ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಂದಿರವದನೆಯ ತವ ಸನ್ನಿಧಿಗೂ ವಂದಿಪೆ ನಿನ್ನ ಪಾದಾಂಬುಜಗಳಿಗೂ ಪ ಬೇಡುವೆ ಗೋವಿಂದನ ರಾಣಿ [ಕಲ್ಯಾಣಿ] ಅ.ಪ ನನ್ನ ಕರೆಗೆ ಓ ಎನ್ನುವರಿಲ್ಲ ನನ್ನಲ್ಲಿ ಕನಿಕರ ತೋರುವರಿಲ್ಲ ಪನ್ನಗಶಯನ ತಾ ಎನ್ನ ನೋಡುತೆ ಕಣ್ಣ ಸನ್ನೆಯ ಮಾಡಿ ಹೋಗೆನ್ನುವನಮ್ಮಾ 1 ಅಪ್ಪನು ನಿನ್ನ ಮಾತೊಪ್ಪುವನಮ್ಮ ತಪ್ಪನು ಮನ್ನಿಸಲೊಪ್ಪುವನಮ್ಮಾ ತಪ್ಪು ನೆಪ್ಪುಗಳ ನಾನೊ[ಪ್ಪುವೆ ಬೇ]ಗ ನೀ ನಪ್ಪಣೆಗೊಡಿಸು ರಂಗಪ್ಪನನೊಲಿಸು2 ಶೌರಿಯ ಕೃಪೆಯವತಾರೆ ನೀನೆಂಬುದ ನಾರದನೆಲ್ಲೆಡೆ ಸಾರುತಲಿಹನು ಮಾರಜನಕ ಮಾಂಗಿರಿರಂಗನು ನಿನ್ನ ಕೋರಿಕೆಗನುಮತಿ ತೋರುವನಮ್ಮಾ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಲಕ್ಷ್ಮೀ ಸ್ತುತಿಗಳು ಆರೋಗಿಸು ತಾಯೇ ಮೋದದಿ ಕ್ಷೀರಾಂಬುಧಿ ತನಯೆ ಪ. ಸಾರಸನಯನೆ ಮದವಾರಣಗಮನೆ ಸಾರಿ ಚೀಡುವೆ ಸರಾಗದೊಳೀಕ್ಷಿಸು ಅ.ಪ. ಉಪ್ಪು ಉಪ್ಪಿನಕಾಯಿಕೋಸುಂಬರಿ ಹಪ್ಪಳ ಸಂಡಿಗೆಯ ತಪ್ಪದೆ ತಂದೊಪ್ಪಿಸುತಿಹೆ ಎನ್ನಪ್ಪನೊಡನೊಪ್ಪದಿ ವ ುಂಡಿಸಿ 1 ಚಕ್ಕುಲಿ ಕರಜಿಕಾಯಿ ಅತಿರಸ ಸಕ್ಕರೆ ಹೋಳಿಗೆಯಂ ನಲಿಯುತ 2 ದಧಿ ನವನೀತ ಘೃತ ಮಧುಸಾರವೆನಿಪ ಪರಮಾನ್ನ ಕ್ಷೀರಶರಧಿಸುತೆ ನೀ ನೀರಸ ಸಹಿತಾಪಾರ ಕೃಪಾಪಾಯದೊಳೀಕ್ಷಿಸಿ3 ಸವಿನೋಡುತೆ ನಲಿದು4 ನಿಗಮಾಗಮ ವಿನುತೇ ನಮಿಸುವೆ ನಗಧರ ಸುಪ್ರೀತೆ ಗುಣಗಳ ಬಗೆಗೊಳಿಸುತ್ತಲಿ 5
--------------
ನಂಜನಗೂಡು ತಿರುಮಲಾಂಬಾ
ವೃಂದಾವನದಿ ನಿಂದಿಹನ್ಯಾರೆ ಗೋವಿಂದನಲ್ಲದೆ ಚಂದಿರವದನೆ ನೋಡುವ ಬಾರೆ ಪ. ಕೋಟಿಸೂರ್ಯ ಪ್ರಕಾಶ ಕಿರೀಟದ ಬೆಳಕಿದು ಹಾಟಕಾಂಬರಧರನ ನೋಟದಿ ಸುಖಿಸೆ ಕೋಟಲೆ ಸಂಸಾರ ದಾಟಿ ಪೋಗಿ ಕೃಷ್ಣ ನಾಟ ನೋಡಿ ಮನ ಕವಾಟವ ಬಿಚ್ಚೆ ಪೂರ್ಣ ನೋಟದಿ ನೋಡುವ 1 ರಂಗನಾ ಕೊಳಲ ಬೆಳದಿಂಗಳ ಸೊಗವಿಲೆ ಮ್ಮಂಗವ ಅಂಗಜನೈಯ್ಯಗೀಯುತೆ ಕಂಗಳಿಗ್ಹಬ್ಬವೆ ರಂಗನ ನೋಡುತೆ ಗಂಗಾಜನಕನ ವಲಿಸಲು ನಮಗೆ ಹಿಂಗದ ಮುಕುತಿಯ ರಂಗಗೊಡುವ ಬಾರೆ 2 ಜಯ ಜಗದೀಶನ ಜಯ ರಮಕಾಂತನ ಜಯ ಕರ್ಮನೀಯನ ಜಯ ಶ್ರೀ ಶ್ರೀನಿವಾಸನ ಜಯ ಯದು ತಿಲಕನ ಜಯ ಕೂಡಾಡುವ ಜಯಪ್ರದನಾಗುತೆ ಜಗದಿ ಪೊರೆವ ಬಾರೆ 3
--------------
ಸರಸ್ವತಿ ಬಾಯಿ
ಲಾಲಿಸಿದಳು ಮಗನ - ಯಶೋದೆ |ಲಾಲಿಸಿದಳು ಮಗನ ಪಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು |ತರಳನ ಮೈಸಿರಿ ತರುಣಿ ನೋಡುತೆ ಹಿಗ್ಗಿ 1ಬಾಲಕನೇ ಕೆನೆವಾಲ ಮೊಸರನೀವೇ |ಲೀಲೆಯಿಂದಲಿ ಎನ್ನ ತೋಳ ಮೇಲ್ಮಲಗೆಂದು 2ಮುಗುಳು ನಗೆಯಿಂದಲಿ ಮುದ್ದು ತಾ ತಾರೆಂದು |ಜಗದೊಡೆಯನ ಶ್ರೀ ಪುರಂದರವಿಠಲನ 3
--------------
ಪುರಂದರದಾಸರು