ಒಟ್ಟು 5 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಆ) ಶ್ರೀಹರಿಯ ಗುಣಗಾನ ಇದು ಬಲು ಸುಖಕಾಣೆ ಕೇಳಿದಕೆಣೆಗಾಣೆ ಪ ಒದಗಿ ಬರುವ ಮೃತ್ಯುವ ಪರಿಹರಿಸುವ ಪದುಮನಾಭನ ಪದಪದುಮಕ್ಕೆರಗುವ ಅ.ಪ ಚಂಚಲ ಸಿರಿಗಾಗಿ ಲೋಕ ಪ್ರ- ಪಂಚಕೆ ಬೆರಗಾಗಿ ಸಂಚಿತ ಕರ್ಮವ ಕಳೆಯದೆ ಕಾರ್ಯವು ಮಿಂಚಿದ ಬಳಿಕಾಯಾಸಕ್ಕಿಂತಲು1 ಚಿಂತೆಯೆಲ್ಲವ ಕಳೆದು ಮನದಿ ನಿ- ಶ್ಚಿಂತೆಯಾಗಿ ನಲಿದು ಅಂತರಂಗದಿ ಲಕ್ಷ್ಮೀಕಾಂತನ ತುತಿಸುತ ಸಂತೋಷ ಶರಧಿಯಳೋಲ್ಯಾಡುವುದು 2 ಶರಣ ಜನರ ಪೊರೆವ, ದ್ವಾರಕಾ-ಪುರವರದಲಿ ತಾನಿರುತಿರುವಪರಮ ಪುರುಷ ನಮ್ಮ ಸಿರಿಕೃಷ್ಣರಾಯನಮುರಳಿಧರನ ಸೇವಿಸಿ ಸುಖಿಯಾಗುವ.3
--------------
ವ್ಯಾಸರಾಯರು
ದಾಸನಾದ ಮೇಲೆ ಈಶ ದೂರುಂಟೆ ಆಸೆನೀಗಲು ಸುಖದ ರಾಶಿ ಬೇರುಂಟೆ ಪ ದೋಷಕ್ಕಂಜಿದಮೇಲೆ ಸನ್ಮಾರ್ಗ ಬೇರುಂಟೆ ಕ್ಲೇಶ ನೀಗಿದಮೇಲೆ ಪುಣ್ಯ ಇನ್ನುಂಟೆ ಹೇಸಲು ಪ್ರಪಂಚಕೆ ಸತ್ಸಂಗ ಬೇರುಂಟೆ ವಾಸನ್ಹಿಂಗಿದಮೇಲೆ ವೈರಾಗ್ಯವುಂಟೆ 1 ಜ್ಞಾನಗೂಡಿದಮೇಲೆ ಮತ್ತೆ ತೀರ್ಥಗಳುಂಟೆ ಧ್ಯಾನವಿಡಿದಮೇಲೆ ಅನ್ಯಮೌನುಂಟೆ ಹೀನಗುಣ ತೊಳೆದಮೇಲಿನ್ನು ಸ್ನಾನಗಳುಂಟೆ ಮಾನಸವು ಶುದ್ಧಿರಲು ಬೇರೆ ಮಡಿಯುಂಟೆ 2 ಕೈವಲ್ಯ ಇನ್ನುಂಟೆ ಶರಣು ಪೊಂದಿದಮೇಲೆ ಪರಮಾರ್ಥ ಬೇರುಂಟೆ ಅರಿವನರಿತರೆ ಬೇರೆ ಪರಲೋಕ ಇರುಲುಂಟೆ ಶರಣರೊಲಿದಮೇಲ್ಹರಿಚರಣ ಹೊರತುಂಟೆ 3 ಸಫಲನಾದಮೇಲೆ ವ್ರತನೇಮ ಬೇರುಂಟೆ ಗುಪಿತವರಿತಮೇಲೆ ಪರತತ್ವವುಂಟೆ ಅಪರೂಪ ಧ್ಯಾನಿರಲು ತಪ ಬೇರೆ ಇರಲುಂಟೆ ಅಪರೋಕ್ಷಜ್ಞಾನ್ಯಾದ ಮೇಲೆ ಮಿಕ್ಕಸಾಧನುಂಟೆ 4 ಮಾನಹೋದಮೇಲೆ ಮರಣ ಬೇರಿರಲುಂಟೆ ನಾನತ್ವ ಪೋದಮೇಲೆ ಸತ್ಕರ್ಮವುಂಟೇ ಧ್ಯಾನದಾಯಕ ಮಮಪ್ರಾಣ ಶ್ರೀರಾಮನಡಿ ಖೂನ ತಿಳಿದ ಮೇಲೆ ಮುಕ್ತಿ ಬೇರುಂಟೆ 5
--------------
ರಾಮದಾಸರು
ಪಾರು ಮಾಡೋ ಕೃಷ್ಣಾ | ಪಾರು ಮಾಡೋ ಪ ಭವ ಅ.ಪ. ನಿಗಮ ಗೋಚರ ತವಬಗೆ ಬಗೆ ಮಹಿಮಗಳವಗತ ಮಾಡುತ 1 ರಸವೆನಿಪುದು ಭೂ | ವಸುಮತಿ ಪಂಚಕೆರಸವಹುದದರಿಂದ | ರಸವೆನಿಪಾಪಾ |ರಸವಾಚ್ಯ ವರುಣ ನಾ | ರಸವೆನಿಸುವ ಸೋಮಔಷಧಿ ದೇವನಿಂದ | ರಸವೆನಿಸುವ ರುದ್ರ 2 ಈಶಗಿಂದಧಿಕ ವಾ | ಗೀಶನ ಭಾರ್ಯೆಯುಈ ಸರಸ್ವತಿಯಿಂದ | ಆಸಾಮನಾಮಾ |ಆ ಸಾಮುಖ್ಯನಿಲಗು | ಈಶ ಉದ್ಗೀಥನೆಹೇ ಸರ್ವೋತ್ತಮೋತ್ತಮ | ಭಾವಿಸಿ ಮನದಲಿ 3 ಪರ | ರಸತಮ ವೆನಿಪಳುಸುಸಮ ಪರಮ ಪರರ್ಥ | ರಸತಮ ಪದ ಪಡೆದ 4 ಭವ 5
--------------
ಗುರುಗೋವಿಂದವಿಠಲರು
ಮಾಧವ ಸ್ವಾಮಿ ವಿಠಲ | ಪೊರೆಯ ಬೇಕಿವಳಾ ಪ ಹೇ ದಯಾಂಬುದಿ ಹರಿಯೆ | ಆದಿ ಮೂರುತಿಯೆ ಅ.ಪ. ಸಾದು ಸಂತರ ಸೇವೆ | ನೀ ದಯದಿಕೊಟ್ಟಿವಳಮೋದಮುನಿನುತದೀಕ್ಷೆ | ಹಾದಿಯಲ್ಲಿರಿಸೋಬೋಧವಾಗಲಿ ತತ್ವ | ತರತಮವು ಪಂಚಕೆಯುಸಾಧುವಂದಿತ ಹರಿಯೆ | ಬಾದರಾಯಣನೇ 1 ದಾಸತ್ವ ದೀಕ್ಷೆ ಆ | ಯಾಸ ವಿಲ್ಲದೆ ಸಾಗಿಕೇಶವನ ಒಲಿಮೆಗೇ | ಅವಕಾಶವಾಗೀಹೇಸಿ ಸಂಸಾರದಿ ನಿ | ರಾಶಿಯಾಗಲಿ ಎಂದುಆಶಿಸುವೆ ಶ್ರೀ ಹರಿಯೆ | ವಾಸವಾನುಜನೇ 2 ಇಂದ್ರಿಯವ್ಯಾಪಾರ | ಉಪೇಂದ್ರನದು ಎಂಬುವಚೆಂದುಳ್ಳ ಸ್ಮøತಿಯಿತ್ತು | ತಂದೆ ಕೈಪಿಡಿಯೋವಂದ್ಯಳೆಂದೆನಿಸು ಸ್ತ್ರೀ | ವೃಂದದೊಳಗೆ ಹರಿಯೆಮಂದಾಕಿನೀ ಜನಕ | ಇಂದಿರಾನಂದ 3 ಭವನಾವೆ ಎಂದೆನಿಸೊದೇವದೇವೇಶಗುರು | ಗೋವಿಂದ ವಿಠಲಾ 4 ದುರಿತ ದುಷ್ಕøತಹಾರಿ | ಸರ್ವಜ್ಞ ಮೂರುತಿಯೆಹರಿನಾಮ ಕವಚವನು | ತರಳಗೇ ತೊಡಿಸೀಪರಿಹರಿಸೊ ಭವಭಂದ | ಮರುತಾಂತರಾತ್ಮಕನೆಕರುಣಾಳು ಕರಿವರದ | ಮೊರೆ ಕೇಳೊ ಹರಿಯೇ 5
--------------
ಗುರುಗೋವಿಂದವಿಠಲರು
ವಿಜಯ ರಾಯರ ಭಜಿಸದವ ನಿರ್ಭಾಗ್ಯ ಕಾಣೋ ಪ ಅಜಭವರಕಿಂತಧಿಕ ಗಜವರದ ಪರನೆಂದಾ ಅ.ಪ. ಋಷಿಗಳೆಲ್ಲರು ಕಲೆತು ಸತ್ರಯಾಗವ ಮಾಡೆಹೃಷಿಕೇಶ ಚತುರಾಸ್ಯ ಕೈಲಾಸ ವಾಸಾ |ಈಸು ಮೂರ್ತಿಗಳಲ್ಲಿ ಮಿಗಿಲಾರು ಎಂದೆನ್ನೆಸೂಸಿ ಮೂರ್ಲೋಕಗಳ ಶ್ರೀಶ ಪರನೆಂದಾ 1 ದೇವಮುನಿ ನರನಾಗಿ ಭುವಿಯಲ್ಲಿ ಜನಿಸುತಾದೇವದೇವನ ಸ್ತೋತ್ರ ಕವನವನೆ ಗೈದಾ |ಆವ ಲಕ್ಷವು ಪಂಚಕೆ ನ್ಯೂನ ಪಾದವ ಮಾಡ್ದದೇವ ಮುನಿ ಸುತ ಗುರು ಮಧ್ವಪತಿ ವಿಠಲಾ 2 ಜವನವರು ಕೊಂಡ್ಯೋಗೆ ಜವಪುರಿಗೆ ತನಯನಾಜವನೊಡನೆ ಶೆಣೆಶಾಡಿ ಹರಿಗೆ ಮೊರೆಯಿಡಲು |ಜೀವದಾನವ ಪೊಂದಿ ಚಿಪ್ಪಗಿರಿಗೆ ತೆರಳಲುಜೀವಂತ ನಾದನೈ ತನಯ ಮೋಹನ್ನಾ 3 ಪೂರ್ಣಬೋಧರ ಮತವ ಗಾನ ರೂಪದಿ ಪೇಳಿಪೂರ್ಣಗುಣ ಹರಿಯೆಂದು ಸ್ಥಾಪಿಸುತಲೀ |ಪೂರ್ಣ ಸಂಪ್ರೀತಿಯಲಿ ನೆಲೆಸಿ ಚಿಪಗಿರಿಯಲ್ಲಿಪೂರ್ಣನಂಘ್ರಿಯ ಭಜಿಸಿ ಭಕ್ತರನೆ ಪೊರೆದಾ 4 ಯುವ ಸಂವತ್ಸರದ ಸುಕಾರ್ತಿಕದ ಸಿತಪಕ್ಷಯಾದು ಗುರುದಿನ ದಶಮಿ ಮೊದಲ್ಯಾಮದಿ |ಪವನಾಂತರಾತ್ಮ ಗುರು ಗೋವಿಂದ ವಿಠ್ಠಲನಸ್ತವನದಿಂದಲಿ ಪೊರಟ ಹರಿಯ ಪುರಕಾಗಾ 5
--------------
ಗುರುಗೋವಿಂದವಿಠಲರು