ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಂದು ಹೃದಯಮಂದಿರದೊಳಗೆಕೂಡೋ ಕೇಶವಮಾಧವ ಪ ತಂದೆಯೆನಾಂ ವಂದಿಪೆನೋ ಕಂದನ ಕುಂದನೆಣಿಸದೆ ಅ.ಪ ಭ್ರಮರ ಕೀಟನ್ಯಾಯದಿ ಬೇಗದಿ ತಾನೆ ತಾ ತನ್ಮಯತೇ ದಿವ್ಯಮಂಗಳ ವಿಗ್ರಹನೇ 1 ನಾಲಗೆಯ ನಡೆಮುಡಿ ಹಾಸುವೆ ಪಾಲ ಸುಮೃದುಪದಾ ಶುಭದ ನೀನೊಲಿಯುತೆ ನಲಿದು 2 ಗಾತ್ರ ಮೂರ್ತಿ ಶ್ರೀಕರ ತಂಗದಿರಾ ಬೆಂಗದಿರಾ ಶಂಕಚಕ್ರ ಚತುರ್ಭುಜ 3 ಸಂಚಿತವೆಂತೋ ಸ್ವಾಮಿ ಹಂಚಿ ನಿನ್ನ ಸೇವೆಯ ಗೈಸುತ 4 ಮುನಿಜನಗಳ ಪೊರೆವುದು ಹೆಚ್ಚೇ ಚಿನುಮಯಾತ್ಮನೇ ಚೆನ್ನಿಗ ಅಣುಗನು ನಾನಜ್ಞಾನಿ ಕನಿಕರದೆನ್ನ ಕಾಯ್ದರೆ ಕೀರ್ತಿ 5 ಮಾಯಮುಚ್ಚಿ ಕಾಯನೆಚ್ಚಿ ನೋಯುತ್ತಿಹೆನೋ ನರಹರಿ ಜೀಯ ಜಾಜೀಶಹರಿ ರಾಮ ರಕ್ಷಿಸು ಶ್ರೇಯ ಕೊಟ್ಟು6
--------------
ಶಾಮಶರ್ಮರು
ಬಾರೊ ಬಾರೊ ರಂಗ-ಬಾರೊ ನಮ್ಮನೆಗೆ ಪ ಬೋರನ್ಹಾಕುವೆ ನಡೆಮುಡಿಯ ನಿಮ್ಮಡಿಗೆ ಅ.ಪ ಪರಿಮಳಾಂಬುವಿನಿಂದ-ಪದವ ತೊಳೆಯುವೆನೊ ವರಗಂಧಾಕ್ಷತೆಯನು-ಭರದಿ ಧರಿಸುವೆನೋ 1 ಹೊಸಪಟ್ಟೆಯನು ತಂದು-ಹೊಂದಿಸಿ ರಾಜಿಸುವೆ ಕುಸುಮದಿಂದರ್ಚಿಸಿ ಕೂಡೆ ಸಂತಸವ 2 ಕುಂಕುಮಾಗಿಲು ದಿವ್ಯ ಗುಗ್ಗುಲಹೊಗೆಯ ಬಿಂಕದಿಂದರ್ಪಿಸುವೆನು ಭೋಗಿಸಯ್ಯಾ 3 ಮೇಲೆ ಸದ್ಭಕ್ಷ್ಯ ತಾಂಬೂಲವರ್ಪಿಸುವೆ ಲಾಲಿತ ಮಹಮಂಗಳಾರತಿಯೀವೆ 4 ಬಿಡದೆ ಸಾಷ್ಟಾಂಗವ ನಿಡುವೆ ರಮೇಶ ಪೊಡವಿಯೊಳ್ ಮಹದೇವಪುರದ ಶ್ರೀಹರಿಯೆ5
--------------
