ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯಮಾಡೊ ಕಾಶಿ ಬಿಂದುಮಾಧವಮಾಡದಿರೆನಗೆ ತಂದೆ ಭೇಧವ ಪ. ಪಾಪನಾಶನ ಪಾಲಿಸೊ ಎನ್ನಸರ್ಪಭೂಷಣನತಾತನೆಂದೆನಿಸುವ ತವ ನಾಮಸ್ಮರಣೆಪಾರ್ವತಿಪತಿಯ ಧ್ಯಾನದೊಳಿರಿಸೊ 1 ಮೋಕ್ಷÀದಾಯಕ ಪಾಲಿಸೊ ಎನ್ನಲಕ್ಷ್ಮೀನಾಯಕಕುಕ್ಷಿಯೊಳೀರೇಳುಭುವನ ತಾಳಿದವನೆಭಿಕ್ಷಾಪಾತ್ರ ಶಿವನಧ್ಯಾನದೊಳಿರಿಸೊ 2 ಆದಿಮೂರುತಿ ವಿಶ್ವೇಶ್ವರಗೆ ವಿಷ್ಣುಪಾದವೆ ಗತಿಮೇದಿನಿಯೊಳು ಸೋದೆಪುರದಿ ನೆಲೆಸಿವಾದಿರಾಜವರದನೆ ಬಂದೆ ಹಯವದನನೆ 3
--------------
ವಾದಿರಾಜ
ಪಾರ್ವತಿಪತಿ ಆರ್ವರಾಭಿಷ್ಟಿಯ ಸರ್ವಪೂರಿಸಿ ತನ್ನಿಜಪದ ಸೇವಕನಿಗೆ ಕರುಣವ ಬೀರ್ವನಿಗೆ ಚರಿತ ಆ ಪೂರ್ವನಿಗಾರತಿಯಾ ಬೆಳಗಿರೇ ಸೋ 1 ತಾರ್ಕು ಪದೇಶಿತಾ ಸರ್ಕನೆ ಕರ್ಕಶ ಮಾರ್ಗವ ಬಿಡಿಸುವ ಅತಕ್ರ್ಯನಿಗೆ ಅಘತಮರ್ಕನಿಗೆ ಸುರಸ ಪರ್ಕನಿಗಾರತಿಯಾ ಬೆಳಗೀರೇ ಸೋ 2 ಅಂಬುಶಶಿಬಿಂಬಾಂಕಿತ ಜಟೆ ಅಂಬಕತ್ರಯ ಶಾಂಭವ ವಾಸೆ ಚಿದಂಬರಗೆ ಗಜಚರ್ಮಾಂಬರಗೆ ಹರಸಿ ಶ್ವಂಭರಗಾರತಿಯ ಬೆಳಗಿರೇ ಸೋ3 ಕರ್ಪುರ ಗೌರವತನು ತೋರ್ಪುವ ಸರ್ಪಾಭರಣಗಳಲಿ ಶೋಭಿಸುತಿರ್ಪನಿಗೆ ಹತ ಕಂರ್ದಪನಿಗೆ ಸುಜ್ಞಾನ ದರ್ಪಣೆಗಾರತಿಯಾ ಬೆಳಗೀರೆ ಸೋ 4 ಕುಂದದಿ ಆನಂದದಿ ಮಹೀಪತಿ ನಂದನ ಸಲಹುವ ಘನ ಅಶಿತ ಕಂದರಿಗೆ ಪೂಜಿತ ಇಂದರಗೆ ಸದ್ಗುಣ ಸಾಂದರ ಗಾರತಿಯಾಬೆಳಗೀರೆ ಸೋ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮೂರನೆಯ ಸಂಧಿ ಪತ್ರವನೋದಿಕೊಂಡು ಪದ್ಮನಾಭನ ಕಿಂಕರಗೆ ವಿಷಯೆ ವಿಶಾಲದಿ ಸಖಿಯರು ಕೂಡಿ ಆಲಯದಿಂದಲಿ ಹೊರಟರು ವಸಂತಕಾಲ ಬಂದಿರೆ ನಂದನಕೆ 1 ವಚ್ಚೇರೆಗಂಗಳ ವಾರಿಜಮುಖಿಯರು ನಿಚ್ಚಳಾಂಗದ ನೀರೆಯರು ಹೆಚ್ಚ ಹಿರಿಯ ಹೆಂಗಳ ರನ್ನೇರು ಬೆಚ್ಚದೆ ಬೆರೆದು ನಡೆದರು 2 