ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೇಶನ ಪದದ್ವಂದ್ವಕಮಲ ಭಜಿಪ ಶ್ರೀ ಗುರುವರ ಭೂಪ ಪ. ಬಂದೆನು ನಿಮ್ಮ ಪದ ಸಂದರುಶನಕೀಗ ನೀಗಿರಿ ಭವರೋಗ ಅ.ಪ. ಬಂದವರಯೋಗ್ಯತೆ ಅರಿತಂಕಿತವೀವ | ಕರುಣಾಳುವೆ ದೇವ ನೊಂದೆನೀಗ ಈ ಅಜ್ಞಭವದಿ ಬಿದ್ದು | ಎಂದಿಗೆ ನಾ ಗೆದ್ದು ಇಂದಿರೇಶನ ಹೃತ್ಕಮಲದಲಿ ಕಾಂಬೆ | ಗುರುವೆ ತೋರೆಂಬೆ ಬಂದ ಬಂದ ಕಷ್ಟ ಹಿಂದು ಮಾಡಿ ಪೊರೆದು | ಕೃಪೆಗೈಯ್ಯಲಿ ಬೇಕಿಂದು 1 ಮುಖ ಕಮಲದಿ ಹೊರಡುವ ವಾಕ್ಸರಣಿಗಳು | ಗಂಗಾ ಪ್ರವಾಹಂಗಳು ಅಕಳಂಕದ ತತ್ವಾರ್ಥದಿ ನಾ ಮುಳುಗಿ | ದುರಿತದ ಭವನೀಗಿ ಸುಖ ಸಾರೂಪ್ಯದ ಮುಕುತಿ ಮಾರ್ಗ ಕಂಡೆ | ಭವ ತುಂಡೆ ಭಕುತಿ ಭಾಗ್ಯವ ನಿತ್ಯದಿ ಕರುಣಿಪುದು | ಸುಜ್ಞಾನವ ನೀಡುವುದು 2 ಇಳೆಯೊಳಿಲ್ಲ ಈ ಚರ್ಯೆ ತೋರುವವರು | ಉದ್ಧರಿಪರಿನ್ಯಾರು ಪರಿ ಕರುಣಿಪುದು | ನ್ಯಾಯವೆ ನೂಕುವುದು ಪೊಳಲೊಡೆಯನ ಪರಿಪರಿ ಮಹಿಮಾದಿಗಳ | ರೂಪ ಜಾಲಗಳ ತಿಳಿದಾನಂದಪಡುವ ಗುರುವರೇಣ್ಯ | ಪೊರೆಯ ಬೇಕೀಗೆನ್ನ 3 ಕರಿಗಿರಿ ನರಹರಿ ಪದಕಮಲಗಳನ್ನು | ಹೃದ್ವನಜದೊಳಿನ್ನು ಪರಿಪರಿ ಪೂಜಿಸಿ ಪರಮಾದರದಲ್ಲಿ | ಸಂಕರ್ಷಣನಲ್ಲಿ ಇರಿಸಿಹ ಮನವನು ನರರಿಗೆ ತೋರದಲೆ | ಚರಿಸುವ ಈ ಲೀಲೆ ಅರಿತು ಪೇಳೆ ಈ ಪಾಮರಳಿಗೆ ಅಳವೇ | ಆನಂದದಲಿರುವೆ 4 ತಂದೆ ಮುದ್ದು ಮೋಹನವಿಠಲ ದೇವ | ಹೃದ್ವನಜದಲಿ ಕಾವ ಸುಂದರ ಗೋಪಾಲಕೃಷ್ಣವಿಠ್ಠಲ ನಿಮ್ಮೊಳು | ರಮಿಸುವ ನಿತ್ಯದೊಳು ಮಂದಬುದ್ಧಿಗೆ ಇಂತು ಮತಿಯನಿತ್ತು | ಸಲಹಲಿ ಬೇಕಿಂತು ತಂದೆ ಧರೆಯೊಳು ಮತ್ತೊಬ್ಬರ ಕಾಣೆ | ಕಾಪಾಡಬೇಕೆನ್ನಾಣೆ 5
