ಒಟ್ಟು 10 ಕಡೆಗಳಲ್ಲಿ , 9 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ಧನ್ಯನಾಗೆಲೊ ಮುನ್ನ ಹರಿಯ ಕಾ ರುಣ್ಯವನೆ ಪಡೆದು ಮಾನವನೆ ಪ ಬನ್ನ ಬಿಡಿಸುವ ಪನ್ನಗಾರಿ ಧ್ವಜನನ್ನು ಧ್ಯಾನಿಸುತ ಅ.ಪ ಕಣ್ಣಿನಿಂದಲಿ ನೋಡು ಹರಿಯಲಾವಣ್ಯ ಮೂರ್ತಿಯನು ಕರ್ಣದಿಂದಲಿ ಕೇಳು ಹರಿಯ ಪಾವನ್ನ ಕೀರ್ತಿಯನು ಅನ್ಯವಾರ್ತೆಗಳಾಡದೆ ವದನದಿ ಘನ್ನ ಹರಿಯಗಣಗಳನ್ನೇ ಬಣ್ಣಿಸುತ 1 ಹಸ್ತವೆರಡು ಹರಿಮಂದಿರ ಮಾರ್ಜನಕೃತ್ಯ ಮಾಡುತಿರಲಿ ಮತ್ತೆ ಪಾದಗಳು ಚಿತ್ತಜನಯ್ಯನ ಕ್ಷೇತ್ರ ತಿರುಗುತಿರಲಿ ಭೃತ್ಯನಾಗಿ ಬಲು 2 ಇಂತು ಪಡಿಯೊ ಶಿರಿಕಾಂತನಲ್ಲಿ ಏಕಾಂತ ಭಕ್ತಿಯನು ಭ್ರಾಂತಿಯ ಬಿಡು ನೀನು ಪೇಳುವ ಮಹಂತರ ಸೇವಿಸಿ 3 ಸಾರ್ಥವಿದೆ ತಿಳಿ ಪಾರ್ಥಸಖನು ಸರ್ವತ್ರ ಇಹನೆಂದು ಗಾತ್ರದೊಳು ಪ್ರತ್ಯಗಾತ್ಮನಲ್ಲಿ ಸದ್ಭಕ್ತಿಮಾಡು ತಿಳಿದು ಮತ್ರ್ಯ ಜನ್ಮಕಿದು ಸಾರ್ಥಕವೊ ಸುಖತೀರ್ಥರ ಕರುಣಾ ಪಾತ್ರನಾಗಿ ಬಲು 4 ಈ ತೆರದಿ ಸಂಪ್ರಾರ್ಥಿಪರಿಗಿಷ್ಟಾರ್ಥಗಳ ಕೊಡುವಾ ಭೂತಲದಿ ಪ್ರಖ್ಯಾತ ಕಾರ್ಪರ ಕ್ಷೇತ್ರದಲಿ ಮೆರೆವ ಪಾತಕ ಹರ ಶಿರಿನಾರಶಿಂಹನ ಕೃಪಾತಿಶಯದಿ ನಿ ರ್ಭೀತನಾಗಿ ಬಲು 5
--------------
ಕಾರ್ಪರ ನರಹರಿದಾಸರು
