ವಾದಿರಾಜ ಅಸ್ಮದ್ಗುರು ವಾದಿರಾಜ ಪ
ವಾದಿರಾಜ ತವ ಪಾದಕಮಲಕಭಿ
ವಾದನ ಮಾಳ್ಪೆ ಸಮೋದವಿತ್ತು ಕಾಯೊ 1
ಸಾರಿದರಿಗೆ ಕಲ್ಪ ಭೂರುಹ ದಂತೆ ಮ
ನೋರಥ ಸಲಿಸುವ ಸೂರಿಗಳರಸೇ 2
ಭೇದ ಪಂಚಕವನು ಸಾಧಿಸಿ ಕುಮತಕು
ವಾದಿಗರ್ವಾದ್ರಿ ವಿಭೇದನ ಗೈದೆ 3
ದೇಶಿಕವರ್ಯ ವಾಗೀಶ ಕುವರನೆ
ಕ್ಲೇಶ ಹರಿಸು ಅಘನಾಶ ಗೈದು 4
ಸಿರಿ ಜಗನ್ನಾಥವಿಠಲನ
ಸುಗುಣಗಳನುದಿನ ಪೊಗಳಿ ಹಿಗ್ಗುವೊ 5