ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಮಂಗಳೂರು ಉಮಾಮಹೇಶ್ವರ ದೇವರು) ಚಂದ್ರಚೂಡನಿವನ್ಯಾರೆ ಹೇಳಮ್ಮ ಇಂದ್ರಾದಿವರ ಮನೋ ಮಂದಿರ ನಮ್ಮ ಪ. ಭಾಲಲೋಚನ ಪಂಚತತ್ವ ವಿವೇಚನ ನೀಲಕಂಧರನಿವನ್ಯಾರೆ ಹೇಳಮ್ಮ ಸಾಲಾಗಿ ನಿಲುವ ದಿಕ್ಪಾಲ ಗಣದಿ ಕ- ಟ್ಟಾಳುಗಳಿರವ ಸುಶೀಲ ಕಾಣಮ್ಮ 1 ಭಸ್ಮೋದ್ಧೂಳಿತ ವಿಗ್ರಹ ವಿಶದ ಮಂ- ದಸ್ಮಿತಮುಖನಿವನ್ಯಾರೆ ಹೇಳಮ್ಮ ವಿಸ್ಮರಣೆಗಳೆಂದಿಗೀಯದೆ ಪಾಲಿಪ ಅಸ್ಮದ್ಗುರುವಂಬಿಕೇಶ ಕಾಣಮ್ಮ 2 ಉಮ್ಮೆಯನೊಡಗೊಂಡು ವುಛ್ರಯದೋರುತ ನಮ್ಮಲ್ಲಿ ದಯವಾದನ್ಯಾರೆ ಹೇಳಮ್ಮ ಬೊಮ್ಮನ ಪೆತ್ತ ಭಕ್ತಾಧೀನ ಶೇಷಾದ್ರಿ ತಿಮ್ಮಪ್ಪರಾಜನ ಮೊಮ್ಮಕಾಣಮ್ಮ 3
--------------
ತುಪಾಕಿ ವೆಂಕಟರಮಣಾಚಾರ್ಯ
ಇಂದು ಶ್ರೀ ಗುರುಪಾದಪದ್ಮ ನೋಡುವ ಎಂದೆಂದು ಬಿಡದೆ ಭಾವಭಕ್ತಿ ಮಾಡುವ ಧ್ರುವ ಮನವೆಂಬ ಮನಮಂಟಪವನಾಡುವ ನೆನವು ನವರತ್ನದ ಸಿಂಹಾಸನಿಡುವ ಙÁ್ಞನಧ್ಯಾನದಡಬಲದಿ ಪಿಡಿವ ಅನುವಾಗಿ ಅನಿಮಿಷದಲಿ ನೋಡುವ 1 ತನುವೆಂಬ ತಾರತಮ್ಯಭಾವ ಮಾಡುವ ಅನುಭದಿಂದನುಪಮನ ನೋಡುವ ಆನಂದವೆಂಬ ಅಭಿಷೇಕವ ಮಾಡುವ ಮನೋ ಅಭೀಷ್ಟೆಯ ಸುವಸ್ತ್ರನೀಡುವ 2 ಬುದ್ಧಿ ಭಾವನೆಯ ಗಂಧಾಕ್ಷತಿಡುವ ಶುದ್ಧ ಸುವಾಸನೆ ಪರಿಮಳ ಮಾಡುವ ಶಬ್ದ ಸುವಾಕ್ಯವೇ ಪುಷ್ಪವ ನೀಡುವ ಸಿದ್ಧಾಂತವೆಂಬುದೇ ಸುಸೇವೆ ಮಾಡುವ 3 ಪ್ರಾಣ ಪಂಚವೇ ಪಾದಪೂಜೆಯ ಮಾಡುವ ಪುಣ್ಯಪೂರ್ವಾರ್ಜಿತ ಫಲಗಳಿಡುವ ಅನೇಕವಾದ ಪರಿಪೂಜೆ ಮಾಡುವ ಧನ್ಯ ಧನ್ಯವಾಗುವ ಮುಕ್ತಿಬೇಡುವ 4 ನಿರ್ವಿಕಲ್ಪ ನಿಜಮೂರುತಿ ನೋಡುವ ಪೂರ್ವಕರ್ಮವೆಂಬ ಧೂಪಾರ್ತಿ ಮಾಡುವ ಅರುವೆಂಬ ದೀಪದಿ ಏಕಾರ್ತಿ ಮಾಡುವ ಸರ್ವಕಾಲದಲಿ ಸಂತೋಷಬಡುವ 5 ಜೀವ ಭಾವನೆಂಬ ನೈವೇದ್ಯವಿಡುವ ವಿವೇಕುದಕ ಸಮರ್ಪಣೆ ಮಾಡುವ ತ್ರಿವಿಧಗುಣವೆಂಬ ತಾಂಬೋಲನಿಡುವ ಅವಾವಪರಿಯು ಪ್ರಾರ್ಥನೆ ಮಾಡುವ 6 ಪಂಚತತ್ವದ ಪಂಚಾರತಿ ಮಾಡುವ ಚಂಚಲವಿಲ್ಲದೆ ಚಿದ್ಛನ ನೋಡುವ ಪಂಚಭೂತವೆಂಬಾರತಿ ಮಾಡುವ ಸಂಚಿತಕ್ರಿಯ ಮಂತ್ರಪುಷ್ಪನೀಡುವ 7 ದಿವ್ಯ ಯೋಗ ಭೋಗ ಚೌರ ಢಾಳಿಸುವ ಅವಲೋಕನೆಯ ಬೀಸಣಿಕೆ ಬೀಸುವ ಪಾದ ನಮಿಸುವ ಭವಬಂಧನದ ಮೂಲ ಛೆÉೀದಿಸುವ 8 ನಮ್ರತವೆಂಬ ಸಮಸ್ಕಾರ ಮಾಡುವ ಸಂಭ್ರಮದಿಂದ ಸ್ವಸ್ವರೂಪ ನೋಡುವ ಪ್ರೇಮಪ್ರೀತೆಂಬ ಪ್ರದಕ್ಷಿಣಿ ಮಾಡುವ ಜನ್ಮ ಮರಣದ ಹಾದಿಯು ಬಿಡುವ 9 ನಿರ್ಗುಣದಿಂದ ಸ್ವರೂಪ ನೋಡುವ ನಿಗಮಗೋಚರನೆಂದು ಸ್ತುತಿ ಪಾಡುವ ಅಗಣಿತಗುಣ ಸುಕೀರ್ತಿ ಸೂರ್ಯಾಡುವ ಜಗದೊಳಾನಂದದಿಂದ ನಲಿದಾಡುವ 10 ಅನಾಹತವೆಂಬ ಧ್ವನಿವಾದ್ಯ ಮಾಡುವ ಅನಂದೋ ಬ್ರಹ್ಮದೊಳು ಮುಳಗ್ಯಾಡುವ ಭಾನುಕೋಟಿತೇಜ ಪ್ರಕಾಶ ನೋಡುವ ದೀನಮಹಿಪತಿ ಸ್ವಾಮ್ಯೆಂದು ಕೊಂಡಾಡುವ 11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೋಡಿ ನೋಡಿ ನಿಮ್ಮೊಳು ನಿಜಘನವ ಧ್ರುವ ಆಧಾರ ದೃಢದಿಂದ ಆರು ಸ್ಥಳವ ಮುಟ್ಟಿ ಆದಿ ಅನಾದಿಯ ಪಥವು ನೋಡಿ 1 ಭೂಚರ ಖೇಚರಚಾಚರ ಗೋಚರ ಅಲಕ್ಷ ಮುದ್ರೆಯ ಸ್ಥಾನ ನೋಡಿ 2 ಪರಾಪಶ್ಯಂತಿಯು ಮಧ್ಯಮ ವೈಖರಿ ಸಾರ ನೋಡಿ3 ಪಂಚತತ್ವದ ಗತಿ ಪಂಚಪ್ರಾಣವದ ಸ್ಥಿತಿ ಪಂಚಕರುಣಾಕೃತಿ ಗತಿ ನೋಡಿ 4 ಸ್ಥೂಲ ಸೂಕ್ಷ್ಮಕಾರಣ ಮಹಾಕಾರಣ ನೋಡಿ ಆನಂದಗತಿಯಲಿ ಬೆರೆದಾಡಿ 5 ಶೂನ್ಯ ಮಹಾ ಶೂನ್ಯ ನಿಶ್ಯೂನ್ಯ ನೋಡಿ 6 ಮಹಿಪತಿಸ್ವಾಮಿ ಶ್ರೀಗುರು ಸರ್ವೋತ್ತಮ ನೋಡಿ ಆನಂದಗತಿಯಲಿ ಬೆರೆದಾಡಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೂದಿಯ ಹಚ್ಚಿರೊ ಶುದ್ಧ ವೈಷ್ಣವರಿದ- ರಾದಿಯ ತಿಳಿಯಲು ಕೇಳಿ ಬಲ್ಲವರು ಪ ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ ಮೂಲ ಮಂತ್ರಂಗಳ ಜಪಿಸುವ ಬೂದಿ ಮೂಲಾಧಾರವ ತೋರುವ ಬೂದಿ ಕಾಲ ಕರ್ಮಂಗಳ ಕಡಿವಂಥ ಬೂದಿ 1 ಏಳು ಸುತ್ತಿನ ಒಳಗೆ ಇರುವಂಥ ಬೂದಿ ಏಳು ವೈರಗಳನ್ನು ಕಳೆವಂಥ ಬೂದಿ ಏಳು ಅಗಳ ದಾಟಿ ಹಾರುವ ಬೂದಿ ಬ- ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ 2 ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ ಕುಂಭಕದೊಳಗದ ಇರಿಸುವ ಬೂದಿ ಸಂಭ್ರಮದಿ ಅರಸನ ಗೆಲುವಂಥ ಬೂದಿ ಅಂಬರಕಾಗಿಯೆ ಲಂಬಿಪ ಬೂದಿ 3 ಪಂಚಾಗ್ನಿಯಿಂದಲೆ ಬೆಂದಿಹ ಬೂದಿ ಪಂಚತತ್ವಂಗಳನು ಗೆಲುವಂಥ ಬೂದಿ ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ ವಂಚಿಸಿಕೊಳ್ಳದೆ ಧರಿಸುವ ಬೂದಿ 4 ಆರು ವೈರಿಗಳನ್ನು ತೂರುವ ಬೂದಿ ಆರು ಭಾವಗಳನ್ನು ಬೇರಿಟ್ಟ ಬೂದಿ ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ ಆರಿಗೂ ತೋರದೆ ಹಾರುವ ಬೂದಿ 5 ಅಷ್ಟಮದಂಗಳ ಕಟ್ಟುವ ಬೂದಿ ದುಷ್ಟಾತ್ಮರನ್ನು ಅಟ್ಟುವ ಬೂದಿ ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ ಭ್ರಷ್ಟಕರ್ಮಗಳನ್ನು ಸುಟ್ಟಂಥ ಬೂದಿ 6 ಸಕಲ ಋಷಿಗಳೆಲ್ಲ ಧರಿಸುವ ಬೂದಿ ತ್ರಿಕರ್ಣ ಶುದ್ಧದಿ ತುಂಬಿದ ಬೂದಿ ಮಕರಕುಂಡಲಧರ ಮರುಳಹ ಬೂದಿ ಸಖನಹ ವರಾಹತಿಮ್ಮಪ್ಪ ಬೂದಿ 7
--------------
ವರಹತಿಮ್ಮಪ್ಪ