ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನ್ನ ದೂರುವರೆ ಪೇಳಮ್ಮಯ್ಯ ಪೋಕಬುದ್ಧಿಯ ಗೊಲ್ಲತಿ ಪೋಕ ಲೋಕಲೋಕದಿ ನೋಡೆ ನಾಕಾಣೆನೆಲ್ಲೆಲ್ಲೂ ಪ ಅಮ್ಮಯ್ಯ ನೀನಿಡುವೊ ಪಾಲ್ಬೆಣ್ಣೆಯ ಕಣ್ಣಿಂದ ನೋಡುವೆನೆ ಅಣ್ಣ ರಾಮರ ಕೇಳೆ ಎನ್ನಾಣೆ ಹುಸಿಯಲ್ಲ ಎನ್ನ ಪಣೆಯ ಲಿಖಿತ ಮುನ್ನ ಮಾಡಲಿ ಏನೆ 1 ದುಷ್ಟಹೆಂಗಳೇರಾಡುವೊ ಮಾತೊಂದು ನೀ ಗೊತ್ತು ಹಿಡಿಯ ಬ್ಯಾಡಮ್ಮ ಚಟ್ಟಿಗೆ ಬೆಣ್ಣೆಯ ಮೆಲುವೋದುಂಟಾದರೆ ಪುಟ್ಟಕೂಸಿನ ಹೊಟ್ಟೆಗೆ ದೃಷ್ಟಿತಾಗದು ಏನೆ 2 ಚೆಂಡನಾಡುವಾಗ ಇವರು ಎನ್ನ ಮುಂಗೈಯ ಪಿಡಿದುಕೊಂಡು ಗಂಡರಂಜಿಕೆಯಿಲ್ಲ ಗಾಡಿಕಾರ್ತಿಯರೆಲ್ಲ ಬಂಡು ಮಾತುಗಳಾಡಿ ಬಂದು ದೂರಿದರೇನೆ 3 ಸಣ್ಣ ಮಕ್ಕಳೊಡನೆ ಅಂಗಳದಿ ನಾ- ಚಿಣ್ಣಿಯನಾಡುವಾಗ ಬೆಣ್ಣೆಕೊಡುತೇವೆಂದು ಬಣ್ಣ ಬಣ್ಣದಿ ಎನ್ನ ಕಣ್ಣು ಸನ್ನೆಯ ಮಾಡಿ ಕರೆದರ್ಯಾತಕೆ ಕೇಳೆ 4 ಗೋಲಿ ಗುಂಡುಗಳಾಡುತ ನಿಂತಿರಲೆನ್ನ ಲೀಲೆಯಿಂದಲಿ ನೋಡುತ ಭೀಮೇಶಕೃಷ್ಣ ಬಾರೆಂದೆನ್ನ ಬಿಗಿದಪ್ಪಿ ಬಾಯ ತಂಬುಲಗಳ ಬೇಡಿ ಮಾತಾಡೋರು 5
--------------
ಹರಪನಹಳ್ಳಿಭೀಮವ್ವ
ಕೈಮುಗಿದು ಕೇಳಿಕೊಂಬೆ ಕರುಣಾಸಾಗರ ಶ್ರೀಕರ ಪ ಶ್ರೀಮನೋಹರ ಭಾವಿಸುತ್ತ ಭಕ್ತಿಯೀವುದೈ ಶುಭಕರ ಅ.ಪ ಕಣ್ಣ ತುಂಬ ನೋಡುವೆ ಚನ್ನ ಪಾದಯುಗಳ ನೀನಿಡುನಾ ನನ್ನಿಯಿಂ ನಮಿಪೆ ನಾರಾಯಣ 1 ಎನ್ನೊಳೆರಡು ಮಾತನಾಡು ಮೃದುನುಡಿ ಕೇಳುವೆ ಸಂ ಪನ್ನ ಕೃಪಾದೃಷ್ಟಿಯ ನೀಡು ಧನ್ಯನಾಗುವೆ ದೀನಬಂಧು2 ಬಾಲಗೋಪಾಲ ಲೀಲೆ ತೋರೋ ನಲಿಯುವೆ ಶ್ರೀಲೋಲ ಮುದ್ದಾಡುವೆ ಮುದ್ದು ಕೃಷ್ಣ3 ಎನ್ನ ಬಿನ್ನಪವ ಕೇಳು ಜನ್ಮ ಸಾರ್ಥಕವ ಮಾಡು ಇನ್ನು ಸಾವಕಾಶವೇಕೊ ಜಾಜೀಕೇಶವ ಸುವೈಭವ 4
--------------
ಶಾಮಶರ್ಮರು
ಪಾಲಿಸೋ ರಂಗಾ ಲೋಲಕೃಪಾಂಗ ಪ ಬಾಲನ ಮೊರೆಯನು ಕೇಳೊ ಶುಭಾಂಗಾ ಅ.ಪ ಮಾಡಿದಪಾಪ ಓಡಿಸೊ ಭೂಪಾ ಬೇಡಿಕೆ ನಿನ್ನಯ ಪಾದವ [ತೋರೋ]ಶ್ರೀಶಾ 1 ಕೇಶವನ್ಯಾರೊ ಪೋಷಕಧೀರಾ ದಾಸನು ವಂದಿಪೆ ಶ್ರೀಶನು ಬಾರೊ 2 ಕಾಮಿತನಾಮಾ ಶ್ಯಾಮಾ ಸುಧಾಮಾ ಕೋಮಲರೂಪನೆ ನೀನಿಡು ಪ್ರೇಮಾ 3 ಪೋಷಿಸು ಮುನ್ನ ದೇವ ಎನ್ನ ದೋಷರಹಿತಗುರು [ತುಲಸಿ]ದಾಸ ಪ್ರಸನ್ನ 4
--------------
ಚನ್ನಪಟ್ಟಣದ ಅಹೋಬಲದಾಸರು