ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸತತ ನಿನ್ನ ಭಜನೆಯಲ್ಲಿ ಹಿತವ ಪೊಂದಿಸೊ ದೇವ ಪ ಅತುಲ ಮಹಿಮೆಗಳಲ್ಲಿ ಎನ್ನ ಮತಿಯ ಸೇರಿಸೊ ಶ್ರೀಪತೆ ಅ.ಪ ಕಾಲ ಕಳೆಯಿತೊ ದೇವ ನಾಳೆ ನಾಳೆಯೆಂದು ನಿನ್ನ ಪೊಗಳಲಿಲ್ಲವೊ ದೇವ 1 ಯೋಚಿಸದೆಲೆ ನಿನ್ನ ದೈನ್ಯದಿ ನೀಚ ಜನರಲಿ ನಾನು ಕರವ ಯಾಚಿಸುತ್ತ ಶೋಚನೀಯನಾದೆನೊ 2 ಸ್ಥೈರ್ಯದಿಂದ ಮನವು ನಿನ್ನೊಳು ಸೇರದಿರುವುದೋ ದೇವ ಮಾರ ಜನಕನೆ 3 ಕಾಮಕ್ರೋಧದಿಂದ ವಿಷಯ ಪ್ರೇಮಗಳಲಿ ನಾ ನಿನ್ನ ನಾಮ ಮರೆತು ಬಳಲಿದೆನೊ ಕಾಮಿತಪ್ರದ 4 ಸಣ್ಣ ಜನರ ನಡೆನುಡಿಗಳಿಂ ಖಿನ್ನನಾದೆನೊ ದೇವ ಎನ್ನಮೇಲೆ ಕರುಣದಿಂದ ಪ್ರಸನ್ನನಾಗೆಲೊ ದೇವ 5
--------------
ವಿದ್ಯಾಪ್ರಸನ್ನತೀರ್ಥರು
ಹರಿಯೆ ಚಿತ್ರಲೀಲೆಗಳನು ಅರಿಯಲಳವೇ ಸುಲಭದಿ ಪ ನಿರತ ಸೇವೆ ಮಾಡುತಿರುವ ಸಿರಿಯು ತಾನಚ್ಚರಿಯಲ್ಲಿರಲು ಅ.ಪ ಪೊಡವಿಯಲಿ ದುರಿತಗಳನ್ನು ನಡೆನುಡಿಗಳಿಂದರಿಯದಿರುವ ಹುಡುಗರಾಗಿ ನಲಿಯುವರನ್ನು ಸಿಡಿಲಿನಿಂದ ತನ್ನಡಿಗಳಿಗೆಳೆವ 1 ಕ್ಲೇಶದಿಂದ ಗಳಿತವಾದ ಹೇಸಿಗೆಯ ದೇಹದಲ್ಲಿ ಆಸೆ ತೊರೆದು ನರಳುವರಲಿ ಲೇಶ ಕರುಣ ತೋರದೆ ಇರುವ2 ಸತ್ಯ ಸಂಕಲ್ಪನೆಂದರಿತು ನಿತ್ಯನನ್ನು ನೆನೆದು ತಮ್ಮ ಕೃತ್ಯಗಳನು ರಚಿಸಿ ಮುದದಿ ತೃಪ್ತನಾಗುವ ಭಕ್ತರ ಪ್ರಸನ್ನ 3
--------------
ವಿದ್ಯಾಪ್ರಸನ್ನತೀರ್ಥರು