ನಾರೇರೆಲ್ಲ ಮುತ್ತಿನಾರತಿ ಬೆಳಗಿರೆ ಶ್ರೀ ಕೃಷ್ಣಮೂರುತಿಗೆ ಪ ನಾರೀಮಣಿ ಶ್ರೀ ರುಕ್ಮಿಣೀದೇವಿಗೆ ಮತ್ತು ಭೂಮಾಮಣಿಗೆ ಅ.ಪ ಪನ್ನಗಪತಿ ಫಣಿಯನ್ನು ತುಳಿಯುತಲಿ ಚನ್ನಾಗಿ ಕುಣಿದವಗೆ ಸನ್ನುತ ನಿಜ ಜನರನ್ನು ಸಲಹುವ ಮನ್ಮಥ ಜನಕನಿಗೆ 1 ಪಾರ್ಥಗೆ ಸಖನಾಗಿ ಧಾರ್ತರಾಷ್ಟ್ರನ ಹಠ ವ್ಯರ್ಥ ಮಾಡಿದವಗೆ ಆರತಿ ಎತ್ತಿರೆ ಶುಭಕೀರ್ತನೆ ಮಾಡುತ ಪಾರ್ಥಸಖನ ಸತಿಗೆ 2 ಚಂಡಮುನಿಯು ಬೇಡಿಕೊಂಡ ವರವನಿತ್ತ ಪಾಂಡವರ ಕಾಯ್ದವಗೆ ಪುಂಡರೀಕದಳಲೋಚನಗೆ ಜಗದಂಡಪತಿಯ ಸತಿಗೆ3 ವಾಮಲೋಚನರೆಲ್ಲಾ ನಾಮಗಿರೀಶ ಶ್ರೀ ನರಸಿಂಹ ಮೂರುತಿಗೆ ಪ್ರೇಮ ಮಾಡುವನೆಂದು ಕಾಮಿನಿಯರೇ ಸತ್ಯ ಭಾಮಾಸಹಿತನಿಗೆ 4
--------------
ವಿದ್ಯಾರತ್ನಾಕರತೀರ್ಥರು
ಪಾರ್ಥಸಖನ ನೀ ಪ್ರಾರ್ಥನೆ ಮಾಡಿಕೃ - ತಾರ್ಥನಾಗೋ ಮನುಜಾ ಪ ಸಾರ್ಥಕವಾಗದ ವಾರ್ತೆಯ ಕೇಳಲು ಆರ್ತಿಯು ಒಪ್ಪುದೊ ನಿಜಾ ಅ.ಪ ಏಕಾಂತದಿ ಶ್ರೀಕಾಂತನ ಭಜಿಸಲು ಲೋಕಾಂತರ ಸುಖಪ್ರಾಪ್ತಿ ಭೂಕಾಂತನ ಭಜಿಸಲು ಮಾಕಾಂತನು ಒಲಿಯನು ಲೋಕಾಂತರ ನಿರಯಾಪ್ತಿ 1 ಶಿರಿರಮಣನ ಪದಯುಗಳವ ಭಜಿಸಲು ದೊರೆವೋದೀಗ ಮೋಕ್ಷ ನರಜನ ಗುಣಗಳ ವರಣನೆ ಮಾಡಲು ನಿರಯ ದುಃಖ ಪತ್ಯಕ್ಷ 2 ವೀತ ದೋಷ ನಿರ್ಭೀತ ಗುರುಜಗ ನ್ನಾಥ ವಿಠಲರೇಯ ಮಾತು ಕೇಳೆ ನಿಜ ಮಾತೆಯ ತೆರದಲಿ ದೂತನು ಪಿಡಿವನು ಕೈಯ್ಯಾ 3
--------------
ಗುರುಜಗನ್ನಾಥದಾಸರು
ಲೋಕನೀತಿ ಏನು ಮಾಡಿದರೇನು ಹಾನಿಯಾಗದು ಪಾಪ ಶ್ರೀನಿಕೇತನನ ದಿವ್ಯನಾಮ ನೆನೆಮನವೆ ಪ ಕ್ಷಣ ಪದಕಮಲಗಳ ಸ್ಮರಿಸಿ ಮನದೊಳಗೆ ಪ್ರತಿ ಕ್ಷಣಕ್ಷಣದಿ ಹರಿ ಮಹಿಮೆ ಭಜಿಸಿ ಭಕ್ತಿಯಲಿ ತೃಣ ಘನದೊಳಿಹನು ಹರಿ ಎನುತ ಚಿಂತಿಸಿ ಮನದಿ ಪ್ರಣವ ಪ್ರತಿಪಾದ್ಯನಂಘ್ರಿಯ ಭಜಿಸದನಕ 1 ಕಪಟನಾಟಕ ಸೂತ್ರಧಾರಿ ಶ್ರೀ ಹರಿಯ ಗುಣ ಅಪರಿಮಿತ ಮಹಿಮೆಗಳ ಭಜಿಸಿ ಹಿಗ್ಗುತಲಿ ಚಪಲ ಬುದ್ಧಿಗಳಿಂದ ತಪಿಸಿ ಕಂಗೆಡದೆ ಮನ ಅಪರೂಪ ಹರಿನಾಮ ಜಪ ಮಾಡದನಕ 2 ದಾನಧರ್ಮಗಳಿಂದ ಧನ್ಯನಾದೆನು ಎನಲು ಹಾನಿಯಾಗೋದು ಆಯು ಪ್ರತಿ ನಿಮಿಷದಿ ಸ್ನಾನ ಜಪತಪದೊಳಗೆ ಯಾರೆನಗೆ ಸರಿ ಎನದÉ ಮೌನದಿಂದ್ಹರಿ ನಾಮ ಧ್ಯಾನಿಸುವತನಕ 3 ಕ್ಲೇಶ ಆನಂದಗಳು ಈಶನಾಜ್ಞೆ ಇದೆಂದು ವಾಸುದೇವನೆ ಜಗತ್ಪ್ರೇರಕನು ಎಂದು ಶ್ವಾಸ ಬಿಡುವ ಶಕ್ತಿ ಲೇಸು ತನಗಿಲ್ಲ ಸ- ರ್ವೇಶ ನಿನ್ನಧೀನವೆಂದರಿವ ತನಕ4 ಗಾತ್ರ ಶೋಷಣೆಯಾಕೆ ಪಾರ್ಥಸಖನಂಘ್ರಿಗಳ ಕೀರ್ತಿಸುತ ಮನದಿ ರಾತ್ರಿ ಹಗಲು ಕಮಲನಾಭ ವಿಠ್ಠಲನ ಶ್ರೀಮೂರ್ತಿಯನೆ ನೆನೆನೆನೆದು ಸುಖಿಯಾಗೊ ಮನವೆ5
--------------
ನಿಡಗುರುಕಿ ಜೀವೂಬಾಯಿ
ವಿಠಲಾ ಎನ್ನಿರೊ ಸುಜನರೆಲ್ಲಾ ಪ ವಿಠಲಾ ಎಂದಾರೆ ಸುಟ್ಟುಹೋಗೊದು ಪಾಪ ಅ.ಪ ಪ್ರಾತಃ ಕಾಲದೊಳು ಸ್ನಾನಾದಿಕರ್ಮ ಮುಗಿಸೀವಿಠಲಾ.... ವಾತದೇವನ ದ್ವಾರ ಅರ್ಪಿಸುತ್ತಾ ನೀವು | ವಿಠಲಾ....1 ಗುರುಗಳಲ್ಲಿಗೆ ಪೋಗಿ ವಂದಿಸಿ ಮೆಲ್ಲಾನೆ ವಿಠಲಾ.... ಮರÀುತಮತದ ಸಚ್ಛಾಸ್ತ್ರಗಳ ನೋಡುತಾ ವಿಠಲಾ.... 2 ಪಂಚÀಭೇದ ಪ್ರಾಪಂಚ ಸರ್ವವು ತಿಳಿದು ವಿಠಲಾ... ಪಂಚಬಾಣನಯ್ಯ ಪಂಚರೂಪದಿ ತೋರುವಾ ವಿಠಲಾ.... 3 ಪ್ರಾರಂಭಮಾಡಿ ಪರಮೇಷ್ಠಿ ಪರಿಯಂತ ವಿಠಲಾ.... ಶ್ರೀಪ್ರಣವ ಪ್ರತಿಪಾದ್ಯಗಿವರು ಪ್ರತಿಬಿಂಬರೆಂದು ವಿಠಲಾ.... 4ಮಾತುಮಾತುಗಳೆಲ್ಲಾ ಶ್ರೀಹರಿಸ್ತೋತ್ರವೆಂದು ವಿಠಲಾ.... ಆತುಮಾಂತಾರಾತ್ಮನೆಂದು ಕೂಗುತ ಒಮ್ಮೆ ವಿಠಲಾ.... 5 ತೀರ್ಥಕ್ಷೇತ್ರಗಳಿಗೆ ಪೋಗಿ ಬರುವಾಗ ವಿಠಲಾ.... ಪಾರ್ಥಸಖನ ಪ್ರೇರಣೆಯಿಂದ ಮಾಡಿದೆವೆಂದು ವಿಠಲಾ.... 6 ನಂಬೀದ ಜನರೀಗೆ ಬೆಂಬಲನಾಗುವ ವಿಠಲಾ.... ಸಂಭ್ರಮದಿಂದಾ ಸಂರಕ್ಷಿಸುವನೆ ಇವನೂ ವಿಠಲಾ.... 7 ಕಂಚಿಕಾಳಾಹಸ್ತಿ ಶ್ರೀರಂU ಮೊದಲಾಗಿರುವ ವಿಠಲಾ... ವಂಚನೆಯಿಲ್ಲಾದೆ ಭಜಿಸಿದವರ ಪೊರೆವಾ ವಿಠಲಾ.... 8 ಪಂಚಪ್ರಾಣಾರಲಿನಿಂತು ಕಾರ್ಯಮಾಳ್ಪ ವಿಠಲಾ.... ಕರ್ಮ ಇವನಿಂದ ನಾಶವೆಂದು ವಿಠಲಾ.... 9 ಊಧ್ರ್ವಪುಂಡ್ರಗಳು ದ್ವಾದಶನಾಮ ಇಡುವಾಗ ವಿಠಲಾ.... ಶುದ್ಧನಾಗೀ ಶುಭ್ರಹೊಸ ವಸ್ತ್ರ ಹೊದುವಾಗ ವಿಠಲಾ..... 10 ಪಂಚಮುದ್ರೆಗಳಲಿ ಪಂಚರೂಪದಿ ಇರುವ ವಿಠಲಾ... ನಿರ್ವಂಚನಾಗಿ ಧರಿಸಿದವರಿಗೊಲಿವಾ ವಿಠಲಾ... 11 ಪರಿಯಂತ ವಿಠಲಾ... ವೇದೈಕವೇದ್ಯ ವಿಶ್ವಾಮೂರ್ತಿ ಕಾರ್ಯಗಳೆಂದು ವಿಠಲಾ.... 12 ಚೇತನಾ ಚೇತನ ಜಡದೊಳಗೆ ನೀವು ವಿಠಲಾ... ಪ್ರೀತಿಯಿಂದಾಲಿ ಪೂಜೆಮಾಡಿದವರಾಗೆ ಒಲಿವ ವಿಠಲಾ.... 13 ಪರಿ ಚಿಂತಿಸಿ ವಿಠಲಾ... ಶಾರೀರದೊಳಿÀರುವ ಪ್ರಾಜ್ಞನಲಿ ಕೂಡಿಸಿ ವಿಠಲಾ.... 14 ಮಧ್ವಾಂತರ್ಯಾಮಿಯಾಗಿ ಉಡುಪಿಯಲ್ಲಿ ನಿಂತ ವಿಠಲಾ... ಕರ್ತು ವಿಠಲಾ..... 15
--------------
