಾ ಬಾಲಕನ ಬಿನ್ನಪವ ಲಾಲಿಸೋ ಮುನಿಪ ತಾಳಲಾರೆನೊ ತಾಪತ್ರಯದ ಸಂತಾಪ ಕೇಳೋವಿಮಲಜ್ಞಾನ ಶೀಲ ಸ್ವರೂಪ ಭೂಲಲನಾಧವ ಕೋಲನಂದನಾ ಕೂಲಗವರ ಮಂತ್ರಾಲಯ ನಿಲಯ 2 ಕಲಿಕಲ್ಮಷವಿದೂರ ಕುಜನ ಕುಠರಾ ನಳಿನಾಕ್ಷ ವಿಮಲ ಶ್ರೀ ತುಲಸಿಯ ಹಾರ ಗಳ ಸುಶೋಭಿತ ಕಮಂಡಲ ದಂಡಧರಾ ಜಲಧಿ ವಿಹಾರಾ ಸುಲಲಿತ ಕರುಣಾಂಬುಧಿಯೆ ಜಗನ್ನಾಥ ವಿ ಠಲನೊಲಿಮೆಯ ಪಡೆದಿಳೆಯೊಳು ಮೆರೆದಾ 3
--------------
ಜಗನ್ನಾಥದಾಸರು
ಪಾಲಿಸೆನಗೀ ಜ್ಞಾನ ಪಾಲಸಾಗರಶಾಯಿ ಶ್ರೀ ಲೋಲ ನೀ ನಿತ್ಯದಿ ಪ. ಶೀಲಗುಣ ನಿನ್ನ ಏನು ಬೇಡುವುದಿಲ್ಲೊ ಕಾಲರೂಪನೆ ನಿನ್ನನು | ಇನ್ನು ಅ.ಪ. ಒಂದು ಅಸ್ವತಂತ್ರ ಒಂದು ಸರ್ವಸ್ವತಂತ್ರ ಒಂದು ಮನೆಯೊಳಗೆ ಇದ್ದು ಒಂದೆರಡು ಲೋಕಕ್ಕೆ ಒಂದೆ ದೈವನು ಎನಿಸಿ ಒಂದೊಂದರಲಿ ಇರುವ ಒಂದು ಅಪೇಕ್ಷಿಸದೆ ಒಂದೆರಡು ಗುಣದಿಂದ ಒಂದೆರಡು ಮಾಳ್ಪ ಜಗವ ಇಂದಿರೇಶನೆ ನಿನ್ನ ಈ ವಿಧದ ವ್ಯಾಪಾರ ಒಂದೊಂದು ಮನಕೆ ತೋರೋ | ಸ್ವಾಮಿ 1 ಎರಡು ಮಾರ್ಗಗಳಿಹವು ಎರಡು ಕರ್ಮಗಳಿಂದ ಎರಡು ವಿಧ ಸಮ ತಿಳಿದರೆ ಎರಡು ರೂಪಗಳನು ಒಂದಾಗಿ ಭಾವಿಸುತ ಎರಡೊಂದು ಜೀವ ತಿಳಿದು ಎರಡು ಫಲ ಅನುಭವಿಸಿ ಎರಡು ಹರಿಗರ್ಪಿಸುತ ಎರಡು ವಿಧ ಕರ್ತನೆಂದು ಎರಡು ಎಪ್ಪತ್ತು ಸಹಸ್ರನಾಡಿಗಳಲ್ಲಿ ಎರಡು ರೂಪದಲಿರುವ ಪೊರೆವ 2 ಮೂರು ಅವಸ್ಥೆಯಲಿ ಮೂರು ತಾಪವ ಸಹಿಸಿ ಮೂರು ಮಾರ್ಗದಲಿ ನಡೆದು ಮೂರೆಂಟು ಇಂದ್ರಿಯವ ಮೂಲರೂಪದಿ ಲಯಸಿ ಮೂರಾರು ವಿಧ ಭಕ್ತಿಯಲಿ ಮೂರೈದು ನುಗ್ಗೊತ್ತಿ ಮೂರು ಮೂರು ಅರಿಯ ಮೂರು ಶುದ್ಧಿಯಲಿ ಗೆದ್ದು ಮೂರಾರು ಎರಡೊಂದು ಖೋಡಿ ಮತಗಳ ಮುರಿಸಿ ಮಾರುತಿಯ ಮತದಿ ನೆಲಸಿ | ತಿಳಿಸಿ 3 ವಿೂನ ಕೂರ್ಮನೆ ವರಹ ಶ್ರೀ ನಾರಸಿಂಹನೆ ದಾನಯಾಚಕ ಭಾರ್ಗವ ವಾನರರಿಗೊಲಿದನೆ ವೇಣುಹಸ್ತರೂಪಿ ಮಾನವಿಲ್ಲದ ಕಲ್ಕಿಯೆ ಶ್ರೀನಿವಾಸನೆ ನಿನ್ನ ನಾನಾವಿಧ ರೂಪಗಳು ನಾನು ವರ್ಣಿಸಲು ಅಳವೆ ಮಾನಾಭಿಮಾನದೊಡೆಯನೆ ಕೃಷ್ಣ ಕೈಪಿಡಿಯೊ ಭಾನುಪ್ರಕಾಶ ಹರಿಯೆ | ಸಿರಿಯೆ 4 ಶಿರದಲ್ಲಿ ಕಿರೀಟ ಫಣೆಯಲ್ಲಿ ತಿಲುಕವು ಮೆರೆವ ಕುಂಡಲದ ಕದಪು ಕಿರುನಗೆಯ ಪಲ್ಗಳು ಕೊರಳಲ್ಲಿ ಹಾರಗಳು ಕರದಲ್ಲಿ ಆಯುಧಗಳು ಸಿರಿ ಭೂಮಿ ಎಡಬಲದಿ ಸುರನದಿಯ ಪೆತ್ತಪಾದ ಸಿರಿರಮಣ ಗೋಪಾಲಕೃಷ್ಣವಿಠ್ಠಲ ಎನಗೆ ಪರಿ ಪರಿಯ ರೂಪ ತೋರೊ ಸ್ವಾಮಿ 5
--------------
ಅಂಬಾಬಾಯಿ