ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಗದಾಖ್ಯ ವೃಕ್ಷ ಚಿಂತಿಪುದು ಬುಧರು ಪ ಭಗವಂತನೆಂಬ ಆಗಸದಲಿ ಪಸರಿಸಿದಅ.ಪ. ಚತುರಾಸ್ಯ ವಾಣಿ ಈರ್ವರು ಬೀಜ ಚಿತ್ಪ್ರ ಕೃತಿ ಪೃಥವಿ ಕರ್ಮವು ಬೇರು ತ್ರಿಗುಣತ್ವ - ವು ಕ್ಷಿತಿ ಜಲಾನಲ ವಾಯು ಗಗನ ಶಾಖೆಗಳಿಂದಕೆ ಶತಕಿರಣ ಉಪಕೊಂಬೆಯೆನಿಸಿ ಕೊಂಬವು ಇದಕೆ 1 ಅಹಂಕಾರ ಬಲದಿಂದ ಅಭಿವೃದ್ಧಿ ಐದುವುದು ಕುಸುಮ ತನ್ಮಾತ್ರ ರಸದಿ ಸಹಿತವಾರ ಪ್ರವೃತ್ತಿ ನಿವೃತ್ತಿ ಕರ್ಮಫಲ ಅಹರಹರ್ ಭುಂಜಿಪವು ತನ್ನಾಮ ಜೀವಖಗ 2 ನಾನು ನನ್ನದು ಎಂಬ ನೀಡ ದ್ವಯಗಳಿದಕೆ ಹೀನ ವಿದ್ಯಾದಿ ಪಂಚಕವೆ ಸರ್ಪಗಳಲ್ಲಿ ಶ್ರೀನಿಧಿ ಜಗನ್ನಾಥವಿಠಲ ಸಂರಕ್ಷಕನು 3
--------------
ಜಗನ್ನಾಥದಾಸರು
ಯೋಗಿ ದಿವಾಳಿ ತನ್ನಉದ್ಯೋಗವುಡುಗಿ ಕೈಗಂಟು ಮುಳುಗಲು ಪ ಕ್ಲೇಶ ಪಂಚಕವೆಂಬ ಕಡು ತವಕವದು ಹರಿಯಿತುಈಷಣತ್ರಯವೆಂಬ ಇಟ್ಟ ಉದ್ರಿನಿಂತಿತು1 ತಪ್ತನಾಲಕು ಒಡವೆ ತಾರದಲ ಹೋಯಿತುಲಿಪ್ತಿ ಇಂದ್ರಿಯ ಲಾಭ ಲಿಂಗಾರ್ಪಿತವಾಯಿತುಗುಪ್ತ ಜೀವವು ತಾನು ಗುರುತಿಲ್ಲದೆ ಮುಳುಗಿತು2 ದೇಣಿಗಾರನು ಚಿದಾನಂದನು ಒಂದೇ ಕುಳಿತುದೇಣಿಯ ಸಲಿಸೆಂದು ಗಾಣಗತಿಯನೆ ಮಾಡಿದೇಣಿಯಕೆ ಸರ್ವವೆಲ್ಲ ಧಾರೆಯನೆರೆದೆಮಾಣದಲೆ ತನ್ನಾಳು ಮಗನ ಮಾಡಿಕೊಂಡ3
--------------
ಚಿದಾನಂದ ಅವಧೂತರು