ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರ್ಮೇಂದ್ರಿಯಕ್ಕೆ ದಟ್ಟಡಿಯನಿಡಲೊಲ್ಲೆ ದುಷ್ಕರ್ಮೇಂದ್ರಿಯಕ್ಕೆ ಕಾಲ್ಗೆರಗುತ್ತಲಿಹೆ ಮರುಳೆ ಪ ಪುಸ್ತಕವ ಬಿಚ್ಚಿ ಪೌರಾಣ ಶಾಸ್ತ್ರಂಗಳಿಂವಿಸ್ತರಿಸಿ ಹರಿಯ ಕಲ್ಯಾಣಗುಣ ಕಥೆಯನ್ನುಸ್ವಸ್ಥದಿಂ ಕುಳ್ಳಿರ್ದು ಕೇಳೆಂಬ ಠಾವಿನಲಿಮಸ್ತಕಕೆ ವ್ಯಥೆಯೆಂದು ಮನೆಯತ್ತ ನೀ ನಡೆವೆಹಸ್ತದಿಂ ಹಣ ಭತ್ತ ಹಚ್ಚಡಂಗಳ ಕೊಟ್ಟುಕುಸ್ತರಿಸಿ ಬಿನಗು ಚಾರಿತ್ರ್ಯವಂ ಲಾಲಿಸುತದುಸ್ತರದ ಲೆತ್ತ ಚದುರಂಗ ಪಗಡೆಯನು ಉದಯಾಸ್ತದವರೆಗಾಡುತ ಮೇಲೇಳದಿಹೆ ಮರುಳೆ 1 ಸುರಭಿ ಸೇವಂತಿ ಮಲ್ಲಿಗೆ ಮೊಲ್ಲೆ ಬಕುಳ ಪಾದರಿ ಚಂಪಕಾ ಕಂಜ ಕಣಿಗಲು ಶ್ರೀ ತುಳಸಿಪರಿಮಳದ ಪಚ್ಚೆತೆನೆ ಹರಿಪಾದಕರ್ಪಿಸುತೆನಿರುಮಾಲ್ಯ ಪರಿಮಳವನಾಘ್ರಾಣಿಸೆನೆ ಒಲ್ಲೆಬಿರಿದ ಕೆಂಜಾಜಿ ಪುಷ್ಪಂಗಳಂ ವನಿತೆಯರಸಿರಿ ಮುಡಿಗೆ ಮುಡಿಸಿ ಕುಂತಳ ಸೌರಭವ ಕಂಡುಹರುಷದಿಂ ರೋಮ ಪುಳಕಿತನಾಗುತಡಿಗಡಿಗೆಪರಮ ಸಂತೋಷಮಂ ನೀ ಪಡೆಯುತಿಹೆ ಮರುಳೆ 2 ಭಾಗವತ ನೃತ್ಯವಂ ನೋಡುತತಿಶಯದ ಹರಿದಿನವ್ರತದಲ್ಲಿ ಜಾಗರವ ಮಾಡದಲೆ ನಿದ್ರೆಗೈವೆಕೃತಕ ಪಣ್ಯಾಂಗನೆಯ ಚತುರ ನೃತ್ಯಕೆ ಮನೋ-ರಥ ಸಿದ್ಧಗೊಳಿಸಿ ಈಕ್ಷಿಪೆನೆಂದು ಕುಜನ ಸಂ-ಮತವೆರಸಿ ಬೆಳತನಕ ಕುಳ್ಳಿರುತ ನಿದ್ರಾ ವ-ರ್ಜಿತನಾಗಿ ಪರಮ ಸಂತಸ ಪಡೆಯುತಿಹೆ ಮರುಳೆ 3 ಗಂಧ ಶಾಲ್ಯಾನ್ನ ನವಘೃತ ತೋಯ ಪಳಿದ್ಯ ನಲ-ವಿಂದ ಪರಮಾನ್ನ ಮಹಶಾಕ ಸೀಕರಣೆಯನುಒಂದೆರಡು ಪರುಠವಿಸಿ ದ್ವಾದಶಿ ದಿನದಂದು ಮು-ಕುಂದಾರ್ಪಣವ ಮಾಡಿ ಮನೆಯೊಳಗೆ ಉಣ್ಣದಿಹೆಬಂದಾವನಾದೊಡಂ ಕರೆಯೆ ದೇಹದ ಪುಣ್ಯವೆಂದವರ ಮನೆಗಳಿಗೆ ಹೋಗಿ ನೀ ಕುಳ್ಳಿರ್ದುಚಂದದಿಂ ಬಣ್ಣಿಸುತ ಮಿಂಚುಕೂಳುಗಳನ್ನುತಿಂದೊಡಲ ಪೊರೆದು ಕಾಲವ ಕಳೆಯುತಿಹೆ ಮರುಳೆ4 ಸಿರಿ ವೈಕುಂಠ ಪದವಿಯನು ಪಡೆ ಮರುಳೆ 5
