ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣೆ ತೋರಿಸೊ ದೇವಾ ಕರಿವರದನೆ ಪ. ಕರುಣ ತೋರಿಸೊ ದೇವ ಗರುಡಗಮನ ನಿನ್ನ ಕಮಲ ಧ್ಯಾನ ನಿರುತ ನೆನೆವ ಹರಿಅ.ಪ. ವೇದಾಂತ ವೇದ್ಯ ನೀನೆ ಆದಿನಾರಾಯಣ ಸಾಧುವಂದಿತನು ನೀನೆ ದೇವೇಶನೆ ವೇದವ್ಯಾಸನು ನೀನೆ ಬಾದರಾಯಣ ನೀನೆ ಭವ ಭಯಹರ ನೀನೆ 1 ಚಿಂತೆ ಕೊಡುವ ನೀನೆ ಚಿಂತಿತಾರ್ಥನು ನೀನೆ ಅಂತಕ ದೂತರಿಂದೆಳೆಸುವ ನೀನೆ ಸರ್ವ ಅಂತರ್ಯಾಮಿ ಅಂತÀರಂಗದಿ ನಿಂತು ಪ್ರೇರಿಸಿ ನಿನ ಪಾದ ಪಂಥದಿ ಸ್ತುತಿಗೊಂಡು ಸಂತಸ ಪಡುವವ ನೀನೆ2 ಮಾನುನಿ ದ್ರೌಪದಿಯಾ ಮೊರೆಯ ಕೇಳಕ್ಷಯ ನೀನೆ ಪಾಲಿಸಲಿಲ್ಲವೆ ಶ್ರೀ ಕೃಷ್ಣ ನೀನಿತ್ತು ಸಲಹಿದ ಶ್ರೀ ಶ್ರೀನಿವಾಸ ದೊರೆ ಗಾನಲೋಲನೆ ಭಕ್ತರ ಸಲಹುವೆನೆಂಬುವ ಆಭಯ ಹಸ್ತವ ನೀನಿತ್ತು ಸಲಹೆನ್ನದೇವಾಧಿದೇವ 3
--------------
ಸರಸ್ವತಿ ಬಾಯಿ
ಬಾರೋ ಯಾದವ ಕುಲಚಂದ್ರ ತೋರೊ ಮುಖಾಂಬುಜವ ಕಾರುಣ್ಯ ಪೂರ್ಣನೆ ಬಾರೊ ಯಾದವ ಕುಲಚಂದ್ರ ಪ ಮಾರಾರಿ ದಾನವ ಭೀತಿಯ ಪೊಂದಿರೆ ನಾರೀರೂಪದಿಂದೈದಿ ಪಾಲಿಸಲಿಲ್ಲವೆ 1 ದುರುಳ ದುಶ್ಯಾಸನ ತರಳೆ ದ್ರೌಪದಿ ಸೀರೆ ಸೆರಗನು ಸೆಳೆಯಲು ಕರುಣಿಸಲಿಲ್ಲವೆ 2 ಪಾಲಿಸು ದೇವನೆ ಕಾಲಕಂಧರಪ್ರಿಯ ಬಾಲ ಪ್ರಹ್ಲಾದ ವರದ ಲೀಲಾ ನರಹರಿ ರೂಪ 3 ಮೌನಿ ಮಾನಸಪ್ರಿಯ ಗಾನರೂಪನೆ ಹರೆ ಧೇನುನಗರ ದೊರೆ ಧ್ಯಾನಿಸುವೆನೊ ಶೌರೆ 4
--------------
ಬೇಟೆರಾಯ ದೀಕ್ಷಿತರು
ಮರೆವರೇನೊ ರಾಮ ನಿನ್ನ ಚರಣ ಸೇವಕನÀನ್ನು ಪರರಿಗೊಪ್ಪಿಸಿ ಹೀಗೆ ಪ ಪರಮ ದಯಾನಿಧಿ ಅಲ್ಲವೆ ಮುನ್ನ ಶರಣರ ಪಾಲಿಸಲಿಲ್ಲವೆ ಇದು ಸರಿಯೇನೊ ಜನ ನಗರೇನೊ ಇನ್ನು ಧರಣಿಯೊಳ್ ನಾನೇನು ಭಾರವೆ ದೂರವೆ ಅ.ಪ. ಗತಿಹೀನರಿಗೆ ನೀ ಗತಿಯೆಂದು | ನೀನೆ ಪತಿತರ ಪತಿಕರಿಸುವನೆಂದು ಕೇಳಿ ಬಂದೆನೈ ಭವದಿ ನೊಂದೆನೈ ಮುಂದೆ ಗತಿದೋರೆಂದು ಸಾರಿದೆ ಚೀರಿದೆ ದೂರಿದೆ 1 ದೋಷರಾಶಿಗಳೆಲ್ಲ ಅಳಿಸಯ್ಯ ವಿಷಯ ವಾಸನೆ ವಿಷವೆಂದು ತಿಳಿಸಯ್ಯ | ನಿನ್ನ ದಾಸಾನುದಾಸ ದಾಸನು ಎನಿಸಿ | ಪರಿ- ಪೋಷಿಸಬೇಕಯ್ಯ ದಮ್ಮಯ್ಯ ಎಮ್ಮಯ್ಯ 2 ಏನು ಸಾಧನವನ್ನು ನಾ ಕಾಣೆ | ನಿನ್ನಾ- ಧೀನದವನು ನಾ ನಿನ್ನಾಣೆ ದೀನ ಬಂಧುವೆ ದಯಾಸಿಂಧುವೆ ನಿನ್ನ ಪರಮಾನಂದ ಮೂರ್ತಿಯ ತೋರೋ ಶ್ರೀಕಾಂತನೆ 3
--------------
ಲಕ್ಷ್ಮೀನಾರಯಣರಾಯರು