ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೂ ಸಾರ್ಥಕವಿಲ್ಲವೋ ಪ ಏನೂ ಸಾರ್ಥಕವಿಲ್ಲ ಜ್ಞಾನಮಾರ್ಗಗಳಿಲ್ಲ ಮಾನಸ ಸ್ಥಿರವಿಲ್ಲ ಶ್ರೀನಾಥನಿದಬಲ್ಲ ಅ.ಪ ಎರಡುಕಂಬದ ಮೇಲೆ ಇರುವ ಪಂಜರವಿದು ಬರಿಯಡಂಭದ ಜಗವು ಸ್ಥಿರವೆಂಬ ತನುವಿನೊಳು 1 ತೈಲವಿಲ್ಲದ ದೀಪ ಮಲಿನವಾಗುವ ತೆರದಿ ಸುಲಭದೊಳಿಹ ಪ್ರಾಣ ತೊಲಗಿದ ಬಳಿಕಿನ್ನು 2 ಸಂತೆಗೈದಿದ ಜನದಂತೆ ಪಂಚೇಂದ್ರಿಯವ ನಾಂತ ದೇಹವು ವ್ಯರ್ಥ ಅಂತರಾತ್ಮನು ಹೋಗೆ 3 ರಸನೆ ತೊದಲುವ ಮೊದಲು ಅಸುವು ಪೋಗುವ ಮೊದಲು ಅಸುರಾರಿ ಎಂಬ ಮಧುವ ರಸನೆಯೊಳಿಡೋ ಮನುಜ4 ದಿನದಿನ ಹರಿಕೃಷ್ಣ ವನಮಾಲಿಯ ನುತಿಸೋ ತನುವ ಪ್ರಾಣವ ಬಿಡುವ ದಿನವನರಿಯೆ ನೀನು 5 ದೇವದೇವನೆ ನಿನ್ನ ಸೇವಕನೆಂದೆನ್ನ ಭಾವಿಸೋ ಮದನಾಂಗ ಮಾವಿನಕೆರೆರಂಗ6
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಭಕ್ತಿಯನು ಪಾಲಿಸುತ ಭಕ್ತರನು ಪಾಲಿಸುವ ಮುಕ್ತಿದಾಯಕ ಹರಿಯ ಸೇವೆಯನು ಮಾಳ್ಪೇ ಪ ಪಂಚೇಂದ್ರಿಯವ ಗೆದ್ದು ಪಂಚಾಮೃತಗಳಿಂದ ಕಂಚಿಪುರ ವಾಸಿಯ ಕಾಯವನು ತೊಳೆದೂ 1 ಆರು ಅಂಗಳ ಜೈಸಿ ಆರು ಶಾಸ್ತ್ರಗಳಿಂದ ಧಾರೆ ಪುರವಾಸಿಗೇ ಗಂಧ ಲೇಪಿಸುತಾ 2 ಚಾರು ವೇದಗಳಿಂದ ನಿತ್ಯ ಪುಷ್ಪವೇರಿಸುತ 3 ಎಂಟ ಕೀಳರ ಗೆದ್ದು ತುಂಟರೈವರ ಕೊಂದು ಬಂಟನಾಗುತ ಹರಿಯ ಮಹಿಮೆಯನು ಭಜಿಸಿ 4 ಶಾಪ ತಾಪವ ಕಳೆದು ತ್ರಿಪುರಾರಿ ವದ್ಯನಿಗೆ ಧೂಪದೀಪಗಳಿಂದ ಆರತಿಯ ಬೆಳಗೀ 5 ಅನುಮಾನವನು ತ್ಯಜಿಸಿ ಶ್ರೀ ಚೆನ್ನಕೇಶವನಿಗೆ ತನುಮನ ಧನದಿಂದ ಆತ್ಮವರ್ಪಿಸುವೇ 6
--------------
ಕರ್ಕಿ ಕೇಶವದಾಸ
ಹರಿಯೆ ಸರ್ವೋತ್ತಮ ಪರದೈವವೆಂತೆಂಬ ಮರುತ ಮತವ ಸಾರಿರೊ ಪ. ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ. ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು ಪಂಚ ಮೂರ್ತಿಯ ಭಜಿಸಿರೊ ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1 ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು ಎಂಟು ದಳದಿ ಕಾಣಿರೊ ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2 ಮೂರು ಗುಣಗಳಿಂದ ಮೂರು ಮಾಳ್ಪ ಜಗವ ಮೂರು ರೂಪವ ನೆನೆಯಿರೊ ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3 ಕಂಡ ದೈವಗಳಿಗೆ ಮಂಡೆಯ ಬಾಗಿಸುತ ಬೆಂಡು ಆಗಲಿ ಬೇಡಿರೊ ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ ಗಂಡುಗಲಿಯಾಗಿರೊ | ಧೈರ್ಯವ ತಾಳಿ 4 ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು ಉರ್ವಿಯೊಳಗೆ ಬಾಳಿರೊ ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ ಸರ್ವಬಿಂಬನೆನ್ನಿರೊ | ಮೂಲರೂಪಿ 5
--------------
ಅಂಬಾಬಾಯಿ
ನಾರಾಯಣನೆಂಬ ನಾಮದ ಬೀಜವ ನಿಮ್ಮನಾಲಿಗೆ ತುದಿಯಿಂದಲಿ ಬಿತ್ತಿರಯ್ಯ ಪ.ಹೃದಯಹೊಲವನು ಮಾಡಿ ಮನವ ನೇಗಿಲ ಮಾಡಿ |ಶ್ವಾಸೋಚ್ವಾಸ ಎರಡೆತ್ತಮಾಡಿ ||ಜಾÕನವೆಂಬ ಹಗ್ಗ ಕಣ್ಣಿಯ ಮಾಡಿ ||ನಿರ್ಮಮವೆಂಬ ಗುಂಟೆಲಿ ಹರಗಿರಯ್ಯ 1ಮದಮತ್ಸರಗಳೆಂಬ ಮರಗಳನೆ ತರಿದು |ಕಾಮಕ್ರೋಧಗಳೆಂಬ ಕಳೆಯ ಕಿತ್ತಿ ||ಪಂಚೇಂದ್ರಿಯವೆಂಬ ಮಂಚಿಕೆಯನೆ ಹಾಕಿ |ಚಂಚಲವೆಂಬ ಹಕ್ಕಿಯ ಹೊಡಿಯಿರಯ್ಯ 2ಉದಯಾಸ್ತಮಾನವೆಂಬ ಎರಡು ಕೊಳಗದಲಿ |ಆಯುಷ್ಯವೆಂಬ ರಾಶಿ ಅಳೆಯುತಿರೆ ||ಸ್ವಾಮಿ ಶ್ರೀ ಪುರಂದರವಿಠಲನ ನೆನೆದರೆ |ಪಾಪ ರಾಶಿಯ ಪರಿಹರಿಸುವನಯ್ಯ 3
--------------
ಪುರಂದರದಾಸರು