ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆ ಇಂದುವದನೇ ಸರಸಿಜಸದನೇ ನಿಂದಿತ ಜನಸೂದನೆ ಪ ವಂದಿಸುವೆನೆ ಅರವಿಂದಗಂಧಿನಿ ಮಂದಿರದಲಿ ಗೋವಿಂದನ ತೋರಿಸೆ ಅ.ಪ. ಮೂಲೋಕಮಾತೆ ವಿಖ್ಯಾತೆ ಕೈವಲ್ಯದಾತೆ ಕಾಲ ದೇಶದಿ ವ್ಯಾಪಿತೆ ಭಜಕರಪ್ರೀತೆ ಶೀಲೆ ಸಂಪೂರ್ಣ ಗುಣವ್ರಾತೇ ಫಾಲನಯನ ತ್ರಿದಶಾಲಯ ಪ್ರಮುಖರ ಪಾಲಿಸುತಿಹೆ ಮಂದಜಾಲಜನಕೆ ರಮೇ ಶ್ರೀಲತಾಂಗಿ ನಿನ್ನಾಳುಗಳೊಳು ಹರಿ ಲೀಲೆಯ ಮನದಲಿ ಅಲೋಚನೆ ಕೊಡೆ 1 ಲೋಕನಾಯಕಿ ಲಕುಮಿ ಶ್ರೀ ಸಾರ್ವ ಭೌಮೆ ಶೋಕರಹಿತ ಸುನಾಮೆ ನಾಕಜವನಧಿ ಸೋಮೆ ದೇವಲಲಾಮೆ ಸಾಕಾರವಂತೆ ಗುಣ ಸÉ್ತೂೀಮೆ ನೀ ಕರುಣಿಸಿ ಅವಲೋಕಿಸಿ ಎನ್ನಯ ಕಾಕುಮತಿಯ ಕಳೆದೇಕಾಂತದಿ ನಿತ್ಯ ಏಕ ಮನದಿ ಹರಿ ಶ್ರೀ ಕರಪದಧ್ಯಾನ ನೀ ಕರುಣಿಸು ನಿರಾಕರಿಸದಲೆ 2 ಜಾತರಹಿತ ಜಯವಂತೆ ದೈತ್ಯಕೃತಾಂತೆ ಸೀತಾಂಶುಕೋಟಿ ಮಿಗೆಕಾಂತೆ ಪಾತಕದೂರೆ ನಿಜಪಂಥೆ ನಿತ್ಯಾ ನಿಶ್ಚಿಂತೆ ನೀತದೂರಾದಿ ಮಧ್ಯಾಂತೆ ಪುರುಹೂತ ಮುಖಾವರ ವ್ರಾತ ವಿನುತೆ ಅತಿಪ್ರೀತಿಯಿಂದಲಿ ನಮ್ಮ ವಾತಜನಕ ಜಗನ್ನಾಥ ವಿಠಲನ ಮಾತು ಮಾತಿಗೆ ನೆನೆವಾತುರ ಮನ ಕೊಡೇ 3
--------------
ಜಗನ್ನಾಥದಾಸರು
ಗಣೇಶ ಬಾರೋ ಕರುಣವ ಬೀರೋ ಪ ತ್ರಿಗುಣಯ್ಯನ ಸುತ ಮುನಿಜನಹಿತ ಅ.ಪ ಭಗ್ನವೆಗೈಯುತಲಿಶ ತೃಘ್ನಾಗ್ರಜನಣ್ಣನನಿ- ರ್ವಿಘ್ನತೆಯಲಿ ಭಜಿಸುವದಕೆ 1 ಮೂಲಾಧಾರನಿಲಯರಿಪು ಕಾಲಗಿರಿಸುತಾಬಾಲ ಪಾಲಿಸುತಿಹೆ ಕರುಣಾಳೊ 2 ತಾಮಸದಾನವ ಹರಗುರು ರಾಮವಿಠಲನಡಿಗಳನಿ- ಕಾಮಿತ ಫಲಗಳ ಕೊಡುವಡೆ 3
