ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮತ್ಸ್ಯಾದಿ ದಶಾವತಾರಗಳು ಮತ್ಸ್ಯಾದ್ಯವತಾರವನು ತಾಳ್ದು ನೀ ಪರದೇವ ಮನ್ವಂತರ ಪ್ರಳಯಜಲಧಿಯನು ಪೊಕ್ಕು ಸೂರ್ಯಪುತ್ರನ ಮನುವ ದೋಣಿಯಲ್ಲಿರಿಸಿ ನೀನ್ ನೀರಾಟವಾಡಿದೆಯ ಲೀಲೆಯಿಂದಲಿ ನೀಂ 33 ಮಂದರ ಪೊಕ್ಕೆ ಕೂರ್ಮರೂಪವ ತಾಳ್ದು ಕಡಲಿನಡಿ ಸೇರಿ ದೇವತೆಗಳಿಗೆಯಮೃತ ಕಲಶವನು ತೆತ್ತು ನೀನ್ ದೈತ್ಯರನು ವಂಚಿಸಿದೆ ಮೋಹಿನಿಯದಾಗಿ34 ಸೂಕರದ ರೂಪವನು ತಾಳ್ದು ನೀನ್ ಸಿರಿವರನೆ ಚಿನ್ನ ಕಣ್ಣಿನ ದೈತ್ಯಸೇವಕನ ಕೊಂದು ದೈತ್ಯನಾತ್ಮಜ್ಯೋತಿಯನು ತನ್ನಲಿಯಿರಿಸಿ ವಾರಾಹ ರೂಪದಿಂದಲಿ ಆಟವಾಡ್ದೆ35 ಶಿಲ್ಪಿಯಿಂ ರೂಪುಗೊಂಡಿಹ ಕಂಬದಲಿಯಿದ್ದು ವಿಷ್ಣುವೇ ಪ್ರಹ್ಲಾದ ಮಗುವನುದ್ಧರಿಸೆ ನಂಬಿದೆಡೆಯೆಲ್ಲೆಲ್ಲು ಇರುವೆನೆಂಬುದ ತಿಳಿಸೆ ನರಸಿಂಹ ರೂಪವನು ತಾಳ್ದೆ ಪರಮಾತ್ಮ 36 ಇಂದ್ರಾವರಜನೊಮ್ಮೆ ವಟುವಾಮನನು ಬಂದು ಬಲಿಯ ಯಾಗದ ಸಮಯ ಮೂಹೆಜ್ಜೆ ಬೇಡೆ ರಾಜ ಕೊಡಬಯಸಲದ ಗುರು ಶುಕ್ರತಡೆದಾಗ ದಾನಿ ಬಲಿ ಕೊಟ್ಟವನು ಸಿದ್ಧಿಯನು ಪಡೆದಾ 37 ಸಂಹಾರ ಲೀಲೆಯನು ತೋರಲವ ಪರಮಾತ್ಮ ಪಿತೃವಾಕ್ಯಪಾಲನೆಗೆ ತಾಯ ತಲೆ ಕಡಿದು ಮಾತೆಯನು ಬದುಕಿಸುತ ದುಷ್ಟರಾಜರ ತರಿದು ರಾಜವಂಶವನು ನಿರ್ವಂಶ ಮಾಡಿದನು 38 ಎದೆಯೊಳಿಹ ಸೀತೆಯನು ಕಾಡೆಲ್ಲ ಹುಡುಕುತ್ತ ಜಲಧಿಗೇ ಕಟ್ಟಿ ಸೇತುವೆಯ ಸಿರಿವರನು ಕಪಿ ಸೈನ್ಯದೊಡಗೂಡಿ ಲಂಕೆಯನ್ನೈದುತ್ತ ರಾವಣನ ಕೊಂದು ಸೀತೆಯ ಮರಳಿ ತಂದೆ 39 ಇಬ್ಬರನು ತಾಯಂದಿರನು ರಮಿಸಿ ಮಗುವಾಗಿ ಪದಿನಾರು ಸಾಸಿರದ ಸತಿಯರನು ಒಲಿಸಿ ಏಕಕಾಲದಲಿ ಎಲ್ಲರನು ಮೆಚ್ಚಿಸಿದ ಹರಿ ಆನಂದರೂಪದವ ಪರಮಾತ್ಮ ನಿಜವು 40 ತಾಮಸದ ಜೀವರನಧೋಗತಿಗೆಯಿಳಿಸುತಲಿ ಬುದ್ಧ ರೂಪದಲಿ ತ್ರಿವಿಧ ಜೀವಂಗಳಿಗೆ ಯೋಗ್ಯತೆಗೆ ತಕ್ಕಂತೆ ಗತಿಯಾಗಿಸುವದೆ ನಿನ್ನ ಸಂಕಲ್ಪವದಲಾ 41 ಧರ್ಮವದು ನಶಿಸುತಲಿ ದುಷ್ಟರಾಜರು ತುಂಬೆ ಕಲಿಯುಗದ ಕೊನೆಯಲ್ಲಿ ಕಲ್ಕಿ ರೂಪದಲಿ ಅಶ್ವವನ್ನೇರುತಲಿ ದುಷ್ಟರನು ಸಂಹರಿಸಿ ಕೃತಯುಗವ ಮಾಡಿದೆಯ ಪರಮಾತ್ಮ ನೀನು 42 ಕಾಣದಾ ದೇವರಿಗೆ ಭಕ್ತಿಯಿಂ ಪೂಜಿಸಲು ಹತ್ತು ರೂಪಗಳಿವುಗಳೇ ಮುಖ್ಯವದರಿಂ ಅವತಾರ ರೂಪಗಳ ಪ್ರತಿಮೆಗಳ ಪೂಜಿಸುತ ಸರ್ವಾರ್ಥಸಿದ್ಧಿಗಳ ಪಡೆಯುವರು ಜನರು 43 ವೇದೋಕ್ತ ಪದಗಳಿಗೆ ಮುಖ್ಯಾರ್ಥ ಹರಿಯಿಹನು ಅಗ್ನ್ಯಾದಿ ನಾಮಗಳು ದೇವರಿಗೆಯಿಹವು ದೇವತೆಗಳಿಗೆಲ್ಲ ಅಗ್ರಣಿಯು ತಾನಾಗಿ ಅಗ್ನಿನಾಮವು ನಿನಗೆ ಒಪ್ಪುವುದು ಹರಿಯೆ 44 ಇಂದ್ರಿಯಂಗಳೆ ಕುದುರೆ ಬುದ್ಧಿಯೇ ಸಾರಥಿಯು ಮನವೆಂಬ ಕಡಿವಾಣ ಹಿಡಿದೋಡಿಸುವವನು ಜೀವನೇ ರಥಿಕನವ ವಿಷಯಬೇಟೆಗಳಲ್ಲಿ ಪರಮಾತ್ಮನರಿವೆಂತು ಮೂಡುವುದು ಅವಗೆ 45 ವಾಸದಿಂ ಬೆಳಗಿಸುವ ವಾಸುದೇವನು ತಾನು ವರುಣನಂತರ್ಗತನು ಶಿರದಲ್ಲಿಯಿಹನು ಸಪ್ತರಂಧ್ರಗಳಲ್ಲಿ ವಿದ್ಯುತ್ತ ಹರಿಸುತಲಿ ಜ್ಞಾನವನ್ನೊದಗಿಪನು ಶ್ರೀಕೃಷ್ಣನವನು 46 ವಿಜ್ಞಾನಿ ಭಗವಂತ ಹೃದಯ ಗುಹೆಯಲ್ಲಿಹನು ಅನಿರುದ್ಧ ಯಜ್ಞೇಶ ಮೊದಲಾದ ಪೆಸರಿಂ ಪ್ರಾಣವಾಯುಗಳ ಜೊತೆ ಪಾಕವನು ಗೈಯುತ್ತ ರಕ್ತರೂಪವ ಮಾಡಿ ಪಾಲಿಸುವ ನಮ್ಮ47 ಪ್ರಾಕೃತ ಜ್ಯೋತಿಯಾದೊಡೆ ದೇಹ ಸುಡದಿರದು ಅಪ್ರಾಕೃತ ಜ್ಯೋತಿ ಯಜ್ಞೇಶಗಿಹುದು ಭಕ್ಷ್ಯಭೋಜ್ಯಗಳೆಂಬ ಲೇಹ್ಯಪೇಯಗಳೆಂಬ ನಾಲ್ಕುವಿಧ ವಸ್ತುವಿನ ಪಾಕ ಮಾಡುವನು 48 ವಾಯುವಂತರ್ಗತನು ನೀಲರೂಪದ ದೇವ ಪ್ರದ್ಯುಮ್ನನಾಮಕನು ನಾಭಿಯಲ್ಲಿಹನು ಕಾಮರೂಪಿಯು ಅವನಪಾನಕ್ಕೆ ಒಡೆಯನವ ಪುರುಷರಿಂದಲಿ ಸೃಷ್ಟಿಗವನೆ ಕಾರಣನು 49 ಪೃಥ್ವಿವಿಯಪ್ ತೇಜಸ್ಸು ಮೂರು ದೇಹದ ಮೂಲ ಶ್ರೇಷ್ಠ ವಾಯುವು ಸೇರಿ ದೇಹಕ್ಕೆ ಚಲನೆ ಹೃದಯದಲ್ಲಾಗಸವು ಇರುವ ಕಾರಣದಿಂದ ಪಂಚಭೂತಂಗಳಿವು ದೇಹದಲ್ಲಿಹವು 50 ವಾಯುವಿನ ಜೊತೆಗೂಡಿ ದೇಹಚಾಲಕನು ಯಂತ್ರರೂಪದಲ್ಲಿದ್ದು ಯೋಗ್ಯತೆಗೆ ತಕ್ಕಂತೆ ಕಾರ್ಯವನು ಮಾಡಿಸುತ ಫಲವನ್ನು ಕೊಡುವ 51
--------------
ನಿಡಂಬೂರು ರಾಮದಾಸ
ಹರಿವಾಯುಗಳು ಮೂರಕ್ಕರದ ದೇವ ಮೂರು ವಸ್ತುವ ಬೆರಸಿ ಮೂರು ಮೂರಾಗಿಸೆಯೆ ಪಾಲಿಸುವ ನಮ್ಮ ಎರಡು ವಸ್ತುವು ಸೇರಿ ದೇಹಕ್ಕೆ ಚಲನೆಯದು ಹರಿವಾಯುಗಳ ಒಲುಮೆ ದೇಹ ರಕ್ಷಕವು4 ಅವ್ಯಾಕೃತಾಕಾಶ ರೂಪದಲಿ ತಾನಿಹನು ವಿಶ್ವಂಭರಾತ್ಮಕನು ದೇವ ನಿಜದಿಂದ ಸೃಷ್ಟಿಗವನೇ ಮೂಲ ವಾಸುದೇವಾತ್ಮಕನು ಮಧ್ವಹೃದಯನಿವಾಸಿ ಸರ್ವಮೂಲನವ 5 ಪೃಥಿವಿಯಪ್ ತೇಜಸ್ಸು ಮೂರು ಭೂತಾಣುಗಳು ತುಂಬಿಯಾಗಸದಲ್ಲಿ ವ್ಯಾಕೃತವದಹುದು ತುಂಬಿ ವಾಯುವಿನಣುಗಳ್ ಒಂದೆಡೆಯೆ ತಾನಹುದು ವ್ಯಾಕೃತಾಕಾಶ 6 ಆಗಸದಿ ವಾಯುವಿನ ಪರಮಾಣು ಒತ್ತಡವೆ ದೃಶ್ಯವಾಯುವು ತಾನೆ ಹರಿವುದಾಗಸದಿ ದೃಶ್ಯವಾಯುವಿನ ಪರಮಾಣುವೊತ್ತಡದಿ ನಿಜ ತೇಜವುದಯಿಸುವುದದರಲ್ಲಿ ಮೂರಿಹವು 7 ತೇಜದಿಂದಲೆ ನೀರು ಜಗಕೆಯಾಧಾರವದು ನೀರಿನಿಂದಲೆ ಭೂಮಿ ಉದಯಿಸುವದದರಿಂ ಪಂಚಭೂತಂಗಳಿವು ಭೂಮಿಯಲಿ ತೋರುವವು ಪಂಚಭೂತಾತ್ಮದ ಪ್ರಕೃತಿಯಿದು ಸತ್ಯ 8 ಇವುಗಳಿಗೆ ಒಡತಿಯಾ ಪ್ರಕೃತಿದೇವಿಯು ಸತ್ಯ ಪ್ರಕೃತಿಯೆದೆಯಲ್ಲಿರುವ ದೇವರೂ ಸತ್ಯ ಪ್ರಕೃತಿ ಪುರುಷರ ಲೀಲೆ ಮಧ್ವಮತದಾ ತಿರುಳು ಮಧ್ವ ಸದ್ಗ್ರಂಥಗಳು ಸರ್ವಮೂಲಗಳು 9 ಭೂತಕೃತ್ತೂ ಅವನೆ ಭೂತಪಾಲಕನವನೆ ಭೂತಭಾವದಲಿದ್ದು ಪ್ರೇರಕನು ಅವನೆ ಆತ್ಮಾಂತರಾತ್ಮವೆಂದೆರಡು ರೂಪಗಳವಗೆ ಹೃದಯದಾಕಾಶದಲಿ ವಾಸವಾಗಿಹನು 10 ಪಂಚಭೂತಗಳು ಪಂಚೇಂದ್ರಿಯಗಳು ಪಂಚ ಕರ್ಮೇಂದ್ರಿಯಗಳ ರಚಿಸಿ ಹರಿಯು ಪಂಚಾತ್ಮಕನು ದೇವ ಪಂಚವಾಯುಗಳಿಂದ ಪಂಚತನ್ಮಾತ್ರಗಳ ಜ್ಞಾನವೊದಗಿಪನು11 ಸುಖ ರತಿ ಪ್ರೇರಕನು ತಾನಾಗಿ ಸಿರಿವರನು ಶಾರೀರ ಪುರದಲ್ಲಿ ನೆಲೆಯಾಗಿ ಇಹನು ಬೆಳಗುತ್ತ ದೇಹವನು ಬೆಳಗಿಸುವ ದೇವತೆಗ ಳವನ ಬಳಿಯಿದ್ದು ಸೇವೆಯ ಗೈಯುತಿಹರು 12 ವಿಶ್ವ ದರ್ಶನಕಾಗಿ ವಿಶ್ವಜನರೊಳು ಕಣ್ಣಿನಲ್ಲಿ ನೆಲೆನಿಂತು ವಿಶ್ವಸಾಕ್ಷಿಯು ಸೂರ್ಯನಲ್ಲಿಯೂ ತಾನಿದ್ದು ವಿಶ್ವವನು ಬೆಳಗಿಸುತ ಜ್ಞಾನವೊದಗಿಪನು 13 ಸೂರ್ಯನೊಂದೆಡೆಯಿದ್ದು ತಾನ್ ಬೆಳಗಿ ಲೋಕವನು ತನ್ನ ಕಿರಣಂಗಳಿಂ ಬೆಳಗಿಸುವ ತೆರದಿ ಕಣ್ಣು ಮೊದಲಾದಿಂದ್ರಿಯಗಳಲಿ ತಾನಿದ್ದು ಅವುಗಳನು ಬೆಳಗಿಸುತ ರಕ್ಷಿಪನು ನಮ್ಮ14 ತೈಜಸದ ದೇವನವ ತೇಜದಾರೂಪದಲಿ ಕಂಠಗತನಾಗಿದ್ದು ದೇಹದಲಿ ಬೆಳಗಿ ಹುಲಿ ಕರಡಿ ಮೊದಲಾದ ಜಂತುಗಳ ಸೃಷ್ಟಿಸುತ ಸ್ವಪ್ನಲೋಕವನು ಮಾನಸಕೆ ತೋರಿಸುವ 15 ಪ್ರಾಜ್ಞರೂಪದ ದೇವನಪ್ಪಿ ಜೀವಾತ್ಮನನು ಮಾಯೆಯಾ ಮುಸುಕಿನಿಂದಜ್ಞಾನಬರಿಸಿ ಜೀವನಿಗೆ ತೋರದುದರಿಂದ ಪ್ರಾಜ್ಞನದಾಗಿ ಜಗಕೆ ತನ್ನಯ ಮಾಯೆಯನು ತೋರಿಸುವನು 16 ನಾಲ್ಕನೆಯ ರೂಪವದು ತುರ್ಯ ನಾಮದಲಿಹುದು ಮುಕ್ತರಿಗೆ ಮಾತ್ರವೇ ತೋರುವುದು ಪೇಳ್ವೆ ಜಾಗರಾದಿಯವಸ್ಥೆಗಳ ನಾಲ್ಕು ಪೇಳಿದನು ಮಾಯಾವಿ ಪರಮಾತ್ಮನದು ಲೀಲೆಗಳಿವು 17
--------------
ನಿಡಂಬೂರು ರಾಮದಾಸ