ಒಟ್ಟು 7 ಕಡೆಗಳಲ್ಲಿ , 5 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಜೀವಿಸಲಯ್ಯ ಯಾದವೇಶ ಪ ಎನ್ನಸುವಿಗಸು ನೀನು ಭಿನ್ನ ಜ್ಞಾನದಿ ಎನ್ನ ಅ.ಪ ಬನ್ನ ಬಡಿಸುವಿ ಮಾಯ ಜೈಸಲರಿಯೆ ವಿಧಿ ವಾಯು ಶಿವ ಶಕ್ರ ಸುರನಿಕರ ನಿನ್ನಲ್ಲಿ ಸುಖಿಸುವರೊ ಅನ್ನೆಲ್ಲಿ ಅಸತೆಂದು 1 ನೀರಗುಳ್ಳೆಯಂತೆ ಸಂಸೃತಿಯ ಸುಖವೆಂದು ದಾರಿತೋರ್ವವ ನೀನು ಕಣ್ಣುಕಟ್ಟೆ ಆರು ಬಿಚ್ಚುವರಯ್ಯ ಆ ಪಟಲಕಿಕ್ಕಟ್ಟು ವಾರಿಜಾಸನನಯ್ಯ ವಂಚಿಸದೆ ಮೈದೋರು 2 ಕಾಮಾದಿ ಷಡ್ವರ್ಗ ದುಷ್ಕರಣ ದುಮ್ಮಾನದ ತಾಮಸದಿ ಸಿಗಬಿದ್ದು ಪಾಮರಾದೆ ವ್ಯೋಮಕೇಶನ ಮಿತ್ರ ಜಯೇಶವಿಠಲ ನೀ ಮನಸು ಮಾಡಲು ಆತ್ಮಾಪಿ ವೈಕುಂಠ 3
--------------
ಜಯೇಶವಿಠಲ
ಎನ್ನಪಾಪವೇ ಎನ್ನ ಕಾಡುವುದು ಎನ್ನಯ್ಯ ಹರಿಯೆ ನಿನ್ನದಿದರೊಳನ್ಯವೇನಿಹ್ಯದು ಪ ಮುನ್ನಮಾಡಿದ ಪಾಪಕರ್ಮವು ಬೆನ್ನಬಿಡದೆ ಕಾಡುತಿರಲು ನಿನ್ನಗನ್ನುವುದಾವ ನ್ಯಾಯವು ಪನ್ನಂಗಶಾಯಿ ಸನ್ನುತಾಂಗ ಅ.ಪ ನಾನಾಜೀವಿಗಳ ಪ್ರಾಣಹಾರಿಸಿದೆ ಅನ್ಯರಿಗೆ ಬಿಡದೆ ಜಾಣನುಡಿ ಪೇಳಿ ಹಾನಿ ಬಯಸಿದೆ ದುಗ್ಗಾಣಿ ರಿಣಕಾ ಗೇನುಯಿಲ್ಲೆಂದಾಣೆ ಮಾಡಿದೆ ನಾ ನಿನ್ನ ಮರೆದೆ ಏನು ತಿಳಿಯದೆ ಜ್ಞಾನ ಪೇಳಿದೆ ಜ್ಞಾನವಂತರಿಗ್ಹೀನ ನುಡಿದೆ ಮಾನವಂತರ ಮಾನ ಕಳೆದೆ ಹೀನಬವಣೆಯೋಳ್ಬಿದ್ದೆನಭವ 1 ಅಂಗನೆಯರ ಸಂಗ ಬಯಸಿದೆ ದುರಿತಕ್ಕೆ ಹೇಸದೆ ಅಂಗನೆಯರ ಗರ್ಭ ಭಂಗಿಸಿದೆ ಅನ್ಯರ ಒಡವೆಗೆ ಕಂಗಳಿರೆ ಭಂಗಕೊಳಗಾದೆ ಮಂಗ ನಾನಾದೆ ನಿತ್ಯ ನೇವಹಕೆ ಅಂಗನೆನಿಸದೆ ಬಡವರ್ವಿಮಹಕೆ ನುಂಗಿ ಕೂತೆನು ಪರರ ದ್ರವ್ಯಿ ನ್ನ್ಹ್ಯಾಂಗೆ ನಿನ್ನೊಲಿಮೆನಗೆ ಅಭವ 2 ಕೊಟ್ಟ ಒಡೆಯರಿಗೆರಡನೆಯ ಬಗೆದೆ ನಂಬಿ ಎನ್ನೊ ಳಿಟ್ಟ ಗಂಟನು ಎತ್ತಿಹಾಕಿದೆ ಪಡೆದ ಮಾತೆಯ ಬಿಟ್ಟು ಬೇಸರ ಮಾಡಿನೋಡಿದೆ ಭ್ರಷ್ಟನಾನಾದೆ ದುಷ್ಟಗುಣಗಳನೊಂದುಬಿಡದೆ ಶಿಷ್ಟಪದ್ಧತಿ ಜನಕೆ ಉಸುರಿದೆ ಕೊಟ್ಟವಚನೊಂದು ನಡೆಸದಿಂದುಳಿದು ಕೃತಿ ಪೇಳೆನಭವ 3 ಒಂದೆ ಮನದವನಂತೆ ತೋರಿದೆ ಮತ್ರ್ಯದವರಿಗೆ ಮುಂದೆ ಭಲಾಯೆಂದು ಹಿಂದೆ ನಿಂದಿಸಿದೆ ದೋಷವಿನಿತು ಹೊಂದದವರಿಗೆ ಕುಂದು ಹೊರೆಸಿದೆ ನಾನೇ ಅಹುದಾದೆ ಸಿಂಧುಶಯನ ಭಕ್ತರನ್ನು ಕಂ ಡೊಂದಿಸದೆ ಮುಖವೆತ್ತಿ ನಡೆದೆ ಮುಂದುಗಾಣದೆ ದೋಷ ಮಾಡಿದೆ- ನೊಂದು ಪುಣ್ಯವನರಿಯೆನಭವ 4 ಕೊಡುವ ಧರ್ಮಕೆ ಕಿಡಿಯನ್ಹಾಕಿದೆ ಕೂಡಿದ್ದವರಿಗೆ ಕೆಡಕು ಬೋಧಿಸಿ ಒಡಕು ಹುಟ್ಟಿಸಿದೆ ಅಡಿಗೆ ಬಾಗಿ ಮಿಡುಕುವವರಿಗೆ ದುಡುಕನಾಡಿದೆ ಕಡುಪಾಮರಾದೆ ಪಿಡಿದು ಕಾಯುವ ಒಡೆಯನ್ಹೆಸರಿನ ಮುಡಿಪು ನುಂಗಿ ಕಡುಪಾಪಾತ್ಮಾದೆನು ಸುಡುಸುಡೆನ್ನಯ ಜನ್ಮವ್ಯಾಕಿನ್ನು ಒಡೆಯ ಶ್ರೀರಾಮ ಸಾಕುಮಾಡೋ 5
--------------
ರಾಮದಾಸರು
ನಮಾಮಿ ತಂದೆಯೇ | ಮುದ್ದುಮೋಹನಾನತೋಸ್ಮಿ ಸಿದ್ಧರೇ | ತ್ವತ್ವದಾಂಬುಜಂ ಪ ಸುಕೃತ ವೆಂಥದೋಗುರುಗಳ್ ನಿಮ್ಮಯಾ | ಕರುಣದೊರಕಿತು 1 ವಿಲಸಿತಾಮಲಾ ನಿ | ಷ್ಕಲ್ಮುಷ ಹೃದಯರೇಆಲವಾ ಬೋಧರಾ | ಒಲವ ಪಡೆದರೇ 2 ಹಲವು ಜನುಮದೀ | ಬಳಲಿ ಬಂದುದಾತಿಳಿದು ನೀವೆನ್ನಾ | ಪಾಲಿಸೀದಿರಿ3 ಕ | ಳಂಕ ವಿಹಿತವೂ 4 ಎಂದು ಕರುಣೆಯಿಂ | ತಂದೆ ವೆಂಕಟನಾಹೊಂದಿ ಭಜಿಪರಾ | ಅಂದು ಪ್ರೇರಿಸೀ5 ಕರೆದು ಎನ್ನನೂ | ತೆರಳು ಎನುತಲೀಒರೆದು ಮತಿಯನೂ | ದಾರಿ ತೊರ್ದಿರೀ 6 ಸೋಮ ಶೇಖರಾ | ಸಮ ಪದಸ್ಥನೇಸಾಮಾಜಾದ್ರಿಲೀ | ಪ್ರಮಾಥಿವತ್ಸರಾ 7 ವದ್ಯ ಫಾಲ್ಗುಣಾ | ಪ್ರತಿಪದಾದಿನಾಆದಿವಾರದೀ | ವಿದಿತ ಮಾರ್ಗದೀ 8 ಗುರು ಗೋವಿಂದನಾ | ನಾಮ ತಾರಕಾಅರುಹೀ ಪ್ರೀತಿಲೀ | ದಾರಿ ತೋರ್ದಿರೀ 9 ಕೋಮಲಾಂಗನೇ | ನಿಮ್ಮ ಮಹಿಮೆಯಾಪಾಮರಾನು ನಾ | ಗಮಿಸಲಾಪನೇ 10 ಗತಿಯೆ ನೀವೆಂದೂ | ಸತತ ತುತಿಸುವೆಅತುಳ ಮಹಿಮರೇ | ಹಿತವ ಮಾಡಿರಿ 11 ತವ ಪದಾರ್ಚನೇ ತ್ರಿ | ಸವನ ಸಂಧ್ಯವೂಹವನ ಹೋಮವೂ | ಭವದ ಶೋಷವೂ 12 ನೀವೆ ಬಂಧುವೂ | ನೀವೆ ಬಳಗವೂನೀವೆ ತಾಯಿಯೂ | ನೀವೆ ತಂದೆಯೂ 13 ನಿಂತು ನೀವೆನ್ನಾ | ಅಂತರಂಗದೀಮಂತವ್ಯ ರಂಗನಾ ಚಿಂತೆ ಪಾಲಿಸೀ 14 ಗುರು ಗೋವಿಂದ ವಿಠಲನಾ | ಸುರಚಿರಾಮಲಾಚರಣ ಪುಷ್ಕರ | ಸ್ಮರಿಪ ಗುರುವರಾ 15|
--------------
ಗುರುಗೋವಿಂದವಿಠಲರು
ನೀನಲ್ಲದಲೆ ಇನ್ನು ನಾನಾರ ಕೂಗಲೊ ಮಾನನಿಧಿ ಗೋಪಾಲ ಶ್ರೀನಿಧಿಯೇ ಪ. ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ. ಕಡುಕೋಪದಿಂ ಖಳನು ಹುಡುಗನ ಬಾಧಿಸೆ ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ 1 ತೊಡೆಯನೇರಲು ಬರೆ ಜಡಿದು ನೂಕಲು ತಾಯಿ ಒಡನೆ ಮನದಿ ನೊಂದು ಪೊಡಮಡುತ ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ 2 ಕರಿ ಕರೆಯೆ ತಡೆಯದೆ ಸಲಹಿದ ಪೊಡವೀಶ ನೀನಲ್ಲೆ ಕಡುಕರುಣಿ ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ3 ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ ಎಣಿಸಲಾಹೊದೆ ನಿನ್ನ ಘನ ಮಹಿಮೆ ಮನಸಿಜಪಿತ ಸರ್ವ ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ 4 ಶ್ರೀಪದ್ಮಭವನುತ ನಾ ಪಾಮರಾಳಿಹೆ ಗೋಪಾಲಕೃಷ್ಣವಿಠಲ ಶ್ರೀಪತಿಯೆ ನೀ ಪಾರು ಮಾಡದೆ ಕಾಪಾಡುವವರ್ಯಾರೊ ತಾಪ ಬಿಡಿಸಿ ಸಲಹೋ5
--------------
ಅಂಬಾಬಾಯಿ