--------------
ಗುರುರಾಮವಿಠಲ
ನಂದಗೋಪನ ಕಂದ ನಾನುವೃಂದಾರಕೇಂದ್ರ ಖಳಕುಲ ಮರ್ದನಪ. ಎಂದೆಂದು ಎನ್ನ ನಂಬಿದ ಭಕುತರಿಗೆ ಸುತ್ತಿಂದಬಂದ ಕ್ಲೇಶಗಳನ್ನೆಲ್ಲ ಖಂಡಿಸಿತಂದೆ ಮಕ್ಕಳ ಪೊರೆವಂತೆ ಪಾಲಿಸುತಿಹೆಕಂದರ್ಪನಾಣೆ ಇದು ಎನಗೆ ಬಿರುದು 1 ಅಂದಂದು ಅವರು ಬೇಡಿದ ಇಷ್ಟಂಗಳನಿತ್ತೆಸಂದೇಹವಿಲ್ಲ ಸಂತತ ಸಲಹುವೆಮಂದಜನರೊಡನಾಡಿ ಮರುಳುಗೊಳದಿರು ಮನುಜ ಚೆಂದದಿಂದೆನ್ನ ಪೂಜೆಯನು ಮಾಡು 2 ಇಂದ್ರ ಗರ್ವಿಸಲವಗೆ ಸಾಂದ್ರ ಸುರತರುವ ಆನಂದನವನವನು ಪೊಕ್ಕು ಕಿತ್ತುತರಲುಒಂದಾಗಿ ರಣಕೆ ಬಂದು ನಿಂದಮರರನು ಕರುಣದಲಿಅಂದು ಪಾಲಿಸಿದೆ ಭಕ್ತರ ಬಂಧುವೆನಿಸಿ 3 ಇಂದುಮುಖಿ ಸಭೆಯಲ್ಲಿ ಕರೆಯಲಾಕ್ಷಣದೊಳಗೆಬಂದವಳ ಅಭಿಮಾನವನು ಕಾಯ್ದೆಇಂದುಧರ ಭಸ್ಮನುಪದ್ರದಲಿ ಬಳಲುತಿರೆಬಂದೊದಗಿ ಶಿವನÀ ಕಾಯಿದವನರಿಯಾ4 ಅಂಧಂತಮವ ದಾಟಿ ಅನಂತಾಸನಕೆ ಪೋಗಿಒಂದು ನಿಮಿಷದೊಳಗೆ ದ್ವಿಜನ ಸುತನ ತಂದೆಸಿಂಧುವಿನೊಳಗೆ ದೈತ್ಯನ ಕೊಂದು ಸಾಂದೀಪ -ನಂದನನÀ ಯಮನಪುರದಿಂದ ತಂದೆ 5 ನೃಪರ ಬಹುಬಲ ಜರಾ -ಸಂಧನ ಗಧೆಯ ಗಾಯದಿ ಕೊಲಿಸಿಅಂದವನ ದೆಸೆಯಿಂದ ನೊಂದ ನೃಪರನು ಬಿಡಿಸಿಕುಂದದುಡುಗೊರೆಯ ನಾ ಕೊಡಿಸಿ ಮೆರೆದೆ6 ಹಿಂದಾಗಜೇಂದ್ರನಿಗೊದಗಿದವನಾರು ಪಿತನಿಂದನೊಂದ ಪ್ರಹ್ಲಾದನ್ನ ಕಾಯ್ದವರದಾರುಮಂದರಗಿರಿಯನೆತ್ತಿ ಸುರರಿಗಮೃತ ಉಣಿ-ಸಿಂದಿರೆಯನಾಳ್ದ ಹಯವದನನರಿಯಾ7
--------------
ವಾದಿರಾಜ