ಒಟ್ಟು 4 ಕಡೆಗಳಲ್ಲಿ , 2 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕರುಣೆಗೈದೆ ನಳಿನಾಕ್ಷ ಪ ಈ ನಿನ್ನ ಭಕ್ತನೊಳೇನು ಮಮತೆಯೋ ನಿನಗೆ ಅ.ಪ. ಹಿಂದೆ ಬಲಿಯು ತಾ ಯಜ್ಞವ ಮಾಡಲು ಇಂದ್ರ ಪದವು ಪ್ರಾಪ್ತಿ ನಿನ್ನಿಂದಲ್ಲದೆ ಇಂದು ಆ ಪದವಿಯನತಿಯುಕ್ತಿಯಿಂದಲಿ ಸಂದೇಹವಿಲ್ಲದೆ ಸೂರೆಗೈದವ ನೀನೆ 1 ಪರಮ ವಿದ್ವಾಂಸರನು ಧೈರ್ಯಶೀಲರನು ನೆರೆಮೋಹಗೊಳಿಸುವುದೈಹಿಕ ಭಾಗ್ಯವು ಪರಮ ಕಾರುಣ್ಯದಿಂದೊಲಿದು ನೀನಿವನನು ಸಿರಿಮೋಹದಿಂದಲಿ ಪಾರುಮಾಡಿದೆ ದೇವ 2 ನೀನಿಂದು ಗೈದುದು ಪರಮೋಪಕಾರವು ನಾನದರೊಳು ಲೇಶದೋಷವೆಣಿಸನಯ್ಯಾ ಶ್ರೀನಿಧಿ ಕರಿಗಿರೀಶನೆ ನಿನ್ನ ಚರಣಕ್ಕೆ ಆನಮಿಸುವೆನಿಂದು ದೀನವತ್ಸಲ ಸ್ವಾಮಿ 3
--------------
ವರಾವಾಣಿರಾಮರಾಯದಾಸರು
ಭಾರ ನಿನ್ನದೊ ಪ ಭಾರ ನಿನ್ನದಯ್ಯ ಹರಿಯೆ ಘೋರ ಈ ಸಂ ಸಾರದೊಳಗೆ ಪಾರುಮಾಡಿ ಪೊರೆವುದೆನ್ನ ಅ.ಪ ಕರುಣಾ ನಿಲಯನೆಂದು ನಿನ್ನ ಮೊರೆಯ ಹೊಕ್ಕು ಬೇಡಿಕೊಂಬೆ ನರನ ಭವದಗುಣಗÀಳಳಿದು ಹರಿಯೆ ನಿಮ್ಮ ಚರಣಸ್ಮರಣೆ ಕರುಣದಿಂದ ನೀಡಿ ಪೊರೆಯೊ ಶರಣಜನರ ಅಸಹಾಯಕರ 1 ಶ್ರೀಶ ಶ್ರೀನಿವಾಸ ನೀನೆ ದಾಸನ ಮನದಾಸೆಯ ಪೂರೈಸುವ ದಾತನೆಂದು ನಿನ್ನ ದಾಸತ್ವ ಬೇಡ್ವೆ ದೋಷದೂರ ಘಾಸಿಮಾಡದೆ ಹೇಸಿ ಭವದಿ ಪೋಷಿಸಯ್ಯ ಬೇಗ ಈಶ 2 ಚಿಂತೆ ಭ್ರಾಂತಿ ದೂರಮಾಡಿ ಸಂತಸ ಸುಖವನ್ನು ನೀಡಿ ಕಂತುಜನಕ ನಿಮ್ಮ ಭಕ್ತಿ ಅಂತ್ಯದಲ್ಲಿ ನಿಲ್ಲಿಸಿ ಎ ನ್ನಂತರಂಗದೊಳಗೆ ತೋರೊ ಸಂತರೊಡೆಯ ಸೀತಾರಾಮ 3
--------------
ರಾಮದಾಸರು