ಚೆಲ್ಲೆಗಂಗಳ ಚೆಲ್ವೆಯರು ಎಲ್ಲರೈದಿದರು ನಂದನಕೆ 3 ಕಳಸಕುಚದೋರು ಕಂಬುಕಂಧರೆಯರು ಕುಂತಳಕಾಗಿ ನಡೆದರು4 ಚೆಂದುಟಿ ಚೆಲುವಿನ ಬಾಲೆಯರು ನಟನೆಯಿಂದೆಲ್ಲ ನಡೆದರು 5 ತಬ್ಬುತ ತಾಗೊಲವುತಲಿ ಕಬ್ಬುವಿಲ್ಲನ ಕೋಲಾಹಲ ಉಲ್ಲಸದಿ ತಬ್ಬಿ ನಡೆದರು ನಂದನಕೆ 6 ಕಕ್ಕಸ ನಕ್ಕುನಲಿದು ನಾನಾ ಚೇಷ್ಟೆಗಳಿಂದ ಹೊಕ್ಕರು ನಂದನವನವ7 ಸರೋವರವಿಳಿದು ಮಾಡಿದರ್ ಕೈಚಳಕವ ಜಲಕ್ರೀಡೆಯನಾಡಿದರತಿ ಹರುಷದಲಿ 8 ಕೆಂದಾವರೆ ಮೊಗ್ಗು ಕಂಡು ಹರುಷದಿ9 ಕೋಮಲೆಯರ ನೀರಾಟದ ರಭಸಕ್ಕೆ ತಾವರೆಗಳು ಬೆರಗಾಗೆ ಹೇವದಿ ತಲೆಯ ತಗ್ಗಿದವು10 ಸಮನಾಗಿ ತೋರುತಲಿಹವು 11 ದಿವ್ಯಾಂಗ ತೋರುತಲಿ ಹೆರೆಯ ಕೂರಂಬಿನಂದದಲಿ12 ಸಡಿಲಿದಾಭರಣವನಿಟ್ಟು ಮುಡಿದರು ತುದಿವೆಣ್ಣೆಗಂಟು 13 ಕಣ್ಣಿಗೆ ಅಂಜನ ಹಚ್ಚಿ ಸಂಪಿಗೆ ಮಕರಂದ ಪತ್ರಿಕೆಯನಿಟ್ಟು ಲಲನೆಯರೆಲ್ಲ ಶೃಂಗಾರದಿ 14 ಮಾನಿನಿಯರು ತೆರಳಿದರು 15 ಕಂದರ್ಪನ ಮದದಾನೆಯಂತೆ ಕರ್ಪುರ ವೀಳ್ಯವ ಕರದಲ್ಲಿ ಪಿಡಿದು ಗುಪ್ಪವಡೆದರು ನಾರಿಯರು 16 ಘನರಾಗದಿಂದ ಪಾಡುತಲಿ ತಮ್ಮ ಮನಬಂದ ಫಲ ಪುಷ್ಪಂಗಳ 17 ಉದ್ದಂಡತನದಲಾಡುತಿಹರು 18 ಬೆರಸಿಕೊಂಡಾಡುತಲಿಹರು ಹರುಷದಿಂದಲಿ ಮಂತ್ರಿ ತನುಜೆ 19 ಚಿಕ್ಕ ಪ್ರಾಯದ ಕೋಮಲಾಂಗಿಯು ಹೆಮ್ಮಕ್ಕಳನಗಲಿ ತಾ ಚೂತ ಬೆಕ್ಕಸ ಬೆರಗಾಗಿ ನಿಂದಳ್ 20 ಮತಿಭ್ರಮೆಯಿಂದ ನೋಡಿದಳು 21 ಪಾರ್ವತಿಪತಿಯೆಂಬೆನೆ ಪಣೆಗಣ್ಣಿಲ್ಲ ವಾರಿಜೋದ್ಭವನಿವನಲ್ಲ ನಾರಾಯಣನೆಂಬೆನೆ ಶಂಖಚಕ್ರವು ತೋರುವುದಿಲ್ಲ ಕೈಯೊಳಗೆ 22 ಇಂದ್ರನೆಂಬೆನೆ ಬಿಳಿಯಾನೆ ಕೆಲದಲಿಲ್ಲ ಚಂದ್ರನೆಂಬೆನೆ ಮೃಗವಿಲ್ಲ ಬಂದಿಳಿದನೊ ಭೂತಳಕೆ 23 ಕುಸುಮ ಬಾಣವು ಕೈಯೊಳಿಲ್ಲ ವಿಷಯೆ 24 ಹತ್ತಿರೆ ಬಂದು ನಿಲ್ಲುವಳು ಹೊತ್ತಲ್ಲವೆಂದು ಸಾರುವಳು 25 ಮುಟ್ಟುವೆನೆಂದು ನಿಲ್ಲುವಳು