ಮುದ್ದುಮೋಹನವಿಠಲದಾಸರು
ಶ್ರೀ ರಘುದಾಂತತೀರ್ಥರ ಸ್ತೋತ್ರ ನಮೋ ನಮೋ ಶ್ರೀ ರಘುದಾಂತ ತೀರ್ಥ ಮುನಿಯ ಮತಮಹಮಸಿರಿಯೆ ಭ್ರಮರನೆನಿಪಗುರುವೆ ಪ ಮಾರಮಣನಪದ ಸಾರಸಷಟ್ಟದ ಸೂರಿಸುಗುಣ ಭರಿತ ಮಾರುತಮತ ಪಯವಾರಿಧಿ ಶಶಿ ಗಂಭೀರ ವಿಮಲ ಚರಿತ ನೀರಜ ಶರವಿಜಿತ ಶ್ರೀ ರಘುಪತಿ ತೀರ್ಥಾರ್ಯರ ಕರಸರಸೀರುಹಸಂಜನಿತ 1 ಆರ್ತಬಂಧು ಸತ್ಕೀರ್ತಿವಂತ ಸರ್ವೋತ್ತಮ ಹರಿಯನಿಪ ಸೂತ್ರನಾಮಕ ಶಿಖಿನೇತ್ರ ಪ್ರಮುಖ ದೇವೋತ್ತಮನೆಂದೆನಿಪ ಸ್ತೋತ್ರಗೈಯ್ಯುತಿಪ್ಪ ಗಾತ್ರ ಮರೆದು ಶ್ರೀ ಪಾರ್ಥಸಖನಗುಣಕೀರ್ತಿಸಿ ಸುರಿಪ 2 ಪರಮತುರಗನಭಚರ ಪತಿಯೆನಿಸುವ ಕರುಣಿ ಕೋಪರಹಿತ ಶರಧಿ ಕುಂಭಜಾತ ಭಾಗವತ ಸಿರಿಮುಖ ಕುಮುದಕೆ ಶರನಿಧಿ ಸಂಜಾತ ಪರತತ್ವದಿ ಪರತರನೆನಿಸುವ ಮುನಿವರ ನಿರ್ಗತದುರಿತ 3 ಅನಘನಿನ್ನಪದವನಜÀಜದರಜವನು ವಿನಯದಿರಿಸಿ ಶಿರದಿ ಜನುಮಜನುಮದಘತೃಣರಾಶಿಯ ಮಧ್ಯಗಳ ಪೊಕ್ಕತೆರದಿ ಕ್ಷಣದಲಿ ದಹಿಸದೆ ಸನುಮತೆಂದೆನಲು ಅನುಗೃಹಿಸಿ ತ್ವರದಿ ಸನುಮಾರ್ಗಪ್ರದ, ದರುಶÀನದು ಪ್ರಕೃತಿನೆನೆವೆನು ಇಹಪÀರದಿ 4 ಮಾಮನೋರಮಪದ ತಾಮರಸಂಗಳನೇಮದಿ ಪೂಜಿಪನೆ ಪತಿ ಧೀಮಂತಪ್ರಿಯನೆ ನಿಮ್ಮ ಪ್ರೇಮದಿನಂಬಿಹೆನೆ ರಾಮನಾಮರತಿ ನೇಮದಿಕೂಡು ವರದೇಶ ವಿಠಲಪ್ರೀಯನೆ 5
--------------
ವರದೇಶವಿಠಲ
