ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ನಾಕಂಡೆ ನಾಕಂಡೆ ಕಾಳಿಂಗನ ಮಂಡೆಯಮೇಲೆ ಕುಣಿವ ಕೃಷ್ಣನ್ನ ಪ ತಕ ತಕ ಧಿಮಿ ಧಿಮ್ಮಿ ಧಿಮ್ಮಿ ಧಿ- ಮ್ಮಿಕೆಂದು ಕುಣಿವ ಕೃಷ್ಣನ್ನ ನಾಕಂಡೆ ಅ.ಪ ಹೆಡೆಯ ಮೇಲೆ ತಾ ಎಡಗಾಲಿರಿಸಿ ಎಡಗೈಯಲಿ ಬಾಲ ಹಿಡಿದವನ ಬಿಡದೆ ಅಭಯಹಸ್ತವ ತೋರೊ ಒಡೆಯ ಕೃಷ್ಣಮೂರುತಿಯ ನಾಕಂಡೆ ಸ್ವಪ್ನದಲಿ ನಾಕಂಡೆ ಕಂಡೇನೊ ಸಂಪನ್ನಮೂರ್ತಿಯ ಕಂಡೇನೊ 1 ಗೋವಲರ ಮನೆಯ ಪಾಲುಂಡವನ ಗೋವುಗಳ ಕಾಯ್ದ ಗೋಪಾಲನ್ನ ಗೋವಿಂದನೆಂಬ ದೇವರದೇವನ್ನ ಓವಂತೆ ನಾನು ಕಂಡೇನು ಕಂಡೇನು ಕುಣಿಯುತ ಬಂದ ಕೃಷ್ಣನ್ನ ತಣಿಯುವ ಹಾಗೆ ನೋಡಿದೆನು 2 ಗೋವಿಂದನಾಗಿ ತಲೆಕಾಯ್ವವನ ಗೋವರ್ಧನವನೆ ಕೊಡೆಯಾದವನ ಗೋವನಿತೆಯರ ಮಾಮಾಯನನ್ನ ಅವ್ವಯ್ಯ ಚೆನ್ನಾಗಿ ಕಣ್ತುಂಬ ಕಂಡೆ ಆ ಮುದ್ದು ಬಾಲಕೃಷ್ಣನ್ನ ಕಂಡೆ ಸಾಮುದ್ರಿಕಾ ಸಿರಿಯನ್ನಕಂಡೆ 3 ಅಸುರ ಕಂಸನ ಅಸುವನ್ನು ನೀಗಿದನ ಬೆಸೆದ ಕುಬ್ಜೆಯ ಡೊಂಕ ತಿದ್ದಿದವನ ಅಸುತೆಗೆಯ ಬಂದವಳ ಅಸುವನೆ ಹೀರಿದನ ಮಿಸುಕದಂತೆ ಕಂಡೆ ನಾಕಂಡೆ ನಾಕಂಡೆ ಜಾಜಿಪುರೀಶನ ಕಂಡು ಧನ್ಯನಾದೆ ಸಾಜದಿ ದಾಸಾನುದಾಸನಾದೆ 4 ಪಾಪಿನಾ ಕರುಣೆಯ ತೋರಿ ಸಲಹೊ ಭಾಪುರೆ ಗಟ್ಟಿಸುವ ಪುಟ್ಟಪಾದವಿಟ್ಟು ಮೋಪಾಗಿ ಮೆರೆವ ದುಷ್ಟರ ಮೆಟ್ಟೊ ಪುಂಡರ ಪುಂಡರಿಗೆ ಪುಂಡನಾದವನೆ ಪುಂಡರೀಕಾಕ್ಷ ಚನ್ನಕೇಶವನೆ 5
--------------
ನಾರಾಯಣಶರ್ಮರು
