ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಂದೆಯೆ ನೀನೆನಗಹುದೈ ಬಂಧುರ ದುರಿತಾರಿ ನಿನ್ನ ಬಾಲನು ನಾನಾ ನಂದದಿ ಪೇಳ್ವೆನು ಕರುಣಾ ಸಿಂಧುವೆ ಪೊರೆಯೆನ್ನನಿಂದು ಶ್ರೀಮದ್ಗುರುವೇ ಕಂದ 1 ಸನ್ನುತಗುರುವರ ನಿಮ್ಮಯ ಚನ್ನಡಿದಾವರೆಯ ನಂಬಿ ಸಲೆ ಸೇವಿಸುವಂ ಗಿನ್ನಿತರ ಕ್ಷೇತ್ರಭ್ರಮೆ ಯೆನ್ನುವುದೇನುಂಟು ನೋಡಲಿಳೆಯೊಳಗನಿಶಂ 2 ತಂದೆಯಹುದು ನೀನೆ ಶ್ರೀಗುರು ತಂದೆಯಹುದು ನೀನೆ ಪ ಅಂದದಿ ಸಂಸೃತಿಸಂಗವ ಜಾರಿಸಿ ಬಂಧುರ ತತ್ವವನರುಹಿದ ಪರಮನೆ ಅ.ಪ ಎಷ್ಟುಕರುಣಿ ಎನ್ನ ಪಾಪವಸುಟ್ಟು ಭ್ರಾಂತಿವಿಷಯ ಕೃಷ್ಣನಪಾದವಮುಟ್ಟಿ ಯಜಿಸಿ ಮನ ನೆಟ್ಟುಯೋಗದಲಿ ವಿಮಲನಮಾಡಿದ 1 ನಾಮ ರೂಪ ಮರೆಸಿ ಸೋಹಂ-ಭಾವಮುದ್ರೆ ಧರಿಸಿ ತಾಮಸ ಬುದ್ಧಿಯ-ತರಿದೀಡಾಡಿಸಿ ನೇಮದಿ ಜಗದೊಳು-ಚರಿಸೆಂದರಸಿದ 2 ಭೇದವಾದ ತೊರಸಿ ಚಿತ್ಕಳೆ-ನಾದಕವಚ ತೊಡಿಸಿ ಸಾಧಿಸಿ ವಿರತಿಯ-ವರವೈರಾಗ್ಯವ ಬೋಧಿಸುತಲಿ ತನ್ನಂತೆಯೆಮಾಡಿದ 3 ಚರಮ ಶ್ಲೋಕವನ್ನು ಅಷ್ಟಾಕ್ಷರಯುಗಮಂತ್ರವನ್ನು ತಿರುಮಂತ್ರಾರ್ಥವ ತೀರ್ಥಪ್ರಸಾದವ ತರಳನಿಗಿಯುತ ಮರವೆಯ ನೂಕಿದ 4 ಬಂದ ಕಷ್ಟಗಳನು ಬೇಗದಿಭಂಗಮಾಡಿ ತಾನು ಬಂದು ಹೃದಯ ವರಮಂದಿರದೊಳುತಾ ನಿಂದು ಮೋಕ್ಷವನು ಸಂಧಿಸಿ ಸಲಹಿದ 5 ಶರಣು ಪೊಕ್ಕ ನರನ ಸಂತತಕರವ ಪಿಡಿದು ಮುನ್ನ ವರಮಹದೇವನ ಪುರ ಶ್ರೀರಂಗನೆ ಹರುಷದೊಳೆನ್ನನು ಪರದೊಳ್ಬೆರಸಿದ 6
--------------
ರಂಗದಾಸರು
ಜಯ ಪಾಂಡುರಂಗ - ನಾ ನಿನ್ನ ಮನಕೆ ಬಾರೆನೆ ಪನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದಬಲೆಯೊಳು ಸಿಲುಕುವೆನೆ - ಜಯ ಪಾಂಡುರಂಗ ಅ.ಪಕೆಟ್ಟ ಕಿರಾತನ ಬೆಟ್ಟದಂಥ ಪಾಪವಸುಟ್ಟು ವಾಲ್ಮೀಕಿ ಮುನಿಯೆನಿಸಿದೆ 1ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆಅಂತಕನ ಬಾಧೆಯ ಬಿಡಿಸಿದೆಯೊ 2ತಂದೆ ತಾಯ್ಗಳನು ತೊರೆದ ಧ್ರುವನಿಗೆಚೆಂದದಿಂದ ಮಾರ್ಗವ ತೋರಿದೆಯೊ 3ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿಶಂಕೆಯಿಲ್ಲದೆ ಅವಳ ಕೂಡಿದೆಯೊ 4ತೊತ್ತಿನ ಮಗನ ಮನೆಯಕೂಡತೆಪಾಲನು ಸವಿದುಮತ್ತವಗೆ ಮುಕ್ತಿಯ ತೋರಿದೆಯೊ 5ಐದು ಮಂದಿಯ ಕೂಡ ಸರಸವು ದ್ರೌಪದಿಗೆಐದೆಲಜ್ಜೆಯ ಕಾಯ್ದೆಯೊ6ದೀನರನುದ್ಧರಿಪಪುರಂದರವಿಠಲಏನು ಕಾರಣ ನನ್ನ ಮರೆತೆಯೊ 7
--------------
ಪುರಂದರದಾಸರು