ಮಾಧವ ನಮ್ಮ ಶ್ರೀಧವ ಬಾಧೆಪಡಿಸದೆ ತನ್ನ ಪಾದದಾಸರ ಕಾಯ್ವ ಪ ನಿರುತ ನೀರೊಳು ನಿಂದ ಈತ ಚಾರು ನಿಗಮಗಳ ತಂದ ಬಲು ಭಾರ ಪೊತ್ತನು ಬೆನ್ನಲಿಂದ ಆಹ ಕೋರೆದಾಡೆಯಲಿಂದ ಘೋರದೈತ್ಯನ ಸಂ ಹಾರವ ಮಾಡಿ ಭೂಭಾರವನಿಳುಹಿದ 1 ಅರಮನೆಕಂಬದಲಿಂದ ಕಡು ಘೋರ ರೂಪವ ತಾಳಿ ಬಂದ ಮಹ ದುರುಳನುದರ ಬಗಿದುಕೊಂದ ಆಹ ಧರೆಯನೀರಡಿ ಮಾಡಿವ ದನುಜನ ತುಳಿದು ಚರಣದಾಸರ ಮನದೊರವಿತ್ತು ಸಲಹಿದ 2 ವೀರತನದಿ ಕೊಡಲಿಪಿಡಿದ ಧರೆಯ ಸಾರಕ್ಷತ್ರಿಯಮೂಲವಳಿದ ದೇವ ಧಾರುಣಿಯೊಳು ನರನಾದ ಅಹ ತೋರಿ ವಿಪಿನವಾಸ ಮೀರಿದಸುರನ ಕೊಂದು ಮೂರುಲೋಕದ ಕಷ್ಟ ದೂರಮಾಡಿದ ಶೂರ 3 ಗೊಲ್ಲಕುಲದಿ ಜನಿಸಿದ ಪುಂಡ ಬಿಲ್ಲಿನಾಟವ ರಚಿಸಿದ ವೀರ ಖುಲ್ಲ ಕಂಸನ ಮದ ಮುರಿದ ಆಹ ನಲ್ಲೇರ್ಹದಿನಾರು ಸಹಸ್ರಬಲ್ಲಿದತನದಾಳಿ ಎಲ್ಲ ಭಕ್ತರ ಇಷ್ಟಸಲ್ಲಿಸಿ ಪೊರೆದನು 4 ಸಾರಿಬತ್ತಲೆ ಕದಲಿದ ಪರಮ ನಾರಿಯರ ವ್ರತ ಭಂಗಿಸಿ ಮೆರೆದ ಮೂರುಪುರದ ಗರ್ವಮುರಿದ ಆಹ ಪಾರುಮಾಡಿದ ಸುರರ ಘೋರಕಂಟಕದಿಂದ ಏರಿದ ಹಯ ನಮ್ಮ ಧೀರ ಶ್ರೀ ಗುರು ರಾಮ 5
--------------
ರಾಮದಾಸರು
ಮಾಲಕೌಸ್ತುಭ ಸತ್ಯಭಾಮಲೋಲ ನೀಲಶಾಮಸುಂದರ ಕಾಲಕಾಲದಿ ಬಿಡದೆ ಎನ್ನ ಪಾಲಿಸಭವನೆ ಪ ಭುವನವೀರೇಳು ಸೂತ್ರಧಾರ ಭವದರೋಗಕ್ವೈದ್ಯ ಭಕ್ತಭಯ ಪರಿಹಾರ ಸತ್ಯ ಬುವಿಜಾಮನೋಹರ 1 ಕೋಮಲಾಂಗ ಭಜಕಜನರ ಕಾಮಿತಾರ್ಥ ಕೊಡುವ ಸುರ ಕಾಮಧೇನು ಕಲ್ಪವೃಕ್ಷ ಸ್ವಾಮಿ ದಯಾಕರ 2 ಸಾರ ಮಾಯಾಮೋಹವಿದೂರ ಕೇಶವ 3 ಪರಕೆ ಪರಮ ಪರಾತ್ಪರ ಮರಣರಹಿತ ಮಾರಮಣ ಉರಗಶಾಯಿ ಪರಮಪುರುಷ ಶರಣು ಸುಖಕರ 4 ನಿಗಮವೇದ್ಯ ನಿರುಪಮಾತ್ಮ ಅಗಣಿತಗಣಿತಗಮ್ಯಚರಿತ ಸುಗುಣ ಶಾಂತಾಕಾರ ಮೂರು ಜಗದ ಪಾಲಯಾ 5 ಸಕಲವಿಘ್ನದೂರ ನಿನ್ನ ಭಕುತಿಯಿಂದ ಭಜಿಸಿಬೇಡ್ವೆ ಮುಕುತಿಸಂಪದ ನೀಡಿ ಸಲಹು ಭಕ್ತವತ್ಸಲ 6 ಕಂದಮಾಡಿದಪರಾಧಗಳ ತಂದೆ ದಯದಿ ಕ್ಷಮಿಸಿ ಬಂದ ಬಂಧಗಳನು ಪರಿಹರಿಸಯ್ಯ ಸಿಂಧುಮಂದಿರ 7 