ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವಿ ನರ್ಮದೆ ಪಾಲಿಸಮ್ಮಾ ಪ ಕಾವನಯ್ಯನ ಚರಣ ತೋರಿಕಾವುದೆಮ್ಮ ಪಾವನಾತ್ಮಕೆ ಅ.ಪ. ಕಲುಷ ಹರಣವಮ್ಮ 1 ವರ ವಿಸ್ತಾರ ಪಾತ್ರವಮ್ಮ | ನರರಾಯಾಸ ಶಾಂತವಮ್ಮಅರುಣ ಉದಯದಿಂದ ನಿನ್ನ | ಸುರನರಾದಿ ಸೇವಿಸುವರು 2 ವರ ಸುಜಪದಮಾಲೆ ಕರದಿ |ದರವು ಪದುಮ ಗ್ರಂಥಪಾಣಿಗುರು ಗೋವಿಂದ ವಿಠಲ ಚರಣ |ನಿರತ ಧ್ಯಾನಾನಂದ ಮಗ್ನೆ3
--------------
ಗುರುಗೋವಿಂದವಿಠಲರು
ಪಾದ ಮಾಡಿದೆನೆ ಸಾಷ್ಟಾಂಗ ಬೇಡಿದೆನೆ ಮನದಭೀಷ್ಟ ಪ. ನೀಡು ಕೊಲ್ಲಾಪುರದ ನಾಡಿಗೊಡೆಯಳೆ ಲಕುಮಿ ಮಾಡಮ್ಮ ಕೃಪೆಯ ಬೇಗಾ ಈಗಾ ಅ.ಪ. ಬಂದೆನೇ ಬಹುದೂರ ನಿಂದೆನೇ ತವಪದ ದ್ವಂದ್ವ ಸನ್ನಿಧಿಯಲೀಗ ವಂದನರಿಯೆನೆ ನಿನ್ನ ಚಂದದಿ ಸ್ತುತಿಪೊದಕೆ ಮಂದಮತಿಯಾಗಿಪ್ಪೆನÉೀ ತಂದೆ ಮುದ್ದುಮೊಹನ್ನ ಗುರು ಕರುಣ ಬಲದಿಂದ ಇಂದು ನಿನ್ನನು ಕಂಡೆನೇ ಮುಂದೆನ್ನ ಮಾನಾಭಿಮಾನ ನಿನಗೊಪ್ಪಿಸಿದೆ ಸಿಂಧುಸುತೆ ಪಾಲಿಸಮ್ಮಾ ದಯದೀ 1 ಉತ್ತರಾಯಣ ಪುಣ್ಯ ದಿನದಿ ನಿನ್ನನು ಕಂಡೆ ಮುಕ್ತರಾಧೀಶೆ ಕಾಯೆ ಉತ್ತಮಾಭರಣ ನವರತ್ನ ಪದಕವು ದಿವ್ಯ ನತ್ತು ಧರಿಸಿದ ಚಲ್ವಳೇ ಮುತ್ತೈದೆಯರು ಮತ್ತೆ ಭಕ್ತ ಸಂದಣಿ ಇಲ್ಲಿ ಎತ್ತನೋಡಲು ಕಂಡೆನೇ ಸತ್ಯ ಸಂಕಲ್ಪ ಶ್ರೀ ಹರಿಯ ಪಟ್ಟದ ರಾಣಿ ಚಿತ್ತಕ್ಕೆ ತಂದು ಕಾಯೆ ಮಾಯೆ 2 ರೂಪತ್ರಯಳೆ ನಿನ್ನ ವ್ಯಾಪಾರ ತಿಳಿಯಲು ಆ ಪದ್ಮಭವಗಸದಳಾ ಶ್ರೀಪತಿಯ ಕೃಪೆ ಯಿಂದ ಸೃಷ್ಟಿಸ್ಥಿತಿಲಯಗಳನು ವ್ಯಾಪಾರ ಮಾಳ್ಪ ಧೀರೆ ಕೃಪೆಯ ನೀ ಮಾಡದಲೆ ಉಭಯ ಸುಖವೆತ್ತಣದು ಭೋಪರೀ ನಂಬಿದರಿಗೆ ಗೋಪಾಲಕೃಷ್ಣವಿಠ್ಠಲನ ಹೃದಯದಿ ತೋರಿ ನೀ ಪಾರುಗೊಳಿಸೆ ಭವದೀ ದಯದೀ 3
--------------
ಅಂಬಾಬಾಯಿ