ಒಟ್ಟು 12 ಕಡೆಗಳಲ್ಲಿ , 3 ದಾಸರು , 9 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚದುರಂಗನಾಡುವ ನೋಡಿರೇ | ಮದನಮೋಹನ ಕೃಷ್ಣ ನಿಜ ಶಕ್ತಿಯೊಡನೆ ಪ ಭೂಮಿಯ ಹಲಗಿಲಿ ಕಾಯದ ಮನೆಯೊಳು | ವ್ಯಾಮೊಹಿ ಜೀವನು ಅರಸನಿಲ್ಲಿ | ನೇಮದಿ ಪುಣ್ಯ ಪಾಪದ ಪಲಗಳಿಸುವ | ಈ ಮನೆವೆಂಬ ಪ್ರಧಾನಿಯನಿಟ್ಟು 1 ಪ್ರಾಣಪಾನವೆಂಬ ಎರಡಾನೆ ನಿಲ್ಲಿಸಿ | ನಾನು ನನ್ನದು ಎಂಬ ಒಂಟೆಗಳ | ಜಾಣತನದ ಬುದ್ದಿ ಚಿತ್ತದ ಕುದುರೆ | ನಿ ಧಾನ ದಶೇಂದ್ರಿಯ ಕಾಲಾಳಿನಿಂದ 2 ಕಾಲಸೂತ್ರದಿ ನಡಿಸ್ಯಾಡುತ ಕೃತಕರ್ಮ | ಮೂಲದಿ ಹಾನಿವೃದ್ದಿಗಳಿಹವೋ | ಮೇಲೆ ಯಶಾಪಯಶ ಪಾಲಿಗೆ ತರುವ | ನೃ ಪಾಲಕ ಮಹಿಪತಿನಂದನ ಜೀವನ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಜೋಗಿಯ ನೋಡಿರೇ ತಾಪಸ ಯೋಗಿಯ ನೋಡಿರೇ ಆಗಮನುತ ಗುಣಸಾರಸ್ವಾನಂದಶರವಾ ಭುವನದಿಮೆರವಾ ಪ ಗಿರಿಜೇಶನು ಧರಿಸಿಹ ರುಂಡಮಾಲಾಕೃತಿಯೋ ; ವಿದ್ಯುಲ್ಲತಿಯೋ ಭೂಷಣವೋ ; ತಾರಾಗಣವೋ 1 ಶ್ರೀ ಮಹಾದೇವನ ನಂಜು ಗೊರಳಠವಠವಿಯೋ : ಮೇಘ ಚ್ಛವಿಯೋ ತರಣಿಯ ಸದನೋ ಕಾಮಶಲಭನುಹಿದ ಭಾಲಾಕ್ಷದ ಇರವೋ; ದೀಪಾಂಕುರವೋ; ವ್ಯೋಮನದಿಯ ಆವರಿಸಿಹ ಭವನ ಕಂಜೆಡಿಯೋ: ಹವಳದ ಕುಡಿಯೋ 2 ಕರ ಡಮರದ ನಾದಸ್ಪರಣೋ : ಘನವ್ಯಾಕರಣೋ: ಕರ್ಪುರ ಗಿರಿಯೋ; ಸುರಕುಜ ಪರಿಯೋ: ಗುರವರ ಮಹಿಪತಿ ನಂದನ ತಾರಕ ಶಿವನೋ: ನಿಜ ಬಾಂಧವನೋ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂದಕಂದನ ನೋಡಿರೇ| ಅಂದದಿ ಛಂದದಿ ಪಾಡಿರೇ ಪ ದುಡುದುಡುಕೆಂದು ಕಡೆಯಲು ಗೋಪಿ| ಒಡನೊಡನಾಲಿಸಿ ಶಬ್ದವಾ|| ದುಡುದುಡು ಬಂದ ಕಡಗೋಲ ಪಿಡಿದು ಬಿಡದೆವೆ ಬೆಣ್ಣೆಯ ಬೇಡುವಾ1 ಅಂದುಗೆ ಗೆಜ್ಜೆಗಳಾ| ಘಿಲು ಘಿಲುಕೆಂದು ನುಡಿಸುವಾ| ಎಳೆಯಳೆಗೆಳೆರ ಮೇಳದಲಾಡಿ| ನಲಿನಲಿದಾಡುತಲೊಪ್ಪುವಾ 2 ಅಚ್ಚರಿ ಬಗೆಯಲಿ ಗುರುಮಹಿಪತಿ ಪ್ರಭು ಸಚ್ಚರಿತಾಮೃತ ಬೀರುವಾ|| ಪಟ್ಟದ ಬೊಂಬೆಯ ನಿಚ್ಚಳ ಭಾಸುವ| ಅಚ್ಯುತನಾಕೃತಿ ದೋರುವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೇ ನಂದ ಕಂದನಾ ನೋಡಲು ಕಣ್ಣಿನ ಪಾರಣಿ ಮಾಡುವಾ ಪ ಸೂರಿಯಾ ನಿಳಿಯಲು ಅಪರದ ಜಾವಕ ಸಾರಿಸಿ ಗೋಧನ ತಿರುಗಿಸುತಾ ವಾರಿಗ ರೆಲ್ಲರು ವಂದಾಗಿ ಹರುಷದಿ ಧೀರನು ದಾರನು ಆಡೂತ ಬರುವಾ 1 ಚಂಡು ಬಗರಿ ಚಿಣಿ ಕೋಲು ಚಪ್ಪಳಿಕೈಯ್ಯಾ ಹಿಂಡ ನೆರೆದು ಹಂಬಲಿ ಹಾಕುತಾ ಮಂಡಳದೊಳಗುಳ್ಳ ಆಟವ ನಾಡುತ ಪಂಡರಿ ಕಾಕ್ಷನು ಲೀಲೆಯ ನಲುವಾ 2 ಗೋಧೂಳಿ ತುಂಬಿದ ಗುಂಗುರ ಗೂದಲು ಉದಿಸಿದ ಹಣೆಯಲಿ ಕಿರಿ ಬೆವರು ಬೆರಿಸಿ ಪರಿಪರಿ ಸ್ವರದಲ್ಲಿ ಕೊಳಲವ ನೂದುತ ಕುಣಿಯುತ ನಗೆವುತ ಬರುವಾ3 ಕುಂಡಲ ಹೊಳೆಯುತ ಕಣ್ಣಿನ ಚಲುವಿನ ಕಸ್ತೂರಿ ರೇಖೆಯಲಿ ನೌಲಗರಿಯ ವಾರಿ ದುರುಬವ ಕಟ್ಟಿಸಿ ಪುತ್ಥಳಿ ಬರುವಾ4 ಪೇಂದ್ಯ ಉದ್ದದ ಬಲರಾಯ ಸುಧಾಮರ ವೃಂದದಿ ಮಹಿಪತಿ ಸುತ ಪ್ರೀಯನು ಇಂದು ವದನೆಯರು ಆರುತಿ ಕೊಳುತಲಿ ವಂದದಿ ಮಧ್ಯ ನಾಯಕನಾಗಿ ಬರುವಾ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೇ ನೋಡಿರಮ್ಮಾ ಚೆಲುವನಾ ನೋಡಿರೇ || ಇವ|| ರೂಢಿಗೆ ಆವನಿಜೆಯಾ ತಕ್ಕುವರನೇ ಮುದ್ದುಸ್ಮರನೇ ಪ ಪಾದ ಜಂಘಯಿಂದ ಜಾನೂರುಮಾರಾ ತ್ರಿವಳವೇ| ಹಾರ ದಿಯ ಕರ ಸರಳವೇ 1 ಮಂಡಿತದ ಕುಂಡಲವಾ| ಮೃಗಮದ ಕಿರೀಟ 2 ಆವರಾಯನಮಗನೋತಾನರಿಯೇ|ಭೂಸು| ರಾವಳಿಯೊಳಿಂದ್ಧಾರೇನು |ಅಂಗ| ದಾವ ತೇಜಮುಸುಕಿತು ಧರಿಯೇ|ತ್ರ್ಯೆಭುವನವರಕ್ಷಿಸ ಬಂದಾಹರಿಯೇ | ಮುಜ್ಜಿಮರಿಯೇ 3 ಮುಟ್ಟಿಲೀ ತಗಧನುಏಳಲಿ ಝಮ್ಮೆನೇ ನಾವು ನೆಟ್ಟನೆಪೂಜಿಪೆವು ಗೌರಮ್ಮನೇ ಎಂದು ಬಿಟ್ಟ ಮಗಳು ಬೇಡಿಕೊಂಡರು ಸುಮ್ಮನೇ ಆಡಿಯಿಟ್ಟುನಲಿದು ಬರುವ ರಾಮೊ ಘಮ್ಮನೇ ಪರಬೊಮ್ಮನೆ 4 ಬಂದು ನೋಡಿಬಿಲ್ಲನೆತ್ತಿದ್ದಾಚಕ್ಕನೇ ಅರುವಿಂದ ಲೋಚನೆ ಮಾಲಿ ಹಾಕಲು ಘಕ್ಕನೇ ವೃಂದ ಕಾಣುತ ಹೆದರಿತುಧಕ್ಕನೇ ನಮ್ಮ ತಂದೆ ಮಹಿಪತಿ ನಂದನ ಪ್ರಭು ಠಕ್ಕನೇ ಪಾಲಕ್ಕುನೇ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೋಡಿರೇ ಬೇಲೂರ ಕೇಶವನ ನೋಡಿರೇ ಪ ನೋಡಿ ನೀವವನ ಕೊಂಡ್ಯಾಡಿ | ತನುವೀಡ್ಯಾಡಿ ಅವನ ಚರಣದಿ | ಆಹಜೋಡಿಸಿ ಕರಗಳ | ಬೇಡಲು ವರಗಳಖೋಡಿ ದೈವರ ದೇವ ಗಾಢ ದಯವ ತೋರ್ವ ಅ.ಪ. ಪಣೆ ಸದನ | ಆಹವಜ್ರಿಯ ಮೊರೆ ಕೇಳಿ | ನಿರ್ಜರರ ಸಲಹಿದಕಜ್ಜಗಳಮಿತದಿ | ಸಜ್ಜನರ ಪೊರೆದನ 1 ಕೇಳೆಡ ಕರದಲ್ಲಿ ಗದ | ನೋಡಿಮೇಲ್ಹಸ್ತದಲಿ ಚಕ್ರ ಬಲದ | ಮತ್ತೆಮೇಲ್ಕರ ಶಂಖದ ನಿನದ | ಇನ್ನುಕೀಳು ಕರಾಭಯ ಮಧ್ಯದ | ಆಹಶೀಲ ಭೂವರಹನ | ಶಾಲಿಗ್ರಾಮವ ನೋಡಿಲೀಲ ರೂಪದಿ ಘೋರ | ಕಾಲ್ಯವನನ ಕೊಂದ 2 ಸುಜನ | ಆಹಆವಾವ ಕಾಲಕ್ಕೂ | ನೋವು ರಹಿತ ಧಾಮಆ ವೈಕುಂಠವ ಪೊಕ್ಕ | ಶಾಶ್ವತ ಸುಖ ಪೊಂದ್ವ 3
--------------
ಗುರುಗೋವಿಂದವಿಠಲರು
ಪ್ರಾಣನ್ನೋಡೀರೇ ಮುಖ್ಯ ಪ್ರಾಣನ್ನೋಡಿರೇ ಪ ಕ್ಷೋಣಿಯೊಳಗ ಸುಖ ಬೀರುವ ಪಾದನ ಚರಿತಾ ಸದ್ಗುಣ ಭರಿತಾ ಅ.ಪ. ನರಲೀಲೆಯಲವ - ತರಿಸದ ಅಂಜನಿ ಸುತ-ನೊ ಮಹಾದ್ಬುತನೋ ಮಲೆಯೊ ವಿಕ್ರಮ ಸ್ಥಿತಿಯೋ 1 ಸುರರಾಯುಧವನೆ ಲೆಕ್ಕಿಸ ಕಪಿ ಯಾಗ್ರಣಿಯೊ ವಜ್ರದ ಖಣಿಯೋ ಶರಣರ ವಾಂಛಿತ ಪೂರಿಪ ಮೂಲೋಕ ಗುರುವೋ ಕಲ್ಪ ತರುವೋ2 ರಾಮ ಪದಾಂಬುಜ ಕೊಂಬ ಪರಾಗ ಮಧುಪನೋ ದೇವಾಧಿ ಪನೋ ಪ್ರೇಮದಿ ರಣದಲಿ ಹರಿರಥವಾದ ಮೂರುತಿಯೋ ಪುಣ್ಯ ಮೂರುತಿಯೋ3 ತಾಮಸ ರಾವಣ ನೆದಿಗೊತ್ತದ ಕರಮೋ ಸಿಡಿಲದ ಧರಮೋ ಮ್ಯೋಮಕ ಮೀರುವ ಹನುಮನ ಬಾಲದ ಸರುಳೋ ದೈತ್ಯರ ಉರುಳೋ4 ಕ್ಷಣದಲಿ ಸಂಜೀವನ ಗಿರಿ ತಂದಿಹ ಪದವೋ ಸಾಧುರ ಮುದಮೋ ವನಜ ಭವನ ಪದವಿಯ ಪಡಕೊಂಡಾ ತಪಮೋ ತಾ ಅಪರೂಪಮೋ 5 ದುರಿತ ನಿವಾರಿಪ ಕರುಣಾ ನಿಧಿಯೋ ಭಕ್ತರ ಸುಧೆಯೋ ಅನುದಿನ ಮಹಿಪತಿ ನಂದನ ಸಲಹುವ ದಯಮೋ ಗತಿ ಆಶ್ರಯಮೋ ||6
