ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾ ನೋಡಿ ಬಂದೆ ಕೇಳಮ್ಮ ಗೆಳತಿ ಪ ನಾನಿಲ್ಲ ನೀನಿಲ್ಲ ಏನಂದರೇನಿಲ್ಲ ಕಾಣುವ ಮಾತಲ್ಲ ಜಾಣೆ ಸುಳ್ಳಲ್ಲ ಅ.ಪ ಹಸುರಿಲ್ಲ ಕೆಂಪಿಲ್ಲ ಪಶುವಿಲ್ಲ ಪಕ್ಷಿಲ್ಲ ವಸುಧಿಲ್ಲ ಉದಧಿಲ್ಲ ವ್ಯಸನಿಲ್ಲ ಬಂಧವಿಲ್ಲ ಹಸಿವಿಲ್ಲ ತೃಷೆಯಿಲ್ಲ ದೆಸೆಯಿಲ್ಲ ದಿಕ್ಕಿಲ್ಲ ನಿಶೆಯಿಲ್ಲ ದಿವಯಿಲ್ಲ ಕುಸುಮಾಕ್ಷಿ ಸುಳ್ಳಲ್ಲ 1 ಜಲವಿಲ್ಲ ಗಗನಿಲ್ಲ ನೆಲವಿಲ್ಲ ಗಿರಿಯಿಲ್ಲ ಕುಲವಿಲ್ಲ ಚಲವಿಲ್ಲ ಮಲಿನಿಲ್ಲ ಶೀಲಿಲ್ಲ ಜಳಕಿಲ್ಲ ಊಟಿಲ್ಲ ಬೆಳಕಿಲ್ಲ ಕಾಳಿಲ್ಲ ತಳಿಯಿಲ್ಲ ತಮಯಿಲ್ಲ ಲಲನೆ ಸುಳ್ಳಲ್ಲ 2 ಕೃಪೆಯಿಲ್ಲ ಕಪಟಿಲ್ಲ ಜಪವಿಲ್ಲ ತಪವಿಲ್ಲ ಗುಪಿತಿಲ್ಲ ಬೈಲಿಲ್ಲ ನೆಪ್ಪಿಲ್ಲ ಮರೆವಿಲ್ಲ ವಿಪಿನಿಲ್ಲ ಸದನಿಲ್ಲ ರಿಪುವಿಲ್ಲ ಸ್ನೇಹವಿಲ್ಲ ಅಪ್ಪಯಿಲ್ಲ ಅವ್ವಯಿಲ್ಲ ನಿಪುಣೆ ಸುಳ್ಳಲ್ಲ 3 ರಾಗಿಲ್ಲ ರಚನಿಲ್ಲ ಯಾಗಿಲ್ಲ ಯಜ್ಞಿಲ್ಲ ತ್ಯಾಗಿಲ್ಲ ತ್ಯಜನಿಲ್ಲ ಭೋಗಿಲ್ಲ ಭಾಗ್ಗ್ಯಿಲ್ಲ ರೋಗಿಲ್ಲ ಶ್ರಮವಿಲ್ಲ ಬೈಗಿಲ್ಲ ಬೆಳಗಿಲ್ಲ ಯಾಗಿಲ್ಲ ಪಾಪವಿಲ್ಲ ಭಗಿನಿ ಸುಳ್ಳಲ್ಲ 4 ಹೋಮವಿಲ್ಲ ವಿಪ್ರಿಲ್ಲ ಧೂಮವಿಲ್ಲ ಧೂಳಿಲ್ಲ ಭೂಮಿಲ್ಲ ಜನನಿಲ್ಲ ಕಾಮಿಲ್ಲ ಮರಣಿಲ್ಲ ನೇಮಿಲ್ಲ ಕ್ರಿಯವಿಲ್ಲ ನಾಮಿಲ್ಲ ರೂಪಿಲ್ಲ ಸ್ವಾಮಿ ಶ್ರೀರಾಮ ಬಲ್ಲ ಭಾಮೆ ಸುಳ್ಳಲ್ಲ 5
--------------
ರಾಮದಾಸರು
ಹರಿಯ ಮರೆದುದಕಿಂತ ಪಾಪವಿಲ್ಲಾ | ಹರಿ ಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲಾ ಪ ಗೋಹತ್ಯ ಸುರಾಪಾನ ಕನಕತಸ್ಕರ ಸುಜನ- | ಕಪಟ ವ್ಯಸನ || ಬಾಹಿರವಾಗ್ ದ್ವೇಷ ಪರದಾರಗಮನ ವಿ- | ವಾಹಗಳ ಮಾಣಿಸುವ ಪಾಪಕಿಂತಲಿ ಮೇಲು 1 ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ | ಹಿಂಗದಲೆ ಗಾಯತ್ರಿ ಮಂತ್ರ ಮೌನ || ಕರುಂಗ ದಾನ-ಧರ್ಮ ವೃತ್ತಿ ಕ್ಷೇತ್ರ ರತುನ | ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು 2 ಹಾಸ್ಯ ವಿರೋಧ ಮದ ಮತ್ಸರ ಪರಕಾರ್ಯ | ದಾಸ್ಯದಲಿ ಕೆಡಿಸುವ ಶಠನ ಲೋಭಿ || ವೈಶ್ವ ದೇವಾಹಿತ ಅತಿಥಿಗಳ ನಿಂದ್ಯರ- | ಹಸ್ಯ ದೂರುವ ಬಲು ಪಾಪಕಿಂತಲು ಮೇಲು 3 ಭಾಗವತ ಪುರಾಣ | ಸಾರ್ಥತ್ಯವಾದ ಪ್ರವಚನ ಶಾಸ್ತ್ರ || ಸಾರ ಪ್ರಬಂಧ | ಅರ್ಥ ಪೇಳುವ ಬಲು ಪುಣ್ಯಕಿಂತಲಿ ಮೇಲು4 ಮಿತ್ರಘ್ನ್ಯಗರಳ ಪ್ರಯೋಗ ಗರ್ಭಿಣಿವಧ | ಗೋತ್ರಸಂಸರ್ಗ ಬಲು ಪ್ರಾಣಹಿಂಸಾ || ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ- | ಳತ್ರದಿ ದ್ರೋಹ ಬಲು ಪಾಪಕಿಂತಲಿ ಮೇಲು 5 ಕರ್ಮ ಸರ್ವದಲ್ಲಿ ಗಯಾ ಶ್ರಾದ್ಧ | ಭೂಧರ ಸಮಾಗಮ ಸತ್ ಶ್ರªಣಾ || ಆದಿತ್ಯ ಚಂದ್ರ ಉಪರಾಗ ಪರ್ವಣಿ ನಾನಾ | ರಾಧನೆಯರೆ ಬಲು ಪುಣ್ಯಕಿಂತಲು ಮೇಲು 6 ಆವಾವ ಪಾಪ-ಪುಣ್ಯಗಳದವರ ಕಿಂಕರವು | ದೇವನ ನೆನಸಿದಂಥ ನೆನೆಯದಂಥ || ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ | ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕ7
--------------
ವಿಜಯದಾಸ