ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದು ನಿನ್ನ ದಯವು ಆಗೋದೋ ಇಂದಿರೇಶ ದುರಿತ ಹಿಂದಕ್ಕ್ಹೋಗೋದೊ ಮಂದಬುದ್ಧಿಯಿಂದ ನಾಲಿಗೆ ಹಿಂದೆ ಮುಂದೆ ನೋಡುತಿಹುದು ಸಂದೇಹ ಬಿಟ್ಟು ಗೋವಿಂದನ್ನ ನೆನೆಯಲಿಕ್ಕೆ ಪ ಹರಿಯ ತನಯ ಹರಿಯು ಹರಿಯೆಂದು ಒರೆಯುತಿರಲು ಗಿರಿಯನ್ಹತ್ತಿಸಿ ಉರಿಗೆ ಕೆಡುಹಿದ ಕರುಣವಿಲ್ಲದ ಹಿರಣ್ಯಕನು ಪರಮ ಬಾಧೆ ಬಡಿಸುತಿರಲು ಕರೆಯೆ ಕಂಬದಿ ಬಂದು ನರ- ಹರಿಯ ನಾಮ ಕಾಯ್ತು ಅವನ 1 ಕಂತುಪಿತನೆ ನಿನ್ನ ಭಜಿಸದೆ ದ್ವಿಜನು ಕೆಟ್ಟು ಅಂತ್ಯಜ ಸ್ತ್ರೀಯಳ ಕೂಡಿ ಮೆರೆಯಲು ಅಂತ್ಯಕಾಲದಲ್ಲಿ ಏಕಾಂತದಿಂದ ಮಗನ ಕರೆಯೆ ಕಂತುನಯ್ಯ ನಿನ್ನ ನಾಮ ಎಂಥಗತಿಯ ಕೊಟ್ಟಿತವಗೆ2 ದುಷ್ಟಪತ್ನಿ ನುಡಿಗೆ ಉತ್ತಾನಪಾದ ತನ್ನ ಪುತ್ರನಿಂದ ರಹಿತನಾಗಲು ಅಚ್ಚುತನ ಧ್ಯಾನದಲಾಸಕ್ತನಾಗೆ ಉಗ್ರತಪಕೆ ಮೆಚ್ಚಿಕೊಟ್ಟ ನಮ್ಮ ಸ್ವಾಮಿ ಹೆಚ್ಚಿನ ಲೋಕ ಪದವಿ ಧ್ರುವಗೆ 3 ಬಂದು ಭರದಿ ಮಡುವ ಕಲಕುವೋ ಮದಡಗಜವ ಕಂಡು ಮಕರಿ ಕಾಲು ಹಿಡಿಯಲು ಬಂಧುಗಳಿಂದ ರಹಿತವಾಗಿ ಒಂದು ಸಾವಿರ್ವರುಷ ಬಾಳಲು ಇಂದಿರೇಶ ನಿನ್ನ ಸ್ಮರಣೆಯಿಂದ ಶಾಪ ವಿಮೋಚಿತನಾದ 4 ಸೃಷ್ಟಿಗಧಿಕ ನಿನ್ನ ದಯವಿರೆ ಪಾಂಡುಸುತರ ಪಟ್ಟದ ರಾಣಿ ಸಭೆಗೆ ಎಳೆಯಲು ವಸ್ತ್ರಹರಣ ಕಾಲದಲ್ಲಿ ಭಕ್ತಿಯಲ್ಲಿ ಭೀಮೇಶ- ಕೃಷ್ಣನ ಮುಟ್ಟಿ ಭಜಿಸೆ ಕೃಷ್ಣೆಗಾಕ್ಷಣ ತೃಪ್ತನಾಗಿ ಕೊಟ್ಟೆಯೊ ವಸನ 5
--------------
ಹರಪನಹಳ್ಳಿಭೀಮವ್ವ
ಕೀಚಕಾಂತಕ ಭೀಮಸೇನರಾಯ ಯಾಚಿಸುವೆ ನಿನಗಾನು ಎಲ್ಲರನು ಸಲಹೆಂದು ಪ ಕುಂತಿ ಜಠರೋದ್ಭವನೆ ಕುವಲಯದೊಳಗಿಪ್ಪಮ ಹಂತರಿಗೆ ಬಪ್ಪ ಜನ್ಮಾದಿರೋಗ ಚಿಂತೆಗಳ ಕಳೆದ ನಿಶ್ಚಿಂತರನು ಮಾಡು ಸ ರ್ವಾಂತರಾತ್ಮಕ ಸುಖದ ಸರ್ವೇಶ ಶಕ್ರಾದಿ ನುತ 1 ದ್ರೌಪದೀರಮಣ ಜ್ಞಾತಾಜ್ಞಾತ ಕರ್ಮಜ ಮ ಹಾಪರಾಧಗಲೆಸದನು ದಿನದಲಿ ನೀ ಪೊರೆಯಬೇಕುಪೇಕ್ಷಿಸದೆ ನಿನ್ನವರ ವಿ ವಿಶ್ವ ಚೇಷ್ಟಕನೆ 2 ಕೌರವಾಂತಕನೆ ಕಾಶ್ಯಪಿಸುತರ ಸಂತೈಪ ಭಾರ ನಿನ್ನದು ಭವದಿ ಭಕ್ತಬಂಧೋ ಪ್ರೇರಕ ಪ್ರೇರ್ಯ ರೂಪಗಳಿಂದ ಸರ್ವರ ಶ ರೀರದೊಳಗಾಡುವೆ ದೇವತೆಗಳೊಡನೆ 3 ಪವಮಾನತನಯ ಪಾಪಿಷ್ಠರೊಳಗಿದ್ದು ನಿ ನ್ನವರನೀಪರಿ ದಣಿಸಿ ನೋಡುತಿಹುದು ಭುವನತ್ರಯೇಶ ಭೂಷಣವೇನೋ ನಿನಗೆ ಸ ತ್ಕವಿ ಕುಲೋತ್ತಂಸ ಕಾವರ ಕಾಣೆ ನಿನ್ನುಳಿದು 4 ಧನಧಾನ್ಯ ಪಶುಪತ್ನಿ ಜ್ಞಾನಭಕುತಿ ತನಗೆ ತಾನೊದಗಿ ಬಪ್ಪುದು ಸುನಿಶ್ಚಯ ಸನಾ ತನ ಜಗನ್ನಾಥ ವಿಠ್ಠಲನೊಲುಮೆ ಪಾತ್ರ 5
--------------
ಜಗನ್ನಾಥದಾಸರು
ಯಾರು ಇದ್ದರೇನು ನಿನ್ನ ಪಥಕೆ ಬಾರರೋ ಶ್ರೀಹರಿ ಮುರಾರಿ ಎಂದು ಗತಿಯ ನೋಡಿ ಕೊಂಡಿರೋ ಪ ಹೊನ್ನು ಹಣವು ಚಿನ್ನ ಚಿಗುರು ಬಣ್ಣ ಬಂಗಾರವಿರಲು ಎನ್ನವರು ತನ್ನವರು ಎಂದು ಬರುವರೋ ಅನ್ನಕಿಲ್ಲದಿರಲು ಕೆಟ್ಟು ಅಲ್ಲಿ ಪರಿಕಾಲದಲ್ಲಿ ನಿನ್ನ ಕುಶಲವಾರ್ತೆಗಳನು ಮುನ್ನ ಕೇಳರೋ 1 ಇಂದು ಹಬ್ಬ ಹುಣ್ಣಿಮೆಂದು ಬಂಧು ಬಳಗವೆಲ್ಲನೆರೆದು ತಿಂದು ನಿನ್ನ ಹಿಂದೆ ಮುಂದೆ ತಿರುಗು ತಿಪ್ಪರೋ ಬಂಟ ಬಹಳ ಭಾಗ್ಯವೆಲ್ಲ ಕುಂದಿ ಹೋದ ಕಾಲದಲ್ಲಿ ಮುಂದೆ ಸುಳಿಯರೋ 2 ತುಂಬಿ ಇರಲು ಎಡದೆ ಬಿಡದೆ ನೆಂಟರಿಷ್ಟರೆಂದು ತಿಂಬರೋ ವಡವೆ ವಸ್ತು ನಷ್ಟವಾಗಿ ಬಡತನವು ಬಂದ ಬಳಿಕ ಬಿಡುವ ಕೈಯ ನಿನ್ನ ನೊಂದ ನುಡಿಯ ನುಡಿಸರೋ 3 ಮಡದಿ ಮಕ್ಕಳೆಲ್ಲ ನಿನ್ನ ಒಡನೆ ಹುಟ್ಟಿದವರು ಸಹಿತ ಕಡು ಮಮತೆಯಿಂದಲವರು ನೋಡಿ ನಡೆವರೋ ಉಡಲು ತೊಡಲು ಒಡಲಿಗಿಷ್ಟು ಕಡಿಮೆಯಾಗಿ ಎಂದು ಹೊಡೆದು ಕೊಂಬರೋ 4 ಮೃತ್ಯುನಿನ್ನ ಹತ್ತಿರಿದ್ದು ಹೊತ್ತು ವೇಳೆ ನೋಡುತಿಹುದು ವ್ಯರ್ಥವಾಗಿ ಇವರ ನಂಬಿ ಕತ್ತೆ ಕೆಡದಿರೋ ಸತ್ತು ಹುಟ್ಟಿ ಸಾಯ ಬೇಡಿ ಚಿತ್ತದಲ್ಲಿ ಭೀಮನಕೋಣೆ ಗೊತ್ತಿಲಿದ್ದ ಲಕ್ಷ್ಮೀಪತಿಯ ಒತ್ತಿ ಭಜಿಸಿರೋ 5
--------------
ಕವಿ ಪರಮದೇವದಾಸರು
ಸಾಯವಲ್ಲದೋ ಮನಸು | ಕಾಯದೊಳಗೆ ಕುಳಿತುಕೊಂಡು | ಬಾಯ ಬಿಡಿಸುತಿಹುದು ಜನಕೆ ಪ ಕಾಲಿಲ್ಲದೆ ಆಡುತಿಹುದು | ನಾಲಿಗಿಲ್ಲದೆ ನುಡಿಯುತಿಹುದು |ಕಣ್ಣಿಲ್ಲದೆ ನೋಡುತಿಹುದು | ಕರ್ಣವಿಲ್ಲದೆ ಕೇಳುತಿಹುದು 1 ಎತ್ತ ಹೋದರೆನ್ನ ಬೆನ್ನ | ಹತ್ತಿಬಂದು ಕಾಡುತಿಹುದು |ಕಿತ್ತಿ ಇದರ ಬೇರನೆನಗೆ ಮತ್ತೆ ತೋರಿಸುವವರ ಕಾಣೆ 2 ಇಂದು ಶರಣು ಹೊಕ್ಕು ಅವರ | ಹಿಂದೆ ಕಳೆಯಬೇಕಿದನ 3
--------------
ಭಾವತರಕರು