ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಹಿ ಪದ್ಮದಳಾಯತಾಂಬಕ ಪಾಹಿ ಪದ್ಮಾರಮಣ ಪರಾತ್ಪರ ಪಾಹಿ ಪದ್ಮಾಸನ ಜನಕ ಮಾಂ ಪಾಹಿ ಪ್ರಪನ್ನ ಪಾಲಕ ಪ ವಾಸುದೇವ ಕೃತೀಶ ಶಾಂತಿಪ ಕೇಶವಾಚ್ಯುತ ವಾಮನ ಹೃಷೀಕೇಶ ಪ್ರಶ್ನಿಗರ್ಭ ಋಷಭ ನೃಕೇಸರಿ ಹಯಗ್ರೀವ ವೇದ ವ್ಯಾಸ ದತ್ತಾತ್ರಯ ಉರುಕ್ರಮಾ ವಾಸವಾನುಜ ಕಪಿಲ ಯಜ್ಞ ಮ ಹೇಶ ಧನ್ವಂತ್ರಿ ಹಂಸ ಮಹಿ ದಾಸ ನಾರಾಯಣ ಕೃಷ್ಣಹರೆ 1 ಮಾಧವ ಪ್ರದ್ಯುಮ್ನ ಶ್ರೀ ದಾಮೋದ ರಾಧೋಕ್ಷಜ ಜನಾರ್ದನ ಶ್ರೀಧರ ಶ್ರೀ ಪದ್ಮನಾಭ ವೃಕೋದರ ಪ್ರಿಯತಮ ತ್ರಿವಿಕ್ರ ವಿರಿಂಚಿ ವಿನುತ ಗದಾಧರ ಗಯಾಸುರ ವಿಮರ್ದನ ಸಾಧಿತ ಜಗತ್ರಯ ಪುರಾತನ ಪಾದ ಪರಮ ಕೃಪಾಂಬುಧೇ ಮಾಂ 2 ನಂದಗೋಪನ ಕುಮಾರ ಗೋಪಿ ವೃಂದ ಪೋಷಿತನಮಿತ ಸಂಕ್ರಂಡನ ಕೃಪಾ ಸಾಂದ್ರ ವರ ಕಾಳಿಂದಿ ತಟನಿ ವಿಹಾರ ಪಾಂಡವ ಬಂಧು ದ್ರೌಪದಿವರದ ನೃಪ ಮುಚು ಕುಂದಸ್ತುತಿ ಸಂಪ್ರೀತ ಲಕ್ಷ್ಮೀ ನಂದಮಯ ನಿಜ ಭಕ್ತವತ್ಸಲ 3 ಮೀನಕೂರ್ಮವರಾಹ ಪಂ ದಿತಿಸುತ ವಾಮನ ಕ್ಷೋಣಿಪಾರ್ವನ ಬ್ರಾಹ್ಮಣ ಪ್ರಿಯ ವನೌಕಸನಾಥ ಮುಖ್ಯ ಪ್ರಾಣಸಖ ವಸುದೇವ ದೇವಕಿ ಸೂನು ಸುಂದರಕಾಯ ಪುರಹರ ಬುದ್ಧ ಕಲ್ಕಿ ಪ್ರ ಧಾನ ಪುರುಷೇಶ್ವರ ದಯಾಕರ 4 ನಿಂತ ನಿಜಬಲ ಮಾತುಳಾಂತಕ ಶ್ವೇತವಾಹನ ಸೂತ ತ್ರಿಗುಣಾ ತೀತ ಭವನಿಧಿ ಪೋತ ಮೋಕ್ಷನಿ ಕೇತನಪ್ರದ ಭೂತಭಾವ ಧೌತ ಪಾಪ ವ್ರಾತ ತ್ರಿಜಗತಾತ ನಿರ್ಗತ ಭೀತ ಶ್ರುತಿ ವಿಖ್ಯಾತ ಭಕ್ತಿಸುವೇತನ ಪ್ರಿಯ ಭೂತಿದ ಜಗನ್ನಾಥ ವಿಠ್ಠಲ 5
--------------
ಜಗನ್ನಾಥದಾಸರು
