ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮಶೇನಾರ್ಯರು | ಭೂಮಿತ್ಯಜಿಸಿ ಪರಂ ಧಾಮವ ಸೇರಿದರು || ಶ್ರೀಮತ್ ಕಾರ್ಪರ ಕ್ಷೇತ್ರ | ಸ್ವಾಮಿಯ ಸಂಪೂರ್ಣ ಪ್ರೇಮ ಪಡೆದವರು | ಕೇಳಿದವರು ಪ ಪರಿಮಳ ಗಾತ್ರರ ಕರುಣ ಪ್ರಸಾದದಿ ಧರೆ ಸುರಾಗ್ರಣಿ ಎನಿಪ ವರ ಜಯಾರ್ಯರ ಪತ್ನಿ | ನರಸಾಂಬೆಯಗರ್ಭ ಶರಧಿಗೆ ಹರಿಣಾಂಕರು ಸುಶಾಂತರು 1 ಎಡರೇಸು ಬಂದರೂ ಬಿಡದೆ ಸ್ವಧರ್ಮವ ಕಡುಭಕ್ತಿ ಪೂರ್ವಕದಿ ಹುಡುಗನ ಮಾತಿಗೆ | ಒಡೆದುಸ್ತಂಭದಿ ಬಂದ ಒಡೆಯನರ್ಚಿಸಿದವರು | ಕೋವಿದರು 2 ಪಂಚಬಾಣನ ಗೆದ್ದು | ಪಂಚ ಭೇದವನರಿತು ಪಂಚಾಸ್ಸನುತ ಮಾನವ ಪಂಚಾಶ್ಯದಯದಿ ಪ್ರಪಂಚ ಸಾಗಿಸುವಂಥ ಪಾಂಚಾಲಿಪತಿ ಪ್ರಿಯರು | ನಿಷ್ಕಿಂಚನರು 3 ವತ್ಸರ ಪರಿಯಂತ ನಿಷ್ಟೆಯಲಿ ನಿರುತ ತಪ ಚಳಿ ಮಳೆ ಸಹಿಸಿ ಪರಮೇಷ್ಟಿ ಜನಕನ ನಿರುತ ಸೇವಿಸಿದವರು | ನಿರ್ಮಮರು 4 ವಿನಯ ಸುಶೀಲ ಸದ್ಗುಣದಿ ಭೂಷಿತರಾದ ತನಯರೀರ್ವರ ಕರೆದು ರಿಣವಿನು ತೀರಿತು ಎನುತ ಪೇಳುತ ದ್ವಿಜಗಣಿಕೆ ದಕ್ಷಿಣೆ ನೀಡಿ ನಮನ ಮಾಡಿ 5 ಹರುಷ ಭರಿತರಾಗಿ ಸರ್ವಜಿತು ನಾಮದ ವರುಷದೊಳ್ ಯುಗ ಮಾಸದಿ | ಶರದಪಕ್ಷ ಪ್ರತಿಪದ ಪ್ರಥಮ ಕಾಯ 6 ವರುಷಂ ಪ್ರತಿ ತಪ್ಪದೆ | ಚರಿಸುತ ದೇಶದೋ ಳಿರುವ ಸದ್ಭಕ್ತರಿಗೆ | ವರಶಾಮ ಸುಂದರ ನರಹರಿದರುಶನ | ಗರೆದ ಪಾಲಿಸಿದವರು ಪಾವನ್ನರು 7
--------------
ಶಾಮಸುಂದರ ವಿಠಲ
ಮರೆಯದಿರೆಲೊ ಮನುಜಾ ಮಾಧವನನ್ನು ಮರೆಯದಿರೆಲೋ ಶುದ್ಧ ಮರುಳೆ ಮಾತನು ಕೇಳು ಪರಿಪರಿಯಲಿ ನಮ್ಮ ಪೊರೆವ ಕಾರುಣಿಕನ ಪ. ತನ್ನ ಸೇವೆಗೆ ಸಾಧನವಾಗಿಹ ದೇಹ- ವನ್ನು ಪಾಲಿಸಿದವನ ಯಿನ್ನು ನೀ ತಿಳಿಯದೆ ಅನ್ಯ ದೈವಗಳನ್ನು ಮನ್ನಿಸಿ ಮನದಣಿದನ್ನ ನಾಯಕನನ್ನು 1 ಹಸ್ತ ಪಾದಾದಿಗಳ ಕೊಟ್ಟದರಿಂದ ವಿಸ್ತರಿಸಿರುವಾನಂದ ತೋರುವ ಸುರ ಮಸ್ತಕ ಮಣಿಯನು ಮರೆತು ಮೂಢರ ಸೇರಿ ಬಸ್ತಕನಂತೆ ನಿರಸ್ತನಾಗದೆಯೆಂದು 2 ಮನೆಯಲಿ ನಿಲಿಸಿರುವ ವಾಕ್ಕಾಯಕರ್ಮ ಮನದಲಿ ತುಂಬಿರುವ ನಮ್ಮಯ ಸರ್ವ ವನು ತನಮನ ತಾನೆ ನೆನೆದು ಪಾಲನೆ ಗೈವ ವನಜನಯನ ಲಕ್ಷ್ಮಿಯಿನಿಯನ ಮಹಿಮೆಯ 3 ದುರಿತರಾಶಿಯನರದು ದುರ್ ಹೃದಯರ ತರಿದು ಕಾಲಿಂದಲೊದೆದು ಸಿರಿ ಸಹಿತವಾಗಿ ನಮ್ಮಲ್ಲಿರುವನ ಸರ್ವಾಮಯ ಹರ ಪದದಲ್ಲಿ ಭಾರವಿರಿಸು ವಿಚಾರಿಸು 4 ಬಿಡು ಬಿಡು ಭ್ರಾಂತಿಯನು ಮುರಾಂತಕನ- ಲ್ಲಿಡು ನಿನ್ನ ಚಿಂತೆಯನು ಕಡಿವನು ವೈರಿಗಳ ಕೊಡುವನು ಶುಭಗಳ ಒಡೆಯ ವೆಂಕಟಪತಿ ತಡಿಯ ತೋರುವನೆಂದು 5