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಂಗಳಾರತಿಯೆತ್ತಿ ಪಾಡಿರೆ ರಂಗನಾಥನ ನೋಡಿರೇ ಪ. ಅಂಗನಾಮಣಿಯನ್ನು ಸಲಹಿದ ಪಾಂಡುರಂಗನ ಭಜಿಸಿರೆ ಅ.ಪ. ನೆರೆದಸಭೆಯೊಳು ಸೆರಗನೆಳೆಯಲು ತರಳೆಭೀತಿಯ ತಾಳಲು ದುರುಳನೆರಿಗೆಯ ಸೆಳೆಯಲು ಶರಣು ನೀನೇ ವರದನೆನ್ನಲು ವರವನಿತ್ತಗೆ ಭರದೊಳು ಕರಣವಾರ್ಧಿಗೆ ಮುದದೊಳು 1 ಅಕ್ಷಯಾತ್ಮಕ ರಕ್ಷಿಸೈ ಶ್ರೀವತ್ಸ ದೀನಳ ಮಾನಮಂ ಕಮ ಲಾಕ್ಷ ಬೇಡುವೆ ದೈನ್ಯದಿಂ ರಕ್ಷನೀನೆನೆ ಚಪಲಾಕ್ಷಿ ಆಕ್ಷಣಂ ರಕ್ಷಿಸಿದೈ ಕರುಣದಿಂ ಅಕ್ಷಯಪ್ರದಾನದಿಂ 2 ನಿತ್ಯನಿರ್ಮಲ ನಿರ್ವಿಕಲ್ಪ ನಿತ್ಯತೃಪ್ತನ ಭಜಿಸಿರೆ ಭಕ್ತ್ಯಧೀನನ ಬೇಡಿರೆ ಸತ್ಯವಿಕ್ರಮ ಶೇಷಶೈಲ ನಿಕೇತಗೆ ಜಯವೆನ್ನಿರೇ ಚಿತ್ತಶುದ್ಧಿಯ ಪಡೆಯಿರೇ 3
--------------
ನಂಜನಗೂಡು ತಿರುಮಲಾಂಬಾ
ವನಜನೇತ್ರೆ ಕನಕಗಾತ್ರೆ ಅನುವಿನಿಂ ಬಾ ಮಿತ್ರೆ ಪ. ವಿನಯದಿಂದ ಜನಕ ಸಾರುವ ಕೋಲನಾಡುವ ಅ.ಪ. ಆರ್ಯಮಾತೆಯ ಆರ್ಯಧರ್ಮದ ಸಾರವರಿಯುವ ವೀರಮಾತೆಯ ಭೂರಿಕೀರ್ತಿಯ ಪಾಡಿಸುಖಿಸುವ 1 ಬೇಗನೇಳಿರೆ ಭಾಗ್ಯೋದಯಮದೀಗ ನೋಡಿರೇ ಬೀಗಿಮಲಗುವ ರೋಗವುಳಿದು ಸರಾಗದೆ ಪಾಡಿರೇ 2 ಅವನೀಮಾತೆಯ ಭವಿತವ್ಯತೆಗೆ ತವಕಗೊಳ್ಳುತ 3 ಶುದ್ಧರಾಗಿ ತಿಲಕತಿದ್ದಿ ವೃದ್ಧರಂ ನಮಿಸಿರಿ4 ಶ್ರದ್ಧೆಯಿಂ ಕಾರ್ಯಸಿದ್ಧಿಗೊಯ್ಯಿರಿ ಸಿದ್ಧಾರ್ಥರೆನಿಸಿರಿ ಸದ್ಧರ್ಮ ದೀಕ್ಷಾಬದ್ಧರಾಗಿ ಸುಭದ್ರವಿಳೆಗೊದವಿರಿ5 ಅರಸರನ್ನು ಸರಸದಿಂದ ಹುರುಡಿಸಿರಿನ್ನು ಪುರುಷರೆನ್ನಿಸಿ ಕಾರ್ಯಮೆಸಗುವ ತೆರನ ತೋರಿಸಿ 6 ದೇಶದೇಳ್ಗೆಯೊಳಾಸೆಯಿರಿಸಿ ಲೇಸನೆಸಗಿರಿ ದೋಷಹರಣ ಶೇಷಗಿರೀಶಗೆ ಮೀಸಲಿರಿಸಿರಿ7
--------------
ನಂಜನಗೂಡು ತಿರುಮಲಾಂಬಾ