ನಾನಾಯೋನಿಯೊಳಗೆ ಪುಟ್ಟಿ ಜ್ಞಾನಗೆಟ್ಟು ಬಳಲುವಂಥ ಹೀನ ಬವಣೆ ತಪ್ಪಿಸಯ್ಯ ದೀನಪಾಲ 8 ನಿರುತ ನಿನ್ನ ಚರಣದೆಡೆಗೆ ಬರುವ ಸುಲಭಮಾರ್ಗ ಆವು ದ್ವರವ ಪಾಲಿಸೊಲಿದು ಎನಗೆ ಕರುಣಸಾಗರ 9 ದೋಷದಾರಿದ್ರ್ಯಗಳೆಲ್ಲ ನಾಶಗೈದು ಹರಿಯೆ ನಿಮ್ಮ ದಾಸನೆನಿಸುದ್ಧಾರಮಾಡು ದೋಷನಾಶನ 10 ಮರೆಯಬಿದ್ದ ತರಳನನ್ನು ಕರುಣದೃಷ್ಟಿಯಿಂದ ನೋಡಿ ಸರ್ವಭಯ ಪರಿಹಾರಮಾಡು ಹರಿಸರ್ವೋತ್ತಮ 11 ನಿನ್ನ ಒಲವು ಬಲವು ಎನಗೆ ಅನ್ಯಬಲವ ಒಲ್ಲೆಸ್ವಾಮಿ ಮನ್ನಿಸಬೇಕಿನ್ನು ಮಗನ ಸನ್ನುತಾಂಗನೆ 12 ನಂಬಿ ಭಜಿಪ ಬಕ್ತಜನರ ಇಂಬುದಾಯಕ ನೀನು ಇಂಬುಗೊಟ್ಟು ಸಲಹು ಎನ್ನ ಅಂಬುಜಾಕ್ಷನೆ 13 ಏನುತಪ್ಪು ಇರಲು ನೀನೆ ದಯದಿ ಕ್ಷಮಿಸಿ ಇನ್ನು ನಾನಾಬೇನೆ ಕಳೆದು ಕಾಯೊ ಜಾನಕೀಶನೆ 14 ಚಾರುವೇದ ಪೊಗಳುವಂಥಪಾರ ನಿನ್ನ ದಿವ್ಯಮೂರ್ತಿ ತೋರಿಧನ್ಯನೆನಿಸು ಎನ್ನ ನಾರಸಿಂಹನೆ 15 ಭಾರ ನಿನ್ನದಯ್ಯ ಬಂದ ಘೋರ ತಾಪತ್ರಯಂಗಳಿಂದ ಪಾರುಮಾಡಿ ಕಾಯುವುದು ಕಾರುಣ್ಯ ನಿಧೆ 16 ಪ್ರಾಣಹಾರಿ ಹೋಗಲು ನಿನ್ನ ಧ್ಯಾನವಗಲದಂತೆ ಎನಗೆ ತ್ರಾಣಪಾಲಿಸಯ್ಯ ಮೊದಲು ಧ್ಯಾನದಾಯಕ 17 ದಾಸನರಿಕೆ ದಯದಿ ಪೂರೈಸಿ ಕಾಯಬೇಕು ದೇವ ಘಾಸಿಗೈಯದೆ ರಕ್ಷಿಸಯ್ಯ ದಾಸಪ್ರಿಯನೆ 18 ಕೆಟ್ಟಶಕುನರಿಷ್ಟ ಸ್ವಪ್ನ ತಟ್ಟಬೇಕೆ ನಿನ್ನ ಪಾದ ನಿಷ್ಠೆಯಿಂದ ಭಜಿಪರ್ಗೆ ಸೃಷ್ಟಿಕರ್ತನೆ 19 ನಿತ್ಯ ನಿರ್ಮಲಾತ್ಮ ನಿನ್ನ ನಿತ್ಯಭಕ್ತಿ ಸುಖವನಿತ್ತು ಸತ್ಯಸಂಧನೆನಿಸು ಎನ್ನ ಸತ್ಯರಾಧಾರ 20 ಮರವೆ ತರಿದು ಹರಿಯೆ ನಿಮ್ಮ ಕರುಣ ನೀಡಿ ಮರಣ ಭಯವ ಪರಿಹರಿಸಯ್ಯ ಸಿರಿಯವಲ್ಲಭ 21 ಭಾನುಕೋಟಿಪ್ರಕಾಶ ನಿನ್ನ ಧ್ಯಾನಿಸಿ ಮರೆಹೊಕ್ಕೆ ನಾನಾಬೇನೆ ಗೆಲಿಸಿ ಕಾಯೊ ದಾನವಾಂತಕ 22
--------------
ರಾಮದಾಸರು