ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಶ್ರೀಹರಿಸ್ತುತಿಗಳು ಬೋಧರೂಪನೆ ವೇದವೇದ್ಯನೆ ಬೇಗ ಮೋಕ್ಷವನೀವನೇ ವೇದತಸ್ಕರನಂ ವಿಭಂಜಿಸಿ ವೇದಮಂತ್ರವ ತಂದನೇ ಪ ಮೋದದಿಂದಗವನ್ನು ಬೆನ್ನಲಿ ಮಂತ್ರಪೊತ್ತ ದೇವನೆ ಪೋಷಿಸೈ ಸಾದರಂಮಿಗೆ ರಂಗನಾಥನೆಸಂತತಂ ನುತಿಗೈದಪೆಂ ಅ.ಪ ವಿಹಂಗ ರಾಜತುರಂಗ ಸನ್ಮುನಿ ಸಂಗಮಾ ಹಿರಣ್ಯ ಲೋಚನದರ್ಪಶಿಕ್ಷಲ ಸತ್ಕøಪಾ ಪಾಂಗ ದೈತ್ಯತನೂಭವೇಷ್ಟದ ತುಂಗ ಶೌರ್ಯ ವಿಶಿಷ್ಟ ಶ್ರೀ ರಂಗನಾಥನೆ ರಕ್ಷಿಸೈ ಭವದಂಘ್ರಿಸೇವೆಯೊಳಾವಗಂ1 ಸುಂದರಾಂಗನೆ ಸೂರಿವಂದ್ಯನೆ ಕುಂದಕುಟ್ಮಲದಂತನೇ ಮಂದಹಾಸದೊಳೊಂದಿ ಬಾಲಕನಂದದಿಂದಲಿ ಬಂದು ಸಾ ನಂದದಿಂಬಲಿಯಿಂದಭೂಮಿಯನಂದುದಾನವಕೊಂಡಗೋ ವಿಂದಪೋಷಿಸುರಂಗನಾಥಮುಕುಂದನೀಂ ಪರಿತೋಷದಿಂ2 ರಾಮ ತಾಮರಸೋದ್ಭವಸ್ತುತನಾಮ ಸದ್ಗುಣಧಾಮ ಶ್ರೀ ರಾಮಕೃಷ್ಣ ದಿನೇಶಮಂಡಲಧಾಮದೀನಶರಣ್ಯ ನಿ ಷ್ಕಾಮ ಸಂಗರಭೀಮ ದೈತ್ಯವಿರಾಮ ಸುಂದರಕಾಮ ಸು ತ್ರಾಮವಂದ್ಯನೆ ರಂಗನಾಥನೆ ರಕ್ಷಿಸೆನ್ನನು ಮೋದದಿಂ3 ಧೀರಬುದ್ಧನೆ ಕಲ್ಕಿರೂಪನೆ ಧೀರಸಂಕುಲದಿವ್ಯಮಂ ದಾರ ನಿನ್ನನೆ ಬೇಡಿಕೊಂಬೆನು ಘೋರಸಂಸ್ಕøತಿಬಂಧದಿಂ ಗಾರುಮಾಡಿಸದಿನ್ನು ಮಾತೆಯಗರ್ಭಕೆಂದಿಗುತಾರದೆ ಪಾರಗಾಣಿಸಿ ರಂಗನಾಥನೆ ಪಾಲಿಸೈ ಬಿಡದಳ್ಕರಿಂ 4
--------------
ರಂಗದಾಸರು
ಗಾನಕೆ ಅತಿ ಸುಲಭ ಪ ದೀನಜನಕೆ ಬಲು ಸಾನುರಾಗನಾದ ಜಾನಕಿನಾಥನ ದಿವ್ಯನಾಮವು ಅ.ಪ ತಾಳ ತಂಬೂರಿ ಮೃದಂಗಗಳಿಂದಲಿ ಪೇಳುವವರಿಗೆ ರಫುಮೌಳಿಯ ನಾಮವು 1 ಘೋರ ಕಲುಷಗಳ ಪಾರಗಾಣಿಸಿ ಮನ ಕೋರಿಕೆಗಳನೀವ ತಾರಕ ನಾಮವು 2 ತಾಪಸ ಸತಿಯಳ ಶಾಪವ ಬಿಡಿಸಿದ ಭೂಪ ದಾಶರಥಿ ದಿವ್ಯನಾಮವು 3 ಲಂಕೆಯ ಪೊಕ್ಕು ನಿಶಾಚರನೆ ಕೊಂದು ಪಂಕಜಾಕ್ಷಿ ಆತಂಕ ಕಳೆದ ನಾಮ 4 ಎನ್ನವರೆಲ್ಲರು ಬನ್ನಿರಿ ಎನ್ನುತ ತನ್ನೊಡನೊಯ್ದು ಪ್ರಸನ್ನರಾಮನ ನಾಮ 5
--------------
ವಿದ್ಯಾಪ್ರಸನ್ನತೀರ್ಥರು
