ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊ. ಆತ್ಮನಿವೇದನೆ ಇಂದು ನಿನಗಿಷ್ಟ ವಂದಿಸಿ ಬಾಯ್ತೆರದು ಬೇಡಿದೆ ಪ ಮುಂದೆ ನೀ ಮನ ಬಂದಂತ್ಯದ ಮಾಳ್ಪುದು ಕಂದು ಕಂಠನ ಪದ ತೀವ್ರಗಮನ ಬಾಲಾ ಅ.ಪ. ಆರು ಅರಿಯದೆ ಇದು ಒಂದು ಬಾರಿ ಸೇವೆಮಾಡಲು ನಿನ್ನ ಘೋರ ದಾರಿಯಲಿಂದ ಪಾರುಗಾಣಿಸುವಾ 1 ಹಿಂದೆ ಪೇಳಿದನು ಕಳುಹಿ ಪೂರ್ಣಾನಂದ ಪಡಿಸೊ ಇಂದುಧರ ಪಿತನಾಣೆ ಸುಖ ಸಿಂಧುವಿನೊಳಗಿಟ್ಟು ಪೊರೆವಾ 2 ಪುಸಿಯಲ್ಲ ಪುಶಿಯಲ್ಲ ಈಶನಾಣೆ ಮಧ್ವದಾಸನೆ ಕೇಳು ತಂದೆವರದಗೋಪಾಲವಿಠಲನಾಣೆ 3
--------------
ತಂದೆವರದಗೋಪಾಲವಿಠಲರು
ನಾರದ ಪ್ರಿಯ ಕೃಷ್ಣ ನರಾಕಾರ ಜಾರ ಚೋರ ಶೂರ ಧೀರಪ ಘೋರತರವಾದ ಸಂಸಾರ ಸುಖ ದುಃಖಗಳ ಮೀರಿ ಪೊರೆವಂಥ ಬಲು ಭಾರಕರ್ತನೇ ಸೂರಿ ಜನರನು ಸದಾ ಸಾರಸಾಕ್ಷ ಬಿಡದಲೆ ಪಾರುಗಾಣಿಸುವ ದೇವಾ 1 ಮಂದಮತಿಯನಳಿದು ಚಂದದಿ ಸುಮಾರ್ಗವನ್ನು ನಂದದಿಂದ ತೋರ್ಪ ಮುಚುಕುಂದ ವಂದ್ಯನೆ ಎಂದಿಗೆಮ್ಮ ಗತಿಯೆಂದು ಹೊಂದಿ ಬೇಡ್ವ ಭಕುತರ ವÀಂದಿಸುವರ ಭವಬಂಧನ ಬಿಡಿಸುವ ದೇವಾ2 ದಾಶರಥೆ ಎನ್ನ ಕ್ಷೇಶ ನಾಶ ಮಾಡು ದಯದಿ ದಿ ನೇಶ ಶತಕೋಟಿ ಭಾಸ ಸಂಕಾಶ ಶ್ರೀಶ ವಾಸುದೇವ 3
--------------
ಜಗನ್ನಾಥದಾಸರು
ಲಕ್ಷ್ಮೀ ದೇವಿ ಕಾದಿರುವಳು ರುಕ್ಮಿಣಿ ಕೃಷ್ಣ ಬರುವನೆಂದು ಪ. ಕರವ ಪಿಡಿವನೆಂದು ಅ.ಪ. ವಿಪ್ರನ್ನ ಕಳುಹಿರುವೆನು ಕ್ಷಿಪ್ರದೊಳು ಗುಡಿಯೊಳಿಹೆನು ಅಪ್ರಮೇಯ ನಿನ್ನಡಿಗಳನ್ನು ಸುಪ್ರಕಾಶ ನಂಬಿರುವೆನೆಂದು 1 ಶಿಶುಪಾಲನೊಲ್ಲೆನೆಂದು ವಸುಧೀಶ ನೀನೆ ಗತಿಯೆಂದು ಹಸುಳೇಯ ಸಲಹು ಎಂದು ಬೆಸಸಿಹೆನು ಪತ್ರವೆಂದು 2 ರಥವೇರಿ ಬರುತಲಿಹನೊ ಪಥದೊಳು