ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಹರಿ ನಾನೆಂಬ ಕುಮತವ ಸುಡು ಸುಡು ದೇಹಿಯುಣವುಣದವನ ನೋಡುತಲಿಹ ಪ. ನೀರೊಳು ಬಹುಕಾಲ ಪೊಕ್ಕು ಮುಳುಗಿದವ ಭಾರದ ಗಿರಿಯನುದ್ಧರಿಸಿರುವ ಈರೇಳು ಲೋಕದ ಹೊರೆಯನೆಲ್ಲವ ಹೊತ್ತು ಹಾರುವ ಹಕ್ಕಿಯ ಹೆಗಲನೇರಿ ಬಹ 1 ಜಲಚರ ಸ್ಥಲಚರ ಯಾಚಕನೆನಿಸಿ ಮ- ತ್ತಲಸದೆ ಮಾತೃವಧೆಯ ಮಾಡಿದ ಛಲದಿಂದಸುರರ ಕೊಂದು ಸಿಂಧುವ ದಾಟಿ ಬಲುಗಳ್ಳನೆನಿಸಿ ಮಾವನ ಸೀಳ್ದವ 2 ಸತಿಯರ ವ್ರತವ ಕೆಡಿಸಿ ಕುಮಾರ್ಗವ ತೋರಿ ಕ್ಷಿತಿಯೊಳು ಯುಗದ ರಾಯರ ಕೊಲ್ಲುವ ಶ್ರುತಿನಿಷಿದ್ಧಪಥದಿ ನಡೆದು ಪಾಪಕಂಜದೆ ಯತಿಶ್ರುತಿತತಿಗಳೆಲ್ಲರ ಹೊಂದಿದ 3 ಸಾವಿರ ಫಣದ ಫಣಿಯೊಳ್ಕಟ್ಟುವಡೆದಾಗ ಹಾವಿನ ಮೈಮೇಲೆ ಒರಗಿದವ ಜೀವರೆಲ್ಲರ ಕೊಂದು ಧರೆಯನೆಲ್ಲವ ನುಂಗಿ ಸ್ಥಾವರದೊಂದೆಲೆಯನೆ ಪೊಂದಿಹ 4 ಉರಿವ ಕಿಚ್ಚ ನುಂಗಿ ಜ್ವಲಿಸುವಗ್ನಿಯೊಳು ಸ್ಥಿರವಾದ ಪ್ರಬಲದೈತ್ಯರ ವೈರವ ಸಿರಿ ಹಯವದನನ್ನ ದಾಸರ ದಾಸನು ಚರಣಸೇವಕನೆಂಬ ಮತವೆ ಲೇಸು 5
--------------
ವಾದಿರಾಜ
ಆನಂದ ಗಿರಿ ರಾಯನೆ ಪಿಡಿಕೈಯ್ಯಾ | ನಾ ನಿನ್ನ ಪಾದಕ್ಕಾನಮಿಸುವೆ ಶರಣರ ಪ್ರಿಯ | ಭಕುತರ ಭವಣೆಯನೀ ನೋಡುತಲಿಹುದೊಳಿತೇನಯ್ಯ | ಬಂಧನ ಬಿಡಿಸಯ್ಯ ಪ ಮಾನದ ಮಾನ್ಯ ಭೂದಾನವ ಬೇಡ್ವನೆಕಾಣಿಸೊ ಮನದೊಳು ದೀನನ ಮೊರೆಗೇಅ.ಪ. ಕಲ್ಯಾಣ ಪುರಿಯಿಂದಲಿ ಪೋಗೀ | ಸಜ್ಜನರವೆರಸೇ ಕಲ್ಯಾದಿಗಳೆಲ್ಲ ದೂರಿದೆ ಸಾಗೀ | ಪೋಗುತ್ತಲಿರಲೂ ಬಲ್ಯಾದಿಗಳೊಡೆಯನ ಪುರಕಾಗೀ | ಮೂಡಬಾಗಿಲಲಿರುವಾ ವೇಳ್ಯಾದರು ನರಹರಿತೀರ್ಥವ |ಓಲೈಸುತ ಸರಿ ನಿರ್ಮಾಲ್ಯ ಪಡೆದೆವು 1 ನಿಟಲಾಕ್ಷನ ಬಿಂಬನು ನೆಲೆಸಿರುವಲ್ಲಿ | ಮತ್ತೊಂದು ಬೆಟ್ಟದಿ ಪಟು ಭಟ ತಾ ಯೋಗಾಸನದಲ್ಲಿ | ಕುಳಿತಿಹನಲ್ಲಿ ಚಟುಲ ವಿಕ್ರಮನ ಧ್ಯಾನಿಸುತಲ್ಲಿ | ಹನುಮಂತನಲ್ಲಿ ಘಟಕಾಚಲದೊಳು ಸೇವಿಸಿ ಭಕುತರ |ತಟಕ ಪೊರಟಿತು ವೆಂಕಟಗಿರಿಗೆ 2 ಹದಿನಾಲ್ಕು ಲೋಕಾಧಿಪನರಸಿ | ಪುರದೊಳು ಪೋಗಿಪದುಮ ಸರಸೋದಕ ಪ್ರೋಕ್ಷಿಸಿ | ಅಲ್ಲಿಂದ ಬಂದುಪದುಮಾವತಿ ಪಾದಾಬ್ಜಕೆ ನಮಿಸಿ | ಕುಂಕುಮಾರ್ಚಿಸಿ ||ಪದುಮೆ ಮನೋಹರ ಗೋವಿಂದ ಪುರಿಯಲಿವದಗಿ ವಸಿಸಿ ನಾವ್ ನಿಶಿಯನೆ ಕಳೆದೆವು 3 ಉದಯವಾಗದ ಮುಂದೇಳುತಲಾಗ | ಮಜ್ಜನವ ಗೈದೂಪದಚಾರಿಗಳಾಗುತಲೀ ಬೇಗಾ | ಒಡಗೂಡಿ ಗಿರಿಯಮುದದಿಂದಲೇರುವ ಯೋಗಾ | ಕೈ ಸೇರಲು ಬೇಗಾ ||ಪದತಲದಲಿ ಪಾಪತ್ಮಕ ತನು ಕ-ಳೆದಾತನ ನೆನೆದು ಸೋಪಾನವ ಕ್ರಮಿಸಿದೆ 4 ಗೋವಿಂದ ಗೋವಿಂದನೆಂಬುವ ನಾಮ | ಅಂಬರವು ತುಂಬೆಅವುಗಳ ಕಾವವನ ಗುಣ ನಾಮಾ | ಕೀರ್ತಿಸಿ ಮುದದಿಭಾವದೊಳ್ ಮೈಮರೆದು ಬ್ರಹ್ಮಾ | ಭವಸುರ ಪಾದ್ಯಾರ ||ಅವಾಗಲು ಅವರವಗುಣವೆಣಿಸದೆಕಾವನು ಎನುತಲಿ ಪಾವಟಿಗೇರೋ 5 ಪರಿ ತಿಳಿದೂತುಳಿದೂ ತುಳಿಯಲಿಲ್ಲವು ನೋಡಾ | ಸಲ್ಲುವುದೀದುತಿಳಿ ವಾದಿರಾಜರಿಗೆ ಗೂಢಾ| ನಾ ಬಲು ಮೂಢಾ |ಮಲವನು ಕಳೆಯುತ ಹುಲು ಮನುಜನ ಭವವಳಿದು ಸಲಹೊ ಹೇ ತಿರುಪತಿ ನಿಲಯ 6 ಮೆಟ್ಟಲು ಮೆಟ್ಟಲುಗಳನೇರುತ್ತಾ | ತಾಳಂಗಳನುತಟ್ಟಿ ಹರಿ ಹರಿ ಎಂದೊದರುತ್ತಾ | ಪಾಪಂಗಳ ತಲೆಮೆಟ್ಟಿ ತಂಬೂರಿಯ ಮೀಟುತ್ತಾ | ಕಾಲೊಳು ಗೆಜ್ಜೆಗಳ ||ಕಟ್ಟುತ ಘಲು ಘಲು ಘಲಿರೆನ್ನುತ ಜಗಜಟ್ಟಿ ಹನುಮನ ನೆನೆಯಲೊ ಮನವೆ 7 ಮೃಗ ಪಕ್ಷಿಗಳ ದಿವ್ಯಾ | ರೂಪಂಗಳ ಧರಿಸಿನಿರುತ ಗೈವರು ತವ ಸೇವೆಯು ಭವ್ಯಾ | ಅವುಗಳ ವರ್ಣಿಸಲು || ಉರಗರಾಜ ತನ್ನ ಸಾಸಿರ ನಾಲಿಗೆಸರಿಯಾಗದು ಎನೆ ಶಿರವನೆ ತೂಗುವ 8 ಏರೋ ಪಾವಟಿಗೆಗಳನು ಏರೋ | ಮೊಳಕಾಲು ಮುರಿಯನೇರೋ ಕುಳಿತೊಮ್ಮೆ ತುತಿಸುತ ಸಾರೋ | ಹರಿಯ ಮಹಿಮೆಯಸಾರೋ ಬಾರಿ ಬಾರಿಗೆ ನೀ ಸಾರೋ | ಗಾಳಿ ಗೋಪುರವ ||ಮೀರಿ ಬರಲು ದಿವ್ಯ ಗೋಪುರ ಕಾಣುತ |ಚೀರೊ ಚೀರೊ ಹರಿ ಗೋವಿಂದನೆನ್ನುತ 9 ಸ್ವಾಮಿ ಪುಷ್ಕರಣಿಯಲೀ ಮಿಂದೂ | ಶ್ರೀ ಭೂವರಹಾಸ್ವಾಮೀಯನೆ ಪ್ರಾರ್ಥಿಸಿ ಬಂದೂ | ಪ್ರಾಕಾರದೊಳಗಿಹವಿಮಾನ ಶ್ರೀನಿವಾಸನ ಕಂಡಂದೂ | ನಮಿಸುತ ಬಂದೂ |ಭೂಮಿಜೆವಲ್ಲಭ ವೆಂಕಟನನು ಕಂಡುಕಾಮಿಸೊ ಜ್ಞಾನ ವೈರಾಗ್ಯ ಭಕುತಿಯ 10 ದೇವಾದಿದೇವಾ ಜಗದ್ಭರ್ತಾ | ವೆಂಕಟನೆ ನಾನಾನಾಜನುಮದ ಸುಕೃತಾ | ಪೊಂದುತಲಿ ನಿನ್ನಸೇವಾ ದೊರಕಿದುದೆ ಪುರುಷಾರ್ಥಾ | ಹರಿಪುದು ಸುಜನಾರ್ತಾ | ಭಾವನ ಕಾಯ್ದ ಸದ್ಭಾವಕೆ ವಲಿವನೆಕಾವುದೆನ್ನ ಗುರು ಗೋವಿಂದ ವಿಠ್ಠಲ 11
--------------
ಗುರುಗೋವಿಂದವಿಠಲರು