ಶಾಂತನಾಗು ಮನಸೆ ನೀ ಶಾಂತನಾಗು ಕಂತುಪಿತನ ಅಂತರಂಗದಿ ಧ್ಯಾನಿಸುತ್ತ ಪ ಪೊಡವಿಜನರ ನಡೆಯ ಕಂಡು ಮಿಡುಕು ಗುಣವ ಕಲಿಯ ಬೇಡ ಕೊಡುವ ಸ್ವಾಮಿ ಬಡವನಿಹನೆ ದೃಢವಿಟ್ಟು ಅರಿದು ನೋಡು 1 ಭೂಮಿಯವರು ಕೈಯ ಬಿಡಲು ಸ್ವಾಮಿಕಾರ್ಯ ನಿಲ್ಲುತಿಹ್ಯದೆ ಪಾಮರಾಗದೆ ಸ್ವಾಮಿಸೇವೆ ನೇಮವಹಿಸಿ ಮಾಡು ಬಿಡದೆ 2 ಪಾಪಿನರರ ಮಾತಿಗಾಗಿ ಕೋಪಗೊಳ್ಳದೆ ಸತ್ಯನಾಗು ಗೋಪಾಳ ಸಣ್ಣದಲ್ಲ ನಂಬು ಭೂಪ ಶ್ರೀರಾಮನೊಲಿದು ಕೊಡುವ 3
--------------
ರಾಮದಾಸರು
ಸಂಗಮಾಡೆಲೋ ಶ್ರೀಹರಿ ದಾಸರಾ ಹಿಂಗಿ ಹೋಹುದು ತಾಭವದಾಸರಾ ಮಂಗಳ ಮಂಗಳಾತ್ಮಕ ಕೈಗೂಡಿ ಬಾಹನು ಅಂಗಜ ಜನಕ ಸಚತುರ್ಬಾಹನು 1 ಅವರ ವಾಕ್ಯ ಸುಧಾರಸ ಪಾನವಾ ಶ್ರವಣದಿಂದಲಿ ಮಾಡೆಲೊ ಪಾನವಾ ಭವದ ಜನ್ಮ ಜರಾಲಯ ಜಾರುವೀ ತವಕದಿಂದ ಚಿತ್ಸುಖ ಸೇರುವಿ 2 ಹಲವು ಸಾಧನಭರಿಗೆ ಬೀಳದೇ ಕಲಿತ ವಿದ್ಯತ್ವ ಗರ್ವವ ತಾಳದೇ ಬಲಿದು ಭಕ್ತಿಯ ಹೋಗದೆ ಸಿಂತರಾ ನೆಲಿಯ ಕೇಳೆಲೋಭಾವದಿ ಸಂತರಾ 3 ಮರಹು ಕತ್ತಲಿವೆಂಬುದು ಹಾರಿಸೀ ಅರಿಗಳಾರರೆ ಸಂಕಟ ಹಾರಿಸೀ ಅರಹು ಭಾಸ್ಕರ ತೋರುವ ಬೋಧಿಸಿ ಹೊರವ ಸಜ್ಜನ ಸಂಗವ ಸಾಧಿಸಿ 4 ನೆಲಿಯ ಹೊಂದುವ ಪರಿಯನಿಲ್ಲದೇ ಸುಲಭಸಾಧನ ತೋರಿಪರಲ್ಲದೇ ಬಳಲುವಾಬಾಹಳ ಸಾಪೇಳರು ಬಲಿದು ಪಾಯವ ಸಂತರ ಕೇಳರು 5 ಹರಿಕಥಾ ಮೃತಸಾರಸ ಪೇಳುತಾ ದುರಿತ ದುಷ್ಕøತ ತರುಗಳ ಶೀಳುತಾ ಪರಮ ಭಕ್ತಿಯ ಭಾಗ್ಯವ ಕುಡುವರು ಅರಿತು ಸಂತರ ಸಂಗವ ಬಿಡುವರು 6 ಏಳು ಭೂಮಿಕಿ ಮಾರ್ಗವ ತೋರಿಸಿ ಮಾಲ ಚಿತ್ಸುಖ ಮಂದಿರ ಸೇರಿಸಿ ಕಾಲಕರ್ಮದ ಕೋಟಲೆ ವಾರಿಸೀ ಪಾಲಿಸುವರು ಭವದಿಂತಾರಿಸಿ 7 ಸಂಗದಿಂ ಚಂದನಾಹದು ಪಾಮರಾ ಜಂಗಮೊತ್ತಮನಾಗನೇಪಾಮರಾ ಅಂಗದಿಂಮಾಡು ಸಂತರ ವಂದನಾ ಇಂಗಿಥೇಳಿದ ಮಹಿಪತಿ ನಂದನಾ 8
--------------
ಕಾಖಂಡಕಿ ಶ್ರೀ ಕೃಷ್ಣದಾಸರು