ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನಗಿನ್ನ ನಾನಧಿಕ ಇಂದಿರೇಶಾ ಎನಗೆ ನಾಥನು ಉಂಟು ಅನಾಥನು ನೀನು ಪ ಕುಲಗೋತ್ರ ನಿನಗಿಲ್ಲ ಕುಲಗೋತ್ರ ಎನಗುಂಟು ಲಲಿತರೂಪನು ನಾನು ಅರೂಪ ನೀನೂ ಚೆಲುವ ಸುಗುಣಿಯು ನಾನು ಅಗುಣರೂಪನು ನೀನು ಬಲಹೀನನು ನೀನು ಸಬಲ ನಾನು ದೇವಾ 1 ನಾಮಧೇಯನು ನಾ ಅನಾಮಧೇಯನು ನೀನು ಕಾಮಕಾಮುಕ ನಾ ಅಕಾಮಿ ನೀನು ಪಾರನು ನಾ ಅಪಾರನು ನೀನಯ್ಯಾ ನೇಮಬದ್ಧನು ನಾ ಅನೇಮಿ ನೀನು 2 ಗತಿಯು ನೀನೆಗೈಯ್ಯ ಸದ್ಗತಿಯು ನಿನಗಾರಯ್ಯ ವ್ರತನೇಮ ಎನಗುಂಟು ನಿನಗಾವುವೋ ಸತತಮಾನಿಯು ನಾನು ಅಮಾನಿ ನೀನಯ್ಯ ವಿತತಕರ್ಮಿಯು ನಾನು ಕರ್ಮಹೀನನು ನೀನು 3 ಪತಿತಪಾತಕಿ ನಾನು ಪತಿತಪಾವನನು ನೀನು ರತಿಬದ್ಧನು ನಾ ವಿರತಿಯು ನೀನು ಶ್ರೀತಜನರಪಾಲ ಆಶ್ರಿತ ನಾನು ನಿನಗೈಯ್ಯ ಸತತಪಾಲಕ ನೀನು ಪಾಲ್ಯ ನಾನು 4 ದೂತರಾಧಮ ನಾನು ದೂತವತ್ಸಲ ನೀನು ಆತುರನು ನಾನು ನಿಜದಾತ ನೀನು ನೀತ ಗುರುಜಗನ್ನಾಥವಿಠಲರೇಯ ತಾತ ನೀ ಎನಗಯ್ಯ ನಿನಗಾವ ತಾತಾ 5
--------------
ಗುರುಜಗನ್ನಾಥದಾಸರು
ಮುತ್ತಿ ಎನಗೆ ಬಡಿತವ್ವ ಹರಿ ಭಕ್ತರ ಮನಿಯನ ದೆವ್ವ ಪ ಅತ್ತಿತ್ತಮಾಡಿ ಬೆನ್ನ್ಹತ್ತಿ ಬಿಡದೆ ಎನ್ನ ನೆತ್ತಿಕೊಂಡು ಓಡ್ಹೋಯ್ತವ್ವ ಅ.ಪ ಬಿದ್ದರೆ ಬೀಳಗೊಡಲಿಲ್ಲವ್ವ ಸುಮ್ಮ ನಿದ್ದರೆ ಇರಗೊಡಲಿಲ್ಲವ್ವ ಬುದ್ಧಿಭ್ರಮಿಸಿ ಬಲುಗದ್ದಲಮಾಡೆನ್ನ ಮುದ್ದಿಟ್ಟೆಬ್ಬಿಸಿಕೊಂಡ್ಹೋಯ್ತವ್ವ 1 ಉಟ್ಟದಟ್ಟಬಿಡಿಸೊಗಿತವ್ವ ಬಂದ ಎರವು ಮಾಡಿತವ್ವ ವೊಷ್ಟು ಬಿಡಿಸಿ ಎನ್ನ ಗಟ್ಟ್ಯಪ್ಪಿ ತಿರುಗದ ಬೆಟ್ಟಕ್ಕೆ ಎಳಕೊಂಡ್ಹೋಯ್ತವ್ವ 2 ಭೋರಿಟ್ಟತ್ತರು ಎನ್ನ ಬಳಗವ್ವ ಸಮೀ ಪಾರನು ಬರಗೊಡಲಿಲ್ಲವ್ವ ಸಾರಸೌಖ್ಯಕ್ಕಾಧಾರ ಶ್ರೀರಾಮಪಾದ ಸೇರಿಸಾನಂದಪದವೇರಿಸಿತವ್ವ 3
--------------
ರಾಮದಾಸರು