ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪವಮಾನ ಜಗದ ಪ್ರಾಣ ಸಂಕರುಷಣ ಭವನೇ ಭಯಾರಣ್ಯದಹನ ಪ ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರೀಯ ಅ.ಪ. ಹೇಮ ಕಚ್ಚುಟ ಉಪವೀತ-ಧರಿಪ ಮಾರುತ ಕಾಮಾದಿ ವರ್ಗರಹಿತ ವ್ಯೋಮಾದಿ ಸರ್ವವ್ಯಾಪುತ-ಸತತ ನಿರ್ಭೀತ ರಾಮಚಂದ್ರನ ನಿಜದೂತ ಯಾಮ ಯಾಮಕೆ ನಿನ್ನರಾಧಿಪುದಕೆ ಕಾಮಿಪೆ ಎನಗಿದ ನೇಮಿಸಿ ಪ್ರತಿದಿನ ಪಾಮರ ಮತಿಯನು ನೀ ಮಾಣಿಪುದು 1 ವಜ್ರ ಶರೀರ ಗಂಭೀರ-ಮಕುಟಧರ ದುರ್ಜನವನ ಕುಠಾರ ನಿರ್ಜರಮಣಿ ದಯಾ ಪಾರಾ-ವಾರ ಉದಾರ ಸಜ್ಜನರಘ ಪರಿಹಾರ ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗವರಿವಂತೆ ಗರ್ಜನೆಮಾಡಿದೆ ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜಪಾದದ ಧೂಳಿ- ಮೂರ್ಜನದಲಿ ಭವವರ್ಜಿತನೆನಿಸೊ 2 ಪ್ರಾಣ ಅಪಾನ ಉದಾನ-ವ್ಯಾನ ಸಮಾನ ಆನಂದ ಭಾರತೀರಮಣ ನೀನೆ ಯಾಮ ಯಾಮಕೆ ಜ್ಞಾನ ಧನಪಾಲಿಪ ವರೇಣ್ಯ ನಾನು ನಿರುತದಲಿ ಏನೇನನೆಸಗಿದೆ ಕರ್ಮ ನಿನಗೊಪ್ಪಿಸಿದೆನೊ ಪ್ರಾಣನಾಥ ಸತ್ಯ ವಿಜಯವಿಠ್ಠಲನಕಾಣಿಸಿ ಕೊಡುವುದು ಭಾನು ಪ್ರಕಾಶ 3
--------------
ವಿಜಯದಾಸ
(ಮೂಲ್ಕಿಯ ನರಸಿಂಹದೇವರು)ಜಯತು ಜಯತು ನೃಹರಿ ಬ್ರಹ್ಮಾದಿನಿರ್ಜರಜಯತು ಜಾತಕೈವಾರಿ ಪ.ಜಯ ನಮೋ ಜಗದಾದಿಮಾಯಾಶ್ರಯ ಚರಿತ್ರ ಪವಿತ್ರ ವಿಗತಾ-ಮಯ ಸದಾನಂದೈಕನಿಧಿ ಚಿ-ನ್ಮಯ ದಯಾರ್ಣವ ಭಯನಿವಾರಣ ಅ.ಪ.ಸುಕುಮಾರ ಪ್ರಹ್ಲಾದನ ಬಾಧಿಸೆ ಭಯಾ-ನಕರೂಪತಾಳ್ದಾಕ್ಷಣಸಕಲ ಲೋಕಾಲೋಕಭೀಷಣಪ್ರಕಟನಖಮುಖ ಕ್ರೋಧವಾಹಿನಿಪ್ರಖರ ಜ್ವಾಲಾಮಾಲ ಬದ್ಧ-ಭ್ರಕುಟಿ ಲಾಲಿತ ಭಕುತ ವತ್ಸಲ 1ಪಾರಮೇಷ್ಠಿ ರುದ್ರರೇ ಮುಖ್ಯಸ್ಥ ವೃಂ-ದಾರಕಋಷಿವರರೇವೀರಭದ್ರ ಸುಭದ್ರ ನಂದಿ ಪ್ರ-ವೀರ ಭೈರವ ಭೃಂಗಿ ಮುಖ್ಯರುಶ್ರೀರಮಣ ಕುರು ಕರುಣ ಪಾರಾ-ವಾರಸಮ ಗಂಭೀರನೆಂಬರು 2ಶಾಂತವಾಗದು ಕ್ರೋಧ ಮಾಡಿದುದಾ-ನಂತ ಸಂಕ್ಯಾಪರಾಧಾಎಂತು ನಿರ್ವೃತಿ ಎಂದು ಚಿಂತಾ-ಕ್ರಾಂತರಾಗಿ ಪಿತಾಮಹಾದ್ಯರುಕಂತುಜನನಿಯ ಬೇಡಿಕೊಳಲ-ತ್ಯಂತ ಹರುಷವನಾಂತು ಬಂದಳು 3ಪಟ್ಟದರಸನರೂಪ ಕಾಣುತ ಭಯ-ಪಟ್ಟಳಪೂರ್ವಕೋಪಶ್ರೇಷ್ಠಭಕ್ತಶಿಖಾಮಣಿಯ ಮುಂ-ದಿಟ್ಟೆರಗಿ ಸಂಸ್ತುತಿಸೆ ದನುಜಘ-ರಟ್ಟ ಹೃದಯನಿವಿಷ್ಟ ಕರುಣಾ-ದೃಷ್ಟಿಯಿಂದ ಸಂತುಷ್ಟಗೊಳಿಸಿದ 4ಶ್ರೀ ಲಕ್ಷ್ಮೀನಾರಾಯಣ ದೈತ್ಯೇಂದ್ರ ಹೃ-ಚ್ಛೂಲ ಅಖಿಲ ಕಾರಣಕಾಲಕಾಲಾಂತಕ ತಮಾಲ ಸು-ನೀಲನಿಭ ನಿತ್ಯಾತ್ಮ ಸುರಮುನಿಜಾಲಪಾಲ ವಿಶಾಲ ಗುಣನಿಧಿಮೂಲಿಕಾಲಯಲೋಲ ನರಹರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ನಂಬಿದೆನು ಜಗದಂಬೆ ನಿನ್ನನು ಪಾಲಿಸು ಸರ್ವಾ-ರಂಭಸೂತ್ರಳೆ ಇಂಬುದೋರಿನ್ನು ಪ.ಅಂಬುಜಾಂಬಕಿ ಶುಂಭಮರ್ದಿನಿಕಂಬುಗ್ರೀವೆಹೇರಂಬಜನನಿಶೋ-ಣಾಂಬರಾವೃತೆ ಶಂಭುಪ್ರಿಯೆ ದಯಾ-ಲಂಬೆ ಸುರನಿಕುರುಂಬಸನ್ನುತೆ ಅ.ಪ.ಕ್ರೂರದೈತ್ಯವಿದಾರೆ ಮಹದಾಕಾರೆ ಮಂಗಲೇ ವಿಶ್ವಾ-ಧಾರೆ ಕಲ್ಮಷದೂರೆ ಕದನಕಠೋರೆ ನಿಶ್ಚಲೆ ಪಾರಾ-ವಾರ ಸಮಗಂಭೀರೆ ಸುಗುಣವಿಹಾರೆ ನಿರ್ಮಲೆ ರತಿಶೃಂ-ಗಾರೆ ರಿಪುಸಂಹಾರೆ ತುಂಬುರುನಾರದಾದಿಮುನೀಂದ್ರ ನುತಚರ-ಣಾರವಿಂದೆ ಮಯೂರಗಾಮಿನಿಸೂರಿಜನ ಸುಮನೋರಥಪ್ರದೆ 1ಮೂಲರೂಪೆ ದಯಾಲವಾಲೆವಿಶಾಲಸುಗುಣಯುತೆ ಮುನಿಜನ-ಲೋಲತರುಣಮರಾಳೆ ಸಚ್ಚರಿತೆ ನವಮಣಿಮಾಲೆ ಮನ್ಮಥಲೀಲೆ ರಿಪುಶಿರಶೂಲೆ ಸಚ್ಚರಿತೆ ಹಿಮಗಿರಿ-ಬಾಲೆ ನೀಲತಮಾಲವರ್ಣೆ ಕ-ರಾಳಸುರಗಿ ಕಪಾಲಧರೆ ಸುಜ-ನಾಳಿಪಾಲನಶೀಲೆ ಹಿಮಕರಮೌಳಿಶೋಭಿತೆ ಕಾಳಿಕಾಂಬಿಕೆÉ 2ಶೋಕಮೋಹಾನಾನೀಕದೂರೆ ಪಿನಾಕಿಸುಪ್ರೀತೆ ಕೋಟಿ ದಿ-ವಾಕರಾಭೆಪರಾಕುಶರಣಜನೈಕಹಿತದಾತೆ ಸುರನರ-ಲೋಕಮಾತೆ ನಿರಾಕುಲಿತೆ ಸುವಿವೇಕಗುಣವ್ರಾತೆ ಮಾನಸ-ವಾಕುಕಾಯದಿಂದ ಗೈದಾನೇಕ ದುರಿತವ ದೂರಗೈದು ರ-ಮಾಳಕಳತ್ರನ ಪಾದಭಕುತಿಯ ನೀ ಕರುಣಿಸು ಕೃಪಾಕರೇಶ್ವರಿ3ಈಶೆ ಪಾಪವಿನಾಶೆ ಮಣಿಗಣಭೂರಿಪ್ರದೆ ಶಕ್ತಿವಿ-ಲಾಸೆ ವಿಗತವಿಶೇಷೆ ಕೃತಜಯಘೋಷೆ ಸರ್ವವಿದೆ ಮನ್ಮನ-ದಾಸೆಗಳ ಪೂರೈಸು ಸಜನರ ಪೋಷೆ ಕುಂದರದೆ ಶಂಕರೋ-ಲ್ಲಾಸೆ ಯೋಗೀಶಾಶಯಸ್ಥಿತೆವಾಸವಾರ್ಚಿತೆ ಶ್ರೀಸರಸ್ವತಿದೋಷರಹಿತೆ ಮಹೇಶೆ ಸುಗುಣರಾಶಿ ಸುರತತಿದಾಸಜನಯುತೆ 4ಸಾಮಗಾನಪ್ರೇಮೆ ರಾಕ್ಷಸ ಭೀಮೆ ರುದ್ರಾಣಿ ಅರಳ-ಗ್ರಾಮದೇವತೆ ಕ್ಷೇಮದಾಯಿನಿ ತಾಮರಸಪಾಣಿ ಪಶುಪತಿ-ವಾಮಭಾಗಲಲಾಮೆ ಮಂಗಲಧಾಮೆ ಫಣಿವೇಣಿ ಜಯಜಯಶ್ರೀಮಹಾಲಕ್ಷ್ಮಿ ನಾರಾಯಣಿರಾಮನಾಮಾಸಕ್ತೆ ಕವಿಜನ-ಸ್ತೋಮಕೃತ ಪರಿಣಾಮೆ ಭೌಮೆ ಪುಲೋಮಜಾರ್ಚಿತೆಸೋಮಶೇಖರಿ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