ರಂಗದಾಸರು
ಶ್ರೀಶ ಶ್ರೀ ಕೇಶವನೆ ಬಾ ಪರುಮ ಪುರುಷ ಶೇಷರಾಯನ ಮುಕುಂದ ಶರಣರಾನಂದ ಪ ಭೂಸುರರು ನಡೆಮುಡಿದು ಪೂರ್ಣಕುಂಭವು ವೇದ ಓಲಗ ಛತ್ರ ಚಾಮರ ದಿಮಿಗೆ ಅ.ಪ ಸುತ್ತಿಬರುತಿಹ ದನುಜ ವೃಂದವೆಲ್ಲವ ತರಿದು ಮುತ್ತಿನಂಥಾ ತನುವು ಧೂಳಾಗಿರುವುದೋ ಒತ್ತುತೆಣ್ಣೆಯ ನಿನಗೆ ಮತ್ತೆಬಿಸಿನೀರೆರೆದು ಕತ್ತುರಿಯ ಹಣೆಗಿಟ್ಟು ನುಡಿಯನುಡಿಸುವೆನೋ 1 ಸರಸಿ ಪೀತಾಂಬರ ಶಿರಕೆ ಮಣಿಯಳವಡಿಸಿ ಕೊರಳಿನೊಳುಹಾಕಿ ತುಳಸೀಮಾಲೆಯ ಕರಕೆ ಕಂಕಣ ಶಂಖ ಚಕ್ರಗಧೆಯಾ ಕಮಲ ದೊರೆನಡುವಿಗೊಡ್ಯಾಣ ಸಿರಿಪದಕೆ ಕಡಗ 2 ಅಂಗಕ್ಕೆ ಶ್ರೀಗಂಧ ಅಗರುಚಂದನ ಧೂಪ ಮಂಗಳದ ದೀಪವೂ ಮಂತ್ರಪುಷ್ಪ ಶೃಂಗಾರ ಮೂರ್ತಿಗೆ ಕನ್ನಡಿಯು ಬೀಸಣಿಗೆ ಸಂಗೀತ ನರ್ತನವು ಸ್ತುತಿಸೇವೆಯೂ 3 ವಸುಮತೀಪಾಲನೆಯ ಸತತ ನೀಗೈಯುತ್ತ ಹಸಿದು ಬಳಲುತ್ತಿರುವೆ ಕೃಷ್ಣಪರಮಾತ್ಮ ಬಿಸಿಯಹೋಳಿಗೆ ತುಪ್ಪ ಹಸುನಿನಾ ಬಿಸಿಹಾಲು ಮೊಸರು ಶಾಲ್ಯನ್ನ ಫಲಪಾನಕದ ಸುಖಹೀರಿ 4 ಶ್ರೀದೇವಿ ಭೂನೀಳ ಇವರೊಡನೆ ತೃಪ್ತಿಯಂ ಶ್ರೀಧರ ಮೂರುತಿ ಹೃದಯ ಕಮಲದಲಿ ಕೂಡೋ ಸಾದರದಿ ಕರ್ಪೂರ ತಾಂಬೂಲವನು ಸದಿಯೋ ಮೋದದಿಂದಾರತಿಯ ಬೆಳಗುವೆನೋ ರಂಗಾ 5 ಜಯತು ಜಗದಾಧಾರ ಪುಷ್ಪಾಂಜಲಿಯೊಧೀರ ಜಯ ಸಾಧು ಹೃದ್ಭಾಸ ಹೆಜ್ಜಾ ಜಿವಾಸ ಜಯತು ಮಂಗಳ ನಾಮ ಶ್ಯಾಮಂಗೆ ಪ್ರಣಾಮ ಜಯತು ಕರುಣಾಸಿಂಧು ಜಯಭಕ್ತ ಬಂಧು 6
--------------
ಶಾಮಶರ್ಮರು