ದೇವೀ ಸಲಹೆನ್ನನೂ | ತವ ಬಾಲಕನನೂ | ದೇವೀ ಸಲಹೆನ್ನನೂ ಪ ಕಾವ ನಿಜ ಸುಖವೀವ ಶಕ್ತಿಯೆ | ದೇವ ವಿಶ್ವೇಶ್ವರನ ಸುಪ್ರೀಯೆ ಅ.ಪ ಚಂಡನಾಡುತ ರಕ್ತಬೀಜರ | ಹಿಂಡಿ ರಕ್ತನುಂಡ ಶಂಕರೀ 1 ದುರಿತ ಹರೆ ಆರ್ಯಾ ಕಾತ್ರ್ಯಾಯನಿಯೇ | ಗೌರಿ ಹೈಮಾವತಿ | ಸುರಮುನೀ ಸುತೆ ಸರ್ವಮಂಗಲೆ | ಶರಣು ಶರ್ವಾಣಿಯೆ ರುದ್ರಾಣಿಯೆ 2 ಭವ ಸರ್ವ ಕಾರಣ ಭೂತೆ ಮುನಿ ಸುತೆ | ಸರ್ವ ಸೌಖ್ಯ ಸುಖ ಪ್ರದಾಯಕಿ 3 ಜಗದ್ಭರಿತೆ ಸದ್ಗುಣ | ಶುಭ ತತ್ವಾತೀತೆ ನಿರುಪಮ ಶಕ್ತಿ ದೇವತೆ | ಸೋತೆ ನೀ | ದಾರಿದ್ರ ದುಃಖ ವ್ರಾತವನು ಪರಿಹರಿಸಿ ರಕ್ಷಿಸೆ4 ತಂದೆ ತಾಯೆನ್ನ ಬಂಧು ಬಳಗಗಳೂ | ನಾರಾಯಣಿಯನೀ- | ಹೊಂದಿರುವ ತಾಪತ್ರಯವನಾ | ನಂದದಿಂದಲಿ ಪಾರಗಾಣಿಸಿ | ತಿಂದೆನ್ನನು ಸದಾನಂದನೆನಿಸುತ 5
--------------
ಸದಾನಂದರು
ಮರೆಯದಿರು ಹರಿಯಮರೆವರೆ ಮೂರು ಲೋಕದ ದೊರಿಯ ಪ ಮದಗಜ ಹರಿಯೆಂದು ಕರೆಯಲುಒದಗಿ ಆಕ್ಷಣ ಬಂದುಮುದದಿ ನಕ್ರನ ಕೊಂದು ಸಲ-ಹಿದ ಸದ್ಭಕ್ತರ ಬಂಧುಹದುಳ ಪ್ರಹ್ಲಾದನ ಹೆದರಿಸಿದಸುರನಉದರವ ಬಗೆದಂಥದುಭುತ ಮಹಿಮನ1 ನಾರಿಯು ತನ್ನ ಕರೆದ ಮಾತ್ರದಿಸೀರೆಯ ಮಳೆಗರೆದಕ್ರೂರ ಖಳನ ತರಿದು ಆ ಪಾಂಡವರಆರಣ್ಯದಿ ಪೊರೆದಗಾರಾದಜಮಿಳ ನಾರಗ ಎನಲುಪಾರಗಾಣಿಸಿದಪಾರ ಗುಣನಿಧಿಯ 2 ದುರಿತ ಭವ ಪಾಶಾ - ಅವಗೆಂದೆಂದಿಗಿಲ್ಲ ಕ್ಷೇಶಾತಂದೆ ಕದರುಂಡಲಗಿ ಹನುಮಯ್ಯನೊಡೆಯಚಂದಾದಿಕೇಶವನ ನೆನೆದವರೆಂದಿಗು ಧನ್ಯರು3
--------------
ಕನಕದಾಸ
ಶಾರದಾವರ ಪ ಸಾರಿ ಸಂನ್ನುತಿಪ್ಪಾ | ವರವ ನೀಯೆನ್ನಪ್ಪಾ ಅ.ಪ ಪರ ಕಷ್ಟ ಪರಿಸೊ | ಇಷ್ಟಾರ್ಥ ಪಾಲಿಸೊ 1 ಭಾರವೊಪ್ಪಿಸಿದೆನು | ಪಾರಗಾಣಿಸಿದನು 2 ಮರೆಯ ಹೊಕ್ಕೆನೂ | ವರಕವಿತ್ವವನ್ನೂ | ಮೆರೆಯಿಸಿ ಇರಿಸೆನ್ನಾ ಸತ್ಕೀರ್ತಿ | ಸ್ಥಿರ ಸದಾನಂದಾರ್ತಿ 3
--------------
ಸದಾನಂದರು
