ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಗಾ ಭಾಗೀರಥೀ ಮಂಗಳಾಂಗಿ ಅಳಕನಂದನ ನೀ ಮಹಾ ಸುಂದರಾಂಗಿ ಸಿಂಧುರಾಜನ ರಾಣಿ ಸಿರಿಯು ಸಂಪತ್ತು ಕೊಡು ಕಂಗಳಿಂದಲಿ ನೋಡಿ ಕರುಣಿಸೆನ್ನ ಪ ಕಾಶಿ ಪಟ್ಟಣದಲಿ ವಾಸವಾಗಿ ಸರಸ್ವತಿಯನು ಕೂಡಿ ನೀ ಸರಸವಾಗಿ ಸೋಸಿಲಿಂದಲಿ ಸೂರ್ಯಪುತ್ರಿ ಯಮುನೆಯನು ಕೂಡಿ ಉ- ಲ್ಲಾಸದಿದ್ಹರಿದು ವಾರ್ಣಾಸಿಗ್ಹೋಗಿ 1 ಹಾಲಿನಂತೆ ಹರಿವೊ ಗಂಗೆ ನೀನು ನೀಲದಂತಿದ್ದ ಯಮುನೆಯನು ಕೂಡಿ ಲೀಲೆಯಿಂದಲಿ ಸರಸ್ವತಿಯನು ಕೂಡಿ ಓಲ್ಯಾಡುತ ಬಂದೆ ಒಯ್ಯಾರದಿಂದ 2 ಭಗೀರಥನ ಹಿಂದೆ ನೀ ಬಂದೆ ಓಡಿ ಸಗರನ ಸುತರ ಉದ್ಧಾರ ಮಾಡಿ ಜಗವ ಪಾವನ ಮಾಡೋ ಜಾಹ್ನವಿಯೆ ನೀ ಎನ್ನ ಮಗುವೆಂದು ಮುಂದಕೆ ಕರೆಯೆ ತಾಯಿ 3 ಬಿಂದುಮಾಧವ ವೇಣುಮಾಧವನ್ನ ಆ- ನಂದ ಭೈರವ ಕಾಳ ಭೈರವನ್ನ ಚಂದದಿಂದ್ವಿಶ್ವನಾಥನ್ನ ಗುಡಿಮುಂದೆ ಹೊಂದಿ ಹರಿದ್ಹನುಮಂತ ಘಾಟಿನ್ಹಿಂದೆ 4 ಪೊಡವಿ ಮ್ಯಾಲಿಂಥ ಸಡಗರದಿ ಹರಿದು ಕಡಲಶಯನನ್ನ ಕಾಲುಂಗುಷ್ಠದ ಮಗಳು ಕಡಲರಾಣಿಯೆ ಕಯ್ಯ ಪಿಡಿಯೆ ನೀನು 5 ಮರದ ಬಾಗಿಣ ಕುಂಕುಮರಿಷಿಣವು ಗಂಧ ಪರಿಪರಿಯಿಂದ ಪೂಜೆಯಗೊಂಬುವಿ ಸ್ಥಿರವಾದ ಮುತ್ತೈದೆತನ ಜನುಮ ಜನುಮಕ್ಕು ವರವ ಕೊಟ್ಟು ವೈಕುಂಠವನು ತೋರಿಸೆ 6 ಮಧ್ಯಾಹ್ನದಲಿ ಮಲಕರ್ಣಿಕೆಯ ಸ್ನಾನ ಶುದ್ಧವಾಗಿ ಪಂಚಗಂಗೆಯಲಿ ಭವ ಸ- ಮುದ್ರವನು ದಾಟಿಸೆ ಭಾಗೀರಥಿ 7 ಸುಕೃತ ಒದಗಿತೆಂದು ಗಂಗ ಭೆÀಟ್ಟಿಯಾಗೊ ಪುಣ್ಯ ಬಂದಿತಿಂದು ಚಕ್ರತೀರ್ಥದ ಸ್ನಾನ ಸಂಕಲ್ಪದ ಫಲವ ಕೊಟ್ಟು ರಕ್ಷಿಸು ತಾಯಿ ತರಂಗಿಣಿ 8 ಸಾಸಿರ ಮುಖದಿ ಶರಧಿಯನು ಕೂಡಿ ಹೋಗಿ ಬಾ ಊರಿಗೆ ಭಕ್ತಿಮುಕ್ತಿ ನೀಡಿ ನೀನು ಭೀಮೇಶ ಕೃಷ್ಣನಲಿ ಹುಟ್ಟಿದ್ದು ಪಾದವನು ತೋರೆನ್ನ ಪೊರೆಯಬೇಕೆ 9
--------------
ಹರಪನಹಳ್ಳಿಭೀಮವ್ವ
ವರತೀರ್ಥರಾಜ ಪ್ರಯಾಗವೆನಿಸುವ ಕ್ಷೇತ್ರ - |ದೊರೆ ಮಾಧವನ ಭಜಿಸಿರೈ 3ಆ ಮಾಘಮಾಸದತಿಶಯವಾದ ಸ್ನಾನವನು |ಈ ಮಹಾನದಿಯೊಳಗೆ ಮಾಡಲೋಸುಗಬೊಮ್ಮ |ಸೋಮಶೇಖರ ಮುಖ್ಯ ದೇವತೆಗಳೈತಹರು |ಪ್ರೇಮದಿಂದಲಿ ನಿರುತ ||ನೇಮವಿದು ದ್ವಿಜಕುಲೋತ್ತಮರಾದವರುಕೇಳಿ |ಕಾಮ - ಕ್ರೋದವ ಜರಿದ ಪ್ರಾಯಾಗ ಕ್ಷೇತ್ರದಲಿ |ರಾಮಣೀಯಕ ಸ್ನಾನನುಷ್ಠಾನ ತೀರ್ಥವಿಧಿ |ಹೋಮಗಳ ಮಾಡಿರಯ್ಯ 4ಆರ್ಯವರ್ತದ ಬ್ರಹ್ಮವರ್ತ ದೇಶದ ಮಧ್ಯೆ |ಧಾರ್ಯವಾದಲೆ ಪುಣ್ಯವಾರಾಣಾಸೀ ಕ್ಷೇತ್ರ |ಕಾರ್ಯವಿಶ್ವೇಶತಾರಕ ಮಂತ್ರವುಪದೇಶಿ |ಸೂರ್ಯಚಂದ್ರಾಗ್ನಿನಯನ||ತ್ವರ್ಯುಗ್ರನೆನಿಪಭೂತೇಶ ಭೈರವನಲ್ಲಿ |ವೀರ್ಯದಿಂದಘಾಕಾರಿ ಜೀವಿಗಳ ಶಿಕ್ಷಿಸುವ |ಶೌರ್ಯಅಗಣಿತ ಮಹಿಮ ಶ್ರೀ ಬಿಂದು ಮಾಧವಗೆ |ಕಾರ್ಯದೊರೆತನವು ಅಲ್ಲಿ 5ಅರ್ತಿಯಲಿ ಪಂಚಗಂಗೆಯಲಿ ಮಜ್ಜನಮಾಡಿ |ನಿತ್ಯ ನೈಮಿತ್ತ್ಯ ಕರ್ಮಂಗಳನು ಪತಿಕರಿಸಿ |ಸುತ್ತಿ ಅಂತರ್ವೇದಿಯನ್ನು ಪಂಚಕ್ರೋಶ - |ಯಾತ್ರೆಗಳ ಮಾಡಿ ಬಳಿಕ ||ಮತ್ತೆ ಶ್ರೀ ವಿಶ್ವೇಶ್ವರಗೆ ಪ್ರದಕ್ಷಿಣೆ ಮಾಡಿ |ಭಕ್ತಿಪೂರ್ವಕವಾಗಿ ಅಲ್ಲಲ್ಲಿ ಇಹ ವೈಷ್ಣ - |ವೋತ್ತಮರಿಗೆರಗಿ ಸದ್ಧರ್ಮಗಳ ಮಾಡಿ -ಕೃತ ಕೃತ್ಯರೆಂದೆನಿಸಿದರಯ್ಯ 6
--------------
ಪುರಂದರದಾಸರು