ಗೋಕುಲದ ಸತಿಯರೆಲ್ಲ ಶ್ರೀಕೃಷ್ಣನಾಟಗಳದೂರುತಲೆ ಪಾಡುವರು ಪ. ಕಪಟ ಸರ್ವಾಂಗದೊಳಗಿದಕೊಮಣ್ಣ ಮೆಲುವನು ತನ್ನ ತೆರೆಬಾಯಿ ತೆರೆವನಿವಚಿಣ್ಣತನದಾ ತನುವ ತೋರುತಲೆ ವನದೊಳಗೆಪಣ್ಣು ಫಲಗಳ ಸವಿವುತಅಣ್ಣನೊಡನೆ ಕೊಳಲನೂದುತಲಿ ಗೋಕುಲದಹೆಣ್ಣುಗಳ ಮರುಳು ಮಾಡುವ ಗಂಡುಗಲಿಯಿವನಿನ್ನ ಮಗ ಅಮ್ಮಮ್ಮ ಶುಕನ ನುಡಿಗಳ ಗೆಲುವಬಣ್ಣಿಸುವ ಕವಿಯದಾವ1 ಸುರರು ಸೋಲುತಿರೆಆರ್ತಿಯ ಕಳೆವರೆ ಭವರೋಗಕಿವನೆ ಮದ್ದುಇತ್ತಲೀತನ ಚೆಲುವ ಕಾಣುತಲಿ ಕಂದರ್ಪಪೃಥ್ವಿಯಲಿ ಬಿಲ್ಲ ಬಿಸುಟ 2 ಮೂರ್ತಿ ಕೀರ್ತಿಯ ಸೊಬಗುಚಿತ್ರ ಚರಿತ್ರಗಳ ಕಂಡಿರೆ ನಿಮ್ಮ ಕುಮಾರನಾದ ಹತ್ತುಸಾವಿರ ಪೆಸರು ಸಲ್ಲುವುದಮ್ಮ ಸ-ರ್ವತ್ರ ನೋಡುವ ಸುಜನರುಚಿತ್ತದೊಳಗೆಲ್ಲ ಪುರವಿಟ್ಟವರು ಅರಸುತಿರೆವ್ಯಾಪ್ತನೆಂಬುದಕೆ ತಮ್ಮ ತಮ್ಮ ಮನವೇ ಸಾಕ್ಷಿಮುಕ್ತಿ ನಮಗೇಕೆ ಹಯವದನನಂಘ್ರಿü್ರಗಳಾಣೆನಿತ್ಯದಲಿ ಇವನ ನೋಡುತಲಿಹುದು ಸಾಕೆಲೆ ಗೋಪಿ3
--------------
ವಾದಿರಾಜ
ಜಗಜಗಿಸುವ ಈ ಸೊಗಸಿನ ಪೀಠಕೆ ನಗುನಗುತ ಬಾರೊ ದೇವ ಪ ಗಗನರಾಯನಿಗೆ ಮಗಳೆಂದೆನಿಸಿದ ಜಗಕೆ ಜನನಿ ಕೈಮುಗಿದು ಪ್ರಾರ್ಥಿಸುವಳು ಅ.ಪ ಅಂಗನೆಯರು ಶ್ರವಣಂಗಳ ತುಂಬುವ ಸಂಗೀತದ ಸಾರಂಗಳರ್ಪಿಸುವರೊ 1 ನಾದಸ್ವರದ ಸೊಗಸಾದ ಧ್ವನಿಗಳಲಿ ನಾದ ಬ್ರಹ್ಮನು ತಾ ಕಾದು ನೋಡುತಲಿಹ 2 ಪರಿಮಳ ಪುಷ್ಪದ ಸುರಿಮಳೆ ನೋಟವು ಸ್ಮರಣೆಗೆ ತರುವುದು ಸಿರಿಯ ವಿವಾಹವ 3 ಭೂಸುರರೆಲ್ಲರು ಆಶೀರ್ವಚನವ ಶ್ರೀಶ ನಿನ್ನಯ ಸಂತೋಷಕೆ ನುಡಿವರು 4 ಸುಖ ಸಂತೋಷವು ಮುಖ ಮುಖದಲಿಹುದು ತವ ಸುಖಾಗಮನದಿಂ ಲಕುಮೀ ಪ್ರಸನ್ನನೇ 5
--------------
ವಿದ್ಯಾಪ್ರಸನ್ನತೀರ್ಥರು