ಸಿರಿದೇವಿ ವರಬೇಗ ಕರುಣಿಸೊ ದಯದಿಂದ ಶರಣಾಗತ ಪರಿಪಾಲನೆಂಬಿ ಘನ ಬಿರುದಿಹದೊರೆ ನರಹರಿಕರುಣಾಕರ ಪ. ಕರಿರಾಜ ಮೊರೆಯಿಡುವ ಸ್ವರವ ಕೇಳುತಲಂದು ಸಿರಿಯೊಳಗುಸುರದೆ ಗರುಡನ ಪೆಗಲೇರಿ ಸರಸಿ ತಡಿಗೆ ಬಂದು ಕರಿಯನುದ್ಧರಿಸಿದಿ 1 ಘೋರ ಕಿಂಕರರಿದಿರು ಸಾರೆಜಾಮಿಳ ಭಯದಿ ನಾರಾಯಣನೆಂದು ಬೇಡಿದ ಮಾತ್ರದಿ ವಾರಿಜಭವಪಿತ ಪಾರಗಾಣಿಸಿದಿ 2 ತರಳ ಪ್ರಹ್ಲಾದನನು ಹಿರಣ್ಯಕನು ಬಾಧಿಸಲು ಹರಿ ನೀನೆ ಗತಿಯೆನುತಿರೆ ಕಂಭದಿ ಇರವ ತೋರಿ ಬಹು ಪರಿಯಲಿ ಸಲಹಿದಿ 3 ದುರುಳ ಸೀರೆಯ ಸೆಳೆಯೆ ಹರಿಕೃಷ್ಣ ಸಲಹೆನೆ ಸೀರೆಯ ಮಳೆ ಗರದಂದದಲಿತ್ತು ಪರಿಪಾಲಿಸಿದೆ 4 ಎನ್ನ ದುಷ್ಕøತದಿಂದ ನಿನ್ನ ನಾಮದ ಮಹಿಮೆ ಭಿನ್ನವಾಗುವದೆ ನಿನ್ನ ಪದಾಂಬುಜ ವನ್ನು ನಂಬಿದ ಮೇಲಿನ್ನುದಾಸೀನವೆ 5 ಪಾಕಶಾಸನನಘವ ನೀಕರಿಸಿ ಸಲಹಿದನೆ ಭೀಕರವಾಗದೆ ಸಾಕು ಸಾನುಭವ ಕೃಪಣ ದಯಾಕರ ಮೂರುತಿ 6 ಒಳಗೆ ನೀ ತಳಿಸುತಲಿ ಗಳಿಸಿ ಪಾಪಗಳೆನಗೆ ತಳಮಳಗೊಳಿಸುತ ಬಳಲಿಪದುಚಿತವೆ ಉಳುಹಿನ್ನಾದರು ನಳಿನನಾಭ ಹರಿ 7 ಬಡವ ಮಾನವನೊಬ್ಬ ಪಡೆಯ ತನ್ನವರನ್ನು ಕೆಡಲು ಬಿಡನು ಜಗದೊಡೆಯ ನೀ ಎನಗಿರೆ ತಡವ ಮಾಡಿ ಕಂಡ ಕಡೆಯಲಿ ಬಿಡುವುದೆ 8 ನಿನ್ನ ಕಥಾಮೃತಸಾರವನ್ನೆ ಶಿರದಿ ಧರಿಸಿ ಇನ್ನು ಬಳಲಿದರೆ ನಿನ್ನ ಘನತೆಗಿದು ಚೆನ್ನಾಗುವುದೆ ಪ್ರಸನ್ನ ಮುಖಾಂಬುಜ 9 ಮಾನಾಮಾನವ ತೊರೆದು ನಾನಾ ದೇಶದಿ ತಿರಿದು ಶ್ರೀನಿವಾಸ ನಿನ್ನಾನನ ದರುಶನ- ವನು ಮಾಡಿದ ಮೇಲೇನಿದು ತಾತ್ಸಾರ 10 ಆಶಾಪಾಶವ ಬಿಡಿಸಿ ಮನದಾಸೆಗಳ ಪೂರೈಸಿ ದಾಸದಾಸನೆಂಬೀ ಸೌಖ್ಯವನಿತ್ತು ಪೋಷಿಸು ಶೇಷಗಿರೀಶನೆ ತವಕದಿ 11
--------------
ತುಪಾಕಿ ವೆಂಕಟರಮಣಾಚಾರ್ಯ
ಹರಿಯಂದು ಮನದಲ್ಲಿ ಅರಿತು ಪೂಜಿಸುವರಿಗೆ ಪರಮ ದಾರಿದ್ರ್ಯ ದು:ಖ ಘೋರ ನಿಹಾರವೂ ಪ ಆರು ವರ್ಣಿಸುವರು ಭವದೋಷನಳಿದೂ ಪಾರಗಾಣಿಸಿ ಮುಕ್ತಿಪದವಿಯ ಕೊಡುವಂಥಾ 1 ಶ್ರೀ ಕೃಷ್ಣಾಯನುತಾ ನೀ ಶಾಶ್ವತವಾಗೀ------ ಅಧಿಕ ಸಾಮ್ರಾಜ್ಯ ಪದವಿ ಬೇಕಾದಷ್ಟು ಕೊಡುವಂಥ ಭಗವಂತ ಪರಬ್ರಹ್ಮ 2 ನಾರಾಯಣಾ ಎಂದು ನಾಲಿಗೆಯಲಿನುಡುವಂಥ ದನುಜ ಮರ್ದನ ದೇವ-----------ರೆಂದೆನಿಸಿ 3
--------------
ಹೆನ್ನೆರಂಗದಾಸರು