ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

6. ತಾತ್ವಿಕ ಪದಗಳು ಇಲ್ಲವಲ್ಲಾ ಏ ಹರಿಯೆ ಪ ಗಂಧಾರದೊಳು ---ಕೊದ ಪಶುವಂತೆ ಹಿಂದೂ ಮುಂದು ತಿರುಗಿ ತಿರುಗಿ ಬಳಲುವದೊಂದೆ ಅ.ಪ ಕೆಲವು ದಿನವು ಮೇಘದೊಳು ಕೂಡಿ ಅಲ್ಲಿ ಜಾರಿಬೀಳುತಾ ಪರಿಪರಿಯಲ್ಲಿ ಇನ್ನೂ ಚಲನೆಯಿಂದ ಮೇಘ ಜಲದಾರಿಗಳಿಂದ ನೆಲದೊಳಗೆ ಹೊಕ್ಕು ನರಳಾಡುತಾ ಒಲಿದು ಔಷಧಿಗಳ ವಶವಾಗಿ ಧಾನ್ಯದೊಳು ಕಲೆತು ಪಚನೆಯಿಂದ ಬಳಲುತ ನೀ ಅಲ್ಲಿ ಪಕ್ವಾನ್ನಗಳಿಂದ ಪುರುಷನುದರ ಸೇರಿ ನಲಿದಾಡುತಲಿ ಹೋಗೆ ಕೆಲವು ಕಾಲಾದಲ್ಲಿ 1 ಸ್ತ್ರೀ ಪುರುಷ ಸಂಯೋಗದಿಂದ ಸ್ತ್ರೀ ಗರ್ಭದಲಿ ವ್ಯಾಪಿಸಿ ಕೊಂಡಿಯ ರೂಪತೋರುತ ನೀ ತಾಪವು ಬಡುತಾಲಿ ತಾಯಿ ಉದರದಲ್ಲಿ ಪರಿ ನವಮಾಸ ಪರಿಯಂತರದಲಿ ಪರಿ ಮಾಡಿದ ಹಿಂದಿನ ದೋಷಗಳಿಂದ ತನ್ನೊಳು ತನು ತಪಿಸುತಲಿ ದೀಪವಿಲ್ಲದೆ ಗುಡಿಯೊಳಗಿನ ದೇವರಂತೆ ಕೂಪದೊಳಗೆ ಬಿದ್ದು ಕಷ್ಟವ ಪಡುತಲಿ 2 ಎಂದೆಂದು ಬಯಲಿಗೆ ಹೊರಡುವೆಯೆನುತಾಲಿ ಸಂದೇಹ ಪಡುತಾಲಿ ಸರ್ವದಲಿ ಸಂಧಿಸಿಕಾಲದಿ ತಂದೆ ತಾಯಿಗಳಿಗೆ ತನಯನಾಗಿ ಹುಟ್ಟಿ ತೋರುತಲಿ ಕಂದನಾಗಿ ಅತಿ ಕಡುಮೋಹ ತೋರುತ ಸಂದುಹೋಯಿತು ಕಾಲಸ----ದಿನವೂ ಮುಂದು ಗಾಣದೆ ಬಾಲಪ್ರಾಯದ ಹಮ್ಮಿಲಿ ಅಂದದಿ ಆಟಪಾಟಗಳಿಂದ -------ದಿನಾ 3 ವಾರಕಾಂತೇರ ಸಂಗವುದ್ಯೋಗ ವ್ಯವ- ಹಾರ ದೈನಂದಿನ ಕೆಲವು ಕಾಲಾಯಿತು ಕ್ರೂರ ಚೋರ ದುಷ್ಟ ವ್ಯಾಪಾರಗಳ ಕೂಡಿ ಮೀರಿ ಗರ್ವದಲಿನ್ನೂ ಮೈಯ ಸ್ಮರಣೆದಪ್ಪಿ ಕಾಲ ಕೆಲವಾಯಿತು ಪಾರಗಾಣದೆ ಪ್ರಪಂಚದೊಳಗೆ ಬಿದ್ದು ಹೊರಟು ಬಿಡುತಾಲಿ ಹೋಯಿತು ಕೆಲವು ಕಾಲ4 ಸತಿಸುತರ ಸಂಪತ್ತು ಅತಿಮೋಹ ವ್ಯಾಸಂಗ ಕಾಲ ಸಂದು ಹೋಯಿತು ಮಂದ ಬುದ್ಧಿಲಿ ವಾರ್ಧಿಕದಿ ಹಿತಗಳು ತಪ್ಪಿ ಮಾನ ಹೀನನಾಗಿ ಗತಿಯು ಕಾಣದೆ ಘೋರ ಕಷ್ಟಕ್ಕೊಳಗಾಗಿ ಮತಿಯಲ್ಲಿ ಹರಿನಾಮ ಮರೆದು ಹೋಗಿ ಪತಿ ಹೆನ್ನೆ ವಿಠ್ಠಲನ ಪ್ರೀತಿಯ ಪಡೆಯದೆ ಅತಿ ಘೋರತಮಸಿ ಗರ್ಹಾನು ಆಗೊ ಕಾಲಾಯಿತು 5
--------------
ಹೆನ್ನೆರಂಗದಾಸರು
ತಡಿಯೆಲೆ ಮನವೆ ನೀ ಬಡಬಡಿಸುವುದ್ಯಾಕೋ ಕೆಡಕುಯೋಚನೆಬಿಟ್ಟು ಕಡುಶಾಂತನಾಗೊ ಪ ಜಡಮತಿತನನೀಗಿ ಬಿಡದೆ ದೃಢದಿ ಜಗ ದೊಡೆಯನಡಿಯ ಭಜಿಸು ಕೊಡುವನು ನಿಜಸುಖ ಅ.ಪ ವಂಚಕನಾಗದೆ ವಾಂಛಲ್ಯಳಿದು ಮನ ಕಿಂಚಿತ್ತಗಲದೆ ನಿರ್ವಂಚಕ ಚಿತ್ತನಾಗೊ ವಂಚನಿಲ್ಲದೆ ಹರವಿರಂಚಿಗಳ್ನೂತನ ಪ್ರ ಪಂಚದೊಳಗೆ ನಿನ್ನನಚಲ ಸುಖದಿ ಕಾಯ್ವ 1 ನಿಷ್ಠುರನುಡಿ ಬಿಡು ದುಷ್ಟತ್ವ ದೂರಮಾಡು ಬಿಟ್ಟಗಲದೆ ಮಹ ಶಿಷ್ಟರೊಡನಾಡೊ ಅಷ್ಟಮೂರುತಿಪಾದ ನಿಷ್ಠೆಯ ಭಜಿಸು ನಿ ನಿನ್ನಷ್ಟದಖಿಲವರ ಕೊಟ್ಟು ರಕ್ಷಿಸಸನೆಲೊ 2 ಹಲವು ಭ್ರಾಂತಿ ಬಿಡು ಮಲಿನಗುಣವ ದೂಡು ಹೊಲೆಯ ಮನಸಿನ ಮಹ ಕಲ್ಮಷ್ಹಸನಮಾಡು ಜಲಜಾಕ್ಷನಂಘ್ರಿಯಂ ನಿಲದೆ ಭಜಿಸು ನಿನ ಗೊಲಿದು ನಿಜಸುಖವಿತ್ತು ಸಲಹುವ ಶ್ರೀರಾಮ 3
--------------
ರಾಮದಾಸರು
ಧ್ಯಾನಧಾರಣ ನಾಗಬೇಕಂತೆ ಪ್ರಪಂಚದೊಳಗೆ ದೀನ ನಾನಾದೊಡೆ ಮುಖ್ಯ ಸಾಕಂತೆ ಪ ಪ್ರಾಣ ಪಾನ ಸಮಾನ ವ್ಯಾನವು ದಾನ ಹೀಗೆಂದೆಂಬೊ ಪಂಚಕ ಜ್ಞಾನಗುರುಗಳು ತೋರಿಸಿದು ನಿಜ 1 ಆಗ ನೀನದು ಕಾಣಬಹುದಂತೇ ಆಧ್ಯಾತ್ಮ ಸತ್ಯವು ಯೋಗವೆ ನಿಜ ತಾಳಿಯಹುದಂತೆ ಬಾಗಿ ನಡೆವ ಅವಿಜ್ಞನಿಗೆ ಅದು ಮುದ್ರೆ ಸಮಾಧಿಹೊಂದುವ 2 ಸ್ಮರಣೆ ನಿಂತೊಡೆ ಧ್ಯಾನಸಾಕಂತೇ ಅಭಯ ಪ್ರಸಿದ್ಧವು ಕರಣ ನಿಗ್ರಹ ನಿನಗೆ ಬಹುದಂತೇ ಧರಣಿ ಮದ್ಗುರು ತುಲಸಿರಾಮರ ದಾಸರಪ್ಪಣೆ ಗುಳುಹಲಾತನ ಚರಣ ಸೇವೆಯೊಳಿರುತಿಹುದೆ ನಿಜಪರಮ ಪದವಿದು ಸತ್ಯನಿತ್ಯವು 3
--------------
ಚನ್ನಪಟ್ಟಣದ ಅಹೋಬಲದಾಸರು