ಮಗಟಖಾನ ಹುಬ್ಬಳ್ಳಿ ಶ್ರೀಯಾದವಾರ್ಯರ ಕರಾರ್ಚಿತ ಶ್ರೀನರಸಿಂಹ ಸ್ತೋತ್ರ ಕರುಣವೆಂತುಂಟೋ ನಿನಗೆ | ಶ್ರೀನಾರಸಿಂಹಾ ಪ ವರತಟನಿ ಮಲಪ್ರಭೆಯ | ತೀರಸ್ಥನೆನಿಸೀ ಅ.ಪ. ಪೂರ್ವದಲಿ ಋಷಿ ಚ್ಯವನ | ರಿಂದರ್ಚಿತವು ಎನೆಓರ್ವ ಶಿಲೆಯಲಿ ನಿಂದು ಯಾದವಾರ್ಯಾ |ಪಾರ್ವ ಯೋಗೀಶ ರಚಿ | ತಾಕಾರ ಗಂಧದಲಿಆಹ್ವಾನಿತನು ಆಗಿ ನೀನಿಲ್ಲಿ ಇರುವೇ 1 ಆದಿ ವ್ಯಾಧಿಲಿನೊಂದ | ಬುಧರಿಂದ ಬಹುಸೇವ್ಯಯಾದವಾರ್ಯಾಂತಸ್ಥ | ಶ್ರೀ ನಾರಸಿಂಹಾ |ಬಧಿರ ಮೂಕರು ತಮ್ಮ | ವ್ಯಾಕುಲವ ಕಳೆಯುತ್ತಮುದವಾಂತು ತವ ಮಹಿತಿ ಕೀರ್ತಿಸುತ್ತಿಹರೋ 2 ಮಾಸ ನಿಶಿ ಜೇಷ್ಠದಲಿಮತ್ತೆ ಹರಿದಿನದಲ್ಲಿ | ಮಂದವಾರದಲೀ |ಮತ್ಸರಾದ್ವಿರಹಿತರು | ಸತ್ಸುಜನರಿಂದ ಕೂಡಿಉತ್ಸಹದ ಜಾಗರವ | ನೀ ಮಾಡಿ ಮಾಡಿಸಿದ್ಯೊ 3 ಬೆಟ್ಟದಾಚಾರ್ಯರೆನೆ | ಸುಷ್ಠು ಕೀರ್ತನೆಗೊಂಡಶ್ರೇಷ್ಠ ಹುಚ್ಚಾಚಾರ್ಯ | ರಿಲ್ಲಿ ನೆಲೆಸುತಲೀಇಷ್ಟ ಸಿದ್ಧಿಗಾಗಿ ಶ್ರೇಷ್ಟ | ತಪವನೆ ಗೈದುಇಷ್ಟಾರ್ಥ ಪೊಂದಿತಾ | ಬೆಟ್ಟಕ್ಕೆ ತೆರಳಿದರೋ 4 ಮೋದ ಪಡಿಸುತ ಬುಧರಯಾದವೇಶನ ನೊಲುಮೆ | ಸಂಧಿಸುತ ಮೆರೆದೂ |ಆದರಿಸಿ ಮಂಗಳ ಸು | ಭೋದಗಳ ಬೀರುತಲಿಮೋದ ಬಡಿಸಿದ ಹರಿಯ | ಭೂದೇವ ಆರ್ಯ 5 ಪ್ರೇರ್ಯ ಪ್ರೇರಕರಾಗಿ | ಬೆಳಗಾವ್ಕರು ಎಂಬಪಾರ್ವನಲಿ ನೀ ನಿಂತು | ಅಚ್ಚರಿಯನೆಸಗೀಭಾರ್ಯೆ ತವ ಕೊಲ್ಲಾಪುರ | ಮ್ಮ ಸತ್ಯವ್ರತರಆರ್ಯಗೊಡ ದರ್ಶಿಸುವ | ಯೋಗ ನೀನಿತ್ತೇ 6 ಸೃಷ್ಠ್ಯಾದಿ ಅಷ್ಟಕವ | ದೃಷ್ಟಿ ಮಾತ್ರದಿಗೈವಇಷ್ಟ ಭಕುತಿಗೆ ಮೆಚ್ಚಿ | ಘಟ್ಟಿ ಕಂಬದಿ ಜಿಗಿದೂದುಷ್ಟನ್ನ ಸಂಹರಿಸಿ | ಕಷ್ಟಗಳ ಕಳೆದಂಥಕೃಷ್ಣ ಗುರು ಗೋವಿಂದ ವಿಠಲಾ ಗಾನಮಿಪೇ 7
--------------
ಗುರುಗೋವಿಂದವಿಠಲರು
ಸೇರಿದೆನು ಸೇರಿದೆನು ಗುರುವರನ ಪದವಾ ಮೀರಿದೆನು ಘೋರತರ ನರಕದತಿಭಯವಾ ಪದೂರ್ವೆ ಮೊದಲಾದ ತೃಣಧಾನ್ಯ ಗರ್ಭವ ಮೆಟ್ಟಿಸರ್ವ ಸ್ಥಾವರ ಜಾತಿಗಳಲಿ ಪುಟ್ಟಿಪಾರ್ವಪಕ್ಷಿಗಳ ಬಸುರೊಳು ಪುಟ್ಟಿ ಬಹಳ ಪಶೂದರ್ವೀಕರಂಗಳಲಿ ಪುಟ್ಟಿ ಕಂಗೆಟ್ಟೂ1ಮನುಜರೊಳು ಪದಿನೆಂಟು ಜಾತಿಗಳೊಳಗೆ ಬಂದುಬಿನುಗುತನದಿಂದಖಿಳ ವಿಷಯಗಳ ತಿಂದೂಅನುವರಿಯದಜ್ಞಾನದೊಳಗೆ ಬಳಿಸಂದು ಪಾರ್ವನ ಜನ್ಮದಲಿ ವಿಹಿತಕರ್ಮದಲಿ ಮನನಿಂದು2ಮೆಲ್ಲ ಮೆಲ್ಲನೆ ಕಾಮ್ಯ ನಿಷ್ಕಾಮ ಕರ್ಮಗಳಬಲ್ಲ ಬಲ್ಲಂತೆ ಮಾಡುತ ಪೂರ್ವದಾಸಲ್ಲಲಿತ ಪುಣ್ಯದೊಳು ಭಕ್ತಿಯೊಳ್ಮನ ಮುಟ್ಟಿಅಲ್ಲಲ್ಲಿ ಹರಿನಾಮ ಕಥೆಯೊಳಳವಟ್ಟೂ 3ಭಾಗವತ ಜನ ಸಂಗದಿಂದ ಹರಿಕಥೆಗಳನುರಾಗದಿಂ ಕೇಳಿ ಗುರುವಿನ ಮಹಿಮೆಯಾಶ್ರೀಗುರುಗಳಿಂದಲೆ ಧನ್ಯತ್ವವಹುದೆಂದುಯೋಗ ಸಂಪದವೆ ತನಗಾಗಬೇಕೆಂದೂ 4ಸದಸದ್ವಿವೇಕ ಶಮೆ ದಮೆ ತಿತಿಕ್ಷೆಗಳಿಂದಲಧಿಕ ಮೋಕ್ಷೇಛ್ಛೆ ಮುಂತಾದ ಸಾಧನವೂಒದವಿರಲು ಬೇಕು ಗೋಪಾಲಾರ್ಯ ಗುರುವರನಪದವೆ ಸತ್ಯಾನಂದ ರೂಪವೆಂತೆಂದೂ 5
--------------
ಗೋಪಾಲಾರ್ಯರು
ಬಗೆಬಗೆ ಆಟಗಳೆಲ್ಲಿ ಕಲಿತೆಯೊ |ಜಗದ ಮೋಹಕನೆ ಪಖಗವರಗಮನನೆಅಗಣಿತಮಹಿಮನೆ |ಜಗದೊಳು ನೀ ಬಹು ಮಿಗಿಲಾಗಿ |ಪರಿಅ.ಪಒಬ್ಬಳ ಬಸಿರಿಂದಲಿ ಬಂದು-ಮ-|ತ್ತೊಬ್ಬಳ ಕೈಯಿಂದಲಿ ಬೆಳೆದು ||ಕೊಬ್ಬಿದ ಭೂಭಾರವನಿಳುಹಲು ಇಂಥ |ತಬ್ಬಿಬ್ಬಾಟಗಳೆಲ್ಲಿ ಕಲಿತೆಯೊ 1ಮಗುವಾಗಿ ಪೂತಣಿ ಮೊಲೆಯ-ಉಂಡು |ನಗುತಲವಳ ಅಸುವನೆ ಕೊಂಡು |ಅಘಹರ ನೀ ಗೋಪಿಯೊಳು ಜನಿಸಿ ಇಂಥ |ಸೊಗಸಿನ ಆಟಗಳೆಲ್ಲಿ ಕಲಿತೆಯೊ 2ಲೋಕರಂತೆ ನೀ ಮಣ್ಣನು ತಿನಲು |ತಾ ಕೋಪಿಸಿ ಜನನಿಯು ಬೇಗ ||ಓಕರಿಸೆನ್ನಲು