ಸಿರಿ ಪಾರ್ಥಸಖನಾ ಗುಣಕೀರ್ತನೆ ಮಾಡಲು ಪ ಯಂಟೆಂಟೆರಡುನಾಲ್ಕು ಸಾವಿರ ನುಡಿಯಲಿ ಯಂಟೆಂಟೆರಡು ರೂಪದಲಿ ಯಂಟೆಂಟೆರಡು ಮೂರೈದು ವ್ಯಂಜನದಿ ಯಂಟೆಂಟು ಮತ್ತೆಂಟು ಸ್ವರವ ತಿಳಿ 1 ಕಮಲ ಕರ್ಣಿಕೆಯಲ್ಲಿ ಯಂಟೆಂಟೆರಡರ ನಾಲ್ಕು ಸ್ತಂಭರಥ ಮಂಟಪದೊಳಗಿನ ವೆಂಕಟನ ನೋಡು2 ಯಂಟೆಂಟು ಕರಗಳಲಿ ಯಂಟಾಯುಧ ಪಿಡಿದು ಯಂಟು ದಿಕ್ಕಿನಲಿ ತಿರುಗುತಲಿ ಯಂಟು ವಿಧದಿ ಪ್ರೇರಣೆ ಮಾಡುವ ನಮ್ಮಾ ನೆಂಟ ತಂದೆಗುರುಗೋಪಾಲವಿಠಲನು 3
--------------
ಗುರುತಂದೆವರದಗೋಪಾಲವಿಠಲರು
ಬಾರೈ ರಂಗ ಬಾರೈ ಕೃಷ್ಣ ಬಾರೈ ದೇವ ಕೃಷ್ಣತೋರೈ ನಿನ್ನಯ ಚಾರುಚರಣವತೋಯಜಾಕ್ಷಪಘಲು ಘಲುರೆನ್ನುತ ರುಳಿಗೆಜ್ಜೆಯನಿಟ್ಟು ಬಾರೈ ದೇವ ಕೃಷ್ಣಕುಣಿಕುಣಿಯುತ ಬಾ ಕುಂತಿಸುತರಪ್ರಿಯ ಬಾರೈ ದೇವ ಕೃಷ್ಣಥಳಥಳಿಸುವ ಪೀತಾಂಬರ ಹೊಳೆಯುತ ಬಾರೈ ದೇವ ಕೃಷ್ಣನಡುವಿಲಿ ಹೊಳೆಯುತ ಪಟ್ಟೆವಲ್ಲಿಯು ಬಾರೈ ದೇವ ಕೃಷ್ಣ 1ಕಂಕಣ ಕರಭೂಷಣಗಳು ಹೊಳೆಯುತ ಬಾರೈ ದೇವ ಕೃಷ್ಣಪಂಕಜನಾಭಪಾರ್ಥಸಖನೆ ಕೃಷ್ಣ ಬಾರೈ ದೇವ ಕೃಷ್ಣಶಂಖ ಚಕ್ರಗಳ ಧರಿಸುತ ಮುದದಲಿ ಬಾರೈ ದೇವ ಕೃಷ್ಣಶಂಕಿಸದೆಲೆ ಬಾ ಬಿಂಕವ ತೊರೆದು ಬಾರೈ ದೇವ ಕೃಷ್ಣ 2ಮುಂಗುರುಳಲಿ ಮುತ್ತಿನರಳೆಲೆ ಹೊಳೆಯುತಬಾರೈ ದೇವ ಕೃಷ್ಣಶೃಂಗಾರದ ಕಿರೀಟವು ಹೊಳೆಯುತಬಾರೈ ದೇವ ಕೃಷ್ಣಸುಂದರ ಕಸ್ತೂರಿ ತಿಲಕವು ಹೊಳೆಯುತಬಾರೈ ದೇವ ಕೃಷ್ಣಕಂಧರದಲಿ ಶೋಭಿಪ ಪದಕಗಳಿಂದಬಾರೈ ದೇವ ಕೃಷ್ಣ 3ಪೊಂಗೊಳಲೂದುತ ಹೆಂಗಳರೊಡನೆಬಾರೈ ದೇವ ಕೃಷ್ಣಮಂಗಳ ಮಹಿಮ ವಿಹಂಗವಾಹನ ಕೃಷ್ಣಬಾರೈ ದೇವ ಕೃಷ್ಣಅಂಗಳದೊಳಗಾಡುತ ನಲಿಯುತ ಬಲು