ಸರಸಿಜಾಲಯೆ ಪೊರೆಯೆ ಬೇಗನೇ ಹೇ ಮಾತೆ ಪ
ಸಾರಸಭವನ ವೀರ ಮಾತೆಯೆ
ನೀರಜಾಕ್ಷಿಯೆ ಹೇ ಮಾತೆ
ಸಾರಸಾಕ್ಷ ಪರಮಪ್ರಿಯಳೆ
ಸಾರಿಬಾರೆನ್ನ ಹೇ ಮಾತೆ 1
ತುರುವು ತನ್ನ ಕರುವ ಧ್ವನಿಯಂ
ಅರಿತು ಬಾರದೆ ಹೇ ಮಾತೆ ಈ
ತೆರದಿ ಎನ್ನ ಮೊರೆಯ ಕೇಳಿ
ಕರವ ಹಿಡಿಯೆ ಹೇ ಮಾತೆ 2
ಪರಿಯು ಯಾರೆ ಸಿರಿಯು ನಿನಗೆ
ಪರಮಪಾವನೆ ಹೇ ಮಾತೆ
ಕರುಣದಿಂದ ಪೊರೆದು ತೋರೆ
ಸಿರಿರಂಗೇಶವಿಠಲನ ಹೇ ಮಾತೆ 3