ಒಟ್ಟು 3 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾರ್ವಟೆ ಉತ್ಸವಗೀತೆ ನೋಡಿದೆ ನೋಡಿದೆ ಪಾರ್ವಟೆ ಉತ್ಸವವ ರೂಢಿಗೊಡೆಯ ರಂಗನ ಪರಮಸಂಭ್ರಮವ ಪ. ಮುದದಿ ವಿಜಯದಶಮಿಯಲಿ ಭುಜಗಶಯನ ರಂಗ ವಿಧವಿಧವಾದ ಆಭರಣ ವಸ್ತ್ರಗ[ಳಿಂದ] ಮದನನಯ್ಯನು ತಾನು ಶೃಂಗಾರವಾಗಿ ಒದಗಿ ಪಲ್ಲಕ್ಕಿ ಏರಿ ಬರುವ ವೈಭೋಗವ 1 ಮುತ್ತಿನಕಿರೀಟ ಮುಗುಳುನಗೆಯ ನೋಟ ರತ್ನದ ಪದಕಗಳ ಹತ್ತುಅಳವಟ್ಟು ಬಟ್ಟಲಲಿ ಭಕ್ತರು ಬಿಟ್ಟ ಉಭಯವನ್ನೆಲ್ಲ ಗ್ರಹಿ ಸುತ್ತ ನರಸಿಂಹನಪುರದ ಮಂಟಪದಲ್ಲಿ 2 ಅಂಬುಮಾಲೆ ಆನೆಮೇಲೆ ನೇಮದಿಂದಲೆ ತಂದು ನೀಲವರ್ಣಗೆ ಕೊಡಲು ಪೂಜೆಯನು ಮಾಡಿ ಅಂಬು ನಾಗಶಯನ ಬಹರಿನೇರಿ ಲೀಲೆಯಿಂದ ಬರುವ ಪರಮವೈಭೋಗವ 3 ಶರಧಿಯಂತೆ ಪುರುಷೆ ಭೋರ್ಗರೆಯುತ ಬರುತಿರೆ ಮುರುಜ ಮೃದಂಗ ಭೇರಿವಾದ್ಯ ಘೋಷಗಳು ಗಜ ಸಿಂಹ ವೃಷಭ ಶಾರ್ದೂಲನಡೆಯಿಂದ ಬಂದ ವಸುದೇವಪುತ್ರನ 4 ಬಂದು ಅಶ್ವವನಿಳಿದು ಅರ್ಥಿಯಿಂದಲೆ ನಿಂದು ಗಾಯಿತ್ರಿಮಂಟಪದಲ್ಲಿ ಮಿತ್ರರು ಸಹಿತ ಇಂದಿರೆ ಸಹಿತಲೆ ನಿಂದ ವೆಂಕಟರಂಗ ಮಂದಿರದೊಳಗೆ 5
--------------
ಯದುಗಿರಿಯಮ್ಮ
ಶ್ರೀರಂಗವಾಸಿಗಳು ಏನು ಸುಕೃತಿಗಳೊ ಪ ಅರುಣ ಉದಯದೊಳೆದ್ದು ಮರುದ್ವøಧೆ ಸ್ನಾನವ ಮಾಡಿ ಪರಮಪುರುಷನ ವಿಶ್ವರೂಪ ನೋಡಿ ಪರವಾಸುದೇವರ ಪ್ರಣವವಿಮಾನದಿ ನೋಡಿ ವರಭಿಗಮನ ಮೊದಲಾದ ಐದು ಪೂಜೆ ಸೇವಿಸುವರು 1 ಶ್ರಾವಣಮಾಸದಿ [ರಂಗನಿಗೆ] ಪವಿತ್ರೋ ತ್ಸವವು ಭಾದ್ರಪದದಲಿ ಲಕ್ಷ್ಮೀಕೊಲುವು ಪಾರ್ವಟೆಯು ಆಶ್ವೀಜಮಾಸದಿ ಉಯ್ಯಾಲೆಯು ತ್ಸವವು ಕಾರ್ತೀಕಮಾಸದಿ ಕೌಶಿಕ ಕೃತ್ತಿಕದೀಪಾ 2 ಮಾರ್ಗಶಿರ ಮಾಸದಿ ಪವಿತ್ರ ಕೊ ಟ್ಟಿಗೋತ್ಸವ ಪುಷ್ಯಮಾಸದಿ ಪುನರ್ವಸುರಥವೂ ಮಾಘಮಾಸದಲಿ ತೆಪ್ಪೋತ್ಸವ ಸಂಭ್ರಮವು ಫಾಲ್ಗುಣಮಾಸದಿ ಪಂಗುನೋತ್ಸವ ನೋಳ್ಪರು 3 ಪುಷ್ಪಸೇವ[ಯು] ಚೈತ್ರಮಾಸದಿ ಚಿತ್ರರಥವು ವೈಶಾಖಮಾಸದಿ ವಸಂತೋತ್ಸವವು ಜೇಷ್ಠಮಾಸದಲಿ ಜೇಷ್ಠಾಭಿಷೇಕವು ಆಷಾಢಮಾಸದಿ ಕಾವೇರಿ ವೈಭೋಗವು 4 ದೇಶಾಂತ್ರದೊಳಗಿದ್ದು ವಾಸುದೇವನ ಸ್ಮರಿಸೆ ನಾಶವಾಗುವುದವರ ಪಾಪರಾಶಿಗಳು ಆ ದೇಶವಾಸಿಗಳನ್ನು ಇನ್ನೇನು ಪೇಳಲಿ [ಬಿಡದೆ] ವಾಸುಕಿಶಯನ ವೆಂಕಟರಂಗನ ನೋಳ್ಪರು 4
--------------
ಯದುಗಿರಿಯಮ್ಮ