--------------
ಅಂಬಾಬಾಯಿ
ದಿಮ್ಮಾಕ ನಿನಗ್ಯಾಕೆ ಎಲೆ ಎಲೆ ಜಮ್ಮಾಸಿ ಜರ ತಿಳಿಕೊ ಪ ದಿಮ್ಮಾಕ ನಿನಗ್ಯಾಕೆ ಛೀಮಾರಿ ನಿನ್ನ ದಿಮ್ಮಾಕ ಮುರಿಲಿಕ್ಕೆ ಗುಮ್ಮವ್ವ ನಿಂತಾಳೆ ಅ.ಪ ಸೊಕ್ಕಿನಿಂದ ನಡೆವಿ ಮುಂದಿಂದು ಲೆಕ್ಕಕ್ಕೆ ತರದಿರುವಿ ಫಕ್ಕನೊಯ್ದೆಮನವರು ಉಕ್ಕಿನ ಪ್ರತಿಮೆಯ ತೆಕ್ಕೆಯೊಳಾನಿಸಿ ನಿನ್ನ ಒಕ್ಕಲಿಕ್ಕುವರವ್ವ 1 ತಾರತಿಗಡಿ ತುಸು ವಿ ಚಾರಮಾಡಿನೋಡು ಘೋರ ಯಮದೂತರು ಹಾರೆ ಕಾಸಿ ಯೋನಿ ದ್ವಾರದಿ ಸೇರಿಸಿ ಘೋರ ಬಡಿವರವ್ವ 2 ಪಾಮರಳಾದಲ್ಲೆ ಮುಂದಿನ ಕ್ಷೇಮವ ಮರೆತಲ್ಲೇ ಭೂಮಿಸುಖಕೆ ಮೆಚ್ಚಿ ತಾಮಸದಲಿ ಬಿದ್ದು ಸ್ವಾಮಿ ಶ್ರೀರಾಮನ ಪ್ರೇಮಕ್ಕೆ ದೂರಾದಿ 3
--------------
ರಾಮದಾಸರು
ಪ್ರಾಣೇಶ ಹರಿ ವಿಠಲ | ಪೊರೆಯ ಬೇಕಿವಳಾ ಪ ನಿನಲ್ಲದಿನ್ನಿಲ್ಲ | ಪ್ರಾಣಾಂತರಾತ್ಮಾ ಅ.ಪ. ಸಾರ ಕೂಪದಿಂದ |ಕಾರುಣ್ಯ ಮೂರುತಿಯೆ | ಆರು ಅನ್ಯರ ಕಾಣೆನೀರ ಜಾಸನ ವಂದ್ಯ | ನಿರ್ಮಲಾತ್ಮಕನೇ 1 ಕನ್ಯೆಮಣಿ ಇವಳೀಗೆ | ನಿನ್ನ ನಾಮಾಮೃತದಬೆಣ್ಣೆಯನು ಉಣಿಸುತ್ತ | ಕಾಪಾಡೊ ಇವಳಾಚಿನ್ನುಮಯ ಶ್ರೀ ಹರಿಯೆ | ಸಮ್ಮೋದ ಪಾಲಿಸುತಚೆನ್ನಾಗಿ ಪೊರೆ ಇವಳ | ಅನ್ನಂತ ಮಹಿಮಾ 2 ಸಾಧು ಸತ್ಸಂಗವನು | ನೀ ದಯದಿ ಕೊಟ್ಟವಳಸಾಧನವ ಗೈಸುವುದೊ ಮಾಧವನೆ ದೇವಾ |ಆಧ್ಯಂತ ರಹಿತ ಹರಿ | ವೇದಾಂತ ವೇದ್ಯನೆಕಾದುಕೋ ಬಿಡದಿವಳ | ಮಧ್ವಮುನಿ ವಂದ್ಯಾ 3 ಕಾಮ ಜನಕನೆ ದೇವ | ಕಾಮಿತವ ಕರುಣಿಸುತನೇಮ ನಿಷ್ಠೆಯನಿತ್ತು | ನೀ ಮುದದಿ ದೇವಾ |ಪಾಮರಳ ಉದ್ಧರಿಸೋ | ಶ್ರೀ ಮನೋಹರ ಹರಿಯೆಸಾಮಜಾಸದ್ವಂದ | ಸಾಮ ಸನ್ನುತನೇ 4 ಕೇವಲಾನಂದವೆನೆ | ಶಾಶ್ವತದ ಸುಖಕಾಗಿಬಾಳ್ವ ಅಳವಡಿಸುತ್ತ | ಕಾವುದೋ ಇವಳಾ |ಗೋವಿಂದಂ ಪತಿಯೆ ಗುರು | ಗೋವಿಂದ ವಿಠ್ಠಲನೆಈ ವಿಧದ ಭಿನ್ನಪವ | ನೀವೊಲಿದು ಸಲಿಸೋ 5
--------------
ಗುರುಗೋವಿಂದವಿಠಲರು
ಲೀಲಾ ಮನೋಹರ ವಿಠಲ | ಪಾಲಿಸೊ ಇವಳಾ ಪ ನೀಲ ಮೇಘ ಶ್ಯಾಮ | ಕಾಳಿಂದಿ ರಮಣಾಅ.ಪ. ಆಪನ್ನ ಪಾಲಾ |ನಿನ್ನವಾಳೆಂದೆನುತ | ಮನ್ನಿಸೀ ತಪ್ಪುಗಳಘನ್ನ ಮಹಿಮನೆ ಕಾಯೊ | ಕಾರುಣ್ಯ ಮೂರ್ತೇ1 ಸತ್ಸಂಗದಲಿ ಇಟ್ಟು | ಸತ್ಸಾಧನೆಯಗೈಸಿಮತ್ಸರಾದ್ಸರಿಗಳನ | ಕತ್ತರಿಸಿ ಹಾಕೀಉತ್ಸಹದಿ ಸಂಸಾರ | ಯಾತ್ರೆಗಳ ಚರಿಸಯ್ಯಮತ್ಸ್ಯ ಮೂರುತಿ ಹರಿ | ಸತ್ಯವ್ರತ ಪಾಲಾ 2 ತರತಮಾತ್ಮಕ ಜ್ಞಾನ | ಸದನದಲಿ ತಿಳಿ ಪಡಿಸಿಹರಿ ಭಕ್ತಿ ವೈರಾಗ್ಯ | ಎರಡು ಅನುಸರಿಸೀ |ಬರುವಂತೆ ಗೈದು ಉ | ದ್ಧರಿಸೊ ಹರಿ ಇವಳನ್ನನರಹರೀ ಮಾಧವನೆ | ಪರಿಪೂರ್ಣ ಕಾಮಾ 3 ಕಾಮ ಜನಕನೆ ದೇವ | ಕಾಮಿನಿಯ ಮನ ಬಯಕೆಪ್ರೇಮದಲಿ ನೀನಿತ್ತು | ಭೂಮ ಗುಣಧಾಮಾ |ಈ ಮಹಾ ಕಲಿಯುಗದಿ | ನಾಮ ಸ್ಮರಣೆಯ ಸುಖವಾನೇಮದಲಿ ನೀನಿತ್ತು | ಪಾಮರಳ ಉದ್ಧರಿಸೋ 4 ಕೈವಲ್ಯ ಪದದಾತಭಾವುಕಳ ಪೊರೆಯೆಂದು | ಭಾವದಲಿ ಬೇಡ್ವೇ |ಭಾವ ಜನಯ್ಯ ಗುರು | ಗೋವಿಂದ ವಿಠ್ಠಲನೆಭಾವದಲಿ ನೀ ತೋರಿ | ಹರುಷವನೆ ಪಡಿಸೋ 5
--------------
ಗುರುಗೋವಿಂದವಿಠಲರು