ಚಂದದಿಬಾರೈ ದೇವ ಕೃಷ್ಣಇಂದಿರೆಯರಸನೆ ವಂದಿಸಿ ಬೇಡುವೆ ಬಾರೈ ದೇವ ಕೃಷ್ಣ 4ಕಿಲಿಕಿಲಿನಗುತಲಿ ಕುಣಿಕುಣಿಯುತಬೇಗ ಬಾರೈ ದೇವ ಕೃಷ್ಣಕನಕಾಭರಣಗಳಿಂದೊಪ್ಪುತ ಬೇಗ ಬಾರೈದೇವ ಕೃಷ್ಣನಲಿನಲಿಯುತ ಬಾ ಮಣಿಯುತ ಬೇಡುವೆಬಾರೈ ದೇವ ಕೃಷ್ಣದಣಿಸದೆ ಕಮಲನಾಭವಿಠ್ಠಲ ಬೇಗ ಬಾರೈ ದೇವ ಕೃಷ್ಣ 5
--------------
ನಿಡಗುರುಕಿ ಜೀವೂಬಾಯಿ
ಸಖ್ಯವಿರಬೇಕು ಹರಿಭಕ್ತಜನಕೆಮುಕ್ತಿದಾಯಕ ಪಾರ್ಥಸಖನ ಪಾದಾಬ್ಜದಲಿ ಪ.ಅನಾದ್ಯನಂತ ಕಾಲಕ್ಕು ಸಾಯುಜ್ಯಸಖಅನಂತಜೀವರಿಗೆ ಬಿಂಬರೂಪತಾನೆ ಜೀವರಿಗನ್ನಪಾನಿತ್ತು ಪಾಲಿಸುವಪ್ರಾಣೇಶ ಹೃದ್ಗುಹ ಪ್ರಾಣಪ್ರಿಯನ 1ಶ್ರೇಯಸವನೀವಪ್ರತಿಶ್ರೇಯಸದ ಬಯಕಿಲ್ಲಗೀಶ್ರೇಯಸವನೀವ ಔದಾರ್ಯಗುಣದಿಮಾಯ ದಾರಿದ್ರಾದ್ಯವಿದ್ಯತಮೋಭಾನುವಾಯುಸಖ ಜ್ಞಾನಿಜನಪ್ರಿಯ ಸಖನೊಳು 2ಕ್ಷುತ್ತøಷೆ ಭಯಾಂತ ಸರ್ವತ್ರ ಸಂರಕ್ಷಕ ಷಟ್ಶತ್ರು ಸಂಹಾರಿಪರಾತ್ಪರಸಖವೇತ್ತøಜನಧೇನು ವೇದೋಪನಿಷದ್ವೇದ್ಯಮಿತ್ರೇಂದು ಕೋಟಿ ಭ್ರಾಜಿತಗಾತ್ರ ಹರಿಯ 3ಕರುಣಾರ್ಣವನು ಶರಣು ಸುರವೃಕ್ಷ ಸುಖವಾರ್ಧಿದುರಿತಭವದೂರ ನಿರ್ದೋಷಗುಣದಿಸುರಮುನಿನಿಕರಸೇವ್ಯಶಾಶ್ವದೇಕೋಭವ್ಯವರಸಹಸ್ರಾನಂತ ವಿಗ್ರಹನೊಳು4ಪಾರ್ಥಸಖಗೋಪವಧೂಗೋತ್ರಸಖ ಸ್ತ್ರೀಪುತ್ರಮಿತ್ರದೇಹೇಂದ್ರಿಯಾತ್ಪ್ರಿಯ ಕೃಷ್ಣಮಿತ್ರವರನೊಬ್ಬ ಸರ್ವತ್ರ ನಾರಾಯಣಾನ್ಯತ್ರ ಸ್ನೇಹವ ತ್ಯಜಿಸಿ ಶ್ರೀ ಪ್ರಸನ್ವೆಂಕಟನ 5
--------------
ಪ್ರಸನ್ನವೆಂಕಟದಾಸರು