ಬಾಯೊಳು ಸಕಲ |ಲೋಕವ ತೋರಿದುದೆಲ್ಲಿ ಕಲಿತೆಯೊ | 3ಮಡುವ ಧುಮುಕಿ ಕಾಳಿಂಗನ ಪಿಡಿದು |ಪಡೆಯ ಮೇಲೆ ಕುಣಿದಾಡುತಿರೆ ||ಮಡದಿಯರು ನಿನ್ನ ಬಿಡದೆ ಬೇಡಲು |ಕಡುದಯೆದೋರಿದುದೆಲ್ಲಿ ಕಲಿತೆಯೊ | 4ಒಂದುಪಾದಭೂಮಿಯಲಿ ವ್ಯಾಪಿಸಿ ಮ-|ತ್ತೊಂದುಪಾದಗಗನಕ್ಕಿಡಲು ||ಅಂದದಿ ಬಲಿಯ ಶಿರದಿ ಮೂರನೆಯದಿಟ್ಟು |ಬಂಧಿಸಿದಾಟಗಳೆಲ್ಲಿ ಕಲಿತೆಯೊ | 5ಭರದಿ ಭಸ್ಮಾಸುರ ವರವನು ಪಡೆದು |ಹರನು ಶಿರದಿ ಕರವಿಡ ಬರಲು ||ತರುಣಿರೂಪವ ತಾಳಿ ಉರಿಹಸ್ತದವನ |ಮರುಳುಗೊಳಿಸಿದುದನೆಲ್ಲಿ ಕಲಿತೆಯೊ | 6ಜಗಕೆ ಮೂಲನೆಂದು ನಾಗರಾಜ ಕರೆಯೆ |ಖಗವಾಹನನಾಗದೆ ನೀ ಬಂದು ||ನಗುತ ನಗುತ ಆ ವಿಗಡನಕ್ರನ ಕೊಂದ |ಹಗರಣದಾಟಗಳೆಲ್ಲಿ ಕಲಿತೆಯೊ 7ವೇದಗಳರಸಿಯು ಕಾಣದ ಬ್ರಹ್ಮ ನೀ-|ನಾದರದಲಿ ವಿದುರನ ಗೃಹದಿ ||ಮೋದದಿ ಒಕ್ಕುಡಿತೆಯ ಪಾಲನೆ ಕೊಂಡು |ಹಾದಿಯೊಳ್ ಹರಿಸಿದುದೆಲ್ಲಿ ಕಲಿತೆಯೊ 8ಡಂಬಕಹಿರಣ್ಯಕಶಿಪು ಪ್ರಹ್ಲಾದನ |ಹಂಬಲವಿಲ್ಲದೆ ಶಿಕ್ಷಿಸಲು ||ಸ್ತಂಭದಿ ಭಕ್ತಗೆ ರೂಪವ ತೋರಿ |ಸಂಭ್ರಮವಿತ್ತುದನೆಲ್ಲಿ ಕಲಿತೆಯೊ 9ಚಕ್ರಧರನೆ ಜರಾತನಯನೊಂದಿಗೆ ಕಾದಿ |ಸಿಕ್ಕಿ ಓಡಿದವನಿವನೆಂದೆನಿಸಿ ||ಭಕ್ತ ಭೀಮನ ಕೈಯಲಿ ಕೊಲ್ಲಿಸಿದ |ಠಕ್ಕಿನಾಟಗಳನೆಲ್ಲಿ ಕಲಿತೆಯೊ | 10ಆ ಶಿರವಾತನ ತಂದೆಯ ಕರದೊಳು |ಸೂಸುತ ರಕ್ತವ ಬೀಳುತಿರೆ ||ಸೋಸಿ ನೋಡದೆ ರುಂಡ ಬಿಸುಡಲವನ ಶಿರ |ಸಾಸಿರ ಮಾಡಿದುದೆಲ್ಲಿ ಕಲಿತೆಯೊ 11ಪ್ರಾಣ ಸೆಳೆವನೀ ದಿನವೆಂದರ್ಜುನ |ಧೇನಿಸದಲೆ ಸೈಂಧವಗೆನಲು ||ಕಾಣದಂತೆ ಸೂರ್ಯಗೆ ಚಕ್ರವನಿಟ್ಟು |ಬಾಣ ಹೊಡಿಸಿದುದನೆಲ್ಲಿ ಕಲಿತೆಯೊ 12ಸರ್ಪನ ಬಾಣವು