ನಾಯಿ ಕಚ್ಚೀತೆಚ್ಚರಿಕೆ ಎಲೋ ಡಾವಿಟ್ಟು ಬರುತಾದೆಚ್ಚರಿಕೆ ಪ ನೋವು ತೀರದೀ ನಾಯಿ ಕಚ್ಚಲು ಕೇವಲ ವಿಷವುಳ್ಳ ಹೇಯನಾಯಿ ಅ.ಪ ಮೆಚ್ಚು ಮದ್ದಿಕ್ಕುವುದು ಅಚ್ಚರೋಗದ ನಾಯಿ ಮುಚ್ಚುಮನೆ ಮುರಿವುದು ಲುಚ್ಚನಾಯಿ ಸಾಚ್ಯನೆಂದು ನಂಬಿ ನೆಚ್ಚಿದವರ ಮೇಲೆ ಕಚ್ಚಿ ಬಿಚ್ಚುವುದೊಂದ್ಹುಚ್ಚು ನಾಯಿ 1 ಸೂಳೆನ್ನ ಹೋಗುವುದು ಮೂಳನಾಯಿ ಶೀಲ ತೊರೆವುದೊಂದು ಜೂಲುನಾಯಿ ಕೀಳರಿಂ ತಲೆಗೂಡಿ ಹಾಳ್ಹರಟ್ಹೊಡೆವುದು ಕೂಳ ಕಾಣದಂಥ ಹಾಳೂರನಾಯಿ 2 ಉಂಡುಂಡು ಮಲಗ್ವುದು ಸುಂಡಿನಾಯಿ ಕಂಡಂತೆ ತಿರಗುವ ದಂಡನಾಯಿ ಹೆಂಡ್ತಿನ್ನ ಬಿಟ್ಟು ಪರರ್ಹೆಂಡರಿಗೊಲಿವುದು ಉಂಡೊಗೆದೆಂಜಲ ನೆಕ್ಕುವ ನಾಯಿ 3 ಬಡವರ ಬಡಿವುದು ಬಡಕನಾಯಿ ಕಡುಗರ್ವದಿರುವುದು ತುಡುಗ ನಾಯಿ ದೃಢಯುತರನು ಕಂಡು ಬಿಡುನುಡಿಯಾಡ್ವುದು ಸುಡುಗಾಡೋಳ್ಬಿದ್ದಸ್ತಿ ಕಡಿಯುವ ನಾಯಿ 4 ವಿಚಾರನರಿಯದ್ದು ಬೇಬಿಟ್ಟಿನಾಯಿ ಅಚಾರಮನವಿಲ್ಲದ್ಹರಕುನಾಯಿ ಊಚಸ್ಥಾನದಿ ಕೂತು ನಾಚದೆ ಮೋರಿಚ್ಛೆ ವಾಚ ಪೇಳ್ವುದೊಂದು ನೀಚನಾಯಿ 5 ಆಸೆ ಪೇಳುವುದೊಂದು ಮೋಸದ ನಾಯಿ ಶಾಶ್ವತ ತಿಳಿಯದ್ದು ಪಾಶದ ನಾಯಿ ಈಶನ ದಾಸರ ದೂಷಿಪುದು ಹೊಲೆ ದಾಸರಮನೆಮುಂದಿನ್ಹೇಸಿನಾಯಿ6 ಕೋಪವ ತೊರೆಯದ್ದು ತಿರುಕನಾಯಿ ಪಾಪಕ್ಕೆ ಅಂಜದ್ದೀ ನರಕಿನಾಯಿ ಭೂಪ ಶ್ರೀರಾಮನ ಜ್ಞಾಪಕಕೆ ತರುವೆನು ಕೂಪದಿ ಉರುಳುವ ಪಾಪಿನಾಯಿ 7
--------------
ರಾಮದಾಸರು
ನೆನೆಯೋ ನೆನೆಯೋ ನೆನೆಯೋ ಮನವೆ ಘನಕರ್ಮಗಳನು ಕಳೆದು ಕಾಯುವ ಪ ನೆನೆವ ಜನರ ಕನಕಾಭರಣನ ಅ.ಪ ಹೊತ್ತು ಯಾಕೋ ಗೊತ್ತು ಯಾಕೋ ನಿತ್ಯ ನೇಮವೆಂದು ಹೊತ್ತು ಗಳೆಯದೆ ನಿತ್ಯ ನಿರ್ಮಲಚಿತ್ತದ ಹರಿಪಾದ1 ಧೂಪವ್ಯಾಕೋ ದೀಪವ್ಯಾಕೋ ಪಾಪಿನಾನೆಂದಾಲಿಸದೆ ತ್ವರ ಪಾದ 2 ಯಾಗ ಯಾಕೋ ಯಜ್ಞ ಯಾಕೋ ನೀಗಿ ಮನದಲಿ ಭೋಗದಾಸೆಯ ಭೋಗಿಶಾಯಿ ಶ್ರೀರಾಮ ಪಾದವ 3
--------------
ರಾಮದಾಸರು