ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾರುತೀ ನಮ್ಮಗುರು ಮೂರುತೀ ಪ ಮಾರುತಿ ಕರುಣಿಸು ಜ್ಞಾನಾ ಎನ್ನ ಸೇರಿದ ಸತತ ಅಜ್ಞಾನಾ ಆಹ ದೂರ ಓಡಿಸಿ ಹರಿ ಆರಾಧನೆ ಇತ್ತು ಪಥ ಸರ್ವಾಧಾರ ಉದಾರನೆ ಅ.ಪ. ದ್ವಿತೀಯ ಯುಗದಲ್ಲವತರಿಸಿ ಸೀತಾ ಅತಿ ವೇಗದಿಂದ ಉತ್ತರಿಸಿ ರವಿ ಸುತಗೊಲಿದವನುದ್ಧರಿಸಿ ಆಹಾ ಕ್ಷಿತಿಜದೇವಿಯಳನು ಸ್ತುತಿಸಿ ಮುದ್ರಿಕೆಯಿತ್ತು ದಿವಿಜರ ಸದೆದ ಭಾರತಿಯ ರಮಣನೆ 1 ಕುರುಕುಲದಲ್ಲಿ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರಣಿ ರೂಪವನೆ ಸಿಂಗರಿಸಿ ನೀಚ ತರ ಕೀಚಕನ ಸಂಹರಿಸಿ ಆಹ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮ ಸಮರ್ಥನೆ 2 ಭೂತಳದೊಳಗೆ ಯತಿಯ ರೂಪ ನೀ ತಾಳಿದೆಯೋ ಶುಭಕಾಯ ಮಾಯಿ ವ್ರಾತ ಗೆಲಿದೆ ಮಧ್ವರಾಯಾ ಕಾಯ ಜಾತ ಜನಕಗತಿ ಪ್ರೀಯಾ ಆಹಾ ಭೂತನಾಥನೆ ಪರಮಾತುಮನೆಂಬ ಪಾತಕರರಿ ಜಗನ್ನಾಥವಿಠಲನ ದೂತ 3
--------------
ಜಗನ್ನಾಥದಾಸರು
ಪವಡಿಸು ಪರಮಾತ್ಮಾ ಶ್ರೀ ಶ್ರೀಶಾಪವಡಿಸು ಪರಮಾತ್ಮಾ ಪಪರಮಭಕ್ತರನು ಪೊರೆಯುವ ದೇವನೆಅ.ಪರನ್ನಮಂಟಪದೊಳು ಕನ್ನಡಿಯಂದದಿಸ್ವರ್ಣವರ್ಣದಲಿಹ ಪನ್ನಂಗ ಕಾದಿಹ 1ಸುತ್ತಲು ತುಂಬುರರು ನಾರದರು ಸ್ತೋತ್ರವ ಮಾಡಿಅತ್ಯಂತ ಹರುಷದಿ ಚಿತ್ತೈಸೆಂದೆನುವರು 2ಥಳಥಳಿಸುವ ದಿವ್ಯತಾರೆಗಳಂದದಿಲಲನೆಶ್ರೀ ಭೂದೇವಿಯರು ಸೇವಿಪರು ನಿನ್ನ3ವೇದವ ಕದ್ದನ ಭೇದಿಸಿ ಅಜನಿಗೆವೇದವ ತಂದಿತ್ತು ಆದರಿಸಿದ ದೇವ 4ಮುಳುಗಿದ ಗಿರಿಯನು ಧರಿಸಿ ಬೆನ್ನಲಿ ಬೇಗಸುರರಿಗೆ ಅಮೃತವ ಕುಡಿಸಿದಮಾಧವ5ಸುರಮುನಿಗಳಿಗೆಲ್ಲಾ ಅಭಯವ ನೀಡುತವರಹರೂಪತಾಳಿ ಬಳಲಿ ದಣಿದು ಬಂದಿ6ಕಂದನಿಗಾಗಿ ದೊಡ್ಡ ಕಂಬದಿಂದುದಿಸಿ ಖಳನಕೊಂದು ಕರುಳ ವನಮಾಲೆ ಧರಿಸಿ ದಣಿದಿ 7ಮೂರಡಿ ಭೂಮಿಯ ಬೇಡಿ ಬಲೀಂದ್ರನದೂಡಿ ಪಾತಾಳಕೆ ಬಹಳ ಬಳಲಿ ಬಂದಿ 8ಭೂಮಿ ಪಾಲಕರನ್ನು ಸೋಲಿಸಿಬಾರಿಬಾರಿವಾರಿಜಾಕ್ಷ ಶ್ರೀರಾಮರಿಗೊಲಿದೆಯೊ 9ಸೇತುವೆಯನ್ನುಕಟ್ಟಿದೂರ್ತರಾವಣನ ಕುಲವಘಾತಿಸಿ ಕೊಂದ ರಘುನಾಥನೆ ಬಳಲಿದೆ 10ವಸುದೇವ ಕಂದನೆ ಶಿಶುರೂಪಿನಿಂದಲಿಅಸುರೆ ಪೂತಣಿ ಅಸುಹೀರಿ ಬಳಲಿ ಬಂದಿ 11ತಿದ್ದಿ ತ್ರಿಪುರಾಸುರರ ಮರ್ದಿಸಿ ಸುಜನರಿಗೆಮುದ್ದು ತೋರಿದ ಸುಪ್ರಸಿದ್ಧ ಮೂರುತಿ ಬೇಗ 12ಕರದಿ ಖಡ್ಗವ ಧರಿಸಿ ಸಿರದಿ ಕಿರೀಟ ಹೊಳೆಯೆಇಳೆಯ ಮನುಜರಿಗೆಲ್ಲ ಸುಲಭನಂದದಿ ತೋರ್ಪಿ 13ಮಂಗಳಚರಿತ ವಿಹಂಗವಾಹನ ಸುರಗಂಗೆಯಪಿತ ಸಾಧುಸಂಗವಂದಿತ ದೇವ 14ಗರುಡಗಮನ ಕೃಷ್ಣ ಉರಗನ್ಹಾಸಿಗೆಯೊಳುಸಿರಿದೇವಿ ಸಹವರ ಕಮಲನಾಭ ವಿಠ್ಠಲ 15
--------------
ನಿಡಗುರುಕಿ ಜೀವೂಬಾಯಿ