ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಪರಿಯಿಂದಲಾದರೂ ರಾಮನಾಮವನು ಆವ ಪರಿಯಲಿ ನೆನೆದು ಸುಖಿಯಾಗು ಮನವೆ ಪ ಪಿತನಾಜ್ಞೆ ಲಕ್ಷಿಸದೆ ದೃಢದಿ ಪ್ರಹ್ಲಾದನು ಅತಿಶಯದಿ ಹರಿಯ ಧ್ಯಾನವ ಮರೆಯದೆ ಮತಿಗೇಡಿಯಾದ ಮಗನೆನುತ ಕುಲಗೆಡಿಸೆ ಶ್ರೀ ಪತಿಯು ತಾ ಬಂದು ಕಾಯ್ದುದೇ ಸಾಕ್ಷಿ 1 ದೋಷಹಿತನಾದ ದಶಶಿರನ ಒಡಹುಟ್ಟಿ ಕೇಶವನ ಧ್ಯಾನವನು ಮರೆಯದಿರಲು ಸಾಸಿರ ರಾಮಕಥೆಯುಳ್ಳನಕಾ ವಿ- ಭೀಷಣಗೆ ಸಾಮ್ರಾಜ್ಯವಿತ್ತುದೇ ಸಾಕ್ಷಿ 2 ಗಂಡರೈವರು ಸುತ್ತ ಕೆಲದಲಿರಲಾ ಸತಿಯ ಲಂಡ ದುಶ್ಶಾಸನ ಹಿಡಿದೆಳೆಯುತಿರಲು ಪುಂಡರೀಕಾಂಬಕನೆ ಸಲಹೆನಲು ಕರೆಯಲು ದ್ದಂಡನಾಭನೆ ಬಂದು ಕಾಯ್ದುದೇ ಸಾಕ್ಷಿ 3 ಯುದ್ಧಕೆ ನಡೆದಾಗ ಹಂಸಧ್ವಜಸುತನು ತನ್ನ ಬೇ ಕಾದ ಸತಿಯ ಆಜ್ಞೆಯ ನಡೆಸಲು ಪಿತನು ಕಾದೆಣ್ಣೆ ಕೊಪ್ಪರಿಗೆಯೊಳಗೆ ಸುಧನ್ವನ ಹಾಕೆ ಹರಿ ಕಾಯ್ದನೆಂಬುದ ಲೋಕವರಿದುದೆ ಸಾಕ್ಷಿ 4 ಉರ್ವಿಯೊಳು ವಿಪ್ರಜನ್ಮದಿ ಜನಿಸಿದಜಮಿಳಗೆ ಪೂರ್ವಸಂಚಿತ ಪಾಪಶೇಷವಿರಲು ಓರ್ವ ಸತಿಗಾಗಿ ಚಂಡಾಲತಿಯೊಳಗಾಗಿರೆ ಗೀರ್ವಾಣಪುರಿ ಲಕ್ಷ್ಮೀಶನೊಲಿದುದೇ ಸಾಕ್ಷಿ 5
--------------
ಕವಿ ಲಕ್ಷ್ಮೀಶ
ಎಷ್ಟು ಮಾತ್ರ ನಿಂದಲ್ಲದ್ದು ಹರಿ ಸೃಷ್ಟಿಯೊಳಗೆ ಎನ್ನ ಹುಟ್ಟಿಸಿದ್ದು ಪ ನಷ್ಟದೇಹ ಕೊಟ್ಟು ದುಷ್ಟ ಬವಣೆಯಿಂದ ಕಷ್ಟದೊಳಗೆ ಎನ್ನ ನೂಕಿದ್ದುಅ.ಪ ಉಳಿದ ಪಾಪಶೇಷ ಕಳೆಯದಲೆ ಎನ್ನ ಇಳೆಯವಾಸಕ್ಯಾಕೆಳೆಸಿದಲೇ ನಳಿನನಾಭ ನಿನ್ನ ಬಳಿ ಇದೆ ನ್ಯಾಯವೆ ಕಳವಳಪಡಲು ನಾನೊಳಿತೇನು ನಿನಗೆ 1 ಎಷ್ಟು ರೀತಿ ಕಷ್ಟ ತಡಿಬೇಕೊ ಇ ನ್ನೆಷ್ಟುದಿನ ಹೀಗೆ ಕಳೀಬೇಕೊ ಕರ್ಮ ಎನ್ನದಿರಲಿಕ್ಕಾಗಿನು ಶಿಷ್ಟಜನುಮ ಮತ್ತು ಕೊಟ್ಟ್ಯಾಕೊ 2 ಭಕ್ತವತ್ಸಲನೆಂಬ ಬಿರುದೇನೋ ನಿನ್ನ ಭಕ್ತರ ಅಭಿಮಾನ ತೊರೆದೇನೊ ಭಕ್ತರಿಗೀತೆರ ಮೃತ್ಯುಬಾಧೆಯೇನು ಮುಕ್ತಿದಾಯಕ ಜಗತ್ಕರ್ತ ಶ್ರೀರಾಮನೆ 3
--------------
ರಾಮದಾಸರು
ಗಟ್ಟಿ ಮನವ ಕೊಡೊ ಹರಿ ಹರಿ ಗಟ್ಟಿ ಮನವ ಕೊಡೊ ಪ ಸೃಷ್ಟಿಕರ್ತನೆ ನಿನ್ನ ಶಿಷ್ಟ ಪಾದದೆನಗೆ ನಿಷ್ಠೆ ಭಕ್ತಿಯ ನೀಡು ಬಿಟ್ಟು ಅಗಲದಂತೆ ಅ.ಪ ದುರಿತದೋಷಗಳು ಕಡಿದು ಬರುವ ಕಂಟಕವನ್ನು ಪರಹರಿಸೆನಗೆ ಅರಿವು ನಿಲಿಸಾತ್ಮನ ಕುರಹು ತಿಳಿಸುಸಿರಿವರನೆ ಕರುಣದಿ 1 ಚಲನವಲನಗಳನು ಕಳೆದು ನಿಲಿಸು ಜ್ಞಾನವನ್ನು ಹೊಲೆಯ ದೇಹದ ನೆಲೆಯ ತಿಳಿಸಿ ಎನ ಗಳುಕಿಸು ಭವದಾಸೆ ಘಳಿಲನೆ ಒಲಿದು 2 ತಾಪತ್ರಯಗಳನು ಛೇದಿಸಿ ಪಾಪಶೇಷಗಳನ್ನು ಲೋಪಮಾಡಿ ಇಹದ್ವ್ಯಾಪರದೊಳಗಿಂದ ನೀ ಪೊರೆ ಭವನಿರ್ಲೇಪನೆ ದಯದಿ 3 ಕಟ್ಟಿ ಕಾದುತ್ತಿರುವಸಂಸಾರ ಕೆಟ್ಟಬವಣೆಜನ ಬಟ್ಟ ಬಯಲು ಮಾಡಿಕೊಟ್ಟು ನಿಜಾನಂದ ಶಿಷ್ಟರೊಳಾಡಿಸೆನ್ನ ಸೃಷ್ಟೀಶ ದಯದಿಂ 4 ನೀನೆ ಕರುಣದಿಂದ ಬಿಡಿಸಯ್ಯ ಯೋನಿಮಾರ್ಗ ತಂದೆ ಧ್ಯಾನದಿರಿಸಿ ನಿನ್ನ ಮಾಣದ ಪದ ನೀಡು ದೀನದಯಾಳು ಶ್ರೀ ಜಾನಕಿರಾಮ 5
--------------
ರಾಮದಾಸರು