ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನ ಬಿನ್ನಪ ಸಖಿ ಚನ್ನಾಗಿ ತಿಳಿಸೆ ಚನ್ನಿಗರರಸ ಪೋರನ್ನ ಕೃಷ್ಣನ ಮುಂದೆ ಪ ಜನನಿ ಜನಕ ಚಿಕ್ಕತನದಿಂದ ತನಗತಿ ಜನರೊಳು ಘನ ಧರ್ಮ ಧನ ಗಳಿಸಿದರಂತೆ ಅನುಸ್ಮøತಿ ಎನಗಿನ್ನು ಇನಿತಿಲ್ಲವು ಪೇಳೆ 1 ಅಂದಿಂದಾತನ ಮೊಗ ಚಂದಾಗಿ ನೋಡಿಲ್ಲವೆ ಒಂದು ಬಾರೆನ್ನ ತಾನು ಬಂದು ತೋರನೆ ಮಂದಿ ಪೇಳುವದು ಕೇಳ್ಯಾನಂದಿಸುವೆನಲ್ಲದೆ ಮುಂದೇನು ಗತಿಯೆಂದು ಇಂದುಮುಖಿಯೆ ಪೇಳೆ2 ದಿನಗಳೊದಗಿದವೆ ಜನರೆಲ್ಲ ಕಂಡಂತೆ ಬಿನಗು ಮಾತುಗಳನು ಎನಗಂಬರೆ ಎನಗೇನು ಇದರಿಂದ ತನಗೆ ಆ ಕೀರುತಿ ಮನಮುಟ್ಟಿ ನೀ ಪೇಳೆ ವನಜಾಕ್ಷಗೆ ಸಖಿ3 ಪರಿ ಪರಿ ಭೂಷಣ ಸರಿ ಬಂದರೆ ಉಪಚರಿಸುವಂತೆ ದೊರಿಯರ ಸತಿಯರ ನರರ ದೃಷ್ಟಿಯ ಬಾಧೆ ಪರಿಚಾರಕರಿಟ್ಟು ಪರಿಹರಿಸ ಪೇಳೆ 4 ಆ ಸುದತಿಯರನ್ನ ಲೇಸಾಗಿ ಭೋಗಿಸೆ ನಾ ನಸೂಯ ಅದರಿಂದ ಲೇಶ ಮಾಡೆ ವಾಸುದೇವವಿಠಲ ಈ ಸಮಯದಲಿ ಎನ್ನ ತಾ ಸುಮುಖದಿಂದ ನೋಡೆ ನಾ ಸುಖಿ ಸಖಿಯೆ5
--------------
ವ್ಯಾಸತತ್ವಜ್ಞದಾಸರು
ಶ್ರೀನಿವಾಸನೆ ನಿನ್ನ ಧ್ಯಾನದಲಿ ನಾನಿದ್ದೆ ಕರವ ಪಿಡಿದೆ ಪ ಭಾನುಶತತೇಜ ನಿನ್ನಾನನಾಬ್ಜದ ಮಧುವ ಪಾನ ಮಾಡುತ ತೃಪ್ತಿ ಕಾಣದಿರುವೆ ಅ.ಪ ಕಾಮನಂತಹ ರೂಪ ಸೋಮನಂತಹ ಕಾಂತಿ ರಾಮನಂತಹ ಸತ್ಯ ಧರ್ಮ ನಡತೆ ಈ ಮಹಾ ಸುಗುಣಶಾಲಿಯು ನೀನು ನಿನ್ನಯ ಪ್ರೇಮವನು ಕಾಮಿಸುವ ಹಸುಳೆ ನಾನು 1 ಗಂಧ ಫಲಪುಷ್ಪ ತಾಂಬೂಲಗಳನು ಅಂದದ ಹೇಮದ ತಬಕದಲ್ಲಿ ತಂದು ಕೊಡುವೆನು ಪ್ರೇಮ ಕಾಣಿಕೆಯನು ಮಂದಹಾಸದಿ ನಿನ್ನ ಪಾಂಗದಿಂದ ನೋಡೋ 2 ಒಂದು ದಿನ ಕನಸಿನಲಿ ಕಂಡೆನಚ್ಚರಿ ದೃಶ್ಯ ಮುಂದೆ ನಿಂತಳು ಯುವತಿ ನಸುನಗುತಲಿ ಗಂಧ ತಾಂಬೂಲ ಫಲಪುಷ್ಪ ಪರಿಮಳದ್ರವ್ಯ ತಂದಿಹಳು ಚಿನ್ಮಯದ ತವಕದಲ್ಲ್ಲಿ ಕಂದನಿದ ನಿನಗಾಗಿ ತಂದಿರುವೆನೆಂದು ಮೃದು ಮಂದಹಾಸದಿ ತಲೆಯ ಸವರಿ ನುಡಿಯೆ ಸುಂದರಿಯೆ ನೀನಾರು ಬಂಧುವರ್ಗಗಳಲ್ಲಿ ಹಿಂದೆ ನಾ ನೋಡಿಲ್ಲವೆಂದು ನುಡಿಯೆ ನಂದಗೋಕುಲದಲ್ಲಿ ನಂದನಕುಮಾರನಿಗೆ ಅಂದ ರಾಣಿಯು ನಾನು ಸತ್ಯಭಾಮೆ ಇಂದ್ರದೇವನ ದಿವ್ಯ ನಂದನವನದಿಂದ ತಂದಿರುವೆ ನಿನ್ನ ವರಕುಲವನರಿತು ಸುಂದರಾಂಗನ ಸೇರಿ ಸುಖಪಡುವ ಸೌಭಾಗ್ಯ ಮುಂದಿಹುದು ನಿನಗೆ ಬಲು ತ್ವರಿತದಲ್ಲಿ ಅಂದು ನೀ ಈ ಸ್ವರ್ಣಮಯ ತವÀಕದಲ್ಲಿರುವ ಗಂಧ ಪುಷ್ಪಾದಿಗಳ ಫಲವನರಿವೆ ಚಂದದಲಿ ದಾಂಪತ್ಯ ಸುಖಶಾಂತಿ ಪಡೆಯುವೆ ಕಂದ ನೀ ಸ್ವೀಕರಿಸು ಪೋಗಿ ಬರುವೆ ಎಂದು ನುಡಿಯಲು ತರುಣಿ ಎಚ್ಚರಿತೆನು ಶುಭ ಸುದ್ದಿಯು ತಂದಿರುವೆ ತಬಕವ ಪ್ರಸನ್ನ ವದನ
--------------
ವಿದ್ಯಾಪ್ರಸನ್ನತೀರ್ಥರು