ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಲಿಸೋ ಗಂಗಾಧರ ಪಾಲಿಸೋ ಪ. ಪಾಲಿಸೊ ಗಂಗಾಧರನೆ | ಮಧ್ಯ ಫಾಲದಿ ನಯನ ಉಳ್ಳವನೆ | ಆಹ ಶ್ರೀಲೋಲನ ಗುಣಜಾಲವ ಸ್ಮರಿಸುತ್ತ ಲೀಲೆಯಿಂ ಭಕ್ತರ ಪಾಲಿಸುತಿಪ್ಪನೆ ಅ.ಪ. ಬ್ರಹ್ಮನ ಭ್ರೂಮಧ್ಯೆ ಜನಿಸಿ | ಬಹು ದುರ್ಮತಿಗಳನೆ ಮೋಹಿಸಿ | ಕು ಧರ್ಮದ ಶಾಸ್ತ್ರವ ರಚಿಸಿ | ಅಂ ಧತಮ್ಮಸಿಗವರ ಕಳಿಸಿ | ಆಹ ನಿರ್ಮಲ ಮನದಲ್ಲಿ ಬೊಮ್ಮನಯ್ಯನ ಭಜಿಸಿ ನಿತ್ಯ ರಮಿಸುತಲಿಪ್ಪನೆ 1 ಕಂಜನಾಭನ ಮೊಮ್ಮಗನೆ | ಖಳರ ಭಂಜಿಸುವಂಥ ಬಲಯುತನೆ | ಮನ ರಂಜನ ರೂಪಾಕೃತನೆ | ಖಳ ಗಂಜಿ ಹರಿಯಿಂದ ರಕ್ಷಿತನೆ | ಆಹ ಅಮೃತ ಮಥಿಸುವಾಗ ನಂಜುದ್ಭವಿಸೆ ಕುಡಿದು ನಂಜುಂಡನೆನಿಸಿದೆ 2 ಕಪಿಲನದಿ ತೀರದಲ್ಲಿ | ಬಹು ತಪಸಿಗಳಿಗೆ ಒಲಿಯುತಲಿ | ಭಕ್ತ ರಪರಿಮಿತ ಬರುತಿಲ್ಲಿ | ನಿತ್ಯ ಜಪಿಸುತ್ತ ನಿನ್ನ ಸ್ತೋತ್ರದಲಿ | ಆಹ ಗುಪಿತದಿಂದ್ಹರಿ ಭಕ್ತರಪವರ್ಗದೊಡೆಯ ನಿನ್ನ ಲ್ಲಿಪ್ಪನೆಂತೆಂದು ಜಪಿಸುತ್ತಲಿಪ್ಪರೊ3 ಗಂಗಾಧರನೆನಿಸಿದನೆ | ಅಂತ ರಂಗದಿ ಹರಿಯ ತೋರುವನೆ | ಉಮೆ ಕಂಗಳಿಗಾನಂದಪ್ರದನೆ | ನಿತ್ಯ ರಂಗನಾಥನ ಪೂಜಿಸುವನೆ | ಆಹ ಜಂಗಮ ಜೀವರ ಮನದಭಿಮಾನಿಯೆ ಲಿಂಗರೂಪದಿ ಜನರ ಕಂಗಳರಂಜನೆ4 ಅಪಾರ ಮಹಿಮನ ಗುಣವ | ಬಹು ರೂಪಗಳನೆ ನೋಡುತಿರುವ | ನಿತ್ಯ ಶ್ರೀಪತಿ ನರಹರಿಯ ನೆನೆವ | ಮುಂದಿ ನಾ ಪದವಿಗೆ ಶೇಷನಾಗ್ವ | ಆಹ ಪರಿ ಪರಿ ಗೋಪಾಲಕೃಷ್ಣವಿಠ್ಠಲನ ಧ್ಯಾನವ ನೀಡೊ5
--------------
ಅಂಬಾಬಾಯಿ
ಯಲ್ಲರಮ್ಮನಲ್ಲವೆ ಸಿರಿದೇವಿ | ಎಲ್ಲರಮ್ಮನಲ್ಲವೆ || ಬಲ್ಲಿದರಾಗಿಪ್ಪ ಬೊಮ್ಮಾದಿಗಳಿಗೆ ಪ ಆಲದೆಲೆಯ ಮೇಲೆ ತನ್ನ ಪುರುಷನಂದು | ಕಾಲವರಿತು ಪವಡಿಸಿರಲು || ವಾಲಗವನು ಮಾಡಿ ಕೊಂಡಾಡಿ ಜೀವರ | ಮೂಲ ಕರ್ಮಂಗಳು ತೀರುವಂತೆ ಮಾಡಿದ 1 ಆಮೋಘ ವೀರ್ಯ ಗರ್ಭದಿ ಧರಿಸಿ ತಾ | ಬೊಮ್ಮಾಂಡವನೆ ಪೆತ್ತ ಲೋಕಾಮಾತಾ || ಸುಮನಸರಿಗೆ ಕಡೆಗಣ್ಣ ನೋಟದಿ | ಆ ಮಹಾ ಪದವಿಯ ಕೊಡುವ ಭಾಗ್ಯವಂತೆ 2 ಎರಡೊಂದು ಗುಣದಲ್ಲಿ ಪ್ರವಿಷ್ಠಳಾಗಿ ಜೀ ವರ ಯೋಗ್ಯತೆಯಂತೆ ಪಾಲಿಸುತಿಪ್ಪಳು || ನಿತ್ಯ 3
--------------
ವಿಜಯದಾಸ
