ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯರಾಯ ಭವಹರಣ ಪಾಲಿಸೆಮ್ಮ ಪ ಜಯದೇವಿಪ್ರತಿ | ರೂಪ ಗುಣಕ್ರಿಯ ರತಯತಿಯೆ ಅ.ಪ. ಅಮರೇಶ ಸ್ವರ್ಗಪದ ತೃಣಮಾಡಿ ಕ್ಷಿತಿಯಲಿ ಪಾದ ಸೇವೆಗಾಗಿ ಅಮಿತ ಭಾಗ್ಯವಿದೆಂದು ಪಶುವಾಗಿ ನೀನಿಂದು ಕಮಲ ಮಧು ಸೇವಿಸಿದೆ 1 ತೃತಿ ಈಶರೆನಿಸುವ ಅಗ್ನಿ ಗರುಡ ಮಹರುದ್ರ ಪ್ರತಿ ಕ್ಷಣದಿ ಅತಿ ಭಕುತಿ ಭಾರದಿಂದ ನತಿಸಿ ಸೇವಿಪ ಪರಮ ಗುರುಚರಣವಾಶ್ರೈಸಿ ದತಿ ಸುಕೃತನಿಧಿ ನಮ್ಮ ಅತಿದಯದಿ ಈಕ್ಷಿಪುದು 2 ಶ್ರೀ ಭೂಮಿ ದುರ್ಗೇಶನ ಮತ ಮಂಗಳ ಮೂರ್ತಿ ಶೋಭನಾಂತ ಗುಣಕ್ರಿಯ ನಿವಹಗಳನು ಅದ್ಭುತದಿ ಧರಿಸಿಹಾ ಮಧ್ವಕೃತ ಗ್ರಂಥಗಳ ಸದ್ಭಕ್ತಿಯಲಿ ಪೊತ್ತೆ ಸೌಭಾಗ್ಯನಿಧಿ ಗುರುವೆ 3 ಪವಮಾನರಾಯನಾ ಕೃಪೆಯೆಷ್ಟೊ ನಿನ್ನಲ್ಲಿ ಅವನಿಯೊಳು ಸಿದ್ಧಾಂತ ಗ್ರಂಥಗಳ ಟೀಕೆ ಕವಿಶ್ರೇಷ್ಠನಿರಲಾಗಿ ನಿನ್ನಿಂದ ರಚಿಸಿದ ತ್ರಿ ಭುವನ ಮಾನ್ಯನೆ ಧನ್ಯ ಧನ್ಯತೆಲಿ ಪೊರೆ ಎಮ್ಮ 4 ಪಾರ್ಥನಾದಂದು ಶ್ರೀ ಯದುಪತಿಯ ಸಖ್ಯವನು ಪೂರ್ತಿಪೊಂದಿದೆ ಸರ್ವ ಪುರುಷಾರ್ಥವೆಂದು ಸ್ವಾರ್ಥಮತಿಯ ಹರಿಯ ಒಲಿಸಿದಾ ಮಹಾನಿಪುಣ ಪಾದ ಪಾಂಶು ರಕ್ಷಿಸಲೆನ್ನ 5 ದೇವಕೀಸುತ ನಿನ್ನ ಸಖನೆಂದು ಪವಮಾನ ದೇವ ನಿನ್ನಲ್ಲಿ ಮಾಡಿದ ಪರಮ ಪ್ರೀತಿ ಪತಿ ದಾಸ್ಯ ಪೂರ್ಣಪ್ರದ ಆರೂಢ ಕೇವಲಾ ಕೃಪೆ ಮಾಡು ಹರಿದಾಸ ಮಣಿಗುರುವೆ 6 ಭಾರತೀಪತಿಗೊಡೆಯ ಜಯೇಶವಿಠಲನ ವೈರಾಗ್ಯ ಸಿದ್ಧಿಯಲಿ ಏಕಾಂತ ಪೊಂದಿ ಭವ ತರಣ ಸತ್ಪಾತ್ರ ವೃಷ್ಟಿ ಹರಿಗುರುಗಳೊಲಿವಂತೆ 7
--------------
ಜಯೇಶವಿಠಲ
ನೋಡೆ ದಯದಿ ಶಿರಿ ನಿನ್ನ ಮಡದಿ ಪ ನೋಡಿ ನೀ ದಯದಿ ನೀಡು ಕರುಣ ದಯ- ಮಾಡು ತ್ವರಿತದಿ ಬೇಡುವೆ ಮುದದಿ ಅ.ಪ. ಮಾಮನೋಹರ ನೀ ಪ್ರೇಮದಿಂದಲಿ ಬಂದ- ಜಾಮೀಳನ ಪೊರದಾ ಶಾಮಸುಂದರನೇ1 ಭಾರಿ ಭಾರಿಗೆ ಎನ್ನ ದಾರಿದ್ರ್ಯವನಧಿಯ ತಾರಿಸಬೇಕೆಂದು ಶೇರಿದೆ ನಿನ್ನನ್ನು 2 ಮರೆಯುವುದುಚಿತವೆ ಶಿರಿಯ ರಮಣ ನೀನು ತರಳ ಧ್ರುವನನ್ನ ಪೊರೆದಂಥ ದೇವ ನೀ 3 ಆರ್ತರಕ್ಷಕ ನೀನು ಪಾರ್ಥನಾ ಸೂತನು ಸಾರ್ಥಕ ಮಾಡು ಲೋಕ ಕರ್ತೃ ದಯಾಪರನೆ 4 ಸರಸಿಜನಾಭನಾದ ಸಿರಿವತ್ಸಾಂಕಿತ ನೀನು ಮರೆಯಬ್ಯಾಡೆನ್ನಯ ಮೊರೆಯನು 5
--------------
ಸಿರಿವತ್ಸಾಂಕಿತರು