ಕಾದಿರುವನೊ ರತಿಪತೀ ಪಿತನ ಪದವ ಅತಿಶಯದಲಿ ಕಾಣುವ ತವಕದಿ 3 ಶಂಕಾತುರಂಗಳಿಂದ ಶಂಕರೀಯಪೂಜೆಗೈದು ಕಿಂಕಿಣಿಯ ನಾದದಿಂದ ಶಂಕರಾದಿವಂದ್ಯ ಬರುವ ಪಥದಿ ಬಂದು 4 ಬಂದಾನೋ ಬಾರನೋ ಎನುತಾ ಇಂದಿರೆಯ ಅರಸನ್ಹೊರತು ಪೊಂದಲಾರೆನನ್ಯರನೆನುತ ಸುಂದರೀಮಣಿ ಕೃಷ್ಣನಾಗಮ ನೋಡುತ 5 ದ್ವಾರಕಿಯಾ ನಾಥ ಬಂದು ಪಾರುಗಾಣಿಸುವನೆಂದು ಚಾರುಕರದೊಳೆತ್ತಿ ಎನ್ನ ದ್ವಾರಕೆಗೊಯ್ವ ಶ್ರೀ ಶ್ರೀನಿವಾಸನೆಂದು 6
--------------
ಸರಸ್ವತಿ ಬಾಯಿ
ಶ್ರೀ ವೆಂಕಟೇಶ ಎನ್ನ ಸಲಹಲ್ಯಾಕೆ ಬಳಲುವೆ ಪ ದುರಿತ ಪರಿಹರಿಸೊ ಬಂದು ತಾಪವನ್ನು ಬಿಡಿಸೊ ಮಂದ ಬುದ್ದಿಯನ್ನೆ ಕೆಡಿಸೊ ಮದನನಯ್ಯ ಮಮತೆ - ಇಂದು ಎನ್ನ ಮಾತ ಲಾಲಿಸೊ ತಂದೆ ಕುಂದು ಎಣಿಸದೆನ್ನ ಪಾಲಿಸೊ 1 ನಕ್ರನ ಬಾಧೆಯೊಳಗೆ ಸಿಳುಕಿ ಗಜವು ನರಳುತಿರಲು ತ್ರಿ- ವಿಕ್ರಮನೆ ಸಲಹೊಯೆಂದು ಕರೆಯಲಾಗ ನಕ್ರನ ಚಕ್ರದಿಂದ ಹೊಡೆದು ಕೆಡಹಿದೆ ಆ ಗಜಕೆ ಬಂದ ವಕ್ರವನ್ನು ಬಿಡಿಸಿ ಸಲಹಿದೆ ಎನ್ನ ಮನದ ವಕ್ರವನ್ನು ಬಿಡಿಸಲಾಗದೆ 2 ತರಳ ಧ್ರುವನು ತನ್ನ ಪಿತನ ತೊಡೆಯ ಮ್ಯಾಲೆ ಬಂದು ಕುಳ್ಳಿರೆ ತರವೆ ನಿನಗೆ ಎಂದು ಸುರುಚಿ ತವಕದಿಂದ ಎಳೆಯಲವನ ಸ್ಥಿರಪದವಿಯಿತ್ತೆ ಕರುಣದಿ ನಾನು ನಿನ್ನ ಸ್ಮರಣೆಗೈವೆದಿವ್ಯನಾಮವ 3 ಆರು ಸಲಹುವರು ಎನ್ನ ಪಾರುಗಾಣಿಸುವರ ಕಾಣೆ ಸೇರಿದೆನೊ ಶೇಷಶಯನ ಶ್ರೀನಿವಾಸ ಎನ್ನನು ಸೇರಿತಲ್ಲವೆ ಬೇರೆ ವಿಚಾರವಿಲ್ಲದೆ ನಿನ್ನ ನಂಬಿದೆ 4 ದುಷ್ಟ ದನುಜರನ್ನು ಮುರಿದು ಧಾರುಣಿಯೊಳು ಇರುವೆ ಎನ್ನ ಕಷ್ಟವ ಬಿಡಿಸಿ ಕಾಯೊ ಕಮಲನಾಭ ಹೆಳವನ ಕಟ್ಟೆವಾಸ ವೆಂಕಟೇಶನೆ ಸಕಲ ಭಾರ ಸುಜನಪಾಲನೆ 5
--------------
ಹೆಳವನಕಟ್ಟೆ ಗಿರಿಯಮ್ಮ