ಗೋಪಿಯ ಭಾಗ್ಯವಿದು |ಆ ಪರಮಾತ್ಮನ ಅಪ್ಪಿ ಮುದ್ದಿಡುವುದು ಪಅಂಬೆಗಾಲಿಡು ಹರಿಕುಣಿದಾಡೈ ತೋ-|ಳಂಬಲಿ ತಾ ಹೊಂಗುಬ್ಬಿಯನು ||ಅಂಬುಜನಾಭ ನೀನಾನೆಯನಾಡೆಂದು |ಸಂಭ್ರಮದಿಂದ ಮುದ್ದಾಡುವಳೊ 1ನಿತ್ಯನಿರ್ಮಲನಿಗೆ ನೀರನೆರೆದು ತಂದು |ಎತ್ತಿ ತೊಡೆಯೊಳಿಟ್ಟು ಮುದ್ದಿಸುತಾ ||ಸತ್ಯಲೋಕವನಾಳುವ ವಿಧಿಜನಕನ |ಪುತ್ರನೆಂದರಿತು ತಕ್ಕೈಸುವಳೊ 2ಪಾಲುಗಡಲು ಮನೆಯಾಗಿ ಮೂಲೋಕವ |ಪಾಲಿಸುತಿಪ್ಪ ನಾರಾಯಣನ ||ಕಾಲಮೇಲೆ ಮಲಗಿಸಿ ಬಟ್ಟಲ ತುಂಬ |ಹಾಲು ಕುಡಿಸಿ ಸಂತೈಸುವಳೊ 3ಹರಿನಿತ್ಯತೃಪ್ತನೆಂದರಿಯದೆ ಹೊನ್ನಿನ |ಹರಿವಾಣದೊಳಗೆ ಮೃಷ್ಟಾನ್ನವನು ||ನೊರೆಹಾಲು ಘೃತ-ಸಕ್ಕರೆ ಕೂಡಿಸಿ ಕರೆ-|ಕರೆದು ಉಣಿಸಿ ತೃಪ್ತಿ ಬಡಿಸುವಳೊ 4ಅಂಗಜಪಿತನಿಗೆ ಮೋಹದಿಂದ ಹೊಸ |ಅಂಗಿಯ ತೊಡಿಸಿ ಟೊಪ್ಪಿಗೆ ಇರಿಸಿ ||ಬಂಗಾರದರಳೆಲೆ ಬಿಂದುಲಿಗಳನಿಟ್ಟು |ಸಿಂಗರವನು ಮಾಡಿ ನೋಡುವಳೊ 5
--------------
ಪುರಂದರದಾಸರು
ಮಾಧವಮಧುಸೂದನ- ಯಾದವಕುಲರನ್ನ ಯ-|ಶೋದೆ ಕರೆದಳು ಬಾರೆಂದು- ಮುದ್ದಿಸಿ ಮಗನ ಪಸಂಗಡಿಗರನೆಲ್ಲ ಬಿಟ್ಟು ಬಾರೈ ಚೆಲುವ |ಮುಂಗೈಯವಾಕು ಬೆರಳ ಹೊನ್ನುಂಗರ ||ಝಂಗಿಪ ಹುರಿಗೆಜ್ಜೆ ಉಡೆದಾರವನು ಕಂಡು |ಅಂಗನೆಯರು ನಿನ್ನನೊಯ್ವರೊ ||ಕಂಗಳ ಸಿರಿಯೆ ನೀ ಕಲ್ಪವೃಕ್ಷವೆ ಎಂದು |ಡಿಂಗರಿಗರು ಕಂಡರೆ ಬಿಡರೊ ನಿ- ||ನ್ನಂಘ್ರಿಯ ಮೇಲೆ ನೊಸಲನಿಡುವೆ ಕೃಷ್ಣ |ಕಂಗಳ ಸಿರಿಯೆ ಬಾರೋ- ರಂಗಯ್ಯ 1ಬಾಲಕರೊಡನಾಟ ಸಾಕು ಬಾ ಬಾರೈಯ |ನೀಲಾಂಗ ನಿನ್ನ ಮುಂದಲೆ ಮುತ್ತಿನರಳೆಲೆ ||ಕೀಲುಮಾಗಾಯಿ- ಮಾಣಿಕ ಪುಲಿಯುಗರ ಕಂಡು |ಸೋಲ್ವರೊ ನಿನಗೇಸೋ ಸೋಗೆಯರು ||ಶ್ರೀಲೋಲ ನಿನ್ನಲಿ ಕಂಸನ ತುಂಬಿದೊ-|ಡ್ಡೋಲಗದೊಳು ರಕ್ಕಸರು ಪಂಥವನಾಡೆ ||ವೀಳ್ಯವ ಪಿಡಿದೆ ಕೊಲುವೆನೆಂದು ನಿನ್ನಯ |ಕಾಲಿಗೆ ಎರಗುವೆ ಬಾರೊ-ರಂಗಯ್ಯ 2ಬೊಮ್ಮದ ಮರಿಯೆ ವಿಶ್ವವನೆಲ್ಲ ಹೃದಯದೊ-|ಳೊಮ್ಮೆ ತೋರುವನೆಂದು ಕಂಡು ನಾ ಬಲ್ಲೆ ||ಎಮ್ಮ ಮನಕೆ ಅಹಲ್ಲಾದನು ನೀನೆ |ಉಮ್ಮಯದಿಂ ಭಾಗವತರ ಪಾಲಿಸುತಿಪ್ಪ-||ಗಮ್ಯಗೋಚರ ಸಿರಿಪುರಂದರವಿಠಲ ತೊರೆ-|ದಮ್ಮೆಯ ಕೊಡುವೆನು ಬಾರೋ-ರಂಗಯ್ಯ 3
--------------
ಪುರಂದರದಾಸರು