--------------
ಕನಕದಾಸ
ಪುಷ್ಪಧರಿಸುವ ಉತ್ಸವಗೀತೆ ಪುಷ್ಪವನ್ನುಧರಿಸುವ ಉತ್ಸವ ನೋಡುವ ಬನ್ನಿ ಭಕ್ತವತ್ಸಲನರಾಣಿ ರಂಗನಾಯಕಿಗಿಂದು ಪ. ವೈಶಾಖಮಾಸದಲಿ ಕೃಷ್ಣಪಕ್ಷದಲಿ ಲಕ್ಷ್ಮೀಗೆ ಪುಷ್ಪವನ್ನು ಧರಿಸುವ ಅರ್ತಿಯ ನೋಡುವ ಬನ್ನಿ 1 ವಿಧವಿಧದ ಪುಷ್ಪವ ಮುಡಿಸಿ[ದರು] ಮದನನಮಾತೆಯ ಶಿರಸಿಗೆ 2 ಪಂಕಜನಾಭನರಾಣಿ ಪರಮಕಲ್ಯಾಣಿ ನೀಲವೇಣಿ ಪಂಕಜಪಾಣಿ ಕೀರವಾಣಿ ಸುಶೋಣೀ 3 ಸುರರು ಅಸುರರು ಕೂಡಿ ಶರಧಿಮಥನವ ಮಾಡೆ ಭರದಿಂದ ಉದಿಸಿಬಂದ ವರಲಕ್ಷ್ಮೀದೇವಿಗಿಂದು 4 ಜಯವಿಜಯರಿಗಾಗಿ ಜನಿಸಿ ತಾ ಭೂಮಿಯಲಿ [ಗೆದ್ದ] ಇಂದು 5 ಸೃಷ್ಟಿಭಾರವನಿಳುಹಲೆಂದು ಕೃಷ್ಣಮೂರುತಿ ಜನಿಸಿ [ಒಲಿದ] ಭೀಷ್ಮಕನುದರದಿ ಬಂದ ರುಕ್ಮಿಣೀದೇವಿಗೆ ಇಂದು6 ಮಲ್ಲೆ ಮಲ್ಲಿಗೆ ವಕುಳ ಮಂದಾರ ಪಾರಿಜಾತ[ವ] ಫುಲ್ಲನಾಭನರಾಣಿಗೆ ಲೋಲಾಕ್ಷಿಯರು ಮುಡಿಸಿದರು 7 ತಾಳೆ ಚಂಪಕ ಕಮಲಮಾಲೆ ಸುರಗಿ ಜಾಜಿಯ ನೀಲವರ್ಣನರಾಣಿಗೆ ಲೋಲಾಕ್ಷಿಯರು ಮುಡಿಸಿದರು 8 ಮರುಗ ದವನ ಪಚ್ಚೆತೆನೆಯು ಸುಗಂಧರಾಜವ ಪರಮ ಸುರರು ತಂದು ಮುಡಿಸುವರು 9 ವಸಂತೋತ್ಸವಕೆಂದು ವಸುಧೀಶನರಸಿ ತಾನು ಕುಶಲದಿಂದಲೆ ಬಂ[ದಳಾವ]ಸಂತಮಂಟಪಕಿಂದು 10 ರತ್ನದ ಕೆಂಪಿನ ಕಿರೀಟವಿಟ್ಟು ತಿದ್ದಿದ ಕಸ್ತೂರಿಬಟ್ಟು ಮುತ್ತುಸುತ್ತಿದ ಮೂಗಿನಬಟ್ಟು ಹರಿದ್ರಾವಸ್ತ್ರವನುಟ್ಟು 11 ಕರ್ಪೂರದ ಚೂರ್ಣದಿ ಮಿಂದು ಭಕ್ತರಿಟ್ಟ ನೈವೇದ್ಯವನುಂಡು [ತಾ]ಪೊರಟಳು ಮಿತ್ರೆಯರ ಕೋಲಾಟವ ನೋಡುತ್ತ ತನ್ನರಮನೆಗೆ 12 ಹುಟ್ಟಿದಮನೆ ಕ್ಷೀರಾಬ್ಧಿ ಹೊಕ್ಕಮನೆ ಶ್ರೀವೈಕುಂಠವ ಬಿಟ್ಟು ಭಕ್ತರ ಸಲಹುವೆನೆಂದು ಬಂದ ವೆಂಕಟರಂಗನರಸಿಗೆ 13
--------------
ಯದುಗಿರಿಯಮ್ಮ