ಥಟ್ಟನೆ ಕಡೆಗೆ ಸಾರುವಳು 26 ಲಜ್ಜೆಹೋದರು ಹೋಗಲಿ ಎನುತ ಭೇದಿಸಿ ನೋಡಿದಳವನ 27 ಚೊಗೆಯ ಕುಪ್ಪಸದ ಕೊನೆಯಲ್ಲಿ ಮಂತ್ರಿ ತನುಜೆ 28 ಹೊದ್ದಿದ್ದ ಲಜ್ಜೆ ಭಾವದಲಿ ಸಾರ್ದುಮುದ್ರೆಯೊಡೆದಳಂಬುಜಾಕ್ಷಿ 29 ಮೋಡಿಯ ಬರೆದ ಬರಹನು ಮಾಡಿದ ಸುಕೃತದ ಫಲದಿ 30 ನೇಮಿಸಿ ಕಳುಹಿದ ಕಾರ್ಯ ವಿಷವ ಕೊಡುವುದುತ್ತಮವು 31 ಭಾವಿಸಿ ನಿನ್ನ ಮನದಿ ಮುಂದಕ್ಕೆ ಲೇಸುಂಟು ನಮಗೆ 32 ಕೈತಪ್ಪೆಂದು ಮನದಲ್ಲಿ ತಿಳಿದು 33 ವಾಕಾರವನೆ ಚೆಳ್ಳುಗುರಿಂದಲಿ ತಿದ್ದಿ ಯೇಕಾರವನೆ ಮಾಡಿದಳು ಮರುಗಿದಳು 34 ಕಟ್ಟಿದ ಭರದಿಂದ ತಲೆಯನು ಎತ್ತಿ 35 ನಿಂದೊಮ್ಮೆ ನೋಡುವಳು ಕಂದಿ ಕಾತರಿಸುತಲಿಹಳು 36 ಬೆದರಿದ ಹುಲ್ಲೆಯಂದದಲಿ ಹೃದಯ ಸಂಚಲಿಸುತಲಿಹಳು 37 ಹುಸಿ ನುಡಿಗಳನು ಉಟ್ಟ ದೇವಾಂಗ 38 ಪರಿಮಳ ಮಾಜುವುದೆ
--------------
ಹೆಳವನಕಟ್ಟೆ ಗಿರಿಯಮ್ಮ
ಬಗಳಾಂಬ ನಿನ್ನ ಲೀಲೆ ಮಂಗಳಾ ಮಂಗಳಬಗಳಾಂಬ ನಿನ್ನ ಲೀಲೆ ಮಂಗಳಾ ಮಂಗಳಪಭಸ್ಮಾಸುರನಾಗ ಜಗವರಿಯೆ ಬೇಕೆಂದುಗೌರಿಯನು ಮೋಹಿಸಿಯೆವಿಸ್ಮಯದಲಿ ವಿರೂಪಾಕ್ಷ ಭಜಿಸಿವಿಷ ಹೃದಯದಿ ಘಾತಕವನೆ ಚಿಂತಿಸೆ1ಉರಿವ ಹಸ್ತವ ಪಡೆದು ಹರುಷದಲಿ ಬರಲುಪಶು ಪತಿಯು ಭಯದಿಂದ ಓಡುತಿರಲುದೇವತೆಗಳೆಲ್ಲರೂ ಸ್ತೋತ್ರ ಗೈಯೆಶಿವನನು ಕಾಯಲವತರಿಸಿದೆ ದೇವಿ2ಥಳ ಥಳಿಸುತ ಮೋಹದಿಂದಿರಲುತವಕಿಯು ಹರುಷದಿ ಕೈ ಹಿಡಿದು ಬರಲುಕಳರಿದ ಶಿವ ಪ್ರಾಣ ಉಳಿಯಲೆಂದುತಾಮಸನ ನಾಟ್ಯದಲಿ ಗೆಲಲು ಎಂದೆ3ಧಿಮ್ಮಿ ತತ್ತಧಿಕಿತಕ ಎಂದುದಿಟ್ಟವಾಗಿ ಕುಣಿಯುತಲಂದುಸುಮ್ಮನೆ ಕೈಯಲಿಡಿಸಿದೆ ಕೈಯಸುಟ್ಟೆಯಸುರನ ಸುರರುಘೆ ಎನೆ4ಸುರರುಹೂವಿನ ಮಳೆಯ ಸುರಿಯಲುಸುರಗಣಿಕೆಯರು ನಾಟ್ಯವಾಡಲುಪರಮಚಿದಾನಂದ ಬಗಳೆಯು ಸಾರ್ತರೆಪಾರ್ವತಿಪತಿನೋಡಿ ನಗುನಗುತಿರೆ5
--------------
ಚಿದಾನಂದ ಅವಧೂತರು