ಉರಿಯುತ ಬರಲು ಕಂ-|ದರ್ಪನ ಪಿತ ನೀ ಕರುಣದಲಿ ||ತಪ್ಪಿಸಿ ಪಾರ್ಥನ ರಥ ನೆಲಕೊತ್ತಿ |ತೋರ್ಪಡಿಸಿದಾಟವೆಲ್ಲಿ ಕಲಿತೆಯೊ 13ದುರುಳದುಃಶಾಸನ ದ್ರೌಪದಿ ಸೀರೆಯ |ಕರದಿಂದ ಸಭೆಯೊಳು ಸೆಳೆಯುತಿರೆ ||ಹರಿಶ್ರೀ ಕೃಷ್ಣ ನೀ ಪೊರೆಯೆನಲಾಕ್ಷಣ |ಅರಿವೆ ರೂಪದೆ ಬಂದುದೆಲ್ಲಿ ಕಲಿತೆಯೊ 14ಕುರುಪತಿ ಸಭೆಯೊಳು ಗುರುವಿನಿಂದಿರುತ |ಸಿರಿಕೃಷ್ಣನು ಬರೆ ವಂದಿಸದೆ ||ಸ್ಥಿರವಾಗಿ ಕುಳಿತಿರೆ ಚರಣದಿ ಧರೆಮೆಟ್ಟಿ |ಕುರುಪನನುರುಳಿಸಿದ್ದೆಲ್ಲಿ ಕಲಿತೆಯೊ | 15ದುರಿಯೋಧನ ಪಾಂಡವರ ಶಿಕ್ಷಿಸಲು |ಮೊರೆಯಿಡಲವನ ಮರುಳುಗೊಳಿಸಿ ||ಧುರದೊಳುಪಾರ್ಥಗೆ ಸಾರಥಿಯಾಗಿ ನೀ |ಕುರುಕುಲವಳಿದುದನೆಲ್ಲಿ ಕಲಿತೆಯೊ | 16ಪತಿಶಾಪದಿ ಶಿಲೆಯಾದ ಅಹಲ್ಯೆಯ |ಹಿತದಿಂದವಳನು ಉದ್ಧರಿಸಿ ||ಪತಿಯೊಡಗೂಡಿಸಿ ಪತಿವ್ರತೆಯೆನಿಸಿದ-ಅ-|ಮಿತಮಹಿಮೆಯ ಕೃತಿಯೆಲ್ಲಿ ಕಲಿತೆಯೊ 17ಅಂಬರೀಷ ದ್ವಾದಶಿ ವ್ರತ ಸಾಧಿಸೆ |ಡೊಂಬೆತನದಿದೂರ್ವಾಸಬರೆ ||ಇಂದುಧರಾಂಶನು ರಾಜನ ಪೀಡಿಸ-|ಲಂದು ಚಕ್ರದಿ ಕಾಯ್ದುದೆಲ್ಲಿ ಕಲಿತೆಯೊ | 18ಕುಲಛಲಗಳನಳಿದ ಅಜಮಿಳ ಸರಸದಿ |ಹೊಲತಿಯ ಕೂಡಿರೆ ಮರಣ ಬರೆ ||ಬಲು ಮೋಹದ ಸುತ ನಾರಗನೊದರಲು |ಒಲಿದು ಗತಿಯನಿತ್ತುದೆಲ್ಲಿ ಕಲಿತೆಯೊ 19ಬಡತನ ಪಾರ್ವನ ಬಿಡದೆ ಬಾಧಿಸಲು |ಮಡದಿಯ ನುಡಿಕೇಳಿಆಕ್ಷಣದಿ ||ಒಡೆಯ ನೀನವನೊಪ್ಪಿಡಿಯವಲನು ಕೊಂಡು |ಕಡುಭಾಗ್ಯನಿತ್ತುದನೆಲ್ಲಿ ಕಲಿತೆಯೊ | 20ಎಂದೆಂದು ನಿನ್ನ ಗುಣವೃಂದಗಳೆಣಿಸಲು |ಇಂದಿರೆಬೊಮ್ಮನಿಗಸದಳವು ||ಮಂದರಧರಸಿರೆಪುರಂದರವಿಠಲನೆ |ಚೆಂದ-ಚೆಂದದಾಟಗಳೆಲ್ಲಿ ಕಲಿತೆಯೊ 21
--------------
ಪುರಂದರದಾಸರು