ಬಾರಮ್ಮ ಮನೆಗೆ ಸೌಭಾಗ್ಯದ ಮಹಲಕ್ಷ್ಮಿ ಪಬಾರಮ್ಮ ಮನೆಗೆ ಭಕ್ತರು ನಿನ್ನ ಸ್ತುತಿಪರುಮಾರನಯ್ಯನ ಕೂಡಿ ಮನ ಹರುಷದಿ ಬೇಗ ಅ.ಪಶಂಖು ಚಕ್ರ ಗದ ಪದ್ಮವು ಧರಿಸಿದಪಂಕಜಾಕ್ಷನಸಿರಿಪಟ್ಟದರಸಿದೇವಿಕುಂಕುಮಾಂಕಿತೆ ಸರ್ವಾಲಂಕಾರ ಶೋಭಿತೆಬಿಂಕಮಾಡದಲೆ ಬಾ ವೆಂಕಟನರಸಿಯೆ1ಶುಕ್ರವಾರದಿ ನಿನ್ನ ಭಕ್ತಿಲಿ ಸ್ತುತಿಪರಇಷ್ಟ್ಯಾರ್ಥಗಳ ಕೊಟ್ಟುದ್ಧರಿಪಭಾರ್ಗವಿತಾಯೆಭಕ್ತವತ್ಸಲನೊಡಗೂಡುತ ಬಾರಮ್ಮಮಿತ್ರೇರು ಕರೆವರು ಕೃಷ್ಣವೇಣಿಯೆ ನಿನ್ನ 2ಕನ್ನಡಿ ಕದುಪಿನ ಕಡು ಮುದ್ದು ಮಹಾಲಕ್ಷ್ಮಿರನ್ನ ಪವಳ ಹಾರಾಲಂಕೃತ ಶೋಭಿತೆಸ್ವರ್ಣಮಂಟಪದಿ ಕುಳ್ಳಿರು ಬಾರೆಂದೆನುತಲಿಕರ್ನೇರು ಕರೆವರು ಕಮಲಾಕ್ಷನೊಡಗೂಡಿ 3ನಿಗಮವೇದ್ಯಳೆ ನಿನ್ನಅಗಣಿತಗುಣಗಳಪೊಗಳುವ ಸುಜನರಅಘಪರಿಹರಿಸುತ್ತಬಗೆ ಬಗೆ ನಾಮಗಳಿಂದ ಪೂಜೆಯಗೊಂಬಖಗವಾಹನನ ರಾಣಿ ಲಗುಬಗೆಯಿಂದಲಿ 4ತಡಮಾಡದಲೆ ಬಾ ಬಾ ಮುಡಿದ ಹೂವು ಉದರುತ್ತಬಡನಡು ಬಳುಕುತ್ತ ಕೊಡುತ ವರಗಳನ್ನುಬಿಡಿಮಲ್ಲಿಗೆಯ ತಂದು ನಡೆಮುಡಿ ಹಾಸುವರುಕಡಲೊಡೆಯನ ರಾಣಿ ಸಡಗರದಿಂದೊಮ್ಮೆ 5ಕ್ಷೀರವಾರಿಧಿಯ ಕುಮಾರಿಯೆ ಬಾರೆಂದುಸಾರಸಮುಖಿಯರು ಸರಸದಿ ಕರೆವರುಮೂರ್ಲೋಕ ವಿಖ್ಯಾತೆ ಮಾರಮಣನ ಪ್ರೀತೆಚಾರುಮಂಗಳೆ ಸತ್ಯ ಶ್ರೀ ಭೂದುರ್ಗಾಂಬ್ರಣೆ 6ಕಮಲಾಕ್ಷಿ ಕೇಳಮ್ಮ ಶ್ರಮ ಪರಿಹರಿಸೆಂದುನಮಿಸಿ ಬೇಡುವೆ ನಿನ್ನಭ್ರಮರಕುಂತಳೆ ತಾಯೆಕಮಲನಾಭ ವಿಠ್ಠಲನ ಕೂಡಿ ಹರುಷದಿಸುಮನಸರೊಡೆಯನಸತಿಸಾರ್ವಭೌಮಳೆ7
--------------
ನಿಡಗುರುಕಿ ಜೀವೂಬಾಯಿ