ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಾರತೀ ಪತಿನುತ ವಿಠಲ ನೀನಿವಳ ಉದ್ಧಾರ ಮಾಡುವುದು ಹರಿಯೇ ಪ ತಾರಕನು ನಿನಗನ್ಯ ಉಂಟೇ ಈರೇಳು ಲೋಕದಲಿ ಧೊರೆಯೇ ಅ.ಪ. ಜನ್ಮಜನ್ಮದಲಿ ಬಲುನೊಂದು ಸತ್ಪುಣ್ಯಗಳನೇ ಮಾಡಿಜನ್ಮಪೊಂದುತಲಿ ಸತ್ಕುಲದಿ ಸನ್ಮತದವನ ಕೈಯ ಪಿಡಿದು |ಸನ್ಮಧ್ವಮತ ದೀಕ್ಷೆಗಳ - ಒಮ್ಮನದಿ ತಾಳುತ್ತನಿಮ್ಮಡಿಯ ನಾಶ್ರಯಿಸಿ ಬಂದಿಹಳ ಸಲಹುವುದು 1 ತರತಮ ಜ್ಞಾನದಲಿ - ಉರುತರೋತ್ಸುಕತೆಯನುನಿರತ ಹರಿಗುರುಗಳಲಿ ಉರುತರದ ಭಕ್ತಿಯನೂ |ಹಿರಿಯರನು ವಿನಯದಿಂ ಪರಿಚರಿಪ ಮತಿಯನ್ನುಕರುಣಿಸೀ ಸಲಹಯ್ಯ ಮರುತಾಂತರಾತ್ಮಾ 2 ಪಂಚಭೇಧದ ಜ್ಞಾನ ಸಂಚಿಂತನೆಯನೇ ಕೊಟ್ಟುಮಿಂಚಿನಂದದಿ ತೋರೊ - ಹೃತ್ಪಂಕಜನಲೀಅಂಚೆವಹಪಿತ ನಿನ್ನ ಪದಕಮಲ ಭಜಿಪಳಿಗೆವಾಂಛಿತಾರ್ಥದನಾಗಿ - ಸಲಹ ಬೇಕಿವಳಾ 3 ಪತಿ ನೀನೆ ಎಂಬಂಥಮತಿಯಿತ್ತು ಭವಗಳನ ಉತ್ತರಿಸು ಹರಿಯೇ 4 ನಿನ್ನ ಪದ ಕಮಲದಲಿ ಜ್ಞಾನಭಕುತಿಗಳಿತ್ತುನನ್ನೆ ಯಿಂದಿವಳ ಚೆನ್ನಾಗಿ ಸಲಹೊ ಹರಿಯೇ |ಸನ್ನುತಿಸಿ ಪ್ರಾರ್ಥಿಸುವೆ - ಮನ್ನಿಸೆನ ಬಿನ್ನಪವಘನ್ನ ಮಹಿಮನೆ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ಶ್ರೀ ವಾದಿರಾಜರು ಕರುಣದಿ ನೋಡೋ ಮದ್ಗುರುವರ ವಾದಿರಾಜನಂಬಿದ ಭಕ್ತರ ಸುರತರುವೇ ಪ ಪರಿಪರಿ ಭವಸಾಗರದಲಿ ಮುಳುಗುವತರಳನ ಮರೆವುದು ಥರವೇ ಅ.ಪ. ನಿಗಮ ವಿನುತ ಹಯವದನನಬೇಗ ಒಲಿಸಿದೆ ನೀ ಮುದದಿಯೋಗ ಜಿತಾಸನನಾಗಿರುವನೆ ತಲೆಬಾಗುವೆ ಭಯವಳಿ ತ್ವರಿತ 1 ವಾದದೊಳ್ ವಾದಿಗಳನೆ ಗೆದ್ದು ಗುರುಮತಸಾಧಿಸಿದೆಯೊ ಬಲವಂತಸಾಧು ಸೇವಿತ ನಿನ್ನ ಪಾದವ ನಂಬಿದೆ ಭವಬಾಧೆ ಕಳೆಯೋ ಮಹಂತಕ್ರೋಧ ರಹಿತ ಪಂಚಭೇಧ ಸುಜ್ಞಾನವಬೋಧಿಸುವ ದಯವಂತ 2 ಅತಿ ವಿಮಲನೆ ನಿನ್ನ ಸ್ತುತಿಸಲರಿಯೆ ನಾನುಮತಿವಂತನೆ ಮಹಾದಾತಾಸತತ ಬೇಡುವೆನು ಶ್ರೀಪತಿ ಭಜನೆಗೆ ಮನಜಿತವಾಗಿ ಇರಲಯ್ಯ ತಾತಕ್ಷಿತಿಯೊಳು ಕಂಡ ದುರ್ಮತಿಗಳ ಬಿಡಿಸೋದತಿ ಅಧಿಕವೇನೋ ಅನಾಥನಾಥಪತಿತ ಪಾವನ ರಮಾಪತಿ ವಿಠಲನ ನಿರುತ ನೋಳ್ಪ ಲಾತವ್ಯಬ್ಯಾತ 3
--------------
ರಮಾಪತಿವಿಠಲರು