--------------
ತುಪಾಕಿ ವೆಂಕಟರಮಣಾಚಾರ್ಯ
ಯಾಕೆ ಕಳವಳವೋ-ಮಾನಸ ನಿನಗ್ಯಾಕೆ ಕಳವಳವೋ ಪ ಶ್ರೀಕಳತ್ರನು ಜಗದೇಕ ನಾಯಕ ನಿರಲ್ಯಾಕೆ ಅ.ಪ. ಹೊಟ್ಟೆಯೊಳಿರಲನ್ನ ವಿಟ್ಟು ಕಾಪಾಡಿದ ಸೃಷ್ಠಿಪಾಲಕ ಪರಮೇಷ್ಠಿಜನಕ ನಿರೆ 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೇ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪವರದ ವಿಠ್ಠಲಾ ಪದ್ರಕ್ಷಕ ನಿರಲ್ಯಾಕೆ ಕಳವಳವೋ 3
--------------
ಸರಗೂರು ವೆಂಕಟವರದಾರ್ಯರು
ಯಾಕೆ ಕಳವಳವೋ-ಮಾನಸ ನಿನಗ್ಯಾಕೋ ಕಳವಳವೋ ಪ ತ್ರೀಕಲತ್ರನು ಜಗದೇಕನಾಯಕನಿರಲ್ಯಾಕೆ ಅ.ಪ ಹೊಟ್ಟೆಯೊಳಿರನ್ನವಿಟ್ಟು ಕಾಪಾಡಿದ ಸೃಷ್ಟಿ ಪಾಲಕ ಪರಮಷ್ಠಿ ಜನಕನಿರಲು 1 ಬಾಲನಾಗಿರೆ ಮೊಲೆಪಾಲ ನಿರ್ಮಿಸಿ ಪರಿ ಪಾಲಿಸಿದವ ಸಿರಿಲೋಲನಲ್ಲವೆ 2 ಲೋಪವಿಲ್ಲದೆ ಕಾಯ್ವ ಶ್ರೀಪತಿ ಪುಲಿಗಿರಿ ಭೂಪÀ ವರದವಿಠಲಾಪದ್ರಕ್ಷಕನಿರಲು 3
--------------
ವೆಂಕಟವರದಾರ್ಯರು
ರಾಮ ರಾಮ ರಾಮ ಶ್ರೀರಾಮನೆನ್ನಿರೊ ಪ್ರೇಮದಿಂದ ಶ್ರೀ ಜಾನಕಿ ಪ್ರೇಮನನೆನೆಯಿರೊ ಪ ಅಂದದಿಂದ ಈ ದಶರಥನಂದನೆಂದು ---- ಚಂದದಿಂದ ಚಲನೆಯಿಲ್ಲದೆ ಚಿತ್ತಸ್ವಸ್ಥದಿ ಕಾಲ ಕಳೆಯ ಹೊಂದಿ ದೇವರ ಚರಣ ಕಮಲಾ ನಂದ ಅರ್ಚಿಸುವ ಮಂದಿರದಿ ಭಜಿಸಿರೊ 1 ಕಾಮನಯ್ಯನ ಕಡಲೊಳಾಳ್ದÀ್ದನ ಕೂರ್ಮರೂಪ ವರಾಹನಾದನ ಸ್ವಾಮಿ ನರಹರಿ ವಾಮನ ಪರಶುರಾಮನಾದನಾ ರಾಮಕೃಷ್ನ ಬೌದ್ಧಕಲ್ಕಿ ನಾಮವುಳ್ಳ ನಾರಾಯಣನ ನೇಮದಿಂದ ನಿತ್ಯದಲ್ಲಿ ನಾಮ ಸ್ಮರಿಸಿರೊ 2 ಪಿತೃವಾಕ್ಯ ಪಾಲಿಸಿದವನು ಸತತ ಭಕ್ತರ ಸಲಹುತಿಹನು ಕ್ಷಿತಿಗೆ ಒಡೆಯನಾದ ದೇವನು 'ಶ್ರೀ ಹೊನ್ನ ವಿಠ್ಠಲಾ’ ನತಿಶಯದಿಂದಲಿ ಹೃದಯನಂಬಿ ಇರುವ ನರರಿಗೆ--------ಸದ್ಗತಿಯ ತೋರುವನಧಿಕ ಸಂಪನ್ನ 3
--------------
ಹೆನ್ನೆರಂಗದಾಸರು