ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಜೀವಿಸಲಯ್ಯ ಯಾದವೇಶ ಪ ಎನ್ನಸುವಿಗಸು ನೀನು ಭಿನ್ನ ಜ್ಞಾನದಿ ಎನ್ನ ಅ.ಪ ಬನ್ನ ಬಡಿಸುವಿ ಮಾಯ ಜೈಸಲರಿಯೆ ವಿಧಿ ವಾಯು ಶಿವ ಶಕ್ರ ಸುರನಿಕರ ನಿನ್ನಲ್ಲಿ ಸುಖಿಸುವರೊ ಅನ್ನೆಲ್ಲಿ ಅಸತೆಂದು 1 ನೀರಗುಳ್ಳೆಯಂತೆ ಸಂಸೃತಿಯ ಸುಖವೆಂದು ದಾರಿತೋರ್ವವ ನೀನು ಕಣ್ಣುಕಟ್ಟೆ ಆರು ಬಿಚ್ಚುವರಯ್ಯ ಆ ಪಟಲಕಿಕ್ಕಟ್ಟು ವಾರಿಜಾಸನನಯ್ಯ ವಂಚಿಸದೆ ಮೈದೋರು 2 ಕಾಮಾದಿ ಷಡ್ವರ್ಗ ದುಷ್ಕರಣ ದುಮ್ಮಾನದ ತಾಮಸದಿ ಸಿಗಬಿದ್ದು ಪಾಮರಾದೆ ವ್ಯೋಮಕೇಶನ ಮಿತ್ರ ಜಯೇಶವಿಠಲ ನೀ ಮನಸು ಮಾಡಲು ಆತ್ಮಾಪಿ ವೈಕುಂಠ 3
--------------
ಜಯೇಶವಿಠಲ
ಎನ್ನಪಾಪವೇ ಎನ್ನ ಕಾಡುವುದು ಎನ್ನಯ್ಯ ಹರಿಯೆ ನಿನ್ನದಿದರೊಳನ್ಯವೇನಿಹ್ಯದು ಪ ಮುನ್ನಮಾಡಿದ ಪಾಪಕರ್ಮವು ಬೆನ್ನಬಿಡದೆ ಕಾಡುತಿರಲು ನಿನ್ನಗನ್ನುವುದಾವ ನ್ಯಾಯವು ಪನ್ನಂಗಶಾಯಿ ಸನ್ನುತಾಂಗ ಅ.ಪ ನಾನಾಜೀವಿಗಳ ಪ್ರಾಣಹಾರಿಸಿದೆ ಅನ್ಯರಿಗೆ ಬಿಡದೆ ಜಾಣನುಡಿ ಪೇಳಿ ಹಾನಿ ಬಯಸಿದೆ ದುಗ್ಗಾಣಿ ರಿಣಕಾ ಗೇನುಯಿಲ್ಲೆಂದಾಣೆ ಮಾಡಿದೆ ನಾ ನಿನ್ನ ಮರೆದೆ ಏನು ತಿಳಿಯದೆ ಜ್ಞಾನ ಪೇಳಿದೆ ಜ್ಞಾನವಂತರಿಗ್ಹೀನ ನುಡಿದೆ ಮಾನವಂತರ ಮಾನ ಕಳೆದೆ ಹೀನಬವಣೆಯೋಳ್ಬಿದ್ದೆನಭವ 1 ಅಂಗನೆಯರ ಸಂಗ ಬಯಸಿದೆ ದುರಿತಕ್ಕೆ ಹೇಸದೆ ಅಂಗನೆಯರ ಗರ್ಭ ಭಂಗಿಸಿದೆ ಅನ್ಯರ ಒಡವೆಗೆ ಕಂಗಳಿರೆ ಭಂಗಕೊಳಗಾದೆ ಮಂಗ ನಾನಾದೆ ನಿತ್ಯ ನೇವಹಕೆ ಅಂಗನೆನಿಸದೆ ಬಡವರ್ವಿಮಹಕೆ ನುಂಗಿ ಕೂತೆನು ಪರರ ದ್ರವ್ಯಿ ನ್ನ್ಹ್ಯಾಂಗೆ ನಿನ್ನೊಲಿಮೆನಗೆ ಅಭವ 2 ಕೊಟ್ಟ ಒಡೆಯರಿಗೆರಡನೆಯ ಬಗೆದೆ ನಂಬಿ ಎನ್ನೊ ಳಿಟ್ಟ ಗಂಟನು ಎತ್ತಿಹಾಕಿದೆ ಪಡೆದ ಮಾತೆಯ ಬಿಟ್ಟು ಬೇಸರ ಮಾಡಿನೋಡಿದೆ ಭ್ರಷ್ಟನಾನಾದೆ ದುಷ್ಟಗುಣಗಳನೊಂದುಬಿಡದೆ ಶಿಷ್ಟಪದ್ಧತಿ ಜನಕೆ ಉಸುರಿದೆ ಕೊಟ್ಟವಚನೊಂದು ನಡೆಸದಿಂದುಳಿದು ಕೃತಿ ಪೇಳೆನಭವ 3 ಒಂದೆ ಮನದವನಂತೆ ತೋರಿದೆ ಮತ್ರ್ಯದವರಿಗೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿದೆ ದೋಷವಿನಿತು ಹೊಂದದವರಿಗೆ ಕುಂದು ಹೊರೆಸಿದೆ ನಾನೇ ಅಹುದಾದೆ ಸಿಂಧುಶಯನ ಭಕ್ತರನ್ನು ಕಂ ಡೊಂದಿಸದೆ ಮುಖವೆತ್ತಿ ನಡೆದೆ ಮುಂದುಗಾಣದೆ ದೋಷ ಮಾಡಿದೆ- ನೊಂದು ಪುಣ್ಯವನರಿಯೆನಭವ 4 ಕೊಡುವ ಧರ್ಮಕೆ ಕಿಡಿಯನ್ಹಾಕಿದೆ ಕೂಡಿದ್ದವರಿಗೆ ಕೆಡಕು ಬೋಧಿಸಿ ಒಡಕು ಹುಟ್ಟಿಸಿದೆ ಅಡಿಗೆ ಬಾಗಿ ಮಿಡುಕುವವರಿಗೆ ದುಡುಕನಾಡಿದೆ ಕಡುಪಾಮರಾದೆ ಪಿಡಿದು ಕಾಯುವ ಒಡೆಯನ್ಹೆಸರಿನ ಮುಡಿಪು ನುಂಗಿ ಕಡುಪಾಪಾತ್ಮಾದೆನು ಸುಡುಸುಡೆನ್ನಯ ಜನ್ಮವ್ಯಾಕಿನ್ನು ಒಡೆಯ ಶ್ರೀರಾಮ ಸಾಕುಮಾಡೋ 5
--------------
ರಾಮದಾಸರು