ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೂ ತೋಚದೋ ಮುಂದೇನು ಗತಿಯೋ ದೇವಾ ಅಪ್ರಮೇಯ ಸದಾ ಪ ನಾನು ನನ್ನದು ಎಂಬಭಿಮಾನದಿಂದನುದಿನ ಹೀನಕರ್ಮದ ಸುಳಿಯೊಳು ನಾ ನೊಂದು ನಿಂದೆನೊ ಅ.ಪ ಬೋಧೆ ಇಲ್ಲದೆ ನಾನು ಬಾಧೆಪಡುವೆ ಪೂರ್ಣ ಬೋಧರ ಮತತತ್ತ್ವ ಸಾಧಿಸಲಿಲ್ಲವೋ ಸಾಧುಸಜ್ಜನರೆಂದು ಆದರಿಸಲರಿಯೆನೋ ಆಧಾರನಾಗೋ ನಿರಾಧಾರನಾಗಿಹೆ ಬಾಧಿಪರೋ ಬಂಧುಗಳು ಪ್ರತಿದಿನ ನಿಂದಿಪರೋ ಮನಬಂದ ತೆರದಲಿ ಊರೊಳಿತರಜನ ಉದಯಾಸ್ತ ಪರಿಯಂತರದಿ ಎನಗೆ ಉದರದ ಯೋಚನೆ ಆದುದೀಪರಿ ಎನ್ನ ಜೀವನ ಇದಕೆ ಸಾಧನಮಾಡಿ ಮೋಹದ ಮುದದಿ ಮೈಮರೆದೆನನುದಿನ ಪದುಮನಾಭನೆ ಮೊರೆಯಿಡುವೆ ಮುಂದೇನು ಗತಿ ಪಥವಾವುದೋ ದೇವಾ 1 ಯುಕುತಿಯಿಂದಲಿ ಕರ್ಮಮಾಡಿ ಬೆಂಡಾದೆ ಭಕುತಿಮಾತ್ರವು ಏನ್ನೊಳಿನಿತಿಲ್ಲವೋ ಶಕುತಿಯುಕುತಿಗಳೊಳು ನೀನಿದ್ದು ನಡೆಸುವೆ ಭಕುತಿ ಕೊಡದಿರುವೆಯಾ ಮುಕುತರೊಡೆಯಾ ಮಾಕಳತ್ರನೆ ನಿನ್ನ ದಯವೊಂದನವರತ ಇರಲಿ ಅಕುಟಿಲಾಂತಃಕರಣ ಭಕ್ತರ ಸಂಗವೆನಗಿರಲಿ ನಿಖಿಲಗುಣಗಣಪೂರ್ಣ ನಿನ್ನಯ ಸ್ಮರಣೆಯೊಂದಿರಲಿ ಸಾಕು ಇದಕಾನೇನು ಮಾಡಲಿ ವಾಕುಮನಸಿಗೆ ಸಿ- ಲುಕದವ ನಿನ್ನ ಕಾಕುಮನುಜ ನಾನೆಂತು ತಿಳಿಯಲಿ ನೀ ಕರುಣಿಸದಲಿರೆ ಇನ್ನು ಅವಿ- ವೇಕಿ ನಾನಿನ್ನೆಂತುಗೈಯಲಿ 2 ನರಜನುಮದಿ ಬಂದು ಬರಿದೆ ಆಯುವ ಕಳೆದೆ ಹರಿಯೆ ನಿನ್ನಯ ಕರುಣ ದೊರೆಯಲಿಲ್ಲಾ ಕರೆಕರೆಪಡುತಲಿ ಜರೆಯೊಳಾಡುತಿಹೆ ದುರಿತ ಹರೇ ದಾರಿ ಎನಗೇನಿಹುದೋ ಇನ್ನು ಮುಂದೆ ಕ್ಲೇಶ ಕೊಡದಲೆ ಪಾರುಗಾಣಿಸೋ ತಂದೆ ಶರಣಜನರಿಗನವರತ ಸುರಧೇನು ನೀನೆಂದೇ ಅರಿಯದವ ನಾ ನೀ ಪೊರೆಯಲರಿದೇ ಕರುಣಾಶರಧಿಯೇ ನಿನ್ನ ಕೃಪೆಯೊಂದಿರಲು ಉರುತರ ಸಾಧನವು ಅದು ತರವರಿತು ಧೃಢಭಕ್ತಿ ಪಾಲಿಸೊ ಉರಗಗಿರಿ ಶ್ರೀ ವೇಂಕಟೇಶನೆ3
--------------
ಉರಗಾದ್ರಿವಾಸವಿಠಲದಾಸರು
ನಾರಾಯಣ ನರಹರಿ ಪರಮಾತ್ಮ ನೀ ಪಾಲಿಸೋ ಪ ಆರು ಮೂರಾರೊಳೆನ್ನ ಬಿಡಿಸೊ ಪಾರುಗಾಣಿಸೋ ಮುನ್ನಾ ಪರ ತೋರೋ ನಿಜ ನರಹರಿ 1 ಬಾಲಪ್ರಹ್ಲಾದನಾರ್ತನಾಗಿ ಶ್ರೀಲೋಲನೆಂದು ಕರೆಯೆ ಕಂಬದಿ ಬೇಗಾ ನೀಲಮೇಘಶ್ಯಾಮನೆನಿಸಿದ ನರಹರಿ 2 ಧರಣಿಗಧಿಪ ಮದ್ಗುರುವು ತುಲಸೀರಾಮದಾಸನೆನ್ನುತ ಬಂದೆ [ವರದ] ಪಾರಾ ಮಹಿಮ ಪರಾತ್ಪರ ನರಹರಿ 3
--------------
ಚನ್ನಪಟ್ಟಣದ ಅಹೋಬಲದಾಸರು
ಪಂಚರೂಪಾತ್ಮಕ ನೀನೇ ಈ ಪಾಂಚಭೌತಿಕ ದೇಹದಿ ಸಂಚರಿಸೂವೆ ಪ ಸ್ಥೂಲರಸವನು ಇತ್ತು ಸಲಹೂವೆ ಅ.ಪ ರಸಪಾಯುಆಪಜಿಹೆÀ್ವನಾಸಿಕ ಗಂಧ ಪೃಥುವಿ ಉಪಸ್ಥಯುಕ್ತ ಕೋಶವಹುದಯ್ಯ ಆ ಶನೈಶ್ವರ ವರುಣ ಭೂದೇವಿಯಿಂದಲಿ ಸೇವಿಪ ಸತತ ಲೇಶವಾದರು ಬಿಡದೆ ತಾ ಖಂಡಾಖಂಡ ರೂಪದಿ ದೇಶ ಕಾಲಗಳಲ್ಲಿ ನೆಲೆಸಿ ಕೋಶಕಾರ್ಯವ ಗೈವೆ ಪ್ರಾಣನಿಂ ಉಭಯಪಕ್ಷಗಳು ಧೇನಿಸುತಿಹರು ಭುಜದ್ವಯ ಶ್ರೀಶ ನಿನ್ನಯ ಮಧ್ಯದೇಶವೆ ಈ ಶರೀರದÀ ಮಧ್ಯಭಾಗವು ಪ್ರಸಿದ್ಧ ಪುರುಷನೆ ನಿನ್ನಿಂದೋಷಧಿಗಳು ಓಷಧಿಗಳಿಂದನ್ನವೆಲ್ಲವು ಪೋಷಣೆ ಎಲ್ಲ ಅನ್ನದಿಂದಲೆ ದೋಷದೂರ ನೀನನ್ನದನ್ನದಾ1 ಪಾಣಿತ್ವಗ್ವಾಯು ಸ್ಪರ್ಶ ನೇತ್ರ ತೇಜ ಪಾದರೂಪಗಳಿಂದಲಿ ಕಾಣಿಸಿಕೊಳ್ಳುವುದು ಪ್ರಾಣಮಯದ ಕೋಶವು ತಾನಲ್ಲಿಹ ಪ್ರದ್ಯುಮ್ನ ಮೂರುತಿ ಸತತ-ಗಣಪತಿ ಅಗ್ನಿ ವಾಯು ಮರೀಚಿಗಳೆಲ್ಲರೂ ಸನ್ನುತಿಪರೋ ಪ್ರಾಣಾಧಾರನಾಗಿಹೆ ತ್ರಾಣ ನಿನ್ನಿಂದ ಸ್ಥೂಲದೇಹಕೆ ಅ- ಪಾನ ನಿಂದೊಡಗೂಡಿ ನೆಲೆಸಿಹೆ ಪ್ರಾಣಪತಿ ಪ್ರದ್ಯುಮ್ನ ನಿನ್ನಯ ಶಿರದ ಸ್ಥಾನವು ಪ್ರಾಣನಲ್ಲಿಹುದೋ ದಕ್ಷಿಣೋತ್ತರಪಕ್ಷವಿರುತಿಹುದೋ ಕಾಣಿಪುದು ಮಧ್ಯದೇಶವು ಆಗಸದೊಳು ಉ- ದಾನ ವಾಯುವಿನಲ್ಲಿ ಇರುತಿಹುದೋ ಧೇನಿಪೋರು ಪೃಥುವಿಯು ಪಾದವೆಂಬುದು ಸ- ಮಾನ ವಾಯುವಿನಲಿ ಇರುತಿಹುದು ಜ್ಞಾನ ರೂಪದಿ ಈ ಪರಿಯಲಿ ರೂಪವಿರುತಿಹುದು ಪ್ರಾಣಿಗಳಿಗಾಯುಷ್ಯವಿತ್ತು ಪ್ರಾಣಪ್ರೇರಕನಾಗಿ ಪೊರೆಯುವೆ ಪ್ರಾಣಧಾರಣೆ ನಿನ್ನದಯ್ಯಾ ಪ್ರಾಣನುತ ಪ್ರದ್ಯುಮ್ನಮೂರುತೆ2 ತತ್ವಯುತವಾಕ್ಯೋಕ್ತಾಗಸ ಶಬ್ದ ಈತೆರ ಯುಕ್ತವಾದೀ ಕೋಶವು ಇದಕೆ ಖ್ಯಾತವಾದ ಮನೋಮಯ ಕೋಶದೊಳು ಸತತ ರುದ್ರೇಂದ್ರಾದಿ ಸುರರೆಲ್ಲರು ವಂದಿಸುತಿಹರು ಖ್ಯಾತ ಸಂಕÀರುಷಣನೆ ಖಂಡಾಖಂಡರೂಪದಿ ನೆಲೆಸಿ ಕೋಶದಿ ಪ್ರೀತಿಯಿಂದಲಿ ವ್ಯಾನನೊಡಗೂಡಿ ನೀನೆ ಯಜ್ಞಭುಕುವು ಯಜುರ್ವೇದವೆ ನಿನ್ನ ಶಿರವಹುದು ಶ್ರುತಿಗಳೊಳು ಭುಜದ್ವಯಂಗಳಾಗಿಹುದು ನುತಿಪ ಪಾಂಚರಾತ್ರಾಗಮ ವೆಂಬುದೆ ನಾಮಕಂಗಳೆನಿಪುದೆ ನಿನ್ನ ಪಾದದ್ವಯಂಗಳು ಖ್ಯಾತ ನಿನ್ನಯ ರೂಪ ಮಹಿಮೆಯ ತಿಳಿಯಲಸದಳವೋ ಜಾತರಹಿತ ನಿನ್ನ ವರ್ಣಿಸೆ ಮಾತು ಮನಸಿಗೆ ನಿಲುಕದಂತಿಹೆ ಖ್ಯಾತ ನೀನಹುದೊ ಮನೋಮಯ ಪ್ರೀತಿಯಿಂದಲಿ ಸಲಹೋ ಎನ್ನನು 3 ಮಹತ್ತತ್ವ ಪ್ರಾಚುರ್ಯದಿಂದಿಹ ಈ ವಿಜ್ಞಾನಮಯಕೋಶದಿ ಶ್ರೀಹರಿ ವಾಸುದೇವಾ ನೀನೆ ನೆಲೆಸಿಹೆ ಅಹರಹ ಬ್ರಹ್ಮ ವಾಯುಗಳಿಂದಲಿ ಮಹಾಪೂಜೆ ವಂದನೆಗೊಳುತಿಹೆ- ಖಂಡಾಖಂಡದಿ ತುಂಬಿಹೆ ದೇಹದೊಳು ಉದಾನನಿಂದೊಡಗೂಡಿ ಸಹಾಯನಾಗಿಹೆ ಜೀವಿಗಳಿಗೆ ಬಾಹ ದುರಿತದಿಂ ಪಾರುಗಾಣಿಸೋ ದೇಹ ದೇಹಿಯ ರೂಪ ನೀ ಸ್ವಗತಭೇದವಿವರ್ಜಿತನೆ ಶಿರವೆ ನಿನ್ನಯ ಶ್ರದ್ಧವೆಂಬೊರು ಮಹಾ ಭುಜಂಗಳೆ ಋತುಸತ್ ಎಂದೆನಿಸಿಕೊಳುತಿಹುದು ಇಹುದು ಮಧ್ಯದೇಶವೆ ಜಗಕೆ ಆಶ್ರಯವೆನಿಪ ಯೋಗಾವು ಮಹವೆಂಬುದೆ ಪಾದವೆನಿಸಿತು ಸೂರ್ಯತೇಜದೊಳು ಮಹಾ ಪ್ರಳಯದಿ ಉದರದೊಳಿಟ್ಟು ಇಹಪರದಿ ರಕ್ಷಿಸುವೆ ದೇವ4 ನಂದಮಯ ಕೋಶವು ತನ್ಮಯ ಅವ್ಯಕ್ತತತ್ವದಿಂದಲಿ ನನ್ನೀಯಿಂದ ಆನಂದಮಯ ಮೂರುತಿ ನಾರಾಯಣನೀ ಕೋಶಾಂತರ್ಗತನು ನೀನೆ ಸಮಾನನೊಡಗೂಡಿಹೆ ಅನಾದಿಲಿಂಗವ ಭಂಗಗೈಸುವಳೋ ಘನಮಹಿಮ ನಿನ್ನ ಅನುಸರಿಸಿ ತಾನಿಪ್ಪಳೋ ಛಿನ್ನ ಭಕ್ತರಿಗೊಲಿಯಳೋ ಅವಿ ಚ್ಛಿನ್ನ ಭಕ್ತರ ಜನನಿ ಎನಿಪಳೋ ಪ್ರಾಪ್ಯನು ಎಂದು ಪ್ರಿಯವೆಂದು ಘನ ದಕ್ಷಿಣೋತ್ತರ ಪಕ್ಷವೆನಿಪೋವು ತನ್ನ ಮಧ್ಯದ ಪ್ರದೇಶವೆಂಬೋದು ಜ್ಞಾನ ಸುಖ ಆನಂದ ಪಾದಗಳು ಬ್ರಹ್ಮನಾಮಕ ವಾಯುವೆಂಬುವರೋ ಆನಂದಮೂರುತಿ ಮಹಿಮೆ ಎಂತಿಹುದೋ ಭಿನ್ನನಾಮದಿ ಕರೆಸುತಲಿ ತಾ ಅ ಭಿನ್ನನಾಗಿ ಚರಿಸಿ ಕೋಶದಿ ಘನಕಾರ್ಯವ ನಡೆಸುತಿರ್ಪೆ ಪನ್ನಗಾದ್ರಿ ಶ್ರೀ ವೇಂಕಟೇಶನೆ 5
--------------
ಉರಗಾದ್ರಿವಾಸವಿಠಲದಾಸರು
ಲಕ್ಷ್ಮೀರಮಣನೆ ರಕ್ಷಿಸೆನ್ನನು ಅಧೋಕ್ಷಜ ಹರಿ ಪ ಮಂದ ಬಿಡಿಸಿ ಸಲಹೋ ದೇವ ಇಂದು ಮುಂದು ಎನಗೆ ನೀ ಗತಿ ಎಂದು ನಂಬಿದೆ ಮಂದರಧರ ಗೋವಿಂದ ಮುಕುಂದ1 ಗರುಡಗಮನ ವಾಸುದೇವ ನಿರುತ ನಿನ್ನ ಭಜಿಪ ಭಕ್ತರ ಸ್ಮರಣೆ ಪಾಲಿಸೊ ಪರಮಪುರುಷ ಹರಿ ಶರಧಿಶಯನ2 ದೇಶದೇಶ ತಿರುಗಿ ಬಹಳ ಬೇಸರದಲೆ ಬಳಲಿದವರ ಕ್ಲೇಶಗಳನೆ ಕಳೆದು ಪರಮೋಲ್ಲಾಸ ನೀಡಿದ ಸಾಸಿರನಾಮದ ಒಡೆಯನೆ ವೆಂಕಟ 3 ಕ್ಷೀರವಾರಿಧಿ ಶಯನದೇವ ಮಾರಪಿತ ಮಹಾನುಭಾವ ಶರಧಿ ಪಾರುಗಾಣಿಸೋ ಪರಿಸರ ನೊಡೆಯನÉ ಉರಗಶಯನ 4 ಶಂಖು ಚಕ್ರಧಾರಿ ಶ್ರೀಹರಿ ಪಂಕಜಾಕ್ಷರೊಳು ವಿಹಾರಿ ಶೌರಿ ಶಂಕರಾನುತ ಪಂಕಜಲೋಚನ ವೆಂಕಟರಮಣ 5 ಕಪಟ ಸೂತ್ರಧಾರಿ ಚಪಲ ಬುದ್ಧಿಯ ಬಿಡಿಸೊ ಶೌರೀ ಅಪರಿಮಿತ ಮಹಿಮೆಗಳ ತೋರಿ ನಟಿಸಿ ಮೆರೆವ ಸಟೆಯಲ್ಲವೊ ನಾರದ ಮುನಿ ಸೇವಿತ 6 ಕಮಲಾಪತೆ ಪ್ರಿಯ ಜೀಯ ಕಮಲಸಂಭವ ಜನಕದೇವ ಕಮಲನಾಭ ವಿಠ್ಠಲ ಕಾಯೋ ಶ್ರಮವ ಹರಿಸೊಸುಮನಸರೊಡೆಯನೆ ಸುರಮುನಿ ಸೇವಿತ 7
--------------
ನಿಡಗುರುಕಿ ಜೀವೂಬಾಯಿ