ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇನ್ನಾದರೂ ದಯಬಾರದೇ ದಾಸನಮೇಲೆ ಇನ್ನಾದರೂ ದಯಬಾರದೇ ಪ ಪನ್ನಗ ಶಯನನೇ ಚೆನ್ನಕೇಶವನೇ ನಿಂನ್ನನು ನಂಬಿದ ಶರಣನಮೇಲೇ ಅ.ಪ ಹಲವು ಯೋನಿಗಳಲ್ಲಿ ನೆರೆ ಪುಟ್ಟಿ ಬಂದೇ ಹಲವು ಯಾತನೆಗಳ ಸಹಿಸುತ್ತ ಬಂದೇ ಹಲವು ರೀತಿಗಳಿಂದ ದುಃಖವ ತಿಂದೇ ಸಲೆ ನಂಬಿ ಹರಿಗೀಗ ಶರಣೆಂದು ಬಂದೇ 1 ಸೇರಿ ಬಗೆಯುತಲಿವೆ ಪಂಚ ವ್ಯಾಘ್ರಗಳೂ ಗಾರು ಮಾಡುತಲಿದೆ ಅಹಂ ಎಂಬ ಸಿಂಹವು ಶೆರಿಯ ಭಜಿಸುತ್ತ ಬಲೆದಾಟಿ ಬಂದೇ 2 ಬಂಧು ಬÁಂಧವರೆಂಬ ಕ್ರೂರವರ್ಗಗಳೆನ್ನ ತಿಂದು ಸುಲಿಯುತಲಿವೆ ವಂಚಿಸಿ ಹರಿಯೇ ಅಂದದಿ ದೂರ್ವಾ ಪಟ್ಟಣದಿ ನಿತ್ತಿರುವಂಥ ಸಿಂಧು ಶಾಯಿಯೇ ರಂಗ ಸಲಹೆನ್ನ ತಂದೇ 3
--------------
ಕರ್ಕಿ ಕೇಶವದಾಸ
ಬನ್ನಿರಿ ದಾಸರೇ ಪೋಗುವಾ ನಮ್ಮ ಚನ್ನಕೇಶವನೆಂಬ ಹರಿಮಂದಿರಕೇ ಪ ಬನ್ನಿರಿ ಪೋಗುವಾ ಗುಡಿಯೊಳು ತಿನ್ನುವಾ ಚನ್ನಗೆ ಅರ್ಪಿಸಿ ತಂದ ಪಕ್ವಗಳ ಅ.ಪ. ನಾ ತಂದಿರುವೆನು ಪರಮಾನ್ನವನ್ನು ತಾತನ ನಾಮಕ್ಕೆ ಬೆರಿಸಿ ಮಾಡಿದೆನು ನೀತಿಯೊಳಾಭಕ್ತಿ ಮಧುಕ್ಷೀರವನ್ನು ಸತ್ಯದಿ ಕೂಡಿಸಿ ಸೇವಿಸುವಾ 1 ಪರಹಿತವೆನ್ನುವ ಸಕ್ಕರೆ ತಂದು ನಾ ಬೆರಿಸುವೆ ಧರ್ಮಗಳೆಂಬ ಪಾಯಸಕೇ ಹರಿಯ ಕೀರ್ತನೆಗಳ ಅಮೃತವ ಸೇರಿಸಿ ಪರಮಾನ್ನವೀ ರೀತಿ ಮಾಡಿರುವೆನಯ್ಯ 2 ಹರಿಭಕ್ತಿಯೆಂಬುವ ತಂಡುಲವನೆ ತಂದು ಹರಿಯ ಸ್ಮರಣೆಯೆಂಬ ವುದಕದಿ ತೊಳೆದು ಹರಿಯ ಭಜನೆಯೆಂಬ ಬೆಂಕಿಯ ಮೇಲಿಟ್ಟು ಸರಸದಿ ನಾ ಪಾಕವ ಮಾಡಿರುವೆ 3 ಸನ್ನುತ ದೂರ್ವಾಪಟ್ಟಣದಿ ನಿತ್ತಿರುವಂಥ ಪನ್ನಗಶಯನ ಶ್ರೀ ಹರಿಯ ನೆನೆಯುತ್ತ ಉನ್ನತ ಸೇವೆಯಿಂದಾತನ ಮೆಚ್ಚಿಸಿ ತಿನ್ನುವಾ ಕೇಶವ ನೀಯುವ ವರವಾ 4
--------------
ಕರ್ಕಿ ಕೇಶವದಾಸ
ವೋ ರಂಗ ಶ್ರೀರಂಗ ಹಾ ರಂಗ ಹÉೀ ರಂಗ ಬಾ ರಂಗ ಶರಭಂಗ ಕರುಣಾಂತರಂಗ ಪ ಗೌತಮ ಭಾರ್ಯೆಯು ಶಿಲೆಯಾಗಿ ಭಜಿಸಲು ಪಾತರೆ ದುಡುಹಿದ ಶ್ರೀರಂಗ 1 ಧೀರ ಪೌಂಡ್ರಿಕನು ಹರಿ ನಿನ್ನ ಕೆಣಕಲು ವಾರಣ ವದರವಿ ನತ್ರನ ಸಿಗಿದಿಹ ಧಾರುಣಿ ಸಲಹಿದ ಶ್ರೀರಂಗ 2 ದೀನರ ಸಲಹುವ ಭಜಕರ ಪೊರೆಯುವ ದೀನ ದೀನೇಶನೆ ಶ್ರೀರಂಗ ಸನ್ನುತ ದೂರ್ವಾಪುರದಿ ನಿತ್ತಿರುವಂಥ ಚನ್ನ ಕೇಶವ ಸ್ವಾಮಿ ಶ್ರೀ ರಂಗ 3
--------------
ಕರ್ಕಿ ಕೇಶವದಾಸ