ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾದವನಾಲಿಪ ಯೋಗಿಯ ನೋಡಿ | ಕಕುಲ ಮಾಡಬ್ಯಾಡಿ ಪ ಪಂಚಭೂತದ ಸಂಚಿತ ಬಿಟ್ಟು | ಪಂಚಾದಶಿಯಲಿ ಮನವಿಟ್ಟು 1 ಪರಮ ವೈರಾಗ್ಯದ ಭೋಗಿ | ಪರಶಿವ ರೂಪನೆ ತಾನಾಗಿ 2 ಇಹಪರವೆರಡೆಂಬುದ ಕಡಿದು | ಹಂಸೋಹಂ ಎಂಬನ ಪಿಡಿದು 3 ಭವ ಭಯ ಸಂಶಯಗಳನೆ ಜರಿದು |ಭವತಾರಕನಂಘ್ರಿಯ ಬೆರೆದು 4 ತಾರಕ ಮಂತ್ರವ ಜಪಿಸುತಲಿರಲು | ಅರಿತು ಜ್ಞಾನಿಯಾಗುವನೆನಲು 5
--------------
ಭಾವತರಕರು
ಪರಮ ಕರುಣ ರಮೆಯ ರಮಣ ಉರಗಭೂಷಣಾ ಪ ದುರಿತಹರಣ ಶರಣಾವರಣ | ವರದ ಕಂಕಣಾ ಅ.ಪ ಶ್ರುತಿಗಳೆಲ್ಲ ನುಡಿವುದಲ್ಲ | ಪಿತನೆಂಬ ಸೊಲ್ಲ ಪತಿತರ ನೀ ಪೊರೆದೆಯೆಲ್ಲ | ಹಿತವೇಕೆನ್ನೊಳಿಲ್ಲಾ 1 ಅಸ್ತಿಪಂಜರವೆಂಬೀ ಮಂದಿರ | ವಸ್ತಿರಾಂಬರ ವ್ಯಸ್ತ ಪಂಚಭೂತದಾಕಾರಾ ಗ್ರಸ್ತ ನಶ್ವರಾ 2 ಜನನ ಮರಣ ದುರಿತಗಡಣ | ಮನುಜ ಭವಿ ಶರಣ ಮನಕೆ ಶೋಕಾನೇಕ ಕಾರಣ | ದನುಜ ವಿದಾರಣಾ 3 ಧರೆಯೊಳುದಿಪ ಸೆರೆಯ ಬಿಡಿಸೋ | ವರವ ಕರುಣಿಸೋ ಹರಿಯೆ ರಾಮ ವಿಠಲ ಪಾಲಿಸೋ | ನಿರುತ ನಿರುಕಿಸೋ4 ಕಾವರನ್ಯರಿಲ್ಲವೆನ್ನ | ಶ್ರೀವನಿತಾರನ್ನ ಮಾವಿನಕೆರೆಯರಸ ಮುನ್ನ | ನೋವ ಬಿಡಿಸೆನ್ನ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ನಂಬದಿರು ಈ ದೇಹ ನಿತ್ಯವಲ್ಲ |ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೇ ಪ.ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ |ಮಲಮೂತ್ರ ಒಳಗೆ ಕ್ರಿಮಿರಾಶಿಯಿಹವು ||ಹಲವು ವ್ಯಾಧಿಯ ಬೀಡು ಪಂಚಭೂತದ ನಾಡು |ಹುಲುದೇಹವನು ನೆಚ್ಚಿ ಕೆಡಬೇಡ ಮನವೆ 1ಸತಿಸುತರು ಹಿತರೆಂದು ಮತಿಮರೆತು ಮಮತೆಯಲಿ |ಅತಿಕಾಂಕ್ಷಿಯಿಂದ ದುರ್ವಿಷಯ ಬಲಿದು ||ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ |ಗತಿಶೂನ್ಯನಾಗಿ ಕೆಡಬೇಡ ಮನವೆ 2ಪರರ ನಿಂದಿಸದೆ ಪರವಧಗಳನು ಬಯಸದೆ |ಗುರು - ವಿಪ್ರಸೇವೆಯನುಮಾಡು ಬಿಡದೆ ||ಹರಿಸ್ತುತಿಯ ನೀ ಕೇಳು ಹರಿಕೀರ್ತನೆಯ ಪಾಡು |ಪರಮಪುರಂದರವಿಠಲನೊಲಿದು ಪಾಲಿಸುವ3
--